Author: admin

ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ರವಿ ಡಿ. ಚನ್ನಣ್ಣನವರ್ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಮಾಧ್ಯಮ ಹೇಳಿಕೆ ಯನ್ನು ಬಿಡುಗಡೆ ಮಾಡಿದ್ದಾರೆ. ನನ್ನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ. ಸುಳ್ಳು ಆರೋಪ ಮಾಡಿದವರ ವಿರುದ್ಧ 3 ಕೋಟಿ ರೂ. ಮಾನನಷ್ಟ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿರುತ್ತವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳೆಲ್ಲ ಕಾನೂನು ಬದ್ಧವಾಗಿಯೇ ಖರೀದಿಸಿದ್ದೇನೆ. ಇವುಗಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇವುಗಳನ್ನು ನಾನು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ವಾರ್ಡ್ ನಂ 19ರಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಿ ಇ ಓ ಕಚೇರಿ ಕಟ್ಟಲು ಹೊರಟಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಹೋರಾಟ ನಡೆಸಲು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಮಿತಿ ಪೂರ್ವಸಭೆ ನಡೆಸಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಕೆ., ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ವಿ., ತಾಲ್ಲೂಕು ಕಾರ್ಯಾಧ್ಯಕ್ಷರಾದ ರಾಘವೇಂದ್ರ ಆರ್., ಉಪಾಧ್ಯಕ್ಷರುಗಳಾದ ಶ್ರೀನಿವಾಸ್,  ವಿಜಯಕುಮಾರ್,  ಶಿವರಾಜ್,  ಶಾಲೆಯ ಮಕ್ಕಳ ಪೋಷಕರಾದ ಓಂಕಾರಪ್ಪ, ಪಯಾಜ್, ವೆಂಕಟೇಶ್, ರೂಪ , ಮಂಜುಳ, ರೇಖಾ, ಪಾತಿಮ, ಜಬಿವುಲ್ಲಾ,  ಅನಿಫ್, ಲಕ್ಷ್ಮಿ, ಕರಿಯಮ್ಮ, ತೀವ್ರೆಣಿ, ನಿಂಗಮ್ಮ, ವಿದ್ಯಾ,  ಅಮ್ಮುಜುಮ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು:  ಜಿಲ್ಲೆಯ ತಿಪಟೂರು ತಾಲ್ಲೋಕಿನ ಗಡಿ ಗ್ರಾಮ ಕಾರೇ ಕುರ್ಚಿ  ಶಿವಶರಣ ಶ್ರೀ ಗುರುಸಿದ್ದರಾಮೇಶ್ವರರ ತಪೋಭೂಮಿ ದೊಣೆಗಂಗಾಕ್ಷೇತ್ರ ಮೂಲಸೌಕರ್ಯಗಳಿಲ್ಲದೇ ಭಕ್ತರು ಪರದಾಡುವಂತಾಗಿದೆ. ಕರ್ನಾಟಕ ಸೇರಿದಂತೆ ದೇಶಾದಾಧ್ಯಂತ ಅಸಂಖ್ಯಾತ ಭಕ್ತರನ್ನ ಹೊಂದಿರುವ ಕಾಯಕ ಯೋಗಿ ಶಿವಶರಣ ಶ್ರೀ ಗುರುಸಿದ್ದರಾಮೇಶ್ವರರು ಲೋಕ ಕಲ್ಯಾಣಕ್ಕಾಗಿ 12ವರ್ಷಗಳ ಹಠಯೋಗದ ಮೂಲಕ  ತಪಸ್ಸು ಗೈದ ಪೂಣ್ಯಭೂಮಿ  ನಾಡಿನ ಕಲ್ಯಾಣಕ್ಕಾಗಿ ಗಂಗೋದ್ಬವವಾಗಿರು ಈ ಕ್ಷೇತ್ರಕ್ಕೆ   ಪ್ರತಿನಿತ್ಯ ಸಾವಿರಾರು ಜನ ಭಕ್ತಾಧಿಗಳು ಭೇಟಿ ನೀಡುತ್ತಾರೆ.  ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕಾರೇಕುರ್ಚಿ  ದೊಣೆಗಂಗಾಕ್ಷೇತ್ರ  ತಾಲ್ಲೂಕಿನ ಗಡಿ ಗ್ರಾಮವಾಗಿದ್ದು, ತಿಪಟೂರು ಹಾಗೂ ಗುಬ್ಬಿ ತಾಲ್ಲೂಕಿನ  ಗಡಿಗೆ ಹೊಂದಿಕೊಂಡಂತಿರುವ ಕಾರಣ  ರಾಜಕೀಯ ನಾಯಕರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಾಡಿನಾದ್ಯಂತ ಅಸಂಖ್ಯಾತ ಭಕ್ತರನ್ನ ಹೊಂದಿರುವ ಶ್ರೀ ಸಿದ್ದರಾಮೇಶ್ವರರ ತಪೋ ಭೂಮಿಗೆ  ಸಂಪರ್ಕಿಸಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ರಾಷ್ಟ್ರೀಯ ಹೆದ್ದಾರಿ 206  ಕೇವಲ 3 ಕಿಲೋಮೀಟ್ ಅಂತರದಲ್ಲಿ ಶ್ರೀಕ್ಷೇತ್ರವಿದ್ದು,  ದೊಣೆಗಂಗಾಕ್ಷೇತ್ರಕ್ಕೆ ಸರಿಯಾದ ಸಂಪರ್ಕವಿಲ್ಲದಂತಾಗಿದೆ.  ಶ್ರೀಕ್ಷೇತ್ರಕ್ಕೆ ಮಣ್ಣಿನ ರಸ್ತೆಯಲ್ಲಿ ಸಾಗಬೇಕಿದ್ದು ಮಳೆಗಾಲದಲ್ಲಿ ಕೆಸರುಮಯವಾದರೇ ಬೇಸಿಗೆಯಲ್ಲಿ ಧೂಳುಮಯವಾಗುತ್ತದೆ. ಗುಂಡುಗೊಟರುಗಳಿಂದ ಕೂಡಿರುವ…

Read More

ಬೆಂಗಳೂರು : ಆಡಿ ಕಾರು ಮಾಲೀಕನೊಬ್ಬ ಮಲಗಿದ್ದ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ.. ಆಡಿ ಕಾರ್ ಮಾಲೀಕನ ದರ್ಪಕ್ಕೆ ಸಿಲುಕಿದ ನಾಯಿ ನೋವಿನಿಂದ ವಿಲಿ ವಿಲಿ ಒದ್ದಾಡಿರುವಂತಹ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಬೇಕಂತಲೇ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ.. ರಸ್ತೆ ಬದಿ ನಾಯಿ ತನ್ನ ಪಾಡಿಗೆ ತಾನು ಮಲಗಿತ್ತು.. ಆದ್ರೆ ಕಾರು ಚಲಾಯಿಸುತ್ತಿದ್ದವ ಉದ್ದೇಶಪೂರ್ವಕವಾಗೇ ಕಾರನ್ನ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿ ವಿಕೃತಿ ಮೆರೆದಿದ್ದಾನೆ.. ಜಯನಗರ1st ಬ್ಲಾಕ್ 10th ಬಿ ಮೈನ್ ನಲ್ಲಿ ಈ ಘಟನೆ ನಡೆದಿದೆ.. ಘಟನೆಯ ವಿಡಿಯೋ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ನವದೆಹಲಿ: ಫೆಬ್ರವರಿಯಿಂದ ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿವಿಧ ಸೇವೆಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಿವೆ. ಇದು ದೇಶದ ಜನರ ಜೇಬಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. SBI ನಿಂದ ದೊಡ್ಡ ಬದಲಾವಣೆಯಾಗುವ ಸಾಧ್ಯತೆಗಳಿವೆ. ಇದು ಹಣ ವರ್ಗಾವಣೆಯ ನಿಯಮಗಳನ್ನು ಬದಲಾಯಿಸುತ್ತಿದೆ. IMPS ಮೂಲಕ 2 ಲಕ್ಷದಿಂದ 5 ಲಕ್ಷದವರೆಗೆ ಹಣವನ್ನು ವರ್ಗಾಯಿಸಲು ಬ್ಯಾಂಕ್ ಈಗ 20ರೂ ಜೊತೆಗೆ GST ಶುಲ್ಕವನ್ನು ವಿಧಿಸುತ್ತದೆ. ಇದು ಜನರ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನೂ ಬ್ಯಾಂಕ್ ಆಫ್ ಬರೋಡಾ ನಿಯಮಗಳು ಫೆಬ್ರವರಿ 1 ರಿಂದ ಬದಲಾಗಲಿದ್ದು ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಫೆಬ್ರವರಿ 1 ರಿಂದ ಚೆಕ್ ಪಾವತಿಗೆ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ. ಅಂದರೆ ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸಬೇಕಾಗುತ್ತದೆ, ಆಗ ಮಾತ್ರ ನಿಮ್ಮ ಚೆಕ್ ಕ್ಲಿಯರ್ ಆಗುತ್ತದೆ ಎನ್ನಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ…

Read More

ಬೆಂಗಳೂರು: 24 ದಿನಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಶಾಲಾ – ಕಾಲೇಜುಗಳು ಪುನರ್ ಆರಂಭವಾಗಿವೆ. ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನಲ್ಲಿ ಜನವರಿ ಆರರಂದು ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ಭೌತಿಕ ತರಗತಿಗಳನ್ನು ಬಿಟ್ಟು ಆನ್ ಲೈನ್ ತರಗತಿಗೆ ಮಹತ್ವ ನೀಡಲಾಗಿತ್ತು. ಇದೀಗ ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿತರು, ಮನೆಯಲ್ಲಿಯೇ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಕಾರಣ ಮತ್ತೆ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀಸ್ ಸಿಗ್ನಲ್ ಕೊಟ್ಟಿದೆ. ಅದರಂತೆ ಇಂದಿನಿಂದ ಬೆಂಗಳೂರಿನಲ್ಲಿ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲೇ ಮೊದಲಿಗೆ ತಾಪಮಾನ ಪರೀಕ್ಷಿಸಿ ಕೊಠಡಿಯೊಳಗೆ ಬಿಡಲಾಗುತ್ತಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಕ್ಕಳು ಸಾಮಾಜಿಕ ಅಂತರ ಪಾಲನೆಯೊಂದಿಗೆ ತರಗತಿಗಳು ನಡೆಯುತ್ತಿವೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ನವದೆಹಲಿ : ಭಾರತದಲ್ಲಿ ಕೊರೊನ ಸೋಂಕಿನ ಮೂರನೇ ಅಲೆಯ ಏರಿಳಿತ ಮುಂದುವರೆದಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,09,918 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 959 ಮಂದಿ ಕಿಲ್ಲರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ನಿನ್ನೆ 959 ಮಂದಿಯ ಸಾವಿನೊಂದಿಗೆ ಈವರೆಗೆ ದೇಶದಲ್ಲಿ ಸುಮಾರು 4,95,050 ಮಂದಿ ಮೃತಪಟ್ಟಿದ್ದಾರೆ. ಇಂದಿನ ಪ್ರಕರಣಗೊಂದಿಗೆ ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 18,31,268 ಬಂದು ನಿಂತಿದೆ. ಒಟ್ಟು ಸೋಂಕಿತರಲ್ಲಿ ಶೇಕಡಾ 4.43 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇತ್ತ ದೇಶದಲ್ಲಿ ಈವರೆಗೆ ಸುಮಾರು 1,66,03,96,227 ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ. ವರದಿ: ಆಂಟೋನಿ ಬೇಗೂರು

Read More

ಪುಣೆ: ಪುಣೆಯ ಲೋನಾವ್ಲಾ ಪ್ರದೇಶದ ಶಿಲಾತ್ನೆ ಗ್ರಾಮದ ಮೂಲಕ ಹಾದು ಹೋಗುವ ಹಳೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮುಂಬೈನ ಮೀರಾ ರೋಡ್ ನಿವಾಸಿಗಳಾದ ಮಾದೇವಿ ತಿಲೋಕ್ (42), ಸೀಮಾ ರಾಜ್ (32), ಶಾಲಿನಿ ರೂಪನಾರಾಯಣ್ ರಾಜ್ (19), ಮಹಾವೀರ್ ರಾಜ್ (38) ಎಂದು ಗುರುತಿಸಲಾಗಿದ್ದು, ಮುಂಬೈನ ಕುರ್ಲಾ ಪ್ರದೇಶದ ನಿವಾಸಿ ರೆಹಾನ್ ರಿಜ್ವಾನ್ ಅನ್ಸಾರಿ ಎಂಬವರು ಚಾಲಕರಾಗಿದ್ದಾರೆ. ಪೋಲೀಸರ ಪ್ರಕಾರ. “ಮೃತರೆಲ್ಲರೂ ಪ್ರಯಾಣಿಸುತ್ತಿದ್ದ ಕಾರು ಲೋನಾವ್ಲಾದಿಂದ ಪುಣೆ ಕಡೆಗೆ ಹೋಗುತ್ತಿತ್ತು. ಕಂಟೈನರ್ ಸಮಾನಾಂತರವಾಗಿ ಮುಂಬೈ ಕಡೆಗೆ ಹೋಗುತ್ತಿತ್ತು. ಕಾರು ನಿಯಂತ್ರಣ ತಪ್ಪಿ ಡಿವೈಡರ್ ಭೇದಿಸಿ ಇನ್ನೊಂದು ಬದಿಗೆ ಡಿಕ್ಕಿ ಹೊಡೆದು ಮುಂದೆ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು ಇನ್ನೊಂದು ಬದಿಯಲ್ಲಿ ಹೇಗೆ ಉರುಳಿದೆ ಎಂಬುದು ನಮಗೆ ತಿಳಿದಿಲ್ಲ ಆದರೆ ಚಾಲಕನ ನಿಯಂತ್ರಣ ತಪ್ಪಿದ ಶಂಕೆ ಇದೆ ಎಂದು ಲೋನಾವ್ಲಾ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್…

Read More

ಹೆಚ್.ಡಿ.ಕೋಟೆ /ಸರಗೂರು: ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರ ತೆರವುಗೊಳಿಸಿ ಅವಮಾನಿಸಿರುವುದನ್ನು ಖಂಡಿಸಿ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಸರ್ಕಲ್  ನಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕಿನ ಪಟ್ಟಣದ ಮೈಸೂರು, ಸರಗೂರು ಮಾನದವಾಡಿ, ಕೋಟೆಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು, ಈ ವೇಳೆ, ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಂಶೋಧಕ ಸಂಘದ ಅಧ್ಯಕ್ಷರಾದ ಮರಿದೇವಯ್ಯ, ಮಲ್ಲಿಕಾರ್ಜುನ ಗೌಡ ಅವರನ್ನು ತಕ್ಷಣವೇ ವಜಾಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸಲು ಸಾಧ್ಯವಾಗದಿದ್ದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು. ಪ್ರಗತಿಪರ ಸಂಘಟನೆಯ ಪ್ರತಿಭಟನಾಕಾರರು ಮಾತನಾಡಿದ್ದರು. ಜಿವಿಕಾ ಬಸವರಾಜು. ಹೆಗ್ಗನೂರು ನಿಂಗರಾಜು.ಜಿವಿಕಾ ಉಮೇಶ್, ಹೆಚ್.ಡಿ.ಕೋಟೆ ಪುರಸಭೆಯ ಸದಸ್ಯರಾದ ಪ್ರೇಮ್ ಸಾಗರ್, ಜೀವಿಕ ಉಮೇಶ್, ಜೀವಿಕ ಬಸವರಾಜ್, ಸೌಮ್ಯ ಮಂಜುನಾಥ್,…

Read More

ತುಮಕೂರು: ಮರಣ ಹೊಂದಿದ ವ್ಯಕ್ತಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದರು, ಎಂದು ಸರ್ಟಿಫಿಕೆಟ್ ನೀಡಿರುವ ಘಟನೆ ತುಮಕೂರು ನಲ್ಲಿ ನಡೆದಿದೆ. ನಗರದ ಮೆಳೆಕೋಟೆ ನಿವಾಸಿ 80 ವರ್ಷದ ಬಸಪ್ಪ 2021ರ ಏಪ್ರಿಲ್ 9ರಂದು ಮೊದಲ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಈ ನಡುವೆ ಜುಲೈ 16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ ಅವರು ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು ಎಂದು ಸಂಭಂದಿಕರು ಹೇಳಿದ್ದಾರೆ. ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ಟರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ಹಿಂದೆ ಈ ರೀತಿಯಾದ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಆದರೂ ಕೂಡ ಸರಕಾರ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಈಗಲಾದರು…

Read More