Subscribe to Updates
Get the latest creative news from FooBar about art, design and business.
- ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
- ಕುಣಿಗಲ್ | ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಜೆಡಿಎಸ್ ಕಿಡಿ
- ತುಮಕೂರು | ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ
- ನಾಗರಹೊಳೆ–ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆ ನಡೆಸಿ: ಸಚಿವ ಖಂಡ್ರೆ ಸೂಚನೆ
- ಮೈಸೂರು: ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ!
- ಸರಿಯಾದ ಸಮಯಕ್ಕೆ ಬಾರದ ಪಿಡಿಓ– ಕಂಪ್ಯೂಟರ್ ಆಪರೇಟರ್: ಹಾಜರಾತಿ ಹಾಕುತ್ತಿರುವ ವಾಟರ್ ಮ್ಯಾನ್ !
- ತುಮಕೂರು ಜಿಲ್ಲಾ ಆಸ್ಪತ್ರೆ ಖಾಸಗೀಕರಣ ಕೈಬಿಡಲು ಪ್ರಗತಿಪರ ಮತ್ತು ನಾಗರಿಕ ಸಂಘಟನೆಗಳ ಒಕ್ಕೊರಲ ಆಗ್ರಹ
- ಮತಗಳ್ಳತನ: ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿ.ಕೆ. ಶಿವಕುಮಾರ್
Author: admin
ಪುಣೆ: ಪುಣೆಯ ಲೋನಾವ್ಲಾ ಪ್ರದೇಶದ ಶಿಲಾತ್ನೆ ಗ್ರಾಮದ ಮೂಲಕ ಹಾದು ಹೋಗುವ ಹಳೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮುಂಬೈನ ಮೀರಾ ರೋಡ್ ನಿವಾಸಿಗಳಾದ ಮಾದೇವಿ ತಿಲೋಕ್ (42), ಸೀಮಾ ರಾಜ್ (32), ಶಾಲಿನಿ ರೂಪನಾರಾಯಣ್ ರಾಜ್ (19), ಮಹಾವೀರ್ ರಾಜ್ (38) ಎಂದು ಗುರುತಿಸಲಾಗಿದ್ದು, ಮುಂಬೈನ ಕುರ್ಲಾ ಪ್ರದೇಶದ ನಿವಾಸಿ ರೆಹಾನ್ ರಿಜ್ವಾನ್ ಅನ್ಸಾರಿ ಎಂಬವರು ಚಾಲಕರಾಗಿದ್ದಾರೆ. ಪೋಲೀಸರ ಪ್ರಕಾರ. “ಮೃತರೆಲ್ಲರೂ ಪ್ರಯಾಣಿಸುತ್ತಿದ್ದ ಕಾರು ಲೋನಾವ್ಲಾದಿಂದ ಪುಣೆ ಕಡೆಗೆ ಹೋಗುತ್ತಿತ್ತು. ಕಂಟೈನರ್ ಸಮಾನಾಂತರವಾಗಿ ಮುಂಬೈ ಕಡೆಗೆ ಹೋಗುತ್ತಿತ್ತು. ಕಾರು ನಿಯಂತ್ರಣ ತಪ್ಪಿ ಡಿವೈಡರ್ ಭೇದಿಸಿ ಇನ್ನೊಂದು ಬದಿಗೆ ಡಿಕ್ಕಿ ಹೊಡೆದು ಮುಂದೆ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು ಇನ್ನೊಂದು ಬದಿಯಲ್ಲಿ ಹೇಗೆ ಉರುಳಿದೆ ಎಂಬುದು ನಮಗೆ ತಿಳಿದಿಲ್ಲ ಆದರೆ ಚಾಲಕನ ನಿಯಂತ್ರಣ ತಪ್ಪಿದ ಶಂಕೆ ಇದೆ ಎಂದು ಲೋನಾವ್ಲಾ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್…
ಹೆಚ್.ಡಿ.ಕೋಟೆ /ಸರಗೂರು: ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರ ತೆರವುಗೊಳಿಸಿ ಅವಮಾನಿಸಿರುವುದನ್ನು ಖಂಡಿಸಿ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕಿನ ಪಟ್ಟಣದ ಮೈಸೂರು, ಸರಗೂರು ಮಾನದವಾಡಿ, ಕೋಟೆಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು, ಈ ವೇಳೆ, ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಂಶೋಧಕ ಸಂಘದ ಅಧ್ಯಕ್ಷರಾದ ಮರಿದೇವಯ್ಯ, ಮಲ್ಲಿಕಾರ್ಜುನ ಗೌಡ ಅವರನ್ನು ತಕ್ಷಣವೇ ವಜಾಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸಲು ಸಾಧ್ಯವಾಗದಿದ್ದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು. ಪ್ರಗತಿಪರ ಸಂಘಟನೆಯ ಪ್ರತಿಭಟನಾಕಾರರು ಮಾತನಾಡಿದ್ದರು. ಜಿವಿಕಾ ಬಸವರಾಜು. ಹೆಗ್ಗನೂರು ನಿಂಗರಾಜು.ಜಿವಿಕಾ ಉಮೇಶ್, ಹೆಚ್.ಡಿ.ಕೋಟೆ ಪುರಸಭೆಯ ಸದಸ್ಯರಾದ ಪ್ರೇಮ್ ಸಾಗರ್, ಜೀವಿಕ ಉಮೇಶ್, ಜೀವಿಕ ಬಸವರಾಜ್, ಸೌಮ್ಯ ಮಂಜುನಾಥ್,…
ತುಮಕೂರು: ಮರಣ ಹೊಂದಿದ ವ್ಯಕ್ತಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದರು, ಎಂದು ಸರ್ಟಿಫಿಕೆಟ್ ನೀಡಿರುವ ಘಟನೆ ತುಮಕೂರು ನಲ್ಲಿ ನಡೆದಿದೆ. ನಗರದ ಮೆಳೆಕೋಟೆ ನಿವಾಸಿ 80 ವರ್ಷದ ಬಸಪ್ಪ 2021ರ ಏಪ್ರಿಲ್ 9ರಂದು ಮೊದಲ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಈ ನಡುವೆ ಜುಲೈ 16 ರಂದು ಅವರು ಮೃತಪಟ್ಟಿದ್ದಾರೆ. ಆದರೆ ನಿನ್ನೆ ಅವರು ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಮೆಸೆಜ್ ಬಂದಿದೆ. ಸಂಬಂಧಿಕರು ಸೈಟ್ ಓಪನ್ ಮಾಡಿದಾಗ ಸರ್ಟಿಫಿಕೆಟ್ ಅಪ್‍ಡೇಟ್ ಆಗಿತ್ತು ಎಂದು ಸಂಭಂದಿಕರು ಹೇಳಿದ್ದಾರೆ. ವ್ಯಕ್ತಿ ಮರಣ ಹೊಂದಿ 6 ತಿಂಗಳಾದರೂ ಸತ್ತ ವ್ಯಕ್ತಿಗೆ ಹೇಗೆ ಲಸಿಕೆ ಕೊಟ್ಟರು ಎಂದು ಮೃತ ಬಸವಪ್ಪನ ಕುಟುಂಬ ಆಶ್ಚರ್ಯ ವ್ಯಕ್ತಪಡಿಸಿದೆ. ಜೊತೆಗೆ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ಹಿಂದೆ ಈ ರೀತಿಯಾದ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಆದರೂ ಕೂಡ ಸರಕಾರ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಈಗಲಾದರು…
ಉತ್ತರ ಕನ್ನಡ : ಸಹಪಾಠಿ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟ ಕಾರಣಕ್ಕೆ ಶಾಲಾ ಶಿಕ್ಷಕಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ. ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರನೇ ತರಗತಿ ವಿದ್ಯಾರ್ಥಿ, ತನ್ನ ತರಗತಿಯ ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕಿ ಕಲ್ಪನಾ ಹೆಗಡೆ, ಲವ್ ಲೆಟರ್ ಕೊಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಈ ವಿಚಾರ ವಿದ್ಯಾರ್ಥಿಯ ಪೋಷಕರಿಗೆ ಗೊತ್ತಾಗಿದ್ದು, ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಶಿಕ್ಷಕಿ ಕಲ್ಪನಾ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಬ್ಬಿ : ತಾಲ್ಲೂಕಿನ ಮಂಚಿಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ವಸಂತಮ್ಮ (35) ಎಂದು ಗುರುತಿಸಲಾಗಿದ್ದು, ಈಕೆಯ ಗಂಡ ಈಶ್ವರಯ್ಯ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ . ಸ್ಥಳಕ್ಕೆ ಸಿ.ಎಸ್. ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿ ಈಶ್ವರಯ್ಯನನ್ನು ಬಂಧಿಸಲು ಬಲೆ ಬೀಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ್ ಅವರು ಶೀಘ್ರವಾಗಿ ಕೋವಿಡ್ ನಿಂದ ಗುಣ ಮುಖವಾಗಲಿ ಎಂದು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ತಾಲೂಕಿನ ಪ್ರಸಿದ್ಧ ದೇವಾಲಯಗಳಾದ ಕುರಂಕೋಟೆಯ ದೊಡ್ಡಕಾಯಪ್ಪ, ಸಂಜೀವಿನಿ ಕ್ಷೇತ್ರವಾದ ಸಿದ್ಧರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ಮತ್ತು ಚಿಕ್ಕನಹಳ್ಳಿ ಗ್ರಾಮದ ಚನ್ನಕೇಶ್ವರ ಸ್ವಾಮಿ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಂತರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್ ಮಾತನಾಡಿ, ಕ್ಷೇತ್ರ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ ರವರು ಕೊರೊನ ಮೂರನೇ ಅಲೆಯ ಸಂದರ್ಭದಲ್ಲಿ ಮನೆಯಲ್ಲಿ ಇರದೆ ಸದಾ ಕ್ಷೇತ್ರದ ಜನರೊಂದಿಗೆ ಆಭಿವೃಧಿ ಕೆಲಸಗಳಲ್ಲಿ ಕಾರ್ಯವಹಿಸುತ್ತಿದ್ದರು. ಆದರೆ ಈಗ ಅವರಿಗೆ ಕೋವಿಡ್ ಆಗಿರುವ ಕಾರಣ ಶೀಘ್ರವಾಗಿ ಗುಣ ಮುಖರಾಗಿ ಕ್ಷೇತ್ರಕ್ಕೆ ಬರಲಿ ಎಂದು ಕುರಂಕೋಟೆಯ ದೊಡ್ಡಕಾಯಪ್ಪ ಸ್ವಾಮಿಗೆ, ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ, ಚಿಕ್ಕನಹಳ್ಳಿಯ ಚನ್ನಕೇಶವ ಸ್ವಾಮಿಗೆ ಹಾಗೂ ತಾಲ್ಲೂಕಿನ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದೇವೆ. ಎಂದರು. ಗ್ರಾಮಾಂತರ…
ಮಧುಗಿರಿ: ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದ ವಸಂತರಾಜ್ ಅವರು ಸೇನೆಯಲ್ಲಿ ಸುಬೇದಾರ್ ಹಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಅಪಘಾತದಲ್ಲಿ ನಿಧನರಾಗಿದ್ದಾರೆ. ತಾಯಿ ನಾಡಿಗೆ 25 ವರ್ಷಗಳ ಸೇವೆ ಸಲ್ಲಿಸಿರುವ ಇವರು ಇನ್ನೂ ಎರಡು ವರ್ಷ ಸೇವೆಯನ್ನು ಸಲ್ಲಿಸಬೇಕಿತ್ತು. ಆದರೆ ಧಾರವಾಡ ಹೈವೆಯಲ್ಲಿ ಶುಕ್ರವಾರ ಲಾರಿ ಮತ್ತು ಕಾರು ಅಪಘಾತದಲ್ಲಿ ವೀರ ಮರಣವನ್ನು ಹೊಂದಿದ್ದಾರೆ. ಅವರ ಅಂತ್ಯ ಸಂಸ್ಕಾರ ಮೃತರ ಗ್ರಾಮವಾದ ಹೂವಿನಹಳ್ಳಿಯಲ್ಲಿ ನಡೆಯಿತು. ಇನ್ನೂ ಅಗಲಿದ ವೀರಯೋಧ ವಸಂತರಾಜ್ ಅವರ ಅಂತಿಮ ದರ್ಶನ ಪಡೆದ ಸಮಾಜ ಸೇವಕ ಜಿ ಡಿ ಪಾಳ್ಯಮಧು , ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಇತ್ತೀಚಿಗಷ್ಟೇ ಭಾರಿ ಸಂಚಲನ ಸೃಷ್ಟಿಸಿದ್ದ ತುಮಕೂರಿನಲ್ಲಿ ನಡೆದಿದ್ದ ದಿಗ್ಗಜರು ಸಿನಿಮಾ ಶೈಲಿಯ ಕಾರು ಖರೀದಿ ಪ್ರಕರಣ ಈಗ ಸುಖಾಂತ್ಯ ಕಂಡಿದ್ದು, ಯುವರೈತ ಕೆಂಪೆಗೌಡ ಮಹೇಂದ್ರ ಶೋರೂಮ್ ನಲ್ಲಿಯೇ ಕಾರು ಖರೀದಿ ಮಾಡಿ ಖುಷಿ ಕಂಡಿದ್ದಾರೆ. ಹೌದು, ಕಳೆದ ಶುಕ್ರವಾರ ತುಮಕೂರಿನ ಮಹೇಂದ್ರ ಶೋರೂಮ್ ನಲ್ಲಿ ಕಾರು ಖರೀದಿಸಲು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಮನ ಪಾಳ್ಯದ ಯುವರೈತ ಕೆಂಪೇಗೌಡ ಮಹೇಂದ್ರ ಶೋರೂಮ್ ನಲ್ಲಿ ಬುಲೆರೋ ವಾಹನ ಖರೀದಿಸಲು ಬಂದಿದ್ದರು. ಈ ವೇಳೆ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬ ರೈತ ಕೆಂಪೇಗೌಡನ ಬಟ್ಟೆ, ವೇಷ ಭೂಷಣ ನೋಡಿ ಕೆಂಪೇಗೌಡ ಹಾಗೂ ಆತನ ಸ್ನೇಹಿತರಿಗೆ ಹತ್ತು ರೂ ಇಲ್ಲದಿದ್ದರೂ, ಕಾರು ಖರೀದಿಸಲು ಬಂದಿದ್ದಾರೆ ಎಂದು ಅವಮಾನಿಸಲಾಗಿತ್ತು. ಈ ಘಟನೆ ನಡೆದ ಕೇವಲ ಒಂದೇ ಘಂಟೆಯಲ್ಲಿ ಕೆಂಪೇಗೌಡ 10 ಲಕ್ಷ ರೂ ಹಣ ತಂದು ಕಾರು ಖರೀದಿಸಲು ಮುಂದಾದರು. ಈ ಪ್ರಕರಣ ದಿಗ್ಗಜರು ಸಿನಿಮಾ ಶೈಲಿಯ ಪ್ರಕರಣಕ್ಕೆ ಸಾಕ್ಷಿಯಾಗಿತ್ತು. ಯುವ ರೈತ ಹಣ…
ತಿಪಟೂರು: ಶ್ರೀ ಮಂಜುನಾಥ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲ್ಲೂಕಿನ ಕರಡಿ ವಲಯದ ಗ್ರಾಮ ಸೇವಾ ಕೇಂದ್ರದ ನೂತನ ಕಛೇರಿಯನ್ನು ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಸದಸ್ಯರಾದ ಕೆ ಆರ್ ದೇವರಾಜು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಘದಿಂದ ಬಡವರಿಗೆ ನೀಡುವ ಸಾಲಸೌಲಭ್ಯವನ್ನು ಬಳಸಿಕೊಂಡು ಅಭಿವೃದ್ದಿ ಹೊಂದಲು ಹಾಗೂ ಸರ್ಕಾರ ಕೂಲಿ ಕಾರ್ಮಿಕರಿಗೆ ನೀಡುವ ಇಶರ್ಮ ಕಾರ್ಡ್ ಸೇರಿದಂತೆ ಇತರ ಸೌಲಭ್ಯಗಳನ್ನು ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘವು ಸಾರ್ವಜನಿಕರಿಗೆ ವದಗಿಸುತ್ತಿರುವುದು ಶ್ಲಾಘನೀಯವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ಪ್ರವೀಣ್ ಕುಮಾರ್, ಮೇಲ್ವಿಚಾರಕರುಗಳಾದ ಸಂತೋಷ್, ರಮೇಶ್ ಒಕ್ಕೂಟದ ಅಧ್ಯಕ್ಷರಾದ ರಾಜಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ರವೀಶ್ ಎ., ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಗೀತಾ, ದಾಕ್ಷಾಯಿಣಿ, ದರ್ಶನ್ ಸೇರಿದಂತೆ ಸದಸ್ಯರು ಗ್ರಾಮಸ್ಥರು ಹಾಜರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಿಇಒ ಕಚೇರಿಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯವಹಿಸಿ, ಸಾರ್ವಜನಿಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೇವಲ 40/60 ಅಡಿ ಜಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣವಾಗುತ್ತಿದೆ. ಈಗಾಗಲೇ ಈ ಶಾಲೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್, ಬಾಲಕಿಯರ ಪದವಿಪೂರ್ವ ಕಾಲೇಜ್ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಇದರಿಂದಾಗಿ ದಿನೇ ದಿನೇ ಶಾಲಾ ಆಟದ ಮೈದಾನ ಕೂಡ ದಿನದಿಂದ ದಿನಕ್ಕೆ ಚಿಕ್ಕದಾಗುತ್ತಿದೆ. ಈ ಸಂಬಂಧ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಮತ್ತು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಬಿ ಇ ಒ ಕಟ್ಟಡದ ಕಾಮಗಾರಿ…