Author: admin

ಸಿರಾ:  ಕಾರು ಅಪಘಾತಗೊಂಡು ಕಾರಿನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಸಮೀಪ ಕಾರು ಮಗುಚಿ ಬಿದ್ದಿದ್ದು, ಈ ಘಟನೆಯನ್ನು ಗಮನಿಸಿದ ಕೆ.ಸಿ.ವೀರೇಂದ್ರ ಪಪ್ಪಿ ಅವರು ತಕ್ಷಣವೇ ವ್ಯಕ್ತಿಯನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇನ್ನೂ ಕೆ.ಸಿ.ವೀರೇಂದ್ರ ಪಪ್ಪಿ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ: ಮುರುಳಿಧರನ್ ಆರ್.,  ಹಿರಿಯೂರು ( ಚಿತ್ರದುರ್ಗ – ದಾವಣಗೆರೆ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ತುಮಕೂರು: ಸದನದ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್ ಹಾಗೂ ಹರ್ಷ ಹತ್ಯೆ ಖಂಡಿಸಿ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜ್ಯೋತಿ ಗಣೇಶ್,  ಕಾಂಗ್ರೆಸ್  ನವರು ಕೇವಲ ತಮ್ಮ ಒಂದು ಹುಳುಕನ್ನು ಮರೆಮಾಚಲು ಅಮೂಲ್ಯವಾದ ಕಾರ್ಯಕಲಾಪಗಳ ಸಮಯವನ್ನು ನುಂಗಿಹಾಕಿ ಮಂಗಳವಾರ ಮತ್ತು ಬುಧವಾರದಿಂದ ಗಲಾಟೆಯನ್ನು ಮಾಡಿ ಕಲಾಪವನ್ನು ಹಾಳುಮಾಡುತ್ತಿದ್ದಾರೆ. ದೇಶದ ರಾಜ್ಯದ ಮತ್ತು ಜನರ ಕಷ್ಟಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಕೊಡದೆ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ವಿರೋಧವಾಗಿ ಕಾಂಗ್ರೆಸ್ ವರ್ತಿಸುತ್ತಿದೆ. ಹಿಜಾಬಿನ  ವಿಚಾರವನ್ನು ಮರೆಮಾಚಲು ಕೋರ್ಟಿನ ಮಧ್ಯಾಂತರ ಆದೇಶ ಇದ್ದರೂ ಕೂಡ ಎಲ್ಲೋ ಒಂದು ಕಡೆ ರಿವರ್ಸ್ ಆಗುತ್ತದೆ ಎಂದು ಹೇಳಿ ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಈಶ್ವರಪ್ಪನವರ ಹೇಳಿಕೆ ಇಟ್ಟುಕೊಂಡು ಐದಾರು ದಿವಸಗಳಿಂದ ಸದನವನ್ನು ಹಾಳುಮಾಡುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಬಿಜೆಪಿಗೆ ಯಾರು ಕೂಡ ಪಾಠ ಕಲಿಸಿ ಕೊಡಬೇಕಾಗಿಲ್ಲ.…

Read More

ಪಾವಗಡ: ಪಾವಗಡ ಪಟ್ಟಣದ ಅಪಘಾತಗಳ ಕೇಂದ್ರ ಬಿಂದುವಾದ ತುಮಕೂರು ರಸ್ತೆ ಇಂಡೇನ್ ಗ್ಯಾಸ್ ಗೌಡೌನ್ ಮುಂಭಾಗದ ರಸ್ತೆ ತಿರುವಿನಲ್ಲಿ ಕೆಂಪು ದೀಪ ಅಳವಡಿಸುವಂತೆ  ಹೆಲ್ಪ್ ಸೊಸೈಟಿ ಒತ್ತಾಯಿಸಿದೆ. ಈ  ಪ್ರದೇಶ ಆಕ್ಸಿಡೆಂಟ್ ಝೋನ್ ಆಗಿದ್ದು, ಇಲ್ಲಿ ಸರಣಿ ಅಪಘಾತಗಳು ನಡೆಯುತ್ತಿದೆ. ಈ ಸಂಬಂಧ ರಸ್ತೆ ನಿರ್ವಹಣೆ ಕೆ-ಶಿಪ್ ನವರು ಅಥವಾ ಪಿ. ಡಬ್ಲ್ಯೂ. ಡಿ ಅಧಿಕಾರಿಗಳು ಈ ಕೂಡಲೇ ರಸ್ತೆ ತಿರುವಿನಲ್ಲಿ ಕೆಂಪುದೀಪ ಅಳವಡಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಒತ್ತಾಯಿಸಿದರು. ಖಾಸಗಿ ಕಂಪನಿಯ ನಿರ್ಲಕ್ಷ ಹಾಗೂ ನೀರು ಸರಬರಾಜು ಕಂಪನಿಯ ಕಾಮಗಾರಿಯ ನಿರ್ಲಕ್ಷದಿಂದ ಇಂದು ಬೆಳ್ಳಂಬೆಳಗ್ಗೆ ತಾಲ್ಲೂಕು ಕಚೇರಿಯ ಅಧಿಕಾರಿಯೊಬ್ಬರಿಗೆ ಸದರಿ ಸ್ಥಳದಲ್ಲಿ ಅಪಘಾತವಾಗಿದ್ದು ಮತ್ತಷ್ಟು ಅಪಘಾತ, ಸಾವು, ನೋವು ಸಂಭವಿಸುವ ಅಪಾಯದ ಹಿಲ್ಲೆಯಲ್ಲಿ ಹೆಲ್ಪ್ ಸೊಸೈಟಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ವಿಚಾರವನ್ನು ತಂದಿದ್ದು,  ಕೂಡಲೇ ಕೆ -ಶಿಪ್ ಅಧಿಕಾರಿ ಹಾಗೂ ಪಿ. ಡಬ್ಲ್ಯೂ. ಡಿ ಅಧಿಕಾರಿಗಳಾದ ಅನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ಕೂಡಲೇ ಅಪಘಾತ ತಪ್ಪಿಸಲು…

Read More

ಗುಬ್ಬಿ:  ತಾಲ್ಲೂಕಿನ ಎಂ.ಎನ್. ಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಅಮಾನತು ಮಾಡುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮತ್ತು ಮುಖಂಡರು ಆಗ್ರಹಿಸಿದ್ದಾರೆ. ಎಂ.ಎನ್. ಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಹಾಗೂ ಇತರ ಸಹೋದ್ಯೋಗಿಗಳು ಮಾದಿಗ ಸಮಾಜದ ಆಹಾರ ಪದ್ಧತಿ ಮತ್ತು ಮಹಿಳಾ ಪಿ ಡಿ ಒ ಬಗ್ಗೆ ಅಗೌರವದಿಂದ ಮಾತನಾಡಿದ್ದು, ಮಹಿಳೆಯ ಬಗ್ಗೆ ತೇಜೋವಧೆ ಮಾಡಿದ್ದಾರೆ ಜೊತೆಗೆ ತಾಲೂಕು ಮಟ್ಟದ ಅಧಿಕಾರಿಯ ಬಗ್ಗೆ ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ದಲಿತ ಸಮುದಾಯಕ್ಕೆ ಅವಮಾನವಾಗಿದೆ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ತಾಲೂಕು ಕಚೇರಿಯ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಲಕ್ಕೇನಹಳ್ಳಿ ನರಸೀಯಪ್ಪ, ಚೇಳೂರು ಬಸವರಾಜು,  ಕುಂದುರನಹಳ್ಳಿ ನಟರಾಜ್, ಮಾರಶೆಟ್ಟಿಹಳ್ಳಿ ಬಸವರಾಜು,…

Read More

ತುಮಕೂರು: ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿದ್ದು, ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪಕ್ಷ  ಬೆಂಬಲವಾಗಿ ನಿಂತಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ. ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ಆರೋಪಿಗಳನ್ನು  ಬಂಧಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದರು. ಬಿಜೆಪಿ ಪಕ್ಷದ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಇಡೀ ಸದನವನ್ನು ಹಾಗೂ ಸದನದ ಕಾರ್ಯಕಲಾಪಗಳನ್ನು ನಡೆಯಲು ಬಿಡದೆ ತಮ್ಮ ಮೊಂಡುತನ ಪ್ರದರ್ಶನ ಮಾಡುವ ಮೂಲಕ ಇಡೀ ಅಧಿವೇಶನದ ಕಲಾಪವನ್ನು ಹಾಳುಮಾಡಿದ್ದಾರೆ .  ರಾಜ್ಯದ ಅಭಿವೃದ್ಧಿ ಪರವಾಗಿ ಸಾಕಷ್ಟು ವಿಚಾರಗಳನ್ನು ಚರ್ಚಿಸ ಬೇಕಿತ್ತು. ಆದರೆ ಕೇವಲ ಒಂದು ವಿಚಾರವನ್ನು ಇಟ್ಟುಕೊಂಡು ಅಧಿವೇಶನವನ್ನು ನಡೆಯಲು ಬಿಡದೆ ಧರಣಿ ನಡೆಸಿ ಅಧಿವೇಶನವನ್ನು…

Read More

ನಿಮ್ಮ ಸೇನಾ ಪಡೆಗಳನ್ನು ಹಿಂಪಡೆಯಿರಿ ಮತ್ತು ಯುದ್ಧವನ್ನು ನಿಲ್ಲಿಸಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಮನವಿ ಮಾಡಿದ್ದಾರೆ. ಯುದ್ಧ ಘೋಷಣೆಗೂ ಮುನ್ನಾ ಮಾತನಾಡಿರುವ ಅವರು, ರಷ್ಯಾ ಅಧ್ಯಕ್ಷರು ಕೂಡಲೇ ಮಾನವೀಯತೆ ಹೆಸರಿನಲ್ಲಿ ಯುದ್ಧವನ್ನು ನಿಲ್ಲಿಸಬೇಕು. ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಯುದ್ಧದಿಂದ ಉಕ್ರೇನ್ ಮೇಲೆ ಪರಿಣಾಮ ಬೀರಲಿದೆ ಮತ್ತು ಜಾಗತಿಕ ಆರ್ಥಿಕತೆ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ. ಯುದ್ಧದ ಪರಿಸ್ಥಿತಿಯನ್ನು ಅವಲೋಕಿಸಲು ಅವರು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಸಾಮಾನ್ಯವಾಗಿ ದೊಡ್ಡ ದೊಡ್ಡ ಅಂಗಡಿಗಳು, ಸ್ಥಿತಿವಂತರ ಮನೆಯಲ್ಲಿ ಕಳ್ಳತನ ಆಗುವ ಘಟನೆಗಳ ಬಗ್ಗೆ ನಿತ್ಯ ಕೇಳುತ್ತೇವೆ. ಆದರೆ, ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳ್ಳತನಕ್ಕಾಗಿ ಬಂದ ಕಳ್ಳನಿಗೆ ಯಾವುದೇ ಬೆಲೆ ಬಾಳುವ ವಸ್ತು ಸಿಗದಿದ್ದಾಗ ಆತ ಮಾಡಿದ್ದೇನು ಎಂದು ತಿಳಿದರೆ ನೀವು ಆಚ್ಚರಿ ಪಡಬಹುದು. ಜೊತೆಗೆ ಇವನೆಂತ ಆಸಾಮಿ ಎಂದೂ ಅನಿಸಬಹುದು. ವಾಸ್ತವವಾಗಿ, ಇಲ್ಲೊಬ್ಬ ಕಳ್ಳ ಅಂಗನವಾಡಿಯಲ್ಲಿ ಕನ್ನ ಹಾಕಲು ಯೋಜನೆ (Robbery In Anganwadi) ರೂಪಿಸಿದ್ದ. ಕಳ್ಳತನಕ್ಕೆಂದು ಬಂದಿದ್ದ ಕಳ್ಳನಿಗೆ ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ಅಲ್ಲಿದ್ದ ಪದಾರ್ಥದಲ್ಲೆ ಅಡುಗೆ ಮಾಡಿ ತಿಂದು ಹೋಗಿದ್ದಾನೆ. ಹೋಗುವ ಮುನ್ನ ಅಲ್ಲಿದ್ದ ಪುಸ್ತಕದಲ್ಲಿ ಮೂರು ಪುಟಗಳ ಪತ್ರ ಬರೆದು, ತನ್ನ ಜೀವನದ ಪ್ರಮುಖ ಘಟನೆಗಳು ಸೇರಿದಂತೆ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ ಎನ್ನಲಾಗಿದೆ.ಹೌದು, ಈ ಘಟನೆ ವಿಚಿತ್ರ ಎಂದೆನಿಸಿದರೂ ಸತ್ಯ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ…

Read More

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಗೃಹಬಳಕೆಯ LPG ಸಂಪರ್ಕಗಳನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ದೇಶದ ಎಪಿಎಲ್, ಬಿಪಿಎಲ್ ಮತ್ತು ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಭಾರತ ಸರ್ಕಾರದಿಂದ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 9 ಕೋಟಿ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ. ಇಂಡಿಯನ್ ಆಯಿಲ್ ತನ್ನ ಟ್ವಿಟರ್ ನಲ್ಲಿ ಈ ಕುರಿತು ಈ ಮಾಹಿತಿಯನ್ನು ನೀಡಿದೆ. ಈ ಯೋಜನೆ(Pradhan Mantri Ujjwala Yojana)ಯನ್ನು 1 ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ELPG ಗ್ಯಾಸ್ ಸಿಲಿಂಡರ್‌ನ ಪ್ರಯೋಜನವನ್ನು ನೀವು ಉಚಿತವಾಗಿ ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿದೆ ನೋಡಿ.. ಈ ರೀತಿ ಅರ್ಜಿ ಸಲ್ಲಿಸಿ: – ಯೋಜನೆಯ ಲಾಭ ಪಡೆಯಲು, ಮೊದಲಿಗೆ pmujjwalayojana.com ಅಧಿಕೃತ ವೆಬ್‌ಸೈಟ್‌ಗೆ ಹೋಗಿ. – ಇಲ್ಲಿ ಡೌನ್‌ಲೋಡ್ ಫಾರ್ಮ್ ಆಯ್ಕೆಯು ನಿಮ್ಮ ಮುಂದೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ. – ಈಗ…

Read More

ಇತ್ತೀಚಿಗೆ ಜೂಜಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಕಂಡು ಬಂದಿರುವ ತಮ್ಮ ಭಾವಚಿತ್ರದ ವಿಚಾರವಾಗಿ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಕುರಿತಾಗಿ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಅವರು ತಾವೆಂದಿಗೂ ಜೂಜು, ತಂಬಾಕು, ಮಧ್ಯಪಾನಗಳಿಗೆ ಸಂಬಂಧಿಸಿದ ಜಾಹಿರಾತುಗಳನ್ನು ಬೆಂಬಲಿಸಿಲ್ಲ ಜನರನ್ನು ದಾರಿತಪ್ಪಿಸಲು ಅವರ ಚಿತ್ರಗಳನ್ನು ಬಳಸುವುದನ್ನು ನೋಡುವುದು ನನಗೆ ನೋವಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ತೆಂಡೂಲ್ಕರ್ ಅವರು ಕ್ಯಾಸಿನೊವನ್ನು ಅನುಮೋದಿಸುವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಚಿತ್ರಗಳು ಇದ್ದ ನಂತರ ಅವರ ಸ್ಪಷ್ಟೀಕರಣ ಬಂದಿದೆ.ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಸ್ಪಷ್ಟಪಡಿಸಿದ್ದಾರೆ ಮತ್ತು ಅವರ ಕಾನೂನು ತಂಡವು ಸಹ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.”ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಜಾಹೀರಾತುಗಳನ್ನು ತೋರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ತಿರುಚಿರುವ ಫೋಟೋದಲ್ಲಿ ಕ್ಯಾಸಿನೊವನ್ನು ಅನುಮೋದಿಸುತ್ತಿದ್ದೇನೆ ಎನ್ನುವುದನ್ನು ತೋರಿಸಲಾಗಿದೆ.ಆದರೆ ನಾನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೂಜು, ತಂಬಾಕು ಅಥವಾ ಮದ್ಯವನ್ನು ಎಂದಿಗೂ ಅನುಮೋದಿಸಿಲ್ಲ, ನನ್ನ ಚಿತ್ರಗಳನ್ನು…

Read More

ಹೈದರಾಬಾದ್: ಸೈಬರಾಬಾದ್ ಮತ್ತು ರಾಚಕೊಂಡದ ಟ್ರಾಫಿಕ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನಗಳಿಗೆ ಟ್ರಾಫಿಕ್ ದಂಡಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದ್ದಾರೆ (discount on traffic fine). ಮೂಲಗಳ ಪ್ರಕಾರ 600 ಕೋಟಿ ರೂಪಾಯಿ ಬಾಕಿ ಇರುವ ದಂಡಗಳನ್ನು ಗುರುತಿಸಿದ ನಂತರ ಈ ಹೊಸ ಘೋಷಣೆ ಮಾಡಲಾಗಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು (traffic police)ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾನವೀಯತೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ COVID-19 ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರವನ್ನು ನೀಡಲಾಗಿದೆ. ದ್ವಿಚಕ್ರ ವಾಹನ ಚಾಲಕರಿಗೆ 75% ರಿಯಾಯಿತಿ: ಈ ರಿಯಾಯಿತಿ ಯೋಜನೆಯಡಿ, ದ್ವಿಚಕ್ರ ವಾಹನ ಚಾಲಕರು ಒಟ್ಟು ದಂಡದ ಶೇಕಡಾ 25 ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ, ಆದರೆ ಲಘು ಮೋಟಾರು ವಾಹನಗಳು, ಕಾರುಗಳು, ಎಸ್‌ಯುವಿಗಳು (SUV)ಮತ್ತು ಭಾರೀ ವಾಹನ ಚಾಲಕರು ದಂಡದ ಶೇಕಡಾ 50 ರಷ್ಟು ಪಾವತಿಸಬೇಕಾಗುತ್ತದೆ. RTC ಅಂದರೆ ರಸ್ತೆ ಸಾರಿಗೆ ಸಂಸ್ಥೆಯ ಬಸ್…

Read More