Author: admin

ಗುಬ್ಬಿ: ವಿದ್ಯುತ್ ಸ್ಪರ್ಶಿಸಿ  ಹಾರ್ಡ್ ವೇರ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆ ಗ್ರಾಮದಲ್ಲಿ ನಡೆದಿದೆ. ಎಂ.ಎನ್.ನಿವಾಸಿ ಪ್ರಕಾಶ್ ಸಿರಿವೆ ಮಾಲಿಕತ್ವದ ಎಂ.ಎನ್.ಕೋಟೆ ಗ್ರಾಮದ ‘ಮಾತೃ ಶ್ರೀ ಹಾರ್ಡ್ ವೇರ್’ ಬೆಂಕಿಗಾಹುತಿಯಾಗಿರುವ ಅಂಗಡಿಯಾಗಿದೆ. ಬೆಂಕಿಯ ಕೆನ್ನಾಲಿಗೆ  ಕಟ್ಟಡಕ್ಕೆ ಬಳಸಲಾಗುವ ವಿವಿಧ ಸಾಮಗ್ರಿ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿದ್ದ ಸುಮಾರು 25 ಲಕ್ಷಕ್ಕೂ ಅಧಿಕ ಬೆಲೆಯ ವಸ್ತುಗಳು  ಬೆಂಕಿಗಾಹುತಿಯಾಗಿವೆ. ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಚೇಳೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಸುಭಾಷ್ ಚಂದ್ರ ಬೋಸ್ ಅವರನ್ನು 125ನೇ ಜನ್ಮ ಜಯಂತಿಯನ್ನು  ಡಾ.ಶಿವಕುಮಾರ ಸ್ವಾಮೀಜಿ ಸರ್ಕಲ್ ನ ನಂದಿನಿ ಡೈರಿ ಬಳಿ ಆಚರಿಸಲಾಯಿತು. ಜ್ಯೋತಿ ಬೆಳಗಿಸಿ, ಡಾ.ಭಾಸ್ಕರ್ ಅವರು ಗೀತಾ ವಚನಗಳನ್ನು ಹೇಳುವುದರ ಮೂಲಕ “ನುಡಿದವನ ನುಡಿನಮನಗಳನ್ನು ಸಲ್ಲಿಸಲಾಯಿತು.  ಹಿರಿಯ ಪತ್ರಕರ್ತರು ಭಾಸ್ಕರಾಚಾರ್ಯ ಹಾಗೂ ಮಂಜು ಮತ್ತು ಚಂದನ್ ವಿದ್ಯಾರ್ಥಿ ಮುಖಂಡರಾದ ಎನ್.ವೀರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸುಭಾಷ್ ಚಂದ್ರ ಬೋಸ್ ಅವರ ಕಿರು ಪುಸ್ತಕವನ್ನು ಕಾಣಿಕೆಯಾಗಿ ನೀಡಲಾಯಿತು. ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ಘಟಕದ ಅಧ್ಯಕ್ಷರಾದ ಗಣೇಶ್  ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ:  ತಾಲೂಕಿನ ತುರುವೇಕೆರೆ ಪಟ್ಟಣ ಪಂಚಾಯಿತಿ ನೂತನ ಪಟ್ಟಣದ ಪ್ರಥಮ ಪ್ರಜೆಯಾಗಿ ಚಾಲೆಂಜಿಂಗ್  ಚಿದಾನಂದ್ ಆಯ್ಕೆಯಾಗಿದ್ದಾರೆ. ತುರುವೇಕೆರೆ ಪಟ್ಟಣಪಂಚಾಯ್ತಿ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ,ಅಂಜನ್ ಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಈ ಸ್ಥಾನಕ್ಕೆ ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಮಾಡಲಿಲ್ಲ ಏಕೈಕ ಅಭ್ಯರ್ಥಿ ಚಿದಾನಂದ್  ಅರ್ಜಿಸಲ್ಲಿಸಿದ್ದು, ಅಂತಿಮವಾಗಿ ಚಿದಾನಂದ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಚಿದಾನಂದ್ ರವರಿಗೆ ಬೆಂಬಲಿಗರು ಹಾರ ಹಾಕಿ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಚಿದಾನಂದ್ ಮಾತನಾಡಿ,   ನನ್ನ ಅವಿರೋಧ ಆಯ್ಕೆಗೆ ಶ್ರಮಿಸಿದ  ಲೋಕಸಭಾ ಸದಸ್ಯರಿಗೂ, ಶಾಸಕರಿಗೆ ಪಟ್ಟಣ ಪಂಚಾಯಿತಿ, ಉಪಾಧ್ಯಕ್ಷ ರಿಗೂ , ಸರ್ವಸದಸ್ಯರಿಗೂ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸಿದರು . ನಂತರ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನೂತನ ಅಧ್ಯಕ್ಷರ ಮೇಲೆ ಹಾಲಿನ ಅಭಿಷೇಕ ಮಾಡಲಾಯಿತು. ರಸ್ತೆ ಮದ್ಯೆ ಜೆ.ಸಿ.ಬಿ.ಯಂತ್ರದ ಮೇಲಿಂದ  ಹೂ ಮಳೆ ಸುರಿಸಿ…

Read More

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಪರಿಣಾಮವಾಗಿ ಮನೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ. ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಭಾಗ್ಯಮ್ಮನವರು ಹಾಗೂ ಕುಟುಂಬಸ್ಥರು ಶನಿವಾರ ಮಸ್ಕಲ್ ಮಟ್ಟಿ ಗ್ರಾಮದಲ್ಲಿನ ಮಗಳ ಮನೆಗೆ  ಮೊಮ್ಮಗಳ ನಾಮಕರಣ ದ ಶುಭಕಾರ್ಯಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದ್ದು, ಮನೆಯಲ್ಲಿದ್ದ ಬೆಳೆ ಬಾಳುವ ವಸ್ತುಗಳು ಸುಟ್ಟು ಹೋಗಿದ್ದು, ಸುಮಾರು 8 ಲಕ್ಷ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು , ಗ್ರಾ. ಪಂ. ಅಧ್ಯಕ್ಷರು , ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ  ತಿಳಿಸಿದರು. ಇನ್ನೂ ಸಂತ್ರಸ್ತ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಅವರ ಕುಟುಂಬ ಈ ಘಟನೆಯಿಂದ ತೀವ್ರವಾಗಿ ನಷ್ಟಕ್ಕೊಳಗಾಗಿದ್ದು, ಸಂಕಷ್ಟದಲ್ಲಿದೆ. ಸರ್ಕಾರ ಈ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸುವ ಮೂಲಕ…

Read More

ಕೊರಟಗೆರೆ: ಗೊರವನಹಳ್ಳಿ ಸಮೀಪವಿರುವ ಎಂಎಸ್ ಐಎಲ್  ಮದ್ಯದಂಗಡಿಯಲ್ಲಿ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬಾಗಿಲನ್ನು ಒಡೆದು ಐವತ್ತು ಸಾವಿರ ನಗದು ಹಾಗೂ ಮದ್ಯದ ಬಾಟಲಿಗಳನ್ನು ದೋಚಿಕೊಂಡು  ಪರಾರಿಯಾಗಿದ್ದಾರೆ .  ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿ ಪಿ ಎಸ್ ಐ ನಾಗರಾಜ್, ಪಿ ಎಸ್ ಐ ಮಂಜುಳಾ  ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ಕೈಗೊಂಡಿದ್ದಾರೆ . ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹೆಚ್.ಡಿ.ಕೋಟೆ/ಸರಗೂರು:  ಹುಲಿ ದಾಳಿಯಿಂದ ಸಾವಿಗೀಡಾಗಿರುವ ರೈತನ ಕುಟುಂಬಕ್ಕೆ ಪರಿಹಾರ ನೀಡಿದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಒತ್ತಾಯಿಸಿದರು. ಅವರು ತಮ್ಮ ಬೆಂಬಲಿಗರೊಡನೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಾಲ್ಲೂಕಿನ ಹೀರೆಹಳ್ಳಿ ಗ್ರಾಮದ ರೈತ ಮರಿಗೌಡ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆಯಲ್ಲಿ ಹುಲಿ ದಾಳಿ ಮಾಡಿ ಪರಿಣಾಮ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬ ಕಂಗಾಲಾಗಿದ್ದಾರೆ ಎಂದರು. ಅರಣ್ಯ ಇಲಾಖೆಯವರು ಪರಿಹಾರ ನೀಡಿದೆ ನಂತರವೇ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇಲ್ಲದಿದ್ದರೆ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮಹೇಶ್ ಕುಮಾರ್ ಮಧು ಸಿದ್ದರಾಜು ಸಂತೋಷ ಹೂಗರ್  ಸೇರಿದಂತೆ ಮತ್ತಿತರರು ಶಾಸಕರ ಮನವೊಲಿಸಿದ್ದರೂ ಪ್ರಯೋಜನವಾಗಲಿಲ್ಲ. ವೈಯಕ್ತಿಕವಾಗಿ ರೈತ ಕುಟುಂಬಕ್ಕೆ ಅರಣ್ಯ ಇಲಾಖೆ ಆಧಿಕಾರಿಗಳು ಆರ್ಥಿಕ ನೆರವು ನೀಡಿ, ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ, ಕೆಲ ಮುಖಂಡರು ಚಿಕ್ಕಣ್ಣರವರ ಮನವೊಲಿಸಿದ್ದು, ಬಳಿಕ ಪ್ರತಿಭಟನೆಯನ್ನು…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ  ಆದಿವಾಲ  ಗ್ರಾ. ಪಂ.ವ್ಯಾಪ್ತಿಯ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆದಿವಾಲಗೆ ಡಿ. ಸುಧಾಕರ್ ಭೇಟಿ ನೀಡಿದರು. ಈ  ಸಮಯದಲ್ಲಿ ರೈತರಿಗೆ ಕೆ.ಸಿ.ಸಿ. ಸಾಲದಲ್ಲಿ ವಿಳಂಬ ವಾಗುತ್ತಿರುವುದನ್ನು ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟು,  ರೈತರ ಕೆಸಿಸಿ ಸಾಲವನ್ನು ಬೇಗ ಮಂಜೂರು ಮಾಡಿ ಕೊಡಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ  ಸಹಕಾರ ಸಂಘದ ಅಧ್ಯಕ್ಷರಾದ ಎನ್.ಜಿ. ಶ್ರೀಧರ್ ಮತ್ತು ಮುನೀರ್  ಹಾಗೂ ಸಂಘದ ನಿರ್ದೇಶಕರು ಪಕ್ಷದ ಮುಖಂಡರುಗಳು ಹಾಜರಿದ್ದರು. ವರದಿ:  ಮುರುಳಿಧರನ್ ಆರ್.,  ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಇಬ್ಬರನ್ನು ಬಲಿ ಪಡೆದ ಘಟನೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಸರಕಾರಿ ಬಸ್ ಕೊರಟಗೆರೆ ತಾಲೂಕಿನ ಕಾಶಾಪುರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ  ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಿಕ್ಷುಕನ ಮೇಲೆಯೇ ಬಸ್ ಹರಿದಿದ್ದು, ಪರಿಣಾಮವಾಗಿ ಆತನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದಲ್ಲದೇ ರೈತ ಗೋಪಾಲನಾಯ್ಕ ಎಂಬವರಿಗೂ ಬಸ್ ಡಿಕ್ಕಿ ಹೊಡೆದಿದ್ದು, ಈ ವೇಳೆ ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಬಸ್ಸಿನಲ್ಲಿ 10 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಪೈಕಿ ನಿರ್ವಾಹಕ ಸೇರಿದಂತೆ 8 ಮಂದಿ ಪ್ರಯಾಣಿಕರಿಗೆ ಗಾಯವಾಗಿದೆ. ಅಪಘಾತದ ತೀವ್ರತೆಗೆ ಬಸ್ಸು ನಜ್ಜುಗುಜ್ಜಾಗಿದ್ದು, ಬಸ್ಸಿನ ನಿರ್ವಾಹಕನ ಕಾಲು ಬಸ್ಸಿನಲ್ಲೇ ಸಿಲುಕಿಕೊಂಡಿದ್ದು,…

Read More

ಚಂದನವನದ ಸ್ಟಾರ್ ನಿರ್ದೇಶಕ ಕಂಟೆಂಟ್ ಸಿನಿಮಾಗಳ ಮಾಸ್ಟರ್ ಮೈಂಡ್ ಟಿ. ಎಸ್. ನಾಗಾಭರಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. 69 ವರ್ಷದ ನಟ ಹಾಗೂ ನಿರ್ದೇಶಕರಾದ ನಾಗಾಭರಣ ಅವರಿಗೆ ಗಣ್ಯರು , ಸಿನಿಮಾ ತಾರೆಯರು, ಆಪ್ತರು , ನೆಟ್ಟಿಗರು ಶುಭಾಷಯಗಳ ಮಹಾಪೂರ ಹರಿಸುತ್ತಿದ್ದಾರೆ. ಸುಮಾರು 36 ಸಿನಿಮಾಗಳನ್ನ ಮಾಡಿರುವ ನಾಗಾಭರಣ ಅವರು 10 ರಾಷ್ಟ್ರೀಯ ಪ್ರಶಸ್ತಿ , 23 ರಾಜ್ಯ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ..ಇವರ ಸಾರಥ್ಯದ 8 ಸಿನಿಮಾಗಳು ಪನೋರೋಮಾ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವಕ್ಕೆ ಪ್ರವೇಶ ಪಡೆದಿದ್ದವು.ಅಂದ್ಹಾಗೆ ಟಿ. ಎನ್ ನಾಗಾಭಾರಣ ಅಂದ್ರೆ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ನಿರ್ದೇಶನದ ಜೊತೆಗೆ ನಟನೆ , ರಚನೆ ,ನಿರ್ಮಾಣ,  ರಂಗಮಂದಿರದಲ್ಲೂ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳನ್ನ ನಾಗಾಭರಣ ಅವರು ನಿರ್ಮಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿನ ಅನೇಕ ಕಾರ್ಯಕ್ರಮಳಿಗೂ ಬಂಡವಾಳ ಹೂಡಿದ್ದಾರೆ. ಇವರ ಜನುಮದ ಜೋಡಿ ಸಿನಿಮಾ ಅಂತು ಸೂಪರ್ ಹಿಟ್ ಆಗಿದ್ದು ಸುಮಾರು 1 ವರ್ಷ ಥಿಯೇಟರ್ ಯಶಸ್ವಿ ಪ್ರದರ್ಶನ ಕಂಡಿತ್ತು. ಅವರು ನಿರ್ದೇಶಿಸಿರುವ ಒಟ್ಟಾರೆ 36 ಸಿನಿಮಾಗಳ…

Read More

ಚುನಾವಣಾ ಆಯೋಗವು ಇಂದು ಸರಣಿ ವಚ್ರ್ಯುವಲ್ ಸಭೆಗಳನ್ನು ನಡೆಸುತ್ತಿದ್ದು, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭೌತಿಕ ರ್ಯಾಲಿಗಳು, ರೋಡ್ಷೋಗಳ ಮೇಲೆ ತಾನು ವಿಧಿಸಿರುವ ನಿಷೇಧವನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದೆ. ಜ.8ರಂದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ ಚುನಾವಣಾ ಆಯೋಗವು ಜ.15ರ ತನಕ ಭೌತಿಕ ರ್ಯಾಲಿಗಳು, ರಸ್ತೆ ಮತ್ತು ಬೈಕ್ ಶೋಗಳ ಮೇಲೆ ನಿಷೇಧ ಹೇರಿತ್ತು. ಜ.15ರಂದು ಆಯೋಗವು ಈ ನಿಷೇಧವನ್ನು ಜ.22ರವರೆಗೆ ಮುಂದುವರಿಸಿತ್ತು. ಆದಾಗ್ಯೂ ಅದು ರಾಜಕೀಯ ಪಕ್ಷಗಳಿಗೆ ನಿರ್ಬಂಧಗಳನ್ನು ಕೊಂಚ ಸಡಿಲಿಸಿ ಗರಿಷ್ಠ 300 ಜನ ಅಥವಾ ಸಭಾಂಗಣದ ಪೂರ್ಣ ಸಾಮಥ್ರ್ಯದ ಶೇ.50ರಷ್ಟು ಜನರನ್ನೊಳಗೊಂಡು ಒಳಾಂಗಣ ಸಭೆಗಳನ್ನು ನಡೆಸಲು ಅನುಮತಿ ನೀಡಿತ್ತು. ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯ, ತಜ್ಞರು, ಚುನಾವಣೆಗಳು ನಡೆಯಲಿರುವ ಪಂಚರಾಜ್ಯಗಳು ಮತ್ತು ಸಂಬಂಧಪಟ್ಟ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತರು ಮಾಹತಿ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅಕೃತ ಮೂಲಗಳು ತಿಳಿಸಿವೆ. ವರದಿ :ಆಂಟೋನಿ…

Read More