Subscribe to Updates
Get the latest creative news from FooBar about art, design and business.
- SIR ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್!
- 10ನೇ ತರಗತಿ ವಿದ್ಯಾರ್ಥಿಗೆ ಅಮಾನತು ಶಿಕ್ಷೆ: ಮರುಪ್ರವೇಶಕ್ಕೆ ನಿರಾಕರಣೆ, ನೊಂದು ಶಾಲೆಯಲ್ಲೇ ತಾಯಿ ವಿಷ ಸೇವನೆ..!
- ಚಪ್ಪಲಿ ಎಸೆತ ಪ್ರಕರಣ: ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್!
- ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯ: ಡಿಸಿಎಂ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಎಸ್ ಸಿ ಮೋರ್ಚಾ ಒತ್ತಾಯ
- ಸಮಸ್ಯೆಯನ್ನು ಆಲಿಸಲು ಪ್ರತಿನಿತ್ಯ ಪೋತಿ ಖಾತೆ ಅಭಿಯಾನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ
- ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು
- ನಮ್ಮ ತುಮಕೂರು ಫಲಶ್ರುತಿ: ಕಾರ್ಮಿಕರಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣ: ಸಫಾಯಿ ಕರ್ಮಚಾರಿಗಳ ಆಯೋಗ ಸ್ಥಳಕ್ಕೆ ಭೇಟಿ
Author: admin
ಹಿಂದೂ ಮತ್ತು ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳು ನಿಲ್ಲಬೇಕು. ಯಾವುದೇ ಕಾರಣಕ್ಕೂ ಸಾಮರಸ್ಯಕ್ಕ ಧಕ್ಕೆ ತರುವ ಕಿಡಿಗೇಡಿಗಳ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿ ಪ್ರವಾಸಕ್ಕೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ, ಮುಸ್ಲಿಂರು ಒಂದೇ ತಾಯಿಯ ಮಕ್ಕಳಂತೆ ಬಾಂಧವ್ಯ ಇರಬೇಕು ಎಂಬುದು ನಮ್ಮ ಅಪೇಕ್ಷೆ. ಯಾರೋ ಕಿಡಿಗೇಡಿಗಳು ಈ ಬಾಂಧವ್ಯಕ್ಕೆ ಧಕ್ಕೆ ತಂದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು. ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಧಕ್ಕೆ ತರುವ ಕೆಲಸವನ್ನು ನಿಲ್ಲಿಸಿ. ಅವರೂ ಸಹ ಗೌರವದಿಂದ ಬಾಳುವಂತೆ ನೋಡಿಕೊಳ್ಳೋಣ. ಅನವಶ್ಯಕವಾಗಿ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಬೇಡ ಎಂಬ ಕಿವಿ ಮಾತು ಎಲ್ಲರಿಗೂ ಹೇಳುತ್ತೇನೆ ಎಂದರು. ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮುಖ್ಯಮಂತ್ರಿಗಳು ಹಿಂದೆ ಕಾಂಗ್ರೆಸ್ ಕಾಲದಲ್ಲಿ ಯಾವ ರೀತಿ ಬೆಲೆ ಏರಿಕೆಯಾಗಿತ್ತು ಎಂದು…
ಮಧುಗಿರಿ: ಯುಕ್ತ ಕೌಶಲ್ಯ ತರಬೇತಿ ಕೇಂದ್ರ ತಾಲ್ಲೂಕಿನ ವಿಕಲಚೇತನರ (M.R.W,U. R. W, V. R. W)ಸ್ಫೂರ್ತಿ ಪುನರ್ವಸತಿ ಕಾರ್ಯಕರ್ತರ ಸಂಘ ಇವರುಗಳ ಸಹಯೋಗದಲ್ಲಿ ಬಾಬು ಜಗಜೀವನ ರಾವ್ ಮತ್ತು . ಡಾ ಬಿ.ಆರ್ . ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ, ಮಧುಗಿರಿಯ ಯುಕ್ತ ಕೌಶಲ್ಯ ತರಬೇತಿ ಮಾಹಿತಿ ಕಾರ್ಯಾಗಾರದಲ್ಲಿ msyep ತರಬೇತಿಯನ್ನು ನಮ್ಮ ತಾಲ್ಲೂಕಿನ ಎಲ್ಲಾ V. R.W ಮತ್ತು U. R.W ಗಳಿಗೆ ಆಸಕ್ತಿವುಳ್ಳ ದೈಹಿಕ ವಿಕಲ ಚೇತನರಿಗೆ ತರಬೇತಿ ನೀಡುವುದಾಗಿ ಸಂಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ತಿಳಿಸಿದರು. ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ ವೆಂಕಟೇಶ್ ರವರು msyep ಕಾರ್ಯಕ್ರಮದಲ್ಲಿ ನೀಡುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಮಧುಗಿರಿ ದಿಲೀಪ್ ರವರು msyep ತರಬೇತಿ ಕಾರ್ಯಕ್ರಮ ಕ್ಕೆ ಸಹಯೋಗ ನೀಡುವ ಸಂಸ್ಥೆಗಳು ಹಾಗೂ ತರಬೇತಿಯ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತಿಯ …
ತಿಪಟೂರು: ತಾಲ್ಲೋಕಿನ ಪ್ರಸಿದ್ದ ಪುಣ್ಯಕ್ಷೇತ್ರ ಹಾಲ್ಕುರಿಕೆ ಶ್ರೀ ಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಬನ್ನಿಮರ ಈಚಲಮರ ಹತ್ತುವ ಕಾರ್ಯಕ್ರಮವು ಭಕ್ತರ ಮೈ ನವಿರೇಳಿಸುವಂತೆ ಮಾಡಿತ್ತು ರಥೋತ್ಸವದಿಂದ ಇಳಿದ ಶ್ರೀ ಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿಗೆ ಪೂಜೆಸಲ್ಲಿಸಿ ದೇವಿ ಮೈಮೇಲೆ ಅವಾಹನೆ ಅವಾಹನೆಹೊಂಡ ಅರ್ಚಕ ಮುಳ್ಳಗಳಿಂದ ಕೂಡಿದ ಈಚಲ ಮರವನ್ನ (ಬನ್ನಿಮರ)ಎರುತ್ತಿದ್ದಂತೆ ಜಾತ್ರೆಯಲ್ಲಿ ನೆರೆದಿದ್ದ ಭಕ್ತರಲ್ಲಿ ಹರ್ಷೋದ್ಗಾರ ಮನೆಮಾಡಿದ್ದು, ಮುಳ್ಳುಗಳ Nಡುವೆ ಮರವೇರಿದ ಅರ್ಚಕ ಪೂಜೆಸಲ್ಲಿಸಿ ಮರದಿಂದ ಕೆಳಗೆ ಇಳಿಸಲಾಯಿತು. ಶ್ರೀಕೆಂಪಮ್ಮ ದೇವಿ ಶ್ರೀಪ್ಲೇಗಿನಮ್ಮ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಆರತಿಬಾನ ಹಾಗೂ ಶ್ರೀಪ್ಲೇಗಿನಮ್ಮ ದೇವಿ ಗಂಗಾಸ್ನಾನ ನಡೆಸಲ್ಲಾಯಿತು. ತೇರು ಬೀದಿಯ ಮಜ್ಜನ ಬಾವಿಯಿಂದ ಕಳಶಸ್ಥಾಪನೆ ಮಾಡಿ ನಡೆಮುಡಿಯೊಂದಿ ಮೂಲಸ್ಥಾನಕ್ಕೆ ಕರೆತರಲಾಯಿತು ನಂತರದಿನ ನಡೆದ ಶ್ರೀಕೆಂಪಮ್ಮ ದೇವಿ ಗಂಗಾಸ್ನಾನದಲ್ಲಿ ಮಜ್ಜನಬಾವಿಯಲ್ಲಿ ಕಳಶ ಸ್ಥಾಪನೆಗೊಂಡು ಶ್ರೀಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿಯವರನ್ನ ಪುಷ್ಟಾಲಂಕೃತ ದರ್ಭಾರ ವಾಹನದಲ್ಲಿ ಕೂರಿಸಿ ಕೀಲುಕುದುರೆ ನರ್ತನ ನಾಸೀಕ್ ಡೋಲ್ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಲಾತಂಡಗಳೊಂದಿಗೆ…
ತಿಪಟೂರು. ಸಮಾಜದ ದುಶ್ಚಟವಾದ ಮದ್ಯಪಾನವು ಇಂದು ಮಹಾಮಾರಿಯಾಗಿದ್ದು, ಅದನ್ನ ನಿಯಂತ್ರಿಸಿದರೆ ಉಳಿದೆಲ್ಲವನ್ನೂ ನಿಯಂತ್ರಿಸಿದಂತೆ ಎಂಬುದು ಧರ್ಮಸ್ಥಳದ ಹೆಗ್ಗಡೆಯವರ ಆಶಯವಾಗಿದೆ ಎಂದರು. ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ವಲಯದಲ್ಲಿ 1518 ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿದರು. ಸಪ್ತವ್ಯಸನಿಗಳಲ್ಲಿ ಮೊದಲನೆಯದು ಮದ್ಯವ್ಯಸನ ಅದನ್ನು ಜಾರಿಸಿದರೆ ಉಳಿದೆಲ್ಲವನ್ನು ಜಾರಿಸಿದಂತೆ. ಗ್ರಾಮೀಣ ಭಾಗದ ಜನರ ಸರ್ವತೋಮುಖ ಅಭಿವೃದ್ದಿಗೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರಮಿಸುತ್ತಿದೆ ಹೆಣ್ಣುಮಕ್ಕಳ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯಿಕ ಅಭಿವೃದ್ಧಿಯೊಂದಿಗೆ ಮದ್ಯ ವ್ಯಸನಿಗಳಾಗಿರುವ ಜನರಿಗೆ ಮನಃಪರಿವರ್ತನೆ ಮೂಲಕ ಮದ್ಯಮುಕ್ತರನ್ನಾಗಿ ಮಾಡಿಸುವುದೇ ಈ ಶಿಬಿರದ ಉದ್ದೇಶವಾಗಿದೆ ಎಂದು ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ ತಿಪಟೂರು ತಾಲ್ಲೂಕಿನಲ್ಲಿ ಈ ಹಿಂದೆ ಹಲವು ಶಿಬಿರಗಳು ನಡೆದಿದ್ದು ಸುಮಾರು 1000 ಹೆಚ್ಚು ಕುಟುಂಬಗಳು ಇಂದು ಮದ್ಯಮುಕ್ತ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಹಾಗೂ ಇವರ ಸಾಲಿನಲ್ಲಿ ನೀವು ಕೂಡ ನಿಲ್ಲಬೇಕು ಎಂದು ಆಗಮಿಸಿದ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಸಂದರ್ಭದಲ್ಲಿ ಮದ್ಯವರ್ಜನ ವ್ಯವಸ್ಥಾಪನ…
ಮಧುಗಿರಿ: ತಾಲೂಕಿನ ಐ. ಡಿ ಹಳ್ಳಿ ಹೋಬಳಿಯಲ್ಲಿ ನೂತನ ರೈತ ಸಂಪರ್ಕ ಕಟ್ಟಡಕ್ಕೆ ಜನಪ್ರಿಯ ಶಾಸಕರಾದ ಎಂ.ವಿ ವೀರಭದ್ರಯ್ಯ ನವರು ಭೂಮಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ನಾನು ಐಡಿಹಳ್ಳಿ ಹೋಬಳಿಗೆ ಮುಂದುವರೆದು ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿ ಪಡಿಸಿದ್ದೇನೆ. ಈ ಅಭಿವೃದ್ಧಿ ವಿಚಾರಕ್ಕೆ ಬಂದರೆ ಸಿಸಿ ರಸ್ತೆ, ಶಾಲೆಗಳಿಗೆ ಕಾಂಪೌಂಡ್, ಸ್ಕೂಲ್ ರಂಗಮಂದಿರ , ಬಸ್ ಸ್ಟಾಂಡ್ ಮುಂಭಾಗ 30 ಲಕ್ಷ ರೂಪಾಯಿ ಸಿಸಿ ರಸ್ತೆ ಕಾಮಗಾರಿ, ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದು, ಮತ್ತು ಶೀಘ್ರದಲ್ಲಿಯೇ ಬಸ್ ಸ್ಟಾಂಡ್ ನಲ್ಲಿ ಶೌಚಾಲಯ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಮುಖಂಡರುಗಳಾದ ವೆಂಕಟರಂಗಾರೆಡ್ಡಿ ಆರ್. ಕೆ ರೆಡ್ಡಿ, ರಿಯಾಜ್ ಅಹಮದ್, ಲಿಂಗಪ್ಪ ಎಲ್. ಐ. ಸಿ. ಮಂಜುನಾಥ್, ಜಿಲಾನ್ , ವಕೀಲರಾದ ನರಸಿಂಹಮೂರ್ತಿ , ವಜೀರ್ ಬಾಷಾ , ಕೃಷಿಕ ಸಮಾಜದ ಅಧ್ಯಕ್ಷರಾದ, ಚನ್ನ ಲಿಂಗಪ್ಪ ಸದಸ್ಯರಾದ ಸಿದ್ಧಾರೆಡ್ಡಿ , ಉಮೇಶ್ ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕೃಷಿ ಅಧಿಕಾರಿ…
ತುಮಕೂರು: ನಾವು ನ್ಯಾಯ ಮತ್ತು ಧರ್ಮಕ್ಕೆ ಹೆಸರಾದ ಶ್ರೀರಾಮನ ಯಾವ ಗುಣಗಳನ್ನು ಪಾಲಿಸುತ್ತಿದ್ದೇವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಹಾಗೂ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದವತಿಯಿಂದ ಆಯೋಜಿಸಿದ್ದ ಸವ್ಯಸಾಚಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀ ವಿವೇಕಾನಂದರು ಪ್ರತಿಪಾದಿಸಿದ, ಎಲ್ಲಾ ಧರ್ಮಗಳನ್ನು ಪ್ರೀತಿಸುವ ಹಿಂದೂ ಧರ್ಮವಾಗಿ ಈಗ ಉಳಿದಿದೆಯೇ ಎಂಬುದನ್ನು ನಾವು ಹಿಂದಿರುಗಿ ನೋಡಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಿದ ಸಮಾನತೆ, ಸಾಮರಸ್ಯ, ಬಾತೃತ್ವವನ್ನು ಒಳಗೊಂಡ ಧರ್ಮದ ಅಗತ್ಯವಿದೆ ಎಂದರು. ಭಾರತ ಒಂದು ಕಾಲದಲ್ಲಿ ಪಾಶ್ಚಿಮಾತ್ಯರಿಗೆ ಮಾದರಿಯಾಗಿದ್ದ ದೇಶ. ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳಿಗೆ ದೇಶ, ವಿದೇಶಗಳ ಜನರು ಕಲಿಯಲು ಬರುತ್ತಿದ್ದರು.ಸಹಿಷ್ಣತೆ ಮತ್ತು ಶಾಂತಿ ಭಯಸುವ ಭಾರತ ಇಂದಿಗೆ ಅಗತ್ಯವಾಗಿದೆ. ವಿನೋಧ ಭಾವೆಯವರ ಒಂದು ಮಾತಿಗೆ ಬೆಲೆ ಕೊಟ್ಟು,ಶಿಕ್ಷಣದಿಂದ ಬದಲಾವಣೆ ಸಾಧ್ಯ ಎಂದು ನಂಬಿ ನನ್ನ…
ಜಲಶ್ಯಾಮಲದಿಂದ ಸಸ್ಯಶಾಮಲ ಎಂಬ ಧ್ಯೇಯದೊಂದಿಗೆ ಜೆಡಿಎಸ್ ಹಮ್ಮಿಕೊಳ್ಳಲಿರುವ ಮಹತ್ವದ ಜನತಾ ಜಲಧಾರೆ ಕಾರ್ಯಕ್ರಮದ ಸಿದ್ಧತೆ ಪೂರ್ಣ ಗೊಂಡಿದ್ದು, ಏ.12ರಂದು ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಲನೆ ನೀಡಲಾಗುತ್ತದೆ. ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ಜನತಾ ಜಲಧಾರೆ ಯಾತ್ರಾ ರಥಗಳಿಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ 15 ಗಂಗಾರಥಗಳು 31 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ರಾಮನಗರದಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ರಥಗಳು ಏ.16ರಂದು ನಿಗದಿ ಮಾಡಿರುವ ಸ್ಥಳಗಳಲ್ಲಿ ಜಲಸಂಗ್ರಹ ಮಾಡಲಿವೆ.15 ನದಿಗಳಿಂದ ಏಕಕಾಲದಲ್ಲಿ ಪವಿತ್ರ ಜಲವನ್ನು ಸಂಗ್ರಹ ಮಾಡಲಾಗುತ್ತದೆ. ಔರಾದ್ ತಾಲ್ಲೂಕಿನ ಮಾಂಜ್ರಾ, ಆಲಮಟ್ಟಿ , ತುಂಗಭದ್ರಾ ಅಣೆಕಟ್ಟೆ, ಕೆಆರ್ ಎಸ್, ಕಬಿನಿ, ಎತ್ತಿನ…
ಪೊಲೀಸ್ ಇಲಾಖೆಯ 545 ಸಬ್‍ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ ಐ ಹುದ್ದೆಗಳ ನೇಮಕಾತಿಗೆ ಈಗಾಗಲೇ ಪರೀಕ್ಷೆ ನಡೆದು ತಾತ್ಕಾಲಿಕ ನೇಮಕಾತಿ ಪಟ್ಟಿಯೂ ಪ್ರಕಟವಾಗಿದೆ.ಆದಾದ ನಂತರ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ನಿನ್ನೆ ಎಫ್ ಐಆರ್ ಸಹ ದಾಖಲಾಗಿದೆ. ಕಲಬುರ್ಗಿಯ ಜ್ಞಾನಜ್ಯೋತಿ ಪ್ರೌಢಶಾಲೆಯ ಕೇಂದ್ರದಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿಯ ಒಂದು ತಂಡವನ್ನು ಕಲಬುರ್ಗಿಗೆ ಕಳುಹಿಸಲಾಗಿದೆ ಎಂದರು. ವಿರೇಶ್ ಎಂಬ ಅಭ್ಯರ್ಥಿ ಬರೆದಿದ್ದ ಪರೀಕ್ಷೆಯ ಅಭ್ಯರ್ಥಿಯ ಒಎಂಆರ್ ಶೀಟ್‍ನಲ್ಲಿ 21 ಅಂಕ ಬಂದಿದ್ದರೆ, ಮೌಲ್ಯಮಾಪನ ಮಾಡಿದ ಮೂಲ ಪ್ರತಿಯಲ್ಲಿ 101 ಅಂಕಗಳು ಬಂದಿದೆ. ಈ ಸಂಬಂಧ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಪ್ರತಿಭಾವಂತರು ಕಷ್ಟಪಟ್ಟು…
ರಾಜಾಜಿನಗರದ ಶ್ರೀ ರಾಮಮಂದಿರ ಆಟದ ಮೈದಾನದಲ್ಲಿ ಜನರು ಕುಳಿತುಕೊಳ್ಳುವ ಗ್ಯಾಲರಿ, ಟೆನ್‍ಸಿಲ್ ರೂಫ್, ರಕ್ಷಣಾ ಬೇಲಿ, ಹೊನಲು ಬೆಳಕು ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು 6ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಸ್.ಸುರೇಶ್‍ಕುಮಾರ್ ಹೇಳಿದರು. ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಟದ ಮೈದಾನದ ನವೀಕರಣ ಕಾಮಗಾರಿಯನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಆಟದ ಮೈದಾನವನ್ನು ಲೋಕರ್ಪಣೆ ಮಾಡಲಾಗುವುದು ಎಂದು ಹೇಳಿದರು. ಶ್ರೀ ರಾಮಮಂದಿರ ಆಟದ ಮೈದಾನ ರಾಮಲೀಲಾ ಮೈದಾನದಷ್ಟೆ ಪ್ರಸಿದ್ಧಿ ಪಡೆದಿದೆ. ರಾಷ್ಟದ ಮಹಾನ್ ನಾಯಕರು ಶ್ರೀ ರಾಮಮಂದಿರ ಆಟದ ಮೈದಾನಕ್ಕೆ ಭೇಟಿ ನೀಡಿದ್ದಾರೆ. ಈ ಜಾಗವನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಿಗದಿತ ಅವಯಲ್ಲಿ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗುವುದು ಎಂದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ಶ್ರೀ ರಾಮಮಂದಿರ ಆಟದ ಮೈದಾನ ಇತಿಹಾಸವುಳ್ಳ ಕ್ರೀಡಾಂಗಣವಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರಂತಹ ನಾಯಕರು ಈ ಆಟದ ಮೈದಾನದಲ್ಲಿ ಬಹಿರಂಗ ಸಭೆ ಮಾಡಿದ ಇತಿಹಾಸವಿದೆ. ಕ್ರೀಡಾ…
ತಿಪಟೂರು : ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿನ ವೀರ ಆಂಜನೇಯ ದೇವಾಲಯದ ಮೇಲ್ಚಾವಣಿಯನನ್ನು ಮುರಿದು ತಡ ರಾತ್ರಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ದೇವಾಲಯದ ಅರ್ಚಕ ದರ್ಶನ್ ಹೇಳುವ ಪ್ರಕಾರ, ಭಾನುವಾರ ಭಕ್ತಾಧಿಗಳು ಸೇರಿ ರಾಮನವಮಿ ಆಚರಣೆಯನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದು ಪ್ರಸಾದ, ಪಾನಕ-ಫಲಹಾರವನ್ನು ನೀಡಲಾಗಿತ್ತು. ಇಂದು ಬೆಳಿಗ್ಗೆ ಪೂಜೆಗೆ ಬಂದಾಗ ದೇವಸ್ಥಾನದ ಮೇಲ್ಛಾವಣಿಯನ್ನು ಒಡೆದುಕಳ್ಳರು ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಹುಂಡಿ ಬಿಟ್ಟರೆ ಬೇರೆ ಯಾವುದೇ ಬೆಲೆ ಬಾಳುವ ಆಭರಣಗಳು ದೇವಸ್ಥಾನದಲ್ಲಿರಲಿಲ್ಲ. ಹುಂಡಿಯಲ್ಲಿ ಸುಮಾರು 5-6 ಸಾವಿರ ನಗದು ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಹುಂಡಿಯೂ ದೇವಾಲಯದ ಪಕ್ಕದಲ್ಲಿ ಬಿದ್ದಿದ್ದು ಕಲ್ಲಿನಿಂದ ಹೊಡೆದು ಹಣ ತೆಗೆದುಕೊಂಡು ಹೋಗಿದ್ದಾರೆ. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5