Subscribe to Updates
Get the latest creative news from FooBar about art, design and business.
- ಶಾಸಕ ಅನಿಲ್ ಚಿಕ್ಕಮಾದು ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿರೋಧ ಪಕ್ಷಗಳಿಂದ ಟೀಕೆ: ಪ.ಪಂ. ಸದಸ್ಯ ಶ್ರೀನಿವಾಸ ಕಿಡಿ
- ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಿ: ಶಾಸಕ ಅನಿಲ್ ಚಿಕ್ಕಮಾದು ಕಿವಿಮಾತು
- ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಮೃತ ರೈತ ರಮೇಶ್ ಮನೆಗೆ ತಾಲ್ಲೂಕು ಆಡಳಿತ ಭೇಟಿ
- ಚಿಕ್ಕನಾಯಕನಹಳ್ಳಿ: ರೋಡ್ ರೋಲರ್ ಹರಿದು ಬೈಕ್ ಸವಾರ ದುರ್ಮರಣ
- ರೈತರ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಉತ್ತಮ ಮಾರ್ಗ: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸಲಹೆ
- ಕರ್ನಾಟಕದಲ್ಲಿ ಹಿಂದಿ ಭಾಷೆ ಕಡ್ಡಾಯವಲ್ಲ; SSLC ಒಟ್ಟು ಅಂಕಗಳಲ್ಲಿ ಕಡಿತ: ಸಿಎಂ ಸಿದ್ದರಾಮಯ್ಯ ಘೋಷಣೆ
- ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
- ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
Author: admin
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯೂರು ತಾಲ್ಲೂಕಿನಲ್ಲಿ ಜಲಾನಯನ ಅಭಿವೃದ್ಧಿಗೆ ಖಂಡೇನಹಳ್ಳಿ ಮತ್ತು ಪಿಡಿ ಕೋಟೆ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಗುಂಡೇರಿ ಮತ್ತು ಶಿವಗಂಗಾ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಎಂದು ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ 600 ಕೋಟಿ ಅನುದಾನ ನೀಡಲಾಗಿದೆ. ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿಗೆ ನಮ್ಮ ಇಲಾಖೆಯು ನೀಡಿರುವ ಕೊಡುಗೆ. ವಿವಿಸಾಗರಕ್ಕೆ ಹೆಚ್ಚಿನ ನೀರು ಮೀಸಲಿಡುವ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಇದೇ ವೇಳೆ ಅವರು ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ 600 ಕೋಟಿ ಅನುದಾನ ದೊರೆಯಲಿದ್ದು, ಮುಂದಿನ…
ಕೊರಟಗೆರೆ: ಕರುನಾಡಿನ 94 ನದಿಗಳಿಂದ ಜಲ ಸಂಗ್ರಹಣೆಯ ಜನತಾ ಜಲಧಾರೆ ರಥಯಾತ್ರೆಯು 184ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸುತ್ತಿದೆ. ಕೊರಟಗೆರೆ ಕ್ಷೇತ್ರದಲ್ಲಿ ನಡೆಯುವ ಜನತಾ ಜಲಧಾರೆ ರಥಯಾತ್ರೆ ಸಮಾರಂಭ ಯಶಸ್ವಿಗೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ರೈತ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಕೊರಟಗೆರೆ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರಕ್ಕೆ ಏ.26ರ ಮಂಗಳವಾರ ಜನತಾ ಜಲಧಾರೆ ರಥಯಾತ್ರೆ ಆಗಮಿಸಿ 6 ಹೋಬಳಿಯಲ್ಲಿ ಸಂಚಾರ ನಡೆಸಲಿದೆ. ಏ.27ರ ಬುಧವಾರ ಪಪಂ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ತುಮಕೂರು ಜಿಲ್ಲೆಯ ಎಲ್ಲಾ ನಾಯಕರು ಆಗಮಿಸಲಿದ್ದಾರೆ. ಕೊರಟಗೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ತುಮಕೂರು…
ನೈಜೀರಿಯಾ: ತೈಲ ಸಂಸ್ಕರಣಾ ಘಟಕ ಭಾರಿ ಸ್ಫೋಟ ಸಂಭವಿಸಿದ್ದು ಪರಿಣಾಮ ಘಟಕದಲ್ಲಿದ್ದ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಈ ಸ್ಫೋಟ ಸಂಭವಿಸಿದ್ದು ಈ ವೇಳೆ ಘಟಕದಲ್ಲಿದ್ದವರ ಪೈಕಿ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿರುವ ಬಗ್ಗೆ ಪೊಲೀಸರು ಖಚಿತಪಡಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ನೈಜೀರಿಯಾದಲ್ಲಿ ಇತ್ತೀಚಿಗೆ ಸಂಭವಿಸಿರುವ ಅತಿ ದೊಡ್ಡ ದುರಂತವಾಗಿದೆ ಎಂದು ಹೇಳಲಾಗಿದೆ. ಶುಕ್ರವಾರ ತಡರಾತ್ರಿ ಅಕ್ರಮ ಸಂಸ್ಕರಣಾ ಘಟಕದಲ್ಲಿ ವ್ಯಾಪಾರಕ್ಕಾಗಿ ತೈಲ ಘಟಕದ ನಿರ್ವಾಹಕರು ಮತ್ತು ಗ್ರಾಹಕರು ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತಿರುಪತ್ತೂರು: ಮೂವರು ವಿದ್ಯಾರ್ಥಿಗಳು ಕ್ಲಾಸ್ ರೂಮ್ ನಲ್ಲಿ ಶಿಕ್ಷಕರ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ. ವಿದ್ಯಾರ್ಥಿಗಳ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾದನೂರ್ ಎಂಬ ಗ್ರಾಮದ ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಪಾಠ ನಡೆಯುತ್ತಿರುವಾಗ ಸಂಜಯ್ ಗಾಂಧಿ ಎನ್ನುವ ಶಿಕ್ಷಕರೊಬ್ಬರು 12 ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಮಾರಿ ಎನ್ನುವ ಹುಡುಗ ನಿದ್ದೆ ಮಾಡುತ್ತಿದ್ದದ್ದನ್ನು ಗಾಂಧಿ ಪ್ರಶ್ನಿಸಿದ್ದರು. ಇದಕ್ಕೆ ಕುಪಿತಗೊಂಡ ಮಾರಿ ಹಾಗೂ ಆತನ ಸಂಗಡಿಗರು ಕ್ಲಾಸ್ ರೂಂನಲ್ಲೇ ತನ್ನ ಬಟ್ಟೆ ಬಿಚ್ಚಿ ಶಿಕ್ಷಕ ಗಾಂಧಿ ಅವರಿಗೆ ಧಮ್ಕಿ ಹಾಕಿದ್ದಾನೆ. ಅಲ್ಲದೇ ಹಲ್ಲೆಗೂ ಯತ್ನಿಸಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಹಾವೇರಿ: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡುವುದನ್ನು ಸಾಮಾನ್ಯ. ಆದರೆ ಇಲ್ಲೊಬ್ಬರು ತಮ್ಮ ಪ್ರೀತಿಯ ಸಾಕು ನಾಯಿಗೆ ಸೀಮಂತ ಮಾಡುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಾಗೀಶ್ ನಗರದಲ್ಲಿ ಮನೆಯ ಮಾಲೀಕ ಅಕ್ಷಯ್ ಕುಮಾರ್ ಎಂಬುವವರು ತಮ್ಮ ಸಾಕು ನಾಯಿ ರೂಬಿಗೆ ಕುಂಕುಮ ಇಟ್ಟು,ಹೂ ಹಾಕಿ ಸೀರೆ ಉಡಿಸಿ, ಹೆಂಗೆಳೆಯರು ಆರತಿ ಬೆಳಗಿ, ಸೀಮಂತ ಶಾಸ್ರ ಮಾಡಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ಮಾಡುವಂತೆ ಸೀರೆ, ಬಳೆ ಹಾಗೂ ಕುಂಕಮವನ್ನು ಇಟ್ಟು ಅಲಂಕಾರ ಮಾಡಿ ಇಷ್ಟವಾದ ತಿಂಡಿಯನ್ನು ಇಟ್ಟು, ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮುಗಿಸಿದ್ದಾರೆ. ಮಾತ್ರವಲ್ಲದೆ ಸಂಬಂಧಿಕರನ್ನೂ ಕರೆದು ಊಟದ ವ್ಯವಸ್ಥೆಯನ್ನು ಮಾಡಿದ್ದರು. ಗರ್ಭಿಣಿ ಮಹಿಳೆಯರಿಗೆ ಮಾಡುವ ಹಾಗೇ ಸಾಕು ಪ್ರಾಣಿಗೆ ಸೀಮಂತ ಜನರ ಮೆಚ್ಚುಗೆ ಪಡೆದಿದ್ದಾರೆ. ಸದ್ಯ ಸೀಮಂತ ಕಾರ್ಯದ ದೃಶ್ಯಗಳು ಎಲ್ಲಡೆ ವೈರಲ್ ಆಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…
ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ತಯಾರಕರ ಕೆಲಸವನ್ನು ಖಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬಿಸಿಯೂಟ ತಯಾರಕರ ಸೇವೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ 60 ವರ್ಷ ತುಂಬಿದ ಬಿಸಿಯೂಟ ತಯಾರಕ ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಬಾರದು ಎಂದು ಮಂಡ್ಯ ಜಿಲ್ಲಾ ಮಧ್ಯಾಹ್ನದ ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ ಆಗ್ರಹಿಸಿದರು. ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟ ತಯಾರಕರ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕೇವಲ ದಿನಕ್ಕೆ 10 ರೂ. ಗೌರವಧನ ಪಡೆದುಕೊಂಡು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬಿಸಿಯೂಟ ತಯಾರಕ ಮಹಿಳೆಯರು ಬಡಕುಟುಂಬಕ್ಕೆ ಸೇರಿರುವ ನಿರ್ಗತಿಕ, ವಿಶೇಷಚೇತನ ಹಾಗೂ ವಿಧವಾ ಮಹಿಳೆಯರಾಗಿದ್ದಾರೆ. ಕಳೆದ 19 ವರ್ಷಗಳಿಂದ ಬಿಸಿಯೂಟ ತಯಾರಿಕಾ ಕೆಲಸವನ್ನು ಮಾಡುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಕೇವಲ 2,600ರೂ, 2,700ರೂ ಗೌರವ ಧನವನ್ನು ಮಾತ್ರ ನೀಡುತ್ತಿದೆ. ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಡೆಸಿದ…
ಬೆಂಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ದೆಗೇರಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿದೆ. ಕುರುಬ ಜಾತಿಗೆ ಸೇರಿದ ಕೆಂಪಯ್ಯ ಕಾಡು ಕುರುಬ ಜಾತಿಯೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕೆಲಸ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪರಿಶಿಷ್ಟ ಪಂಗಡ ಕೋಟಾದಡಿ ಐಪಿಎಸ್ ಹುದ್ದೆಗೆ ಏರಿರುವ ಆರೋಪವಿತ್ತು. ನಂತರ ಕೆಂಪಯ್ಯ ಕೇಸ್ ವಿಚಾರಣೆಗೆ ಬಂದಿರಲಿಲ್ಲ. ಇದೀಗ ಫೈಲ್ ಪತ್ತೆಯಾದ ಬಳಿಕ ಮತ್ತೆ ವಿಚಾರಣೆ ಆರಂಭಿಸಲು ಡಿಸಿಆರ್ ಬಿ ಮುಂದಾಗಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಮಧುಗಿರಿ: ಪಟ್ಟಣದ 23ನೇ ವಾರ್ಡ್‍ನಲ್ಲಿ ಅಖಿಲ ಕರ್ನಾಟಕ ಡಾ.ಬಾಬುಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ಸಂಘದ ವತಿಯಿಂದ ಬಾಬುಜಗಜೀವನರಾಮ್ ಮತ್ತು ಡಾಅಂಬೇಡ್ಕರ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಪುರಸಭಾ ಸದಸ್ಯ ಲಾಲಪೇಟೆ ಮಂಜುನಾಥ್, ಸಂಘದ ಅಧ್ಯಕ್ಷ ಶ್ರೀಹರಿಗಣೇಶ್, ಪದಾಧಿಕಾರಿಗಳಾದ ಗುರುರಾಜ್, ಮಹೇಶ್, ರಾಜೇಶ್, ಸಿದ್ದಣ್ಣ, ಮಹದೇವ್, ಪ್ರಕಾಶ್, ಗಂಗಾಧರಪ್ಪ, ಗಂಗರಾಮಯ್ಯ, ಮಲ್ಲೇಶಪ್ಪ, ಹನುಮಂತರಾಯಪ್ಪ, ನಾಗರಾಜು ಹಾಗೂ ಇತರರು ಇದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಪಾವಗಡ: ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರಕ್ಕೆ ಬಂದರೆ, ಕರ್ನಾಟಕದಲ್ಲಿ ನದಿಗಳನ್ನು ಜೋಡಣೆ ಮಾಡಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಬಳಸಿಕೊಂಡು ಕರ್ನಾಟಕ ಸಮಗ್ರ ನೀರಾವರಿ ಹಾಗೂ ಕುಡಿಯುವ ನೀರಿಗೆ ರೂಪಿಸುವ ಯೋಜನೆಯೇ ಜನತಾ ಜಲಧಾರೆ ಎಂದು ಮಾಜಿ ಶಾಸಕ ಕೆ. ಎಮ್. ತಿಮ್ಮರಾಯಪ್ಪ ಹೇಳಿದರು. ತಾಲೂಕಿನ ರಾಜವಂತಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾ ಜೆ.ಡಿ.ಎಸ್. ಘಟಕದ ಅಧ್ಯಕ್ಷ ಆರ್. ಸಿ .ನೆನಪು ರವರು ಮಾತನಾಡಿ, ನಮ್ಮ ಪಕ್ಷದ ಜನತಾ ಜಲಧಾರೆ ರಥಯಾತ್ರೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ತಾಲೂಕಿನ ಮಾಜಿ ಶಾಸಕ ಕೆ .ಎಮ್. ತಿಮ್ಮರಾಯಪ್ಪ ರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಕರೆ ನೀಡಿದರು ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷರಾದ ತಿಮ್ಮ ರೆಡ್ಡಿ ಮಾತನಾಡಿ, ಜಾತ್ಯಾತೀತ ಜನತಾದಳದ ದೂರದೃಷ್ಟಿಯ ಯೋಜನೆ ಇದಾಗಿದ್ದು, 2023 ಕ್ಕೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಕರ್ನಾಟಕ ರಾಜ್ಯ…
ಹಿರಿಯೂರು : ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಮಿತಿಯ ವತಿಯಿಂದ ಆಡುವಳ್ಳಿ ಗ್ರಾಮ ಶಾಖೆ ಉದ್ಘಾಟನೆ ಮಾಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಸ್ಕಲ್ ಹನುಮಂತರಾಯಪ್ಪ , BDSS ರಾಜ್ಯ ಕಾರ್ಯಾಧ್ಯಕ್ಷರಾದ ತಿಮ್ಮರಾಜು ಕೆ ., ರಾಜ್ಯ ಉಪಾಧ್ಯಕ್ಷರಾದ ಚಂದ್ರಪ್ಪ ಗಾಟ್ , ರಾಜ್ಯ ನಿರ್ದೇಶಕರಾದ ವೆಂಕಟೇಶ, ರಾಜ್ಯ ಮುಖಂಡರಾದ ರಾಜಣ್ಣ ಕೆ.ಎಂ. ಕೊಟಿಗೆ , ಜಿಲ್ಲಾ ಕಾರ್ಯಾಧ್ಯಕ್ಷರಾದ ಮಹಾಂತೇಶ್, ಗಾಂಧಿನಗರ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಸೂರಗೊಂಡನಹಳ್ಳಿ , ಗುತ್ತಿಗೆದಾರರಾದ ಬಾಲರಾಜು, ಚಳಮಡು ಪರುಶುರಾಮ್ , ಬಿ ಡಿ ಎಸ್ ಎಸ್ ಜಿಲ್ಲಾ ಕಾರ್ಯದರ್ಶಿ ಉಮೇಶ್ , ಗ್ರಾಮ ಪಂಚಾಯ್ತಿ ಸದಸ್ಯರಾದ ರಂಗಸ್ವಾಮಿ ಹುಲುಗಲಕುಂಟೆ, ಗ್ರಾಮ ಸದಸ್ಯರು ಲಿಂಗರಾಜು ಗೂಡ್ಸ್ ಆಟೊ, ತಾಲ್ಲೂಕು ಅಧ್ಯಕ್ಷರು, ವೆಲಾಣ್ಣ , ತಾಲ್ಲೂಕು ಉಪಧ್ಯಕ್ಷರಾದ ಚಿದಾನಂದ, ಉಡುವಳ್ಳಿ ಗ್ರಾಮ…