Author: admin

ಕೋಲಾರ : ಸರ್ಕಾರಿ ಗೋಮಾಳ ಜಮೀನಿನಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಲು ತಹಶಿಲ್ದಾರ್ ಹಾಗೂ ಆರ್ ಐ ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ಕೆಜಿಎಫ್ ತಾಲೂಕಿನ ದಾಸೇನಹಳ್ಳಿ ಗ್ರಾಮಸ್ಥರು ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಅವರಿಗೆ ದೂರು ನೀಡಿದ್ದಾರೆ. ಕೊಡಿಗೇಪಲ್ಲಿ ಗ್ರಾಮದ ಸರ್ವೆ ನಂಬರ್ 109 ರಲ್ಲಿ  3 ಎಕರೆ 23 ಗುಂಟೆ ಗೋಮಾಳ ಜಮೀನಿನಲ್ಲಿ ಸ್ಮಶಾನಕ್ಕೆ ಹಾಗೂ ನಿವೇಶನ ರಹಿತರಿಗೆ ಜಾಗವನ್ನು ಮಂಜೂರು ಮಾಡುವಂತೆ ಕಳೆದ ಒಂದುವರೆ ವರ್ಷದಿಂದ ಸಂಬಂಧಪಟ್ಟ ವಿಎ, ಆರ್ ಐ ಹಾಗೂ ತಹಶಿಲ್ದಾರ್ ಅವರಿಗೆ ಮನವಿ ಮಾಡಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಗ್ರಾಮದ ಜನ ತಹಶಿಲ್ದಾರ್ ಅವರ ಕಚೇರಿಗೆ ತೆರಳಿ ತಮ್ಮ‌ ಕಷ್ಟ ಹೇಳಿಕೊಂಡ ಹಿನ್ನೆಲೆ ನೆಪಮಾತ್ರಕ್ಕೆ ತಹಶಿಲ್ದಾರ್ ಹಾಗೂ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.ಆ ಬಳಿಕ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಪ್ರವೇಶಿಸಿರುವ ವ್ಯಕ್ತಿಗಳಿಂದ ಹಣ ಪಡೆದು ಅವರ ತಹಶೀಲ್ದಾರ್  ಶಾಮಿಲಾಗಿದ್ದಾರೆಂದು ಗ್ರಾಮಸ್ಥರು ಆರೋಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ತಕ್ಷಣ ಗ್ರಾಮಸ್ಥರ ಕಷ್ಟಕ್ಕೆ…

Read More

ತಿಪಟೂರು: ರೈತ ದಿನಾಚರಣೆಯ ಪ್ರಯುಕ್ತ ವಿಜಯಕರ್ನಾಟಕ ತುಮಕೂರು ಪತ್ರಿಕಾ ಬಳಗದಿಂದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಬತ್ತ ಕುಟ್ಟುವ ಮೂಲಕ ಉದ್ಘಾಟನೆ ಮಾಡಿದರು. ಸೂಪರ್ ಸ್ಟಾರ್ ರೈತ ಕಾರ್ಯಕ್ರಮಕ್ಕೆಮುಖ್ಯ ಅತಿಥಿಗಳಾಗಿ ತಿಪಟೂರು ತಾಲೂಕಿನ ಸಮಾಜ ಸೇವಕರು, ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಭಾಗವಹಿಸಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಾಧಕ‌ ರೈತರನ್ನು ಗುರುತಿಸಿ ವಿಜಯಕರ್ನಾಟಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ  ಸನ್ಮಾನಿಸುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುನ್ನುಡಿ ಇಟ್ಟಿದೆ ಮತ್ತು ರೈತರು ಕೃಷಿ ಉಪಕರಣಗಳನ್ನು ಪರಿಣಾಮಕಾರಿಗಳಾಗಿ ಉಪಯೋಗಿಸಿಕೊಂಡು ರೈತರು ಹೆಚ್ಚು ಇಳುವರಿ ತೆಗೆಯುವ ಕ್ರಮವನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿದ್ಯಾಕುಮಾರಿ ಕೃಷಿ ನಿರ್ದೇಶಕ ಅಶೋಕ್ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರು ನಿಟ್ಟೂರು ರಂಗಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಸೇರಿದಂತೆ…

Read More

ಸಿರಾ:  ರಾಜ್ಯ ಬಿಜೆಪಿ ಮೋರ್ಚಾ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷರಾದ ಸಯ್ಯದ್ ಮುಝಮ್ಮಿಲ್ ಬಾಬುರವರು  ನಗರದ ಐತಿಹಾಸಿಕ  ಹಜರತ್  ಮಲ್ಲಿಕ್ ರೆಹಮಾನ್ ದರ್ಗಾ ಶರೀಫ್ ಗೆ ತೆರಳಿ ಸಿರಾ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಜ್ ಭವನವನ್ನು ನಿರ್ಮಿಸಿತು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನದಾಗಿ ಅನುದಾನ ನೀಡುತ್ತಾ ಬಂದಿದೆ. ಇದರಿಂದ ತೀರ ಹಿಂದುಳಿದ ಅಲ್ಪಸಂಖ್ಯಾತರಿಗೆ  ತಮ್ಮ   ಸ್ವಯಂ ಉದ್ಯೋಗ  ನಿರ್ವಹಣೆಗೆ ತುಂಬಾ ಅನುಕೂಲವಾಗಿದೆ. ಕೇಂದ್ರ ಬಿಜೆಪಿ ಸರ್ಕಾರವಾಗಲಿ ಅಥವಾ ರಾಜ್ಯ ಬಿಜೆಪಿ ಸರ್ಕಾರ ಆಗಲಿ ಅಲ್ಪಸಂಖ್ಯಾತರ ಪರವಾಗಿದೆ ನಾವು  ಕಾಣಬಹುದು. ಆದ್ದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ, ನಮ್ಮ  ಬಿಜೆಪಿ ಪಕ್ಷದ ವತಿಯಿಂದ ಸ್ಥಳೀಯ ನಗರ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ ಎಂದರು. ಕೆ.ಎಂ.ಡಿ.ಸಿ. ನಜೀರ್ ಪಾಷಾ,  ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನದೀಮ್,   ಇಮ್ತಿಯಾಜ್ ಪಾಶ (ಅಲ್ಪಸಂಖ್ಯಾತರ ಮಧುಗಿರಿ ತಾಲ್ಲೂಕು…

Read More

ತುಮಕೂರು: ಜಿಲ್ಲೆ ಸಿರಾ ತಾಲೂಕಿನ ನಗರಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಪರವಾಗಿ ಆದ್ಮಿ ಪಾರ್ಟಿ ಸ್ಟೇಟ್ ಕನ್ವೀನರ್ ಜಗದೀಶ್ ಚುನಾವಣಾ ಪ್ರಚಾರ ನಡೆಸಿ, ಮತಯಾಚಿಸಿದರು. ಒಂದನೇ ವಾರ್ಡಿನ ಮಾಗೋಡು ರಂಗ ವೈ. ಯು. ಮತ್ತು 4ನೇ ವಾರ್ಡಿನ ಆದಿಲಕ್ಷ್ಮಿ ಭೀಮರಾಜು ಮೂರನೇ ವಾರ್ಡಿನ ಭೀಮರಾಜು, 7ನೇ ವಾರ್ಡಿನ ಬಸವರಾಜು ಆಡಿಟರ್, 15 ನೇ ವಾರ್ಡಿನ ತರನುಂ ಸುಲ್ತಾನ್ ಸಾಧಿಕ್, 9ನೇ ವಾರ್ಡಿನ ಪ್ರವೀಣ್ ಕುಮಾರ್, 21 ನೇ ವಾರ್ಡಿನ ಉತ್ ಫುಲ್ಲಾ, 25ನೇ ವಾರ್ಡಿನ ಜಗದಾಂಬ ವಿ, 22 ನೇ ವಾರ್ಡಿನ ಅಬ್ದುಲ್ ರಹಮಾನ್ ಪಾಷ ರವರ ಪರವಾಗಿ ಜಗದೀಶ್ ರವರು ಮತಯಾಚನೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಸರಗೂರು: ಚರಂಡಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಪ್ರತಿ ದಿನ ತೊಂದರೆಗೀಡಾಗುತ್ತಿರುವ ಘಟನೆ ಸರಗೂರಿನ ಮುಖ್ಯ ರಸ್ತೆಯಲ್ಲಿರುವ ಶಿವಲೀಲಾ ಗೊಬ್ಬರ  ಅಂಗಡಿಯ ಮುಂಭಾಗದಲ್ಲಿ ನಡೆಯುತ್ತಿದ್ದು, ಅಂಗಡಿ ಮಾಲಿಕರು, ಸಾರ್ವಜನಿಕರು ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅಂಗಡಿಯ ಮುಂಭಾಗದಲ್ಲಿಯೇ ಚರಂಡಿಯ ನೀರು ಹರಿಯುತ್ತಿದೆ. ಈ ಭಾಗ ಹೆಚ್ಚಾಗಿ ಜನ ಸಂಚಾರದ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ಇದೇ ಕೊಳಚೆ ನೀರನ್ನು ತುಳಿದುಕೊಂಡು ನಡೆದುಕೊಂಡು ಹೋಗುವಂತಾಗಿದೆ. ಇನ್ನೊಂದೆಡೆ ಅಂಗಡಿಗೆ ಆಗಮಿಸುವ ಗ್ರಾಮಸ್ಥರ ಪಾಡು ಹೇಳತೀರದು. ಇದೇ ಚರಂಡಿ ನೀರನ್ನು ತುಳಿದುಕೊಂಡು ಬರುವ ದುಸ್ಥಿತಿ ಗ್ರಾಹಕರದ್ದಾಗಿದೆ. ಚರಂಡಿಯ ದುರ್ವಾಸನೆಯಿಂದಾಗಿ ಈ ಭಾಗಕ್ಕೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಅಂಗಡಿ ಮಾಲಿಕರಿಗೆ ನಷ್ಟ ಉಂಟಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ ಶಿವಲೀಲಾ ಗೊಬ್ಬರದ ಅಂಗಡಿಯ ಮಾಲೀಕ ಮಂಜು ಪ್ರಸಾದ್,  ಮುಖ್ಯ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿಯೇ ಸರಿಯಾದ ಒಳಚರಂಡಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸಲಿಲ್ಲ.  ಹೀಗಾಗಿ ಸತತ…

Read More

ತುರುವೇಕೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿಯ ಡೊಂಕಿಹಳ್ಳಿ ಗ್ರಾಮದ ಡಿ.ಪಿ.ರಾಜು ಆಯ್ಕೆಯಾಗಿದ್ದು, ಅವರ ಪದಗ್ರಹಣ ಸಮಾರಂಭವನ್ನು ತುರುವೇಕೆರೆ, ಪಟ್ಟಣದ ಸರಸ್ವತಿ ಕಾಲೇಜಿನಲ್ಲಿ ನಡೆಸಲಾಯಿತು. ಈ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ನಂರಾಜು ಅವರಿಂದ ಕನ್ನಡ ಬಾವುಟ ಪಡೆಯುವುದರೊಂದಿಗೆ ಅಧಿಕಾರ ಸ್ವೀಕರಿಸಿದರು ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಆರ್.ಜಯರಾಮ್ ವಕೀಲರಾದ ಧನಪಾಲ್, ಕೃಷ್ಣಮೂರ್ತಿ ಮತ್ತಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ರೈತ ದಿನದಂದು ವಿಜಯ ಕರ್ನಾಟಕ ಪತ್ರಿಕೆಯವರು ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮವನ್ನು ತುಮಕೂರು ರಾಮಕೃಷ್ಣ ಮಠದ ಪೂಜ್ಯ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿ ಇ ಓ ಡಾ.ವಿದ್ಯಾಕುಮಾರಿ, ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್, ಗುಬ್ಬಿ ದಿಲೀಪ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ: ವೈ.ಟಿ.ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ,  ಈ ಡಿಜಿಟಲ್ ಸೇವಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಗ್ರಾಮಾಭಿವೃದ್ಧಿ ಸಂಘದ ಕಚೇರಿಗಳಲ್ಲಿ ತೆರೆಯಲು ನಮ್ಮ ಸಂಸ್ಥೆ ಚಿಂತನೆ ನಡೆಸಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ತುರುವೇಕೆರೆ ಗ್ರಾಮಾಂತರ ಯೋಜನಾಧಿಕಾರಿ ಅನಿತಾ, ಅಧ್ಯಕ್ಷರಾದ ಶಾಂತಕುಮಾರ್, ಒಕ್ಕೂಟದ ಅಧ್ಯಕ್ಷರಾದ ನಾಗರಾಜು, ಜೊತೆಗೆ ಎಲ್ಲಾ ವಲಯಗಳ  ಮೇಲ್ವಿಚಾರಕರು ಸೇವಾ ಪ್ರತಿನಿಧಿ ಗಳು ಹಾಗೂ ಫಲಾನುಭವಿಗಲು ಹಾಜರಿದ್ದರು. ವರದಿ: ಸುರೇಶ್ ಬಾಬು. ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಿಕಿಕೆರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಭವನಕ್ಕೆ ಎಂದು ಮೀಸಲಿಟ್ಟ ಜಾಗದಲ್ಲಿ ಹಾಕಲಾಗಿದ್ದ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇಂದು ಏಕಾಏಕಿ ಬಂದ ಕಿಡಿಗೇಡಿಗಳ ತಂಡ, ಅಂಬೇಡ್ಕರ್ ನಾಮಫಲಕವನ್ನು ಕಿತ್ತು ಹಾಕಿ ಧ್ವಂಸಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ: ಮಂಜು ಗುರುಗದಹಳ್ಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು  ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆರೋಪ ಬಗ್ಗೆ ಸ್ಪಷ್ಟಿಕರಣ ನೀಡಿದರು. ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿರುವ ದಲಿತ ಸಮುದಾಯದ ಕೆ.ಎಲ್.ರವಿಕುಮಾರ್ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂತರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಗ್ರಾಮ ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದನ್ನು ಸಹಿಸದೇ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ಶಿವನಂದಯ್ಯ, ಸಿದ್ದರಾಜು ಇತರರು ಉದ್ದೇಶ ಪೂರ್ವಕವಾಗಿ ಪಂಚಾಯಿತಿ ಮುಂಭಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ಸಹಿಸಲಾಗದೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಈ ಆರೋಪದಲ್ಲಿ ಹುರುಳಿಲ್ಲ ಎಂದರು. ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಗೆ ಒಳಪಡುವ ಮಾಂಸದ ಅಂಗಡಿ ಶಿಧಿಲವಾಗಿದ್ದು ಪರ್ಯಾಯವಾಗಿ ಅಂಗಡಿ ಮಳಿಗೆ…

Read More