Author: admin

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ, ನಗರಸಭೆ , ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ , ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಮತ್ತು ಪೋಲಿಸ್ ಇಲಾಖೆ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಮತ್ತು ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಣದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯೂರು ನಗರದ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಹಾಗೂ ಅಧ್ಯಕ್ಷರು, ತಾಲ್ಲೂಕು ಕಾನೂನು ಸೇವಾ ಸಮಿತಿ , ಹಿರಿಯೂರು ಮೊಹಮ್ಮದ್ ಮೊಯಿನುದ್ದಿನ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ನಾಮ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹದಿನಾಲ್ಕು ವರ್ಷದೊಳಗಿನ ಶಾಲೆಯಿಂದ ಹೊರಗಡೆ ಇರುವ ಯಾವುದೇ ಮಗು ಕಂಡುಬಂದರೆ, ಅವರ ಪೋಷಕರಿಗೆ ತಿಳುವಳಿಕೆ ಹೇಳಿ, ಆ ಮಗುವನ್ನು ಶಾಲೆಗೆ ಸೇರಿಸಲು ಹಾಗೂ…

Read More

ಪಾವಗಡ:  ಪಾವಗಡ ಪಟ್ಟಣದ  ಅಪ್  ಬಂಡೆ ಬಳಿ ಇಂದು ಹೆಲ್ಪ್ ಸೊಸೈಟಿ ವತಿಯಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಯಿತು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್  ಸ್ಥಳೀಯ ಬಾಲಕರ ಪೋಷಕರೊಂದಿಗೆ ವಿಚಾರ ವಿನಮಯ ನಡೆಸಿ, ಮಕ್ಜಳನ್ನು ತಪ್ಪದೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುವಂತೆ ವಿನಂತಿಸಿದರು. ಬಾಲ ಮಕ್ಕಳನ್ನು ಯಾವುದೇ ಕಾರಣಕ್ಕೂ ದುಡಿಯಲು ಪ್ರೇರಪಿಸಬೇಡಿ, ಅಂತಹ ಕೆಟ್ಟ ದುಸ್ಸಾಹಕ್ಜೆ ಕೈ ಹಾಕಿದ್ದಲ್ಲಿ, ಕಾನೂನು ರೀತ್ಯ ಅಪರಾಧವಾಗುತ್ತದೆ ಎಂದು ಅವರು ಸ್ಥಳೀಯ ನಾಗರಿಕರಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಮಕ್ಜಳೊಂದಿಗೆ ಸಿಹಿ ಹಂಚಿ ಆತ್ಮೀಯತೆಯೊಂದಿಗೆ ಬಾಲ  ಕಾರ್ಮಿಕ ವಿರೋಧಿ ದಿನ ವನ್ನು ಆಚರಿಸಿದರು. ಈ ವೇಳೆ ಸಾಗರ್,ವೀರ, ಗೌತಮ್, ಬಾಬಾ,  ಸಾಯಿ ಕುಮಾರ್,  ಮೋಹನ್, ಇದ್ದರು. ವರದಿ:  ರಾಮಪ್ಪ ಸಿ.ಕೆ.ಪುರ, ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬಂಡೀಪುರ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ರೆ ವಲಯದಲ್ಲಿ ಉದ್ದ ಕೊಂಬಿನ ಆನೆಯೊಂದು ಮೃತಪಟ್ಟಿದ್ದು, ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಎಲ್ಲರ ಆಕರ್ಷಣೆಯಾಗಿದ್ದ ಭೋಗೇಶ್ವರ ಆನೆಯೇ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಎರಡು ಮೂರು ದಿನಗಳ ಹಿಂದೆ ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಆನೆಯ ಸಹಜವಾಗಿ ಮೃತಪಟ್ಟಿದ್ದು, ಈ ಆನೆ ಉದ್ದವಾದ ದಂತಗಳನ್ನು ಹೊಂದಿದೆ. ಬಲಕೊಂಬಿನ ಮೇಲೆ ಎಡಕೊಂಬು ಬಂದ್ದಿದು, ಆನೆಗೆ 55 ರಿಂದ 60 ವರ್ಷಗಳಾಗಿರಬಹುದು ಎಂದು ತಿಳಿದು ಬಂದಿದೆ. ಕಬಿನಿ ಹಿನ್ನೀರು ಭಾಗದಲ್ಲಿ ವಲಸ್ಸಾದ ಮೂರ್ನಾಲ್ಕು ಆನೆಗಳು ಇರುವದರಿಂದ ಇದು ಮಿಸ್ಟರ್ ಕಬಿನಿ ಭೋಗೇಶ್ವರ ಆನೆಯೇ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತ ಪಡಿಸಿಲ್ಲ. ಇತ್ತೀಚಿನ ಆದೇಶದಂತೆ ಆನೆಯ ಕಳೇಬರವನ್ನು ಸಂಸ್ಕಾರ ಮಾಡದೆ ಹಾಗೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. “ಗಜ” ಗಾಂಭೀರ್ಯ ಭಿನ್ನ ಹಾವಬಾವ” : ಕಬಿನಿ ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿರುವ ಬರುವ ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಮತ್ತು ಡಿ ಬಿ ಕುಪ್ಪೆವಲಯ ವ್ಯಾಪ್ತಿಯಲ್ಲಿ…

Read More

ಗಂಜಿ ಗಿರಾಕಿ ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್‌ ಗಂಜಿ ಕೇಂದ್ರದಿಂದ ಬಂದವರು. ಸತ್ಯವಲ್ಲದ ವಿಷಯಗಳನ್ನು ಪಠ್ಯದಲ್ಲಿ ಸೇರಿಸಿ ನಾಡಿನ ಚೇತನಗಳಿಗೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರಾದ ನಾಗೇಶ್ ಅವರು ಹೆಸರಿಗೆ ಅಷ್ಟೇ ಮಂತ್ರಿಯಾಗಿದ್ದಾರೆ. ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇವರೆಲ್ಲ ಗೊಂಬೆಗಳಿದ್ದಂತೆ. ಆರ್‍ಎಸ್‍ಎಸ್ ಕೀ ಕೊಟ್ಟಂತೆ ಗೊಂಬೆಗಳು ತಿರುಗುತ್ತದೆ ಎಂದು ವ್ಯಂಗ್ಯವಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್, ನಾರಾಯಣಗುರು ಅವರ ಪಠ್ಯಗಳನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಪಾಠವನ್ನು ತಿರುಚಲಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು. ಚನ್ನಣ್ಣ ವಾಲಿಕಾರ್ ಅವರು ಬರೆದ 6ನೇ ತರಗತಿಯಲ್ಲಿದ್ದ ಅಂಬೇಡ್ಕರ್ ಪಾಠವನ್ನು ಕೈಬಿಟ್ಟಿದ್ದಾರೆ. 9ನೇ ತರಗತಿಯ ಸಂವಿಧಾನದ ಪಾಠ ತಿರುಚಿ ಅಲ್ಲದೆ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ, ಗೊಂದಲ ಮೂಡಿಸಿದ್ದು, ಪರಿಷ್ಕರಣೆ ನೆಪದಲ್ಲಿ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದು…

Read More

ಚಾಮರಾಜಪೇಟೆ: ಈದ್ಗಾ ಮೈದಾನದಲ್ಲಿ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಮೈದಾನದ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಅಳವಡಿಕೆಗೆ ಪೊಲೀಸರು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಮೈದಾನದ ಸುತ್ತ ಸಿಸಿಟಿವಿ ಅಳವಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿ ಹೇಳಿದರೂ ಕ್ಯಾಮೆರಾ ಅಳವಡಿಕೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಷ್ಟು ದಿನ ಇಲ್ಲದ ಕ್ಯಾಮೆರಾವನ್ನು ಈಗೇಕೆ ಹಾಕಬೇಕು. ಜನಪ್ರತಿನಿಧಿಗಳು ಮುಸ್ಲಿಮರ ರಕ್ಷಣೆಗೆ ನಿಂತಿದ್ದಾರೆ ಎಂದು ಹಿಂದೂ ಸಂಘಟನೆಯವರು ವಿರೋಧ ವ್ಯಕ್ತಪಡಿಸಿದರು. ಬಿಬಿಎಂಪಿ ಕಾಮಗಾರಿಯಲ್ಲ. ಇದು ರಕ್ಷಣೆ ಸಂಬಂಧ ಸಿಸಿಟಿವಿ ಅಳವಡಿಸುತ್ತಿದ್ದೇವೆ ಎಂದು ಇನ್‍ಸ್ಪೆಕ್ಟರ್ ಸಮಜಾಯಿಷಿ ನೀಡಿದರು. ಆದರೂ ಸ್ಥಳೀಯರು ಇಲ್ಲಿ ಹಿಂದೂಗಳ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಮಕ್ಕಳು ಆಟವಾಡಲು ಭಯಪಡುತ್ತಾರೆ. ಮೈದಾನದಲ್ಲಿ ಯಾವುದೇ ಒಂದು ವಾಹನವನ್ನು ಪಾರ್ಕ್ ಮಾಡಿಲಿಕ್ಕೆ ಆಗುವುದಿಲ್ಲ ಎಂದು ಹರಿಹಾಯ್ದರು. ಇದು ಜಯಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಮೈದಾನ. ಐತಿಹಾಸಿಕ ಆಟದ ಮೈದಾನ. ವಕ್ ಬೋರ್ಡ್‍ನಿಂದ ಈದ್ಗಾ ಎಂದಾಗಿದೆ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ…

Read More

ಒಂದು ಸಮುದಾಯದವರು ನಿನ್ನೆಯಿಂದ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ ಸಮುದಾಯದ ನಾಯಕರ ಸಭೆ ಕರೆಯಲು ಸೂಚನೆ ನೀಡಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‍ಆರ್‍ಪಿಯ ಬೆಟಾಲಿಯನ್‍ಗಳನ್ನು ನಿಯೋಜಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ನಾಡಿನ ಜನರು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ. ಅನುಮತಿ ಪಡೆದು ನಿರ್ದಿಷ್ಟ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ, ನಿನ್ನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ನಿನ್ನೆ ರಾಜ್ಯದ ಕೆಲವೆಡೆ ಒಂದು ಸಮುದಾಯದವರು ಪ್ರತಿಭಟನೆ ಮಾಡಿದ್ದಾರೆ. ಈತನಕ ರಾಜ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲ. ಒಂದು ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಈಗಾಗಲೇ ಕ್ಷಮೆ ಕೇಳಿ ಮುಗಿದುಹೋಗಿರುವ ವಿಚಾರಕ್ಕೆ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ ಕೇಂಬ್ರಿಡ್ಜ್ ಶಾಲೆ ಹಿಂಭಾಗದ ಶೆಡ್‍ವೊಂದರಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡುತ್ತಿರುವ ಹಿನ್ನಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿದೆ. ಯುಜಿಡಿ, ಅಮೃತ್ ಕಾಮಗಾರಿ ಪರಿಶೀಲನೆಗೆಂದು ತೆರಳಿದಾಗ ಅನುಮಾನಗೊಂಡು ಕೇಂಬ್ರಿಡ್ಜ್ ಶಾಲೆ ಹಿಂಭಾಗದ ಶೆಡ್‍ಗೆ ತೆರಳಿ ಪರಿಶೀಲಿಸಿದಾಗ ಅಕ್ರಮವಾಗಿ ದನವನ್ನು ಕಡಿದಿರುವುದು ಬೆಳಕಿಗೆ ಬಂದಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದ್ದಾರೆ. ನಗರದ 22 ನೇ ವಾರ್ಡ್‍ನಲ್ಲಿ ಎಂದಿನಿಂದ ನಗರಸಭೆಯಿಂದ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿತ್ತು. ಗೋಹತ್ಯೆ ನಡೆದಿರುವುದು ಗೊತ್ತಾಗುತ್ತಿದ್ದಂತೆ ಆರೋಪಿತರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಸುಮಾರು 500 ಕೆ.ಜಿ ದನದ ಮಾಂಸ ಪತ್ತೆಯಾಗಿದೆ. ವಿರುದ್ದ ಗೋಹತ್ಯೆ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೋಹತ್ಯೆ ಸಂಬಂಧವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಗರದಲ್ಲಿ ಯಾವುದೇ ಅನಧಿಕೃತ ಶೆಡ್‍ಗಳು ನಿರ್ಮಿಸಿಕೊಂಡಲ್ಲಿ ಕೂಡಲೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ತೆರವು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.…

Read More

ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿಯ ಅಮಾನತುಗೊಂಡ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರಯಾಗ್ರಾಜ್ ಮತ್ತು ಸಹರಾನ್ಪುರದಲ್ಲಿ ಜನರು ಪೊಲೀಸ್್ಮ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉತ್ತರ ಪ್ರದೇಶದ ನಾಲ್ಕು ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಪೊಲೀಸರು 130ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ನಡೆದ ಗಲಭೆಯಲ್ಲಿ ಕೆಲವು ದ್ವಿಚಕ್ರ ವಾಹನ ಮತ್ತು ಬಂಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ವಾಹನವೊಂದನ್ನು ಬೆಂಕಿಗೆ ಆಹುತಿ ನೀಡಲು ಪ್ರಯತ್ನಿಸಲಾಗಿದೆ. ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ನಿಯಂತ್ರಿಸಿದರು. ಪ್ರದೇಶದಲ್ಲಿನ ಗಲಭೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. “ಶುಕ್ರವಾರ ರಾತ್ರಿ 9.45ರವರೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಗಲಭೆಯಲ್ಲಿ ಪ್ರತಿಭಟಿಸುತ್ತಿದ್ದ ಸುಮಾರು 136 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಶಾಂತಿ ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದರು. ಸಹರಾನ್ಪುರದಲ್ಲಿ 45, ಪ್ರಯಾಗ್ರಾಜ್ 37, ಅಂಬೇಡ್ಕರ್ ನಗರ 23, ಹತ್ರಾಸ್ನಲ್ಲಿ 20, ಮೊರಾದಾಬಾದ್ 7 ಮತ್ತು…

Read More

ಕಲ್ಪತರು ನಾಡಿನಲ್ಲಿ ವಿದ್ಯಾ ರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು ಕಳೆದ ಒಂದು ವಾರದಿಂದ ಮೂವರು ನೇಣಿಗೆ ಕೊರಳೊಡ್ಡಿದ್ದು ಪೋಷಕರಲ್ಲಿ ಆತಂಕ ಎದುರಾಗಿದೆ. ಕಳೆದ ಸೋಮವಾರ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 6ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಮಹಾರಾಷ್ಟ್ರ ಮೂಲದ ಸೋಹನ್‍ನಾಥ್ ಬಾಲಂಕರ್, ಮತ್ತೊಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮೈಸೂರು ಮೂಲದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡರೆ, ಹಿರಿಯೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾರದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ದ್ವಿತೀಯ ಪಿಯುಸಿ ಆಂತರಿಕ ಪಠ್ಯದಲ್ಲಿ ಕಡಿಮೆ ಅಂಕ ಬಂದಿತೆಂದು ಮನನೊಂದು ಪ್ರಮೋದ್ ನೇಣಿಗೆ ಶರಣಾಗಿದ್ದರೆ, ಉಳಿದ ಇಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.…

Read More

ತಿಪಟೂರು: ವಾಹನ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಬಹುತೇಕ ದ್ವಿಚಕ್ರ ಸವಾರರು ಹ್ಯಾಂಡ್ ಲಾಕ್ ಮಾಡದೇ ಹಾಗೆಯೇ ಬೈಕ್ ನ್ನು ಬಿಟ್ಟು ಹೋಗುತ್ತಿರುವುದು ಬೈಕ್ ಕಳ್ಳರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಲು ಪೊಲೀಸರೇ ಕಾರ್ಯಾಚರಣೆಗಿಳಿದ ಘಟನೆ ತಿಪಟೂರಿನಲ್ಲಿ ನಡೆದಿದೆ. ತಿಪಟೂರು ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ,  ಹ್ಯಾಂಡ್ ಲಾಕ್ ಮಾಡದೆ ವಾಹನ ಸವಾರರು ಜಾಗರೂಕತೆಯಿಂದ ಬಿಟ್ಟು ಹೋದ ವಾಹನಗಳು ಹಾಗೂ ವಾಹನದಲ್ಲೇ  ಕೀ ಬಿಟ್ಟು ಹೋದ ನೂರಾರು ವಾಹನಗಳನ್ನ ವಶಕ್ಕೆ ಪಡೆದರು. ನಗರಠಾಣೆ ವೃತ್ತನಿರೀಕ್ಷಕರಾದ ಶ್ರೀಶೈಲಕುಮಾರ್, ನಗರಠಾಣಾ ಸಬ್ ಇನ್ಸ್ ಪೆಕ್ಟರ್ ದ್ರಾಕ್ಷಣಮ್ಮ, ಶಿವಣ್ಣ,  ಕೃಷ್ಣಕುಮಾರ್, .ಎಎಸ್ ಐ ನಿಸಾರ್,  ರಾಮಣ್ಣ ಸೇರಿದಂತೆ ಸಿಬ್ಬಂದಿ ಭಾಗವಹಿಸಿದರು . ನಗರದ ಬಿ.ಹೆಚ್.ರಸ್ತೆ, ಕೆ.ಎಸ್ ಆರ್.ಟಿ ಸಿ ಬಸ್ ಸ್ಯಾಂಡ್ ರಸ್ತೆ ಹಾಗೂ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಯಿತು  ವರದಿ: ಆನಂದ ತಿಪಟೂರು…

Read More