Author: admin

ಗದಗ: ಇಂದು ಮುಂಜಾನೆ ಲಿಂಗೈಕ್ಯರಾದ ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ.ಸಂಗನಬಸವ ಮಹಾಸ್ವಾಮಿಗಳ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಡೆದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್ ಇದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಮಧುಗಿರಿ: ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ‘ಜೈ ಭೀಮ್’ ಯುವಕರ ಸಂಘ ಮುದ್ದೇನೇರಳೆಕೆರೆ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಸಾಂಕೇತಿಕ ಧರಣಿ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಬಹುಸಮಾಜದ ಉಳಿವಿಗಾಗಿ ನೆಲ ಮೂಲ ಸಂಸ್ಕೃತಿ ಯ ಉಳಿವಿಗಾಗಿ ಹಾಗೂ ನಮ್ಮ ಅಸ್ಮಿತೆಗಾಗಿ ಸಮಾಜದ ನಡುವೆ ಸಂಘರ್ಷ ಅನಿವಾರ್ಯ ಎಂದರು. ಸಮಾಜದ ಕ್ರಾಂತಿಯ ಕಿಡಿಯನ್ನು ಹತ್ತಿಕ್ಕಿ ಮೂಲೆಗುಂಪು ಮಾಡುವ ಕೆಲಸವನ್ನು ಕೆಲವು ಸಾಂಪ್ರದಾಯಿಕ ಮನುವಾದಿಗಳು ಮಾಡುತ್ತಿದ್ದಾರೆ. ಇಂತಹ ಒಳ ಸಂಚಿನ ವಿರುದ್ಧ ಜಾಗೃತಿಗೊಳ್ಳದಿದ್ದರೆ, ಇದು ನಮ್ಮ ಅವಸಾನಕ್ಕೆ ಕಾರಣವಾದೀತು ಎಂದು ಜಾಗೃತಿ ಮೂಡಿಸಲಾಯಿತು. ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ, ಒಳಸಂಚಿನ ಕಾಣದ ಕೈಗಳ ವಿರುದ್ಧ ಹೋರಾಡಲೇ ಬೇಕಾಗಿದೆ. ನಮ್ಮ  ಊರಿನಲ್ಲಿಯೂ ಕ್ರಾಂತಿಯ ಕಿಡಿ ಇದೆ ಎನ್ನುವುದನ್ನು ತೋರಿಸಬೇಕಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ಈ ವೇಳೆ ಸಂಘದ ಮುಖಂಡರಾದ ತಿಪ್ಪೇಸ್ವಾಮಿ, ಮೋಹನ್, ರಾಜು, ಕುಪೆಂದ್ರ, ಸಿದ್ದು, ವೆಂಕಟ್, ಅಶ್ವತ್, ಪರಮಾತ್ಮ, ಮಂಜು, ಕುಮಾರ್,ಶಿವು, ದನಂಜಿ, ನಾಗೇಶ್…

Read More

ಬೆಂಗಳೂರು: ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 45.31 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದ್ದು, ಇದೀಗ ಘಟನೆ ಸಂಬಂಧ ವರ್ತೂರು ನಿವಾಸಿ ಮಹಿಳೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇನ್‌ ಸ್ಟಾಗ್ರಾಮ್ ಆ್ಯಪ್‌ ನಲ್ಲಿ ಸಂತ್ರಸ್ತ ಮಹಿಳೆ ಖಾತೆ ಹೊಂದಿದ್ದು, ಈ ಖಾತೆಗೆ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ಅಲೆಕ್ಸ್ ಎರಿನ್, ತಾನೊಬ್ಬ ಅಂತರರಾಷ್ಟ್ರೀಯ ಹಡಗಿನ ಕ್ಯಾಪ್ಟನ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ಇನ್ನೂ ನಮ್ಮ ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ ಆರೋಪಿ, ಅದನ್ನು ಸ್ವೀಕರಿಸುವಂತೆ ಕೋರಿದ್ದ. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಸೆ.30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೊಬ್ಬ ಆರೋಪಿ, ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದು, ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದಾನೆ. ಜೊತೆಗೆ ಕೆಲ ಶುಲ್ಕ ಪಾವತಿಸುವಂತೆ ಹೇಳಿದ್ದ. ಶುಲ್ಕ ತುಂಬದಿದ್ದರೆ, ಜೈಲು ಶಿಕ್ಷೆಯಾಗುವುದಾಗಿಯೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆರೋಪಿಗಳ ಮಾತು ನಂಬಿದ ಮಹಿಳೆ…

Read More

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಂಟಾಗಿರುವ ಹಾನಿಗಳ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಗಳಿಗೆ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ 500 ಕೋಟಿ ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶ ನೀಡಿದ್ದಾರೆ. ಮಳೆಯಿಂದಾದ ಹಾನಿಗಳು: ಜೀವ ಹಾನಿ; 24, ಸಂಪೂರ್ಣ ಮನೆ ಹಾನಿ; 658, ಭಾಗಶಃ ಮನೆ ಹಾನಿ; 8,495, ಜಾನುವಾರು ಸಾವು; 191, ಕೃಷಿ ಬೆಳೆ ಹಾನಿ; 5 ಲಕ್ಷ ಹೆಕ್ಟೇರ್, ತೋಟಗಾರಿಕೆ ಬೆಳೆ; 30,114 ಹೆಕ್ಟೇರ್, ರಸ್ತೆ ಹಾನಿ; 2,203 ಕಿ.ಮೀ., ಸೇತುವೆಗಳು; 165, ಶಾಲೆಗಳು; 1,225, ಪ್ರಾಥಮಿಕ ಆರೋಗ್ಯ ಕೇಂದ್ರ; 39, ವಿದ್ಯುತ್ ಕಂಬ; 1,674, ವಿದ್ಯುತ್ ಟ್ರಾನ್ಸ್ ಫಾರ್ಮರ್; 278 ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಪ್ರತಿವಲಯಕ್ಕೆ ರೂ.25 ಲಕ್ಷ ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ರಸ್ತೆ…

Read More

ಬೆಂಗಳೂರು: ರಂಗ ವಿಜಯಾ ತಂಡದ ವತಿಯಿಂದ ಪತ್ರಕರ್ತ ಗಣೇಶ್‌ ಕಾಸರಗೋಡು ಅವರ ‘ಚೌಕಟ್ಟಿಲ್ಲದ ಚಿತ್ರಪುಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕವಿ ಜಯಂತ್ ಕಾಯ್ಕಿಣಿ,  ನಾವು ಇತರರಿಗೆ ಮಾದರಿಯಾದಾಗ ಬದುಕು ಸಾರ್ಥಕ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಗೀತ ರಚನೆಕಾರ ನಾಗೇಂದ್ರ ಪ್ರಸಾದ್‌ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿರುವ ರಂಗ ವಿಜಯಾ ತಂಡದ ಕಾರ್ಯ ಅನುಕರಣೀಯ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಕಮಾಂಡೆಂಟ್‌ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ‌ ಎಂ.ವಿ.ರಾಮಕೃಷ್ಣ ಪ್ರಸಾದ್‌, ರಾಮಚಂದ್ರಾಪುರ ಮಠದ ಗೋ ಸೇವಕ ವೈ.ವಿ.ಕೃಷ್ಣಮೂರ್ತಿ, ನಿವೃತ್ತ ಸೈನಿಕ ಮೇಜರ್‌ ಎಸ್‌.ಸತ್ಯನಾರಾಯಣ, ವೈದ್ಯ ಡಾ.ಪ್ರಸನ್ನ ಕುಮಾರ್‌, ರಂಭೂಮಿ ಕಲಾವಿದ ಕೃಷ್ಣ‍ಪ್ಪ, ಇಂಡೊ–ಚೀನಾ ಫ್ರೆಂಡ್‌ಶಿಪ್‌ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರನ್‌, ವಿದ್ವಾನ್‌ ಎಚ್‌.ಎಸ್‌.ವೇಣುಗೋಪಾಲ್‌ ಸೇರಿದಂತೆ ಅನೇಕರಿಗೆ ಕಾರ್ಯಕ್ರಮದಲ್ಲಿ ‘ಅಮೃತ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪಲ್ಲವಿ ಮಣಿ, ಎಂ.ವಿ.ಶ್ರೀನಿವಾಸ, ನಾಗರಾಜ ರೆಡ್ಡಿ, ಚಂದ್ರಶೇಖರ, ಎಂ.ಪಿ.ನಾಗರಾಜ, ಸುರೇಶ್‌ ಕೋಡಿಹಳ್ಳಿ ಇದ್ದರು.…

Read More

ಚೇಳೂರು: ಗ್ರಾಮದಲ್ಲಿ ಮಳೆಯ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ಇಲ್ಲದೇ, ಕಸಗಳು ಬೇಕಾಬಿಟ್ಟಿಯಾಗಿ ಸಂಗ್ರಹಗೊಂಡಿದೆ. ಆದರೆ ಗ್ರಾಮ ಪಂಚಾಯತ್ ಇದನ್ನು ನೋಡಿಯೋ ನೋಡದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಮೊನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮದಿಂದ ಹೊರಗೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿದೆ. ಇದರಿಂದಾಗಿ ಜನರು ರಸ್ತೆಯಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ತಾಲೂಕು ವೀಕ್ಷಣೆಗೆ ಆಗಮಿಸಿದ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯನವರನ್ನು ತರಾಟೆಗೆತ್ತಿಕೊಂಡ ಗ್ರಾಮಸ್ಥರು, ನಿಮಗೆ ಗ್ರಾಮದ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ, ನೀವು ಕೈಲಾಗದಿದ್ದರೆ ಗ್ರಾಮ ಪಂಚಾಯತ್ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನರಸಿಂಹಯ್ಯನವರು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರೂ ಗ್ರಾಮಸ್ಥರ ಆಕ್ರೋಶ ಇಳಿಯಲಿಲ್ಲ. ಕೊನೆಗೆ ಪಿಡಿಓ, ಅಧ್ಯಕ್ಷರ ಜೊತೆಗೆ ಚರ್ಚಿಸಿ ಕೂಡಲೇ ಚರಂಡಿ ಸ್ವಚ್ಛಗೊಳಿಸಲು ತಿಳಿಸುತ್ತೇನೆ ಎಂದು ಭರವಸೆ ನೀಡಿದಾಗ…

Read More

ಸಂತಕವಿ‌ ಕನಕದಾಸರು ಬದುಕಿದ್ದದ್ದು 450 ವರ್ಷಗಳ ಹಿಂದೆ.‌ ನಮಗೆ ಲಭ್ಯವಿರುವ ಬುದ್ಧಗುರು, ಬಸವಣ್ಣ, ಅಶೋಕ, ವಾಲ್ಮೀಕಿ ಮುಂತಾದ ಶ್ರೇಷ್ಠ ವ್ಯಕ್ತಿಗಳ ಚಿತ್ರಪಟಗಳೆಲ್ಲವೂ ಕಲಾವಿದರ ಕಲ್ಪನಾ ಪ್ರತಿಭಾವಿಲಾಸದಿಂದ ಚಿತ್ರಿಸಲಾದ ಚಿತ್ರಪಟಗಳೇ ಆಗಿವೆ.‌ ಇಲ್ಲಿರುವ ಎರಡೂ ಚಿತ್ರಗಳನ್ನು ನೋಡಿದ ಬಳಿಕ ಪ್ರಶ್ನೆ ಏನೆಂದರೆ ಕನಕದಾಸರು ನುಡಿಸುತ್ತಿದ್ದದ್ದು ನಾಗ ತಂಬೂರಿಯೋ ಅಥವಾ ಏಕತಾರಿ ತಂಬೂರಿಯೋ? ಕನಕ ದಾಸರು ಹಣೆಗೆ ಧರಿಸುತ್ತಿದ್ದ ನಾಮವು ವೈಷ್ಣವರ ಗೂಟನಾಮವೋ ಶೈವದ ವಿಭೂತಿ ಭಸಿತವೋ (ಕುರುಬರು ಶೈವಾರಾಧಕರು)? ಹೆಗಲ‌ ಮೇಲೆ ಧರಿಸುತ್ತಿದ್ದದ್ದು ಕೆಂಪು ಅಥವಾ ವಸ್ತ್ರವೋ (ಅಥವಾ ನಾನು ಧರಿಸುವಂತಹ ಗಿಣಿಗೊಂಡೆ ಚೌಕಳಿಯ ಕೆಂಪು ಗಿಣಿವಸ್ತ್ರವಂತೂ ಅಲ್ಲ ತಾನೆ?) ಅಥವಾ ಕುರಿ ಉಣ್ಣೆಯ ಕರಿಜಾಡಿಯೋ?! ಕಲಾವಿದರು ರೂಪಿಸಿರುವ ಈ ಚಿತ್ರಗಳಲ್ಲಿರುವ ಉಳಿದ ವ್ಯತ್ಯಾಸಗಳನ್ನು ಗುರುತಿಸಿರಿ. ಮೊದಲ ಚಿತ್ರದ ಕಲಾವಿದನ ಕಲ್ಪನಾ ವಿಲಾಸದಲ್ಲಿ ಅವನ ಕೇಸರಿ ರಾಜಕಾರಣದ ಇಂಗಿತ ಆಶಯಕ್ಕೆ ತಕ್ಕನಾಗಿ ಕನಕದಾಸರ ಹೆಗಲ ಮೇಲೆ ಕೇಸರಿ ವಸ್ತ್ರವನ್ನು ಹಾಕಿದ್ದಾನೆ. ಆದರೆ ಮೈಮೇಲೆ ತೂಗುವಂತೆ  ನೂಲುವಾರ ಹಾಕಿ ಚಿತ್ರವನ್ನು ರಚಿಸುವುದನ್ನೇಕೋ ಅವನು ಮರೆತುಬಿಟ್ಟಿದ್ದಾನೆ.…

Read More

ಬೆಂಗಳೂರು:  ನವೆಂಬರ್ 26ರಂದು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸೂಚನೆ ನೀಡಿದೆ. ನವೆಂಬರ್ 26, 1949ರಂದು ಭಾರತದ ಸಂವಿಧಾನ ಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನವಾಗಿದ್ದು, ಈ ಸವಿ ನೆನಪಿಗಾಗಿ ನವೆಂಬರ್ 26ರಂದು  ಸಂವಿಧಾನದ ಪ್ರಸ್ತಾವಣೆಯನ್ನು ಕಡ್ಡಾಯವಾಗಿ ಓದುವ ಮತ್ತು ಸಂವಿಧಾನದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸಲು ಸೂಚನೆ ನೀಡಲಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ತುಮಕೂರಿನಲ್ಲಿ ಇಂದು ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಇಲ್ಲಿನ ಎಚ್‌ ಎಂಎಸ್‌ ಕಾಲೇಜಿಗೆ ಭೇಟಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿದರು. ಈ ವೇಳೆ  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಂಸದರಾದ ಜಿ.ಸಿ.ಚಂದ್ರಶೇಖರ್‌, ಶಾಸಕರಾದ ವೆಂಕಟರಮಣಪ್ಪ, ಮಾಜಿ ಸಂಸದರಾದ ಮುದ್ದ ಹನುಮೇಗೌಡ, ಮಾಜಿ ಶಾಸಕರಾದ ಕೆ.ಎನ್‌.ರಾಜಣ್ಣ, ಮಾಜಿ ಶಾಸಕರು ಹಾಗೂ ಕಾಲೇಜಿನ ಮುಖ್ಯಸ್ಥರಾದ ರಫೀಕ್‌ ಅಹ್ಮದ್‌, ಮಾಜಿ ಶಾಸಕರಾದ ಷಡಕ್ಷರಿ, ಶಫಿ ಅಹ್ಮದ್‌, ಜಯಚಂದ್ರ ಮೊದಲಾದವರು ಉಪಸ್ಥಿತರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಕೃಷಿ ಕಾಯ್ದೆ ವಾಪಸ್ ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಮಯದಲ್ಲಿ 750ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಇದೀಗ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಹೇಳಬೇಕೆ? ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಗಾಜಿನ ಮನೆಯಲ್ಲಿ ಭಾನುವಾರ ನಡೆಯಲಿರುವ ಕಾಂಗ್ರೆಸ್ ಪಕ್ಷ ಜನಜಾಗೃತಿ ಅಭಿಯಾನದ ಸಿದ್ಧತೆಗಳನ್ನು ಶನಿವಾರ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳೆ, ಚಳಿ, ಗಾಳಿಯಲ್ಲಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರೈತರನ್ನು ಅಯ್ಯೋ ಎನ್ನಿಸಿದ ಸರ್ಕಾರ ಅಭಿನಂದನೆಗೆ ಅರ್ಹವಲ್ಲ. ಒಂದು ವರ್ಷದಿಂದ ಧರಣಿ ಕುಳಿತಿದ್ದರೂ ಕನಿಷ್ಠ ಸೌಜನ್ಯಕ್ಕೂ ಭೇಟಿಯಾಗಿ ಮಾತುಕತೆ ನಡೆಸಲಿಲ್ಲ. ಈಗ ವಾಪಸ್ ಪಡೆಯುವುದಾಗಿ ಹೇಳಿರುವುದಕ್ಕೆ ಮೋದಿ ಅವರನ್ನು ಅಭಿನಂದಿಸಿದರೆ, ಹೋರಾಟನಿರತ ರೈತರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ರೈತರ ಪ್ರತಿಭಟನೆ ವಿಶ್ವದ ಗಮನ ಸೆಳೆದಿತ್ತು. ಹಲವು ರಾಷ್ಟ್ರಗಳು ಈ ಬಗ್ಗೆ ಮಾತನಾಡಿದ್ದವು. ಆದರೂ ಸ್ಪಂದಿಸಲಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆ…

Read More