Author: admin

ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ 22  ಮಂದಿ ಆರೋಪಿಗಳಿಗೆ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಜುಲೈ ತಿಂಗಳ 2021ರಲ್ಲಿ ಮದ್ರಸಾದಲ್ಲಿ 8 ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ. ಈ ಹಿನ್ನೆಲೆಯಲ್ಲಿ ಮುಸ್ಲಿಮರು ನಮ್ಮ ದೇವರನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಗಣೇಶ ಮಂದಿರವನ್ನು ಧ್ವಂಸಗೊಳಿಸಿದ್ದರು. ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 84 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎಲ್ಲರನ್ನು ವಿಚಾರಣೆ ನಡೆಸಿ 22 ಮಂದಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ನಾಸೀರ್ ಹುಸೇನ್ ತೀರ್ಪು ಪ್ರಕಟಿಸಿದ್ದಾರೆ. ಉಳಿದ 62 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಗಣೇಶ ಮಂದಿರದ ಮೇಲಿನ ದಾಳಿಯನ್ನು ಪಾಕಿಸ್ತಾನ ಖಂಡಿಸಿ ನಿರ್ಣಯ ಅಂಗೀಕರಿಸಿತ್ತು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲಿಸಿದರು. ಬೊಮ್ಮನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಗಾಳಿಗೆ ಟೆನ್ಸಲ್ ರೂಫ್ ಬಿದ್ದ ಪ್ರಕರಣ ಸಂಬಂಧ ಪಾಲಿಕೆಯಿಂದ ಯಾವುದೇ ಹಣ ವ್ಯಯಿಸದೆ ಗುತ್ತಿಗೆದಾರರಿಂದಲೇ ದುರಸ್ತಿ ಕಾರ್ಯವನ್ನು ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೇಗವಾಗಿ ಗಾಳಿ ಬಂದ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರೇಕ್ಷರ ಗ್ಯಾಲರಿಗೆ ಅಳವಡಿಸಿದ್ದ ಟೆನ್ಸಲ್ ರೂಫ್ ಬಿದ್ದಿದೆ. ಇದರ ಜೊತೆಗೆ ಇನ್ನೂ ಬಾಕಿಯಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ಇದೇ ವೇಳೆ ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಬಿಡಿಎ ಕಾಂಪ್ಲೆಕ್ಸ್ ಬ್ಲಾಕ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಪರಿಶೀಲಿಸಿದ ಅವರು,…

Read More

ನೀಟ್ ಸ್ನಾತಕೋತರ ಪರೀಕ್ಷೆಯ ದಿನಾಂಕ ಗಳನ್ನು ಮುಂದೂಡಬೇಕೆಂದು ಭಾರತೀಯ ವೈದ್ಯಕೀಯ ಒಕ್ಕೂಟ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರಿಗೆ ಮನವಿ ಮಾಡಿದೆ. ಈ ತಿಂಗಳ 21ರಂದು ಸ್ನಾತಕೋತರ – 2021ರ ಅಖಿಲ ಭಾರತ ಖೋಟಾ ಕೌನ್ಸಲಿಂಗ್ ತಡವಾ ಗುತ್ತಿರುವ ಕಾರಣ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಮಾಡಿದೆ. ಪಿಜಿ- 2022ರ ಪರೀಕ್ಷೆಯ ದಿನಾಂಕ ಮತ್ತು 2021ರ ಕೌನ್ಸಲಿಂಗ್ ದಿನಾಂಕ ಮತ್ತು 2021ರ ಕೌನ್ಸಲಿಂಗ್ ಮುಗಿಸಬೇಕಿರುವ ದಿನಾಂಕದ ನಡುವೆ ಅಂತರ ಕಡಿಮೆ ಇದೆ. ಆದ್ದರಿಂದ ಇಂತಹ ಕಠಿಣ ಪರೀಕ್ಷೆಗೆ ಸಿದ್ಧತೆ ಅಗತ್ಯವಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಮಯಾವಕಾಶ ಸಿಗುವುದಿಲ್ಲ ಎಂದು ಒಕ್ಕೂಟ ಹೇಳಿದೆ. ಕೋವಿಡ್ ಕಾರಣದಿಂದಾಗಿ 2021ರ ನೀಟ್ ಪಿಜಿ 5 ತಿಂಗಳು ತಡವಾಗಿ ಆರಂಭವಾಗಿತ್ತು. ಅ.25, 2021ರಂದು ನಡೆಯಬೇಕಿದ್ದ ಕೌನ್ಸಲಿಂಗ್ ಜನವರಿ ತಿಂಗಳಿನಲ್ಲಿ ಆರಂಭವಾಗಿದೆ. ಸೀಟುಗಳ ಮೀಸಲಾತಿ ಘೋಷಣೆ ಬಾಕಿ ಇದ್ದು, ಇದಕ್ಕೆ ಮುಖ್ಯ ಕಾರಣ ಮಾ.  31., 2022ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಕೌನ್ಸಲಿಂಗ್ ಮತ್ತಷ್ಟು ವಿಳಂಬವಾಯಿತು. ಕೊರೊನಾ ಸಂದರ್ಭದಲ್ಲಿ ಕೋವಿಡ್…

Read More

ನೊಯಿಡಾ(ಉತ್ತರಪ್ರದೇಶ), ಮೇ.೧೨- ಗ್ರೇಟರ್ ನೊಯಿಡಾ ದಲ್ಲಿರುವ ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಇಂದು ಬೆಳಿಗ್ಗೆಮಹೀಂದ್ರ ಬೊಲೆರೊ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಒಬ್ಬರು ಮಹಾರಾಷ್ಟ್ರದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ. ‘ಏಳು ಜನರಿದ್ದ ಮಹೀಂದ್ರ ಬೊಲೆರೊ ಆಗ್ರಾದಿಂದನೋಯಿಡಾ ದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್ ವೊಂದಕ್ಕೆ ಜೆವರಾ ಟೋಲ್ ಬಳಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದೂ ಹೇಳಿದ್ದಾರೆ. ಯಮುನಾಎಕ್ಸ್‌ ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತದಿಂದ ಉಂಟಾದ ಪ್ರಾಣಹಾನಿಯಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ ಎಂದುಪ್ರಾರ್ಥಿಸಿ ರುವ ಅವರು, ಮೃತರಕುಟುಂಬದ ವರಿಗಾಗಿ ಸಂತಾಪ ಸೂಚಿಸಿದ್ದಾರೆ’ ಎಂದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ರಾಯಚೂರು:  ಪರೀಕ್ಷೆ ಕೆಲಸ ಮುಗಿಸಿ ಬರುತ್ತಿದ್ದ ಉಪನ್ಯಾಸರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ಸಮೀಪ ನಡೆದಿದೆ. ದೇವದುರ್ಗದ ಬಾಲಕಿಯರ ಕಾಲೇಜು ಉಪನ್ಯಾಸಕರಾಗಿದ್ದ 59 ವರ್ಷ ವಯಸ್ಸಿನ ಮಾನಪ್ಪ ಗೋಪಾಳಾಪುರ( ಪರೀಕ್ಷಾ ಕಾರ್ಯ ಮುಗಿಸಿಕೊಂಡು ಬರುತ್ತಿದ್ದ ವೇಳೆ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಮಾನಪ್ಪ ಅವರು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಐಯಾಳಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಗೆ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ. ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಇತ್ತೀಚೆಗೆ ಸಮಾಜಮುಖಿಯಾಗಿರುವ ಚಿತ್ರಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ನಿರ್ದೇಶಕ ಶಿವಕುಮಾರ ಬಿ. ಜೇವರಗಿ ಅವರು ಹೊಸ ಪ್ರಯೋಗವೊಂದಕ್ಕೆ ಕೈಹಾಕಿದ್ದು, ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಿ, ನಟಿಸಿದ್ದು,  ಈ ಚಿತ್ರ ನಾಳೆ ತೆರೆಗೆ ಅಪ್ಪಳಿಸಲಿದೆ. ಕೌಟುಂಬಿಕ ಚಿತ್ರ “ಅತ್ಯುತ್ತಮ” ಮೇ 13ರಂದು ಬಿಡುಗಡೆಯಾಗಲಿದೆ. ಬಿ.ಎಂಎಸ್ ಸಿನಿ ಕ್ರಯೇಷನ್ಸ್ ಅರ್ಪಿಸುವ ಈ ಚಿತ್ರವು ಭಾರತೀಯ ಕೌಟುಂಬಿಕ ಸಂಬಂಧಗಳಲ್ಲಿ ಪರಿವರ್ತನೆ ತರುವಂತಹ ಚಿತ್ರವಾಗಿದೆ. ಇಂತಹವೊಂದು ಚಿತ್ರವನ್ನು ಸುನಿತಾ ಎಸ್.ಜೇವರಗಿ ಅವರು ನಿರ್ಮಾಣ ಮಾಡಿದ್ದು,  ಶಿವಕುಮಾರ ಬಿ. ಜೇವರಗಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡಿದ್ದಾರೆ. ನೃತ್ಯ ಮತ್ತು ಸಹ ನಿರ್ದೇಶನವನ್ನು ಎಂ.ಆರ್.ಕಪಿಲ್ ಮಾಡಿದ್ದಾರೆ. ಈ ಚಿತ್ರಕ್ಕೆ ಪುಷ್ಪಲತಾ ಕುಡ್ಲುರು, ವೀಣಾ ಶ್ರೀನಿವಾಸ್ ಸಹ ನಿರ್ಮಾಪಕರಾಗಿದ್ದಾರೆ. ದಿನೇಶ್ ಕುಮಾರ್  ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿ.ನಾರಾಯಣ್ ಛಾಯಾಗ್ರಹಣ ನೀಡಿದ್ದಾರೆ. ಆರ್ ದೊರೈರಾಜ್ ಸಂಕಲ ಮಾಡಿದ್ದಾರೆ.  ಎಸ್.ಚಂದ್ರಶೇಖರ್ ಸೌಂಡ್ಸ್ ಎಫೆಕ್ಟ್ ನೀಡಿದ್ದಾರೆ. ನಿರ್ಮಾಣ ಮೇಲ್ವಿಚಾರಣೆಯಲ್ಲಿ ರಮೇಶ್ ಅವರು ನಿಭಾಯಿಸಿದರು.  ಪಿಆರ್ ಒ: ಲಿಂಗರಾಜು-ಬಾಬು, ಅನಂತು, ಮೋಹನ್ ಮೊದಲಾದವರು ಈ ಚಿತ್ರತಂಡದಲ್ಲಿ ಕೆಲಸ…

Read More

ತುಮಕೂರು:  ಜಿಲ್ಲೆಯ ಗುಬ್ಬಿ ತಾಲೂಕಿನ ದಲಿತ ಯುವಕರ ಜೋಡಿ ಕೊಲೆಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತುಮಕೂರು ಜಿಲ್ಲಾ ಶಾಖೆ ವತಿಯಿಂದ ತುಮಕೂರು ಚಲೋ ಬೃಹತ್ ಕಾಲ್ನಡಿಗೆ ಜಾಥಾ ಮೇ 23 ರಂದು ಆರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಗುಬ್ಬಿ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು  ಮರುದಿನ ಮೇ 24ರಂದು ಬೆಳಗ್ಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಇತ್ತೀಚೆಗೆ ಎಸ್ ಸಿ ಸಮುದಾಯದ  ಪೆದ್ದನಹಳ್ಳಿಯ ಎಂ.ಪಿ.ಗಿರೀಶ್ ಹಾಗೂ ನಾಯಕ ಸಮುದಾಯದ ಮಂಚಲದೊರೆಯ ಗಿರೀಶ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಈ ಘೋರ ಹತ್ಯೆಯನ್ನು ಉನ್ನತಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯದ ವಿವಿಧ ದಲಿತ ಸಂಘಟನೆಗಳು ಒತ್ತಾಯಿಸಿದ್ದು, ಇದೀಗ ತುಮಕೂರಿಗೆ ಸೀಮಿತವಾಗಿರುವ ಪ್ರತಿಭಟನೆ ಇತರ ಜಿಲ್ಲೆಗಳಿಗೂ ಹಬ್ಬುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಹಿರಿಯೂರು: ಹಿರಿಯೂರು ನಗರದಲ್ಲಿ ಮೊದಲ ಹಂತದ ಒಳಚರಂಡಿ ವ್ಯವಸ್ಥೆ ಜಾರಿಗೆ ಸಚಿವರಾದ ಎಂ.ಟಿ.ಬಿ. ನಾಗರಾಜ್ ಮತ್ತು ಬೈರತಿ ಬಸವರಾಜ್ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ‘2018ರಲ್ಲಿ ಹಿರಿಯೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಜಾರಿಗೆ ಡಿಪಿಆರ್ ತಯಾರಿಸಲಾಗಿತ್ತು. ಆದರೆ ಎರಡೂವರೆ ವರ್ಷ ಕೋವಿಡ್ ನಿಂದ ಒಳಚರಂಡಿ ಕಾಮಗಾರಿ ಪ್ರಗತಿ ಸಾಧ್ಯವಾಗಿರಲಿಲ್ಲ. ಒಳಚರಂಡಿ ವ್ಯವಸ್ಥೆ ಕಾಮಗಾರಿ ನಡೆಸುವಾಗ ಇತರೆ ನಗರಗಳಲ್ಲಿ ನಾಗರಿಕರು ಏನೇನು ತೊಂದರೆ ಅನುಭವಿಸಿದ್ದಾರೆ. ಕಾಮಗಾರಿ ನಡೆಸುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ, ಅಲ್ಲಿನ ಲೋಪದೋಷಗಳು ಇಲ್ಲಿ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದರು. ‘ಒಳಚರಂಡಿ ಕಾಮಗಾರಿ ಕೆಲಸವು ಸುಲಭವಾಗಿ ನಡೆಯುವಂತದಲ್ಲ. ಮ್ಯಾನ್ ಹೋಲ್ ನಿರ್ಮಿಸುವಾಗ ಸಾರ್ವಜನಿಕರ ವಿರೋಧ ವ್ಯಕ್ತವಾಗಬಹುದು. ಅಂತಹ ಸಂದರ್ಭಗಳಲ್ಲಿ ಆಯಾ ವಾರ್ಡ್ ಸದಸ್ಯರು ಮುಂದೆ ನಿಂತು ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಎಂದು ಮನವಿ ಮಾಡಿದರು.ಈ ಕಾಮಗಾರಿಯು  ₹ 122 ಕೋಟಿ ವೆಚ್ಚದಲ್ಲಿ ನಡೆಯುತಿದೆ. ‘ವೇದಾವತಿ ಬಡಾವಣೆಯಲ್ಲಿ ನಡೆಯುವ ಸಂತೆಯನ್ನು ಚಳ್ಳಕೆರೆ ರಸ್ತೆಯಿಂದ ಸ್ವಲ್ಪ…

Read More

ತುಮಕೂರು:  ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ಮೇ 22ರಂದು ಮಡಿವಾಳರ “ಬೃಹತ್ ಜನಜಾಗೃತಿ ಸಮಾವೇಶ”ವು ತುಮಕೂರಿನ ಹೆಗ್ಗೆರೆ ಸಮೀಪವಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಪಕ್ಕದ ಮೈದಾನದಲ್ಲಿ ನಡೆಯಲಿದೆ. ತಿಪಟೂರಿನ ವಿದ್ಯಾನಗರದಲ್ಲಿರುವ ಮಡಿವಾಳ ಸಮುದಾಯ ಭವನದಲ್ಲಿ ಶ್ರೀಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಮಾವೇಶದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ರಾಜ್ಯಾಧ್ಯಕ್ಷ  ಸಿ.ನಂಜಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ಭವ್ಯ ಲೋಕೇಶ್ ಮತ್ತು  ಯುವ ಸಂಚಾಲಕ ಬಿ.ಎನ್.ಮೋಹನ್ ರಾಜ್ ಮಾತನಾಡಿ ಸಮಾವೇಶದ ಕುರಿತು ಮಾಹಿತಿ ನೀಡಿದರು. ರಾಜ್ಯ ಕಾರ್ಯದರ್ಶಿಗಳಾದ ಯಲ್ಲಪ್ಪ, ಮಯೂರಿ, ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರುಗಳಾದ ಶ್ವೇತಾ, ಪಾರ್ವತಮ್ಮ ಮತ್ತು  ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್ ಸೇರಿದಂತೆ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು  ಹಾಜರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ ಗ್ರಾಮದ ಸ. ನಂ.15/6 ರ 1ಎಕರೆ ವಿಸ್ತೀರ್ಣದ ರೈತ ವೆಂಕಟೇಶ್ ಎಂಬುವರ ಒಡೆತನಕ್ಕೆ ಸೇರಿದ ಜಮೀನಿಲ್ಲಿ ತುರುವೇಕೆರೆ ಅರಣ್ಯ ಇಲಾಖೆಯ ಸಿಬ್ಬಂದಿ ಅತಿಕ್ರಮ ಪ್ರವೇಶಿಸಿ ಫಸಲಿಗೆ ಬಂದ ಮರಗಳನ್ನು ಕಡಿದು ಹಾಕಿದ್ದು, ತಂತಿ ಕಂಬಗಳನ್ನು ನಾಶಮಾಡುವ ಮೂಲಕ ಅನ್ಯಾಯವೆಸಗಿದ್ದಾರೆ ಎಂದು ಮಗ್ಗದ ಪಾಳ್ಯ ಗ್ರಾಮದ ನೊಂದ ರೈತ ವೆಂಕಟೇಶ್ ಗಂಭೀರವಾಗಿ ಆರೋಪಿಸಿದ್ದಾರೆ. ನಮ್ಮತುಮಕೂರು ಜೊತೆ ಅಳಲು ತೋಡಿಕೊಂಡ  ರೈತ ವೆಂಕಟೇಶ್, ತುರುವೇಕೆರೆ ತಾಲೂಕಿನ ಗಡಿಭಾಗವಾದ ಸೀಗೆಹಳ್ಳಿ ಗ್ರಾಮದ ಸಮೀಪದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ, ಸ್ವತ್ತಿನ ಪಕ್ಕದಲ್ಲಿಯೇ ನಮ್ಮ ಒಡೆತನದ ಜಮೀನಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನಿಗೆ ಈಗಾಗಲೇ ಗಡಿ ಕಲ್ಲನ್ನು ನೆಟ್ಟಿದ್ದಾರೆ. ಹೀಗಿರುವಾಗ ಮೇ 3 ರಂದು ಮಧ್ಯಾಹ್ನ 3ರ  ಸಮಯದಲ್ಲಿ ತುರುವೇಕೆರೆಯ ಅರಣ್ಯ ಇಲಾಖೆಯ ಸಿಬ್ಬಂದಿ  ಮತ್ತು ಇನ್ನಿತರರು ಟ್ರಂಚ್ ಹೊಡೆಯುವ ನೆಪದಲ್ಲಿ, ಉದ್ದೇಶಪೂರ್ವಕವಾಗಿ ನಮ್ಮ ಜಮೀನಿನ ಒಡೆತನದಲ್ಲಿದ್ದಂತಹ  ಫಸಲಿಗೆ ಬಂದಂತಹ ಸುಮಾರು 15 ತೆಂಗಿನಗಿಡ, 50 ಬಾಳೆಗಿಡ, 40 ಅಡಿಕೆ ಸಸಿಗಳನ್ನು…

Read More