Subscribe to Updates
Get the latest creative news from FooBar about art, design and business.
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
Author: admin
ಶ್ರೀರಂಗಪಟ್ಟಣ: ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉಗಮ ಚೇತನ ಟ್ರಸ್ಟ್,(ರಿ,) ಹಾಗೂ ಗಮ್ಯಶ್ರೀರಂಗಪಟ್ಟಣ ಇವರ ಸಹಯೋಗದೊಂದಿಗೆ ಸರಳವಾಗಿ ತಾಯಂದಿರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಶ್ರೀರಂಗಪಟ್ಟಣ ಕೆ.ಹೆಚ್.ಬಿ. ಕಾಲೋನಿಯಲ್ಲಿ ಗಮ್ಯ ತಂಡದಿಂದ ನಡೆಯುತ್ತಿದ್ದ ಚಿಲಿಪಿಲಿ ಬೇಸಿಗೆ ಶಿಬಿರದಲ್ಲಿ ವಿಶ್ವ ತಾಯಂದಿರ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೂತನ ವನಿತೆ ವ್ಯವಸ್ಥಾಪನಾ ನಿರ್ದೇಶಕರಾದ ಕನ್ನಿಕಾ ರವರು ವಹಿಸಿಕೊಂಡಿದ್ದರು. ಇದರ ಉದ್ಘಾಟನೆಯನ್ನು ಉಗಮ ಚೇತನ ಟ್ರಸ್ಟಿನ ಅಧ್ಯಕ್ಷರಾದ ಪ್ರಿಯಾ ರಮೇಶ್ ರವರು ವಹಿಸಿಕೊಂಡಿದ್ದರು. ನಂತರ ತಾಯಿಯ ಬಗ್ಗೆ ಶಿಬಿರದ ಮಕ್ಕಳು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಭಾಗವಾದ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವುದರ ಮೂಲಕ ತನ್ನ ತಾಯಿತನದ ಅನುಭವ ಹಾಗೂ ಮಕ್ಕಳಿಗೆ ಪ್ರೀತಿಯನ್ನು ನೀಡಿ ಕೈತುತ್ತು ನೀಡಿದರು. ಆನಂತರ ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಾ ಜೊತೆಯಲ್ಲಿ ಹಾಡಿ ಕುಣಿದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಗಮ್ಯ ತಂಡದ ನಾಯಕ ಹಾಗೂ ನಿರ್ದೇಶಕರಾದ ಆದಿತ್ಯ ಭಾರದ್ವಾಜ ಹಾಗೂ ಮನೋಜ್…
ಹೆಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಕಾಂತರಾಜು ಆಚಾರಿ ಎಂಬುವವರ ಉಳುಮೆ ಮಾಡುವ ಎತ್ತನ್ನು ಹುಲಿ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ನಡೆದಿದೆ. ಬೆಳಿಗ್ಗೆ ಬೆಳಿಗ್ಗೆ ಜನೀನಿನಲ್ಲಿ ಕಟ್ಟಲಾಗಿದ್ದ ಎತ್ತಿನ ಮೇಲೆ ಹುಲಿಯು ಬೇಟೆಯಾಡಿದೆ, ಇದನ್ನು ಕಂಡು ಜಮೀನಿನಲ್ಲಿದ್ದ ಎಲ್ಲರೂ ಗಾಬರಿಗೊಂಡಿದ್ದಾರೆ. ಘಟನೆಯಿಂದ ಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಹುಲಿಯನ್ನು ತಕ್ಷಣ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಇಲ್ಲವಾದರೆ ಮನುಷ್ಯರ ಮೇಲೆ ಹುಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪ್ರತಿ ನಿತ್ಯವೂ ಜಾನುವಾರುಗಳ ಬಲಿ ನಡೆಯುತ್ತದೆ, ಆದರೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದು ವಕೀಲರಾದ ರಾಜಚಾರಿ ಆರೋಪಿಸಿದ್ದಾರೆ. ಹುಲಿ ಕಾಡಿನಿಂದ ಹೊರ ಬರುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ, ಈಗಾಗಲೇ ಜಾನುವಾರುಗಳ ಬಲಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕ್ಯಾಮರಾ ಟ್ರಾಪ್ ಅಳವಡಿಸಲಾಗಿದೆ. ತಕ್ಷಣವೇ ಬೋನು ಅಥವಾ ಯಾವ ರೀತಿ ಸೆರೆಹಿಡಿಯಬೇಕು ಎಂಬ…
ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಂಬಂಧ ಇಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಚರ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ವರಿಷ್ಠರಿಗೆ ಕಳುಹಿಸಿಕೊಡಲಾಗುವುದು. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೂ ಅಭ್ಯರ್ಥಿಗಳ ಹೆಸರನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಮಾಡುತ್ತೇವೆ ಎಂದರು. ಆಕಾಂಕ್ಷಿಗಳ ಪಟ್ಟಿ ಸಾಕಷ್ಟಿದ್ದರೂ ಅಂತಿಮವಾಗಿ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಪ್ರಮುಖರು ತೀರ್ಮಾನಿಸುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕಾಗುತ್ತದೆ ಎಂದು ಸಿಎಂ ಸೂಚಿಸಿದರು.ದಾವೋಸ್ ಪ್ರವಾಸ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು ಇಡೀ ದೇಶದಲ್ಲಿ ನನ್ನನ್ನು ಸೇರಿದಂತೆ…
ಬಿಜೆಪಿ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಾಡುವ ಮನಸ್ಸೇ ಇಲ್ಲ. ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುಪ್ರೀಂಕೋರ್ಟ್ ಆದೇಶದನ್ವಯ ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ತಿಂಗಳು ಮೊದಲೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕಿತ್ತು. ಆದರೆ, ರಾಜ್ಯ ಸರ್ಕಾರ ಚುನಾವಣೆ ಮಾಡುವುದಕ್ಕೆ ಸಿದ್ಧವಿಲ್ಲ. ಶೀಘ್ರ ಚುನಾವಣೆ ನಡೆಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು. ಕಾನೂನು ಪ್ರಕಾರ ಆಯೋಗ ನಡೆದುಕೊಳ್ಳುತ್ತದೆ. ಹಿಂದೆಯೂ ಕೂಡ ಆಯೋಗ ಕೋರ್ಟ್‍ಗೆ ಹೋಗಿತ್ತು. ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಹಿಂದುಳಿದವರಿಗೆ ಮೀಸಲಾತಿ ಮಾಡಬೇಕು. ಕಾಂತರಾಜ್ ಆಯೋಗದ ಮಾಹಿತಿ ಸರ್ಕಾರದ ಬಳಿ ಇದೆ. ಅದನ್ನು ಪರಿಗಣಿಸದೆ ಬೇರೆಯವರನ್ನು ನೇಮಕ ಮಾಡಿ ಸಬೂಬು ಹೇಳಲು ಮುಂದಾಗಿದೆ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ರಮ್ಯಾ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸಣ್ಣ ವಿಚಾರ. ಯತ್ನಾಳ್ ಹೇಳಿಕೆ ಮುಂದೆ…
ಲಿಡ್ಕರ್ ಸಂಸ್ಥೆಯನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಾ.ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚರ್ಮ ಕರಕುಶಲಕರ್ಮಿಗಳ ಸಮಾವೇಶ ಹಾಗೂ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 237 ಕೋಟಿ ಅನುದಾನ ನೀಡಲಾಗಿದ್ದು, 33 ಸಾವಿರ ಉದ್ಯಮಿಗಳಿಗೆ ನೆರವಾಗಿದೆ ಎಂದರು. ಉತ್ತಮ ವಿನ್ಯಾಸದ ಪೀಠೋಪಕರಣ ತಯಾರಿಸುತ್ತಿದ್ದು, ಬ್ರಾಂಡ್‍ನಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ದೊರೆಯಲಿದೆ. ಫರ್ನಿಚರ್ಸ್ ಎವಗ್ರೀನ್ ಉದ್ಯಮವಾಗಿದೆ. ಈ ಕಡೆ ಗಮನಹರಿಸಬೇಕು ಎಂದರು. ಈ ವರ್ಷ 25 ಕೋಟಿ ರೂ.ಅನುದಾನ ಒದಗಿಸಿದ್ದು, ಹೆಚ್ಚು ಜನರಿಗೆ ಉದ್ಯೋಗ ನೀಡುವುದಾದರೆ ಪೂರಕ ಅಂದಾಜಿನಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು ಎಂದರು. ತಾವು ಮಂಡಿಸಿದ 2.65ಕೋಟಿ ರೂ. ಮೊತ್ತದ ಬಜೆಟ್ ಪುಸ್ತಕ ಅತ್ಯಂತ ಸುರಕ್ಷಿತವಾಗಿದ್ದದ್ದು, ಲಿಡ್ಕರ್ ಸಂಸ್ಥೆಯ ತಯಾರಿಸಿದ ಬ್ಯಾಗ್‍ನಲ್ಲಿ ಎಂದು ಮೆಚ್ಚುಗೆ…
ಐಪಿಎಲ್ 15ರ ಆವೃತ್ತಿಯಲ್ಲಿ ಗಾಯಾಳುಗಳ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ, ಈಗಾಗಲೇ ಸನ್‍ರೈಸರ್ಸ್ ಹೈದ್ರಾಬಾದ್‍ನ ವಾಷಿಂಗ್ಟನ್ ಸುಂದರ್, ನಟರಾಜನ್ ಗಾಯಗೊಂಡು ಆಡುವ 11ರ ಬಳಗದಿಂದ ಹೊರಗುಳಿದಿದ್ದರೆ, ಸಿಎಸ್‍ಕೆಯ ಮಾಜಿ ನಾಯಕ ರವೀಂದ್ರಾಜಾಡೇಜಾ ಗಾಯದಿಂದಾಗಿ ಇಡೀ ಟೂರ್ನಿಯನ್ನು ತೊರೆದಿದ್ದಾರೆ, ಈಗ ಅವರ ಸಾಲಿಗೆ ಕೆಕೆಆರ್‍ನ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಸೇರ್ಪಡೆಯಾಗಿದ್ದಾರೆ. ಸೊಂಟದ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿಗಳು ತಮ್ಮ ಅಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದಾರೆ. ತಮ್ಮ ಅಲೌಂಡರ್ ಪ್ರದರ್ಶನದಿಂದ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದ ಪ್ಯಾಟ್ ಕಮ್ಮಿನ್ಸ್ ತಾನಾಡಿರುವ 5 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿರುವುದಲ್ಲದೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲೇ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಪ್ಯಾಟ್ ಕಮ್ಮಿನ್ಸ್ ಅವರು ಗಾಯಗೊಂಡಿರುವುದರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಿಂದಲೂ ವಿಶ್ರಾಂತಿ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ. ವರದಿ ಆಂಟೋನಿ…
ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ವೇಳಾ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿ ಬಿರುಸುಗೊಂಡಿದ್ದು, ಕಾಂಗ್ರೆಸ್‍ನ ಪ್ರಭಾವಿ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ತೆರೆಮರೆ ಕಸರತುಗಳು ಜೋರಾಗಿವೆ. ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಕೆ.ಸಿ.ರಾಮಮೂರ್ತಿ, ನಿರ್ಮಿಲಾ ಸೀತಾರಾಮನ್, ಕಾಂಗ್ರೆಸ್‍ನ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ನಿಧನರಾದ ಆಸ್ಕರ್ ಫರ್ನಾಡಿಸ್ ಸೇರಿದಂತೆ ನಾಲ್ವರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್ ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಆರಿಸಿ ಕಳುಹಿಸಲು ತಯಾರಿ ನಡೆಸಿದ್ದಾರೆ. ಗಾಂಧಿ ಕುಟುಂಬದೊಂದಿಗೆ ಅಪಾರ ನಿಷ್ಠೆ ಹೊಂದಿರುವ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾದಾಗ ಪ್ರಿಯಾಂಕ ಗಾಂಧಿ ದೂರವಾಣಿ ಕರೆ ಮಾಡಿ ಶುಭಾಷಯ ಹೇಳಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಸದರಾಗಿದ್ದ ಪ್ರಿಯಾಂಕ ಗಾಂಧಿ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲವಿಗಾಗಿ ಬಾರೀ…
ಚಲನಚಿತ್ರಗಳ ಚಿತ್ರೀಕರಣದಲ್ಲಿ ಬಳಸುತ್ತಿದ್ದ ಬಣ್ಣ ಬಣ್ಣದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಕಳೆದ 2 ವರ್ಷಗಳಿಂದ ನಿಂತಿದ್ದ ಕಾರಿನ ಬಳಿ ದುರ್ವಾಸನೆ ಗ್ರಹಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದಾಗ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಈ ಹಿಂದೆ ಕಾರನ್ನು ಕೆಲ ಚಲನಚಿತ್ರಗಳ ಚಿತ್ರೀಕರಣದಲ್ಲಿ ಬಳಸುತ್ತಿದ್ದರು, ಕಾರು ಮಾಲೀಕರು ಮನೆ ಬದಲಾಯಿಸಿದ್ದಾರೆ. ಆಗಿನಿಂದ ಮನೆ ಬಳಿಯೇ ಕಾರು ನಿಂತಿತ್ತು ಎಂದು ತಿಳಿದು ಬಂದಿದೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣದಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರಿಂದ ಬಂಧನವಾಗಿರುವ ಆರೋಪಿ ನಾಗೇಶ್ ವಿಚಾರಣೆ ವೇಳೆ ಪೊಲೀಸರ ಮುಂದೆ ಕೇಲವು ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿದ ನಂತರ ಆಸಿಡ್ ಹಾಕಿದ್ದು ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.ಇದಕ್ಕೆ ಉತ್ತರಿಸಿದ ನಾಗೇಶ್,ನಾನು ಆಸಿಡ್ ಹಾಕುವುದಕ್ಕೆ ಯುವತಿಯೇ ಕಾರಣ ಎಂದಿದ್ದಾನೆ “ನಾನು ಆಸಿಡ್ ನ್ನು ಯುವತಿಯ ಮುಖಕ್ಕೆ ಹಾಕಬೇಕು ಅಂದುಕೊಂಡಿರಲಿಲ್ಲ. ಘಟನೆ ಹಿಂದಿನ ದಿನ ಯುವತಿಯ ಹತ್ತಿರ ಬಾಯಿ ಮಾತಿಗೆ ಆಸಿಡ್ ಹಾಕ್ತೀನಿ ಎಂದು ಹೇಳಿದ್ದೆ. ಆದರೆ, ಯುವತಿಯು ಅದನ್ನು ಆಕೆಯ ತಂದೆಗೆ ಹೇಳಿದಳು. ಬಳಿಕ ಸಂತ್ರಸ್ತೆಯ ತಂದೆಯು ನನ್ನ ಅಣ್ಣನಿಗೆ ಹೇಳಿದರು. ನನ್ನ ಅಣ್ಣ ನನಗೆ ಚೆನ್ನಾಗಿ ಬೈದಿದ್ದ. ಇದರಿಂದ ಆಸಿಡ್ ಹಾಕಿಯೇ ಬಿಡೋಣ ಎಂದು ತಿರ್ಮಾನಿಸಿಬಿಟ್ಟೆ” ಎಂದು ಆಸಿಡ್ ನಾಗ ಪೋಲಿಸರಿಗೆ ಹೇಳಿಕೆಯನ್ನು ನೀಡಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ಗುಬ್ಬಿ : ತಾಲೂಕು ಕಚೇರಿ ಮುಂಭಾಗದಲ್ಲಿರುವ ಹೋಟೆಲ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಬೆಂಕಿಗಾಹುತಿಯಾಗಿದ ಘಟನೆ ಕಳೆದ ರಾತ್ರಿ ಹನ್ನೆರಡು ಮೂವತ್ತರ ಸಮಯದಲ್ಲಿ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡ ಪರಿಣಾಮ ದಿನಸಿ ಪದಾರ್ಥಗಳು, ಫರ್ನಿಚರ್ಸ್ ಗಳು , ಎರಡು ಫ್ರಿಡ್ಜ್ ,ಒಂದು ಡಿಯೋ ಬೈಕ್ ನಗದು ಹಣ ನಾಲ್ಕು ಸಾವಿರ ರೂಗಳು ಸೇರಿದಂತೆ ಸುಮಾರು 6 ರಿಂದ 7 ಲಕ್ಷದವರೆಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿ ಒಂದು ಗಂಟೆಯಾದರೂ ಯಾವುದೇ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಗ್ರಾಮಲೆಕ್ಕಿಗ ಮಾದೇವಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮೇಲಾಧಿಕಾರಿ ಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಮೋಹನ್ ಕುಮಾರ್ ಹೋಟೆಲ್ ಮಾಲಿಕರ ಸಂಘದ ಸದಸ್ಯರಾದ ಈರಣ್ಣ ಸೇರಿದಂತೆ…