Subscribe to Updates
Get the latest creative news from FooBar about art, design and business.
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
Author: admin
ಪಾವಗಡ: ಪಾವಗಡ ತಾಲ್ಲೂಕಿನ ಮುರಾರಯನಹಳ್ಳಿ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿನಿಗೆ ಹೆಚ್ಚಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ವಿದ್ಯಾರ್ಥಿನಿ ಮನೆಗೆ ತೆರಳಿ ಆರ್ಥಿಕ ಹಣಕಾಸು ನೆರವು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಗೌತಮಿ ಪೋಷಕರು, ನನ್ನ ಮಗಳು ಪಿ ಯು ಸಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಲು ಆಸಕ್ತಿ ವಹಿಸಿದ್ದು, ಮನೆಯಲ್ಲಿ ಅರ್ಥಿಕ ತೊಂದರೆಯಿಂದ ಪೋಷಕರಾದ ನಮಗೆ ಚಿಂತೆಗೀಡಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹೆಲ್ಪ್ ಸೊಸೈಟಿ ವಿದ್ಯಾಭ್ಯಾಸಕ್ಕೆ ಬಹಳಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದನ್ನು ಕಂಡು ನಾವು ಸಹ ಹೆಲ್ಪ್ ಸೊಸೈಟಿ ಅದ್ಯಕ್ಷರಲ್ಲಿ ಅರ್ಥಿಕ ಸಹಾಯಕ್ಕೆ ಮನವಿ ಮಾಡಲಾಗಿ ಕೂಡಲೇ ಸ್ಪಂದಿಸಿ ನಮ್ಮ ಮಗಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ನಮ್ಮ ಮನೆಗೆ ಭೇಟಿ ನೀಡಿ ಅರ್ಥಿಕ ಹಣಕಾಸು ನೆರವನ್ನು ನೀಡಿ ವಿದ್ಯಾರ್ಥಿನಿಗೆ ದಾರಿದೀಪವಾಗಿದ್ದರೆ ಎಂದು ಕೃತಜ್ಞತೆ ಸಲ್ಲಿಸಿದರು ಈ ಸಂದರ್ಭದಲ್ಲಿ ವೀರಮ್ಮನಹಳ್ಳಿ ಲೋಕೇಶ್, ಶ್ರೀಕಾಂತ್, ಗೌತಮ್ ಹಾಜರಿದ್ದರು. ವರದಿ: ರಾಮಪ್ಪ ಸಿ.ಕೆ.ಪುರ,…
ಬೆಂಗಳೂರು ಅಸಾನಿ ಚಂಡಮಾರುತ ಹಿನ್ನೆಲೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಕರಾವಳಿಯಲ್ಲಿ ಯೆಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾದ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ . ಅಸಾನಿ ಚಂಡಮಾರುತ ಹಿನ್ನೆಲೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಆಂಧ್ರದ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜನರಿಗೆ ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಸಮುದ್ರ ಇಳಿಯದಂತೆ ತಿಳಿಸಲಾಗಿದೆ. ಇದೇ ವೇಳೆ ಆಂಧ್ರಪ್ರದೇಶ ತೀರಕ್ಕೆ ಚಿನ್ನದ ರಥವೊಂದು ಕೊಚ್ಚಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಚಂಡಮಾರುತ ಆಸಾನಿ ಎಫೆಕ್ಟ್ ಎನ್ನಲಾಗುತ್ತಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯ ಗ್ರಾಮಗಳ ನಿವಾಸಿಗಳು ಮಂಗಳವಾರ (ಮೇ 10) ಚಿನ್ನದ ಬಣ್ಣದ ರಥವನ್ನು ದಡದಲ್ಲಿ ಕಂಡು…
ಕೊರಟಗೆರೆ : ತಾಲ್ಲೂಕಿನಲ್ಲಿ ಈಗಾಗಲೇ ಅನೇಕ ಭಾಗಗಳಲ್ಲಿ ಭೀಮ್ ಸಂಸ್ಥೆಯ ಅಡಿಯಲ್ಲಿ ಸಾವಿರಾರು ನಿರುದ್ಯೋಗಿ ಯುವಕ ಯುವತಿಯರು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ . ಇದೀಗ ಭೀಮ್ ಸಂಸ್ಥೆ ಮತ್ತೊಂದು ಹೆಜ್ಜೆ ಇಟ್ಟಿದ್ದು, ಕರ್ನಾಟಕದ ಗಡಿಭಾಗದ ಬ್ಯಾಲ್ಯ ಗ್ರಾಮ ಮತ್ತು ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡು ಪ್ರಾರಂಭವಾಗಿರುವ ಭೀಮ್ ರೂರಲ್ ಡೆವಲಪ್ ಮೆಂಟ್ ಆರ್ಗನೈಸೇಷನ್ ಈ ಸಂಸ್ಥೆ ಅಡಿಯಲ್ಲಿ ಕಂಪ್ಯೂಟರ್ ಬೇಸಿಕ್ , ಡಾಟಾ ಎಂಟ್ರಿ, ಟ್ಯಾಲಿ ವಿಥ್ ಜಿಎಸ್ ಟಿ ,ಫೋಟೋಶಾಪ್ ಮತ್ತು ಎಡಿಟಿಂಗ್ ಡಿಟಿಪಿ ಟೈಲರಿ, ಎಂಬ್ರಾಯಿಡಿಂಗ್ ಇನ್ನು ಮುಂತಾದ ಅನೇಕ ತರಬೇತಿಗಳನ್ನು ಗ್ರಾಮೀಣ ಭಾಗದ ಬಡ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತವಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ಸಂದರ್ಭವನ್ನುದ್ದೇಶಿಸಿ ಮಾತನಾಡಿದ ಮೈಂಡ್ಟ್ರೀ ಫೌಂಡೇಷನ್ ಗ್ಲೋಬಲ್ ಹೆಡ್ ಪಣೀಶ್ ರಾವ್, ಅನೇಕ ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಹಾಗೂ ಯುವಕರು ಶಿಕ್ಷಣವನ್ನು ಮುಗಿಸಿ ಮನೆಯಲ್ಲಿಯೇ ಇದ್ದಾರೆ ಇನ್ನೂ ಕೆಲ ಹೆಣ್ಣುಮಕ್ಕಳು ಮದುವೆಯಾದರೂ ಕೂಡ ಗಂಡನ ಮನೆಯಲ್ಲಿ ಸುಮ್ಮನೆ ಕೂರುವ…
ತುಮಕೂರು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ದಂಪತಿ ಸಾವಿಗೀಡಾದ ಘಟನೆ ಮಲ್ಲಸಂದ್ರ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಗುಬ್ಬಿ ತಾಲೂಕಿನ ದಂಪತಿ 52 ವರ್ಷ ವಯಸ್ಸಿನ ಈಶ್ವರಪ್ಪ, 48 ವರ್ಷ ವಯಸ್ಸಿನ ಕಲ್ಪನಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ದಂಪತಿ ಇಬ್ಬರೂ ಶಿಕ್ಷಕರಾಗಿದ್ದರು. ಗುಬ್ಬಿಯ ಖಾಸಗಿ ಶಾಲೆಯಲ್ಲಿ ಈಶ್ವರಪ್ಪ, ಗುಬ್ಬಿ ಸರ್ಕಾರಿ ಶಾಲೆಯಲ್ಲಿ ಕಲ್ಪನಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬುಧವಾರ ತುಮಕೂರು ಕಡೆಯಿಂದ ಗುಬ್ಬಿ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಕೊರಟಗೆರೆ: ಎಣ್ಣೆಯ ಏಟಿಗೆ ಯುವಕನೋರ್ವ ಮೃತಪಟ್ಟ ಘಟನೆ ತಾಲ್ಲೂಕಿನ ಕೋಳಾಲ ಹೋಬಳಿಯ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಡು ದಾರಿಯಲ್ಲಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಎಲೆರಾಂಪುರ ಗ್ರಾಮದ ಯೋಗೀಶ್ ಬಿನ್ ಶಿವರಾಜ್ (24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಮೇ ೯ರಂದು ಸಂಜೆ ಕೆಲಸದಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕಂಠಮಟ್ಟ ಮದ್ಯ ಸೇವಿಸಿದ್ದ ಈತ, ಮದ್ಯ ಓವರ್ ಡೋಸ್ ಆದ ಕಾರಣ ನಿಶಕ್ತನಾಗಿ ದಾರಿಯಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಭವಿಸಿದ ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹಾಲಕ್ಷ್ಮಮ್ಮ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 2,897 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ನಿನ್ನೆಗೆ ಹೋಲಿಸಿದರೆ ಕೊಂಚ ಹೆಚ್ಚಳವಾಗಿದೆ. 24 ಗಂಟೆಯಲ್ಲಿ 54 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,24,157 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 19,494 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 2,986 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,25,66,935 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತಿಪಟೂರು: ತಾಲೂಕು ಕಬ್ನಳ್ಳಿ ಹೋಬಳಿ ಕಟ್ಟಡ ಕಾರ್ಮಿಕ ಸಂಘ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಅರಳಗುಪ್ಪೆ ಗ್ರಾಮದಲ್ಲಿ ನಡೆಸಲಾಯಿ ತು. ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಷಡಕ್ಷರಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅರಳಗುಪ್ಪೆ ಗ್ರಾಮಕ್ಕೆ ನಾನು ಶಾಸಕನಾಗಿದ್ದ ಒಂದು ಕೋಟಿ ರೂ., ನವಗ್ರಾಮ ಯೋಜನೆಯಡಿ ಸಿಮೆಂಟ್ ರಸ್ತೆ ಹಾಗೂ ಅರಳುಕುಪ್ಪೆ ಗ್ರಾಮದ ಕೆರೆಗೆ ನೀರು ತುಂಬಿಸುವ ಯೋಜನೆ ಕೂಲಿ ಕಾರ್ಮಿಕರು ಗಳಿಗೆ ಇಎಸ್ ಐ ಆಸ್ಪತ್ರೆ ತಿಪ್ಟೂರು ನಗರಕ್ಕೆ ತಂದು ಕೊಟ್ಟಿದ್ದೇನೆ ಎಂದರು. ನಗರದಲ್ಲಿ ತಿಪಟೂರಿನಲ್ಲಿ ಇಂದಿರಾ ಕ್ಯಾಂಟೀನ್ ತಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಡವರಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ನಮ್ಮ ಅಧಿಕಾರದಲ್ಲಿ ಹಲವಾರು ಯೋಜನೆಗಳನ್ನು ತಿಪಟೂರು ತಾಲೂಕಿಗೆ ತಂದಿರುತ್ತೇನೆ ಅರಳಗುಪ್ಪೆ ಲಿ ಸೇರಿದ ಎಲ್ಲಾ ಕಾರ್ಮಿಕರಿಗೂ ಕಿಟ್ಟು ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿದ್ದಯ್ಯ, ಸಂಘಟನಾ ಸಂಚಾಲಕ ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷ…
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲೂ ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ ನಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಯುವ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ಅವರನ್ನು ಬಂಧಿಸಲಾಗಿದೆ. ಪಿಎಸ್ ಐ ಅಭ್ಯರ್ಥಿ ಪರ ಡೀಲ್ ಕುದುರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಶರತ್ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಸರಗೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕೇಂದ್ರ ಸರ್ಕಾರ ನೀಡುವ ವಿಶಿಷ್ಟ ಗುರುತಿನ ಚೀಟಿ UDID Card ಆಸೆಸ್ ಮೆಂಟ್ ಕ್ಯಾಂಪ್ ಮೈಸೂರು KR ಆಸ್ಪತ್ರೆ ವೈದ್ಯಾಧಿಕಾರಿ ರವರು ತಪಾಸಣೆ ಮಾಡಿ, ಒಟ್ಟು 87 ವಿಕಲಚೇತನರಲ್ಲಿ 75 ಜನ ವಿಕಲಚೇತನರಿಗೆ UDID Card ಆಸೆಸ್ ಮೆಂಟ್ ಮಾಡಿದರು. ಈ ಸಂದರ್ಭದಲ್ಲಿ ಸರಗೂರು ತಾಲೂಕು ಸಂಯೋಜಕರಾದ S.H.ದೇವರಾಜ್ ಎಲ್ಲಾ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದರು ತಮ್ಮ ಸ್ವಂತ ಖರ್ಚಿನಿಂದ ಬಂದ ವೈದ್ಯಾಧಿಕಾರಿಗಳಿಗೆ ಚಹಾ ಹಾಗೂ ಉಪಹಾರ ವ್ಯವಸ್ಥೆ ಮಾಡಿದರು. ಇದೇ ವೇಳೆ ವಿಕಲಚೇತನರ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹಾಜರಿದ್ದರು. ಸರಗೂರು ತಾಲೂಕು ಸಂಯೋಜಕರಾದ S.H. ದೇವರಾಜ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಬಸವರಾಜು, ಸ್ವಮೇಶ್, ಸಂತೋಷ, ಮೋಹನ್ ಕುಮಾರ, ಕೆಂಡಗಣ, ರಂಜಿತ, ಮಹಾದೇವಮೂರ್ತಿ ಹಾಗೂ ಮೈಸೂರಿನ ವೈದ್ಯಾಧಿಕಾರಿ ಸರಗೂರು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಗುಬ್ಬಿ: ತುಮಕೂರು ಜಿಲ್ಲೆಯ ಪೆದ್ದನಹಳ್ಳಿಯಲ್ಲಿ ಎಸ್ ಸಿ ಹಾಗೂ ಎಸ್ ಟಿ ಯುವಕರ ಜೋಡಿ ಕೊಲೆಯನ್ನು ಖಂಡಿಸಿ, ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಪಾವಗಡ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಡಿ.ಜೆ.ಎಸ್. ನಾರಾಯಣಪ್ಪ ಮಾತನಾಡಿ, ಕೊಲೆಗಡುಕರನ್ನು ಕೂಡಲೇ ಸರ್ಕಾರ ಪೊಲೀಸ್ ಇಲಾಖೆ ಬಂಧಿಸಬೇಕು. ತನಿಖೆಯನ್ನು ಸಿಐಡಿಗೆ ನೀಡಬೇಕು ಹಾಗೂ ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಿ. ಕುಟುಂಬದ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಮಕ್ಕಳ ಉನ್ನತ ಶಿಕ್ಷಣ ನೀಡಲು ಸರ್ಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಕಡಲಕೆರೆ ಹನುಮಂತರಾಯಪ್ಪ ಮಾತನಾಡಿ, ಮೃತರ ಕುಟುಂಬಕ್ಕೆ 5 ಎಕರೆ ಜಮೀನು ನೀಡಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕುಟುಂಬಕ್ಕೆ ವಸತಿ ಯೋಜನೆಯಲ್ಲಿ ಮನೆ…