ಸರಗೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕೇಂದ್ರ ಸರ್ಕಾರ ನೀಡುವ ವಿಶಿಷ್ಟ ಗುರುತಿನ ಚೀಟಿ UDID Card ಆಸೆಸ್ ಮೆಂಟ್ ಕ್ಯಾಂಪ್ ಮೈಸೂರು KR ಆಸ್ಪತ್ರೆ ವೈದ್ಯಾಧಿಕಾರಿ ರವರು ತಪಾಸಣೆ ಮಾಡಿ, ಒಟ್ಟು 87 ವಿಕಲಚೇತನರಲ್ಲಿ 75 ಜನ ವಿಕಲಚೇತನರಿಗೆ UDID Card ಆಸೆಸ್ ಮೆಂಟ್ ಮಾಡಿದರು.
ಈ ಸಂದರ್ಭದಲ್ಲಿ ಸರಗೂರು ತಾಲೂಕು ಸಂಯೋಜಕರಾದ S.H.ದೇವರಾಜ್ ಎಲ್ಲಾ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದರು ತಮ್ಮ ಸ್ವಂತ ಖರ್ಚಿನಿಂದ ಬಂದ ವೈದ್ಯಾಧಿಕಾರಿಗಳಿಗೆ ಚಹಾ ಹಾಗೂ ಉಪಹಾರ ವ್ಯವಸ್ಥೆ ಮಾಡಿದರು. ಇದೇ ವೇಳೆ ವಿಕಲಚೇತನರ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹಾಜರಿದ್ದರು. ಸರಗೂರು ತಾಲೂಕು ಸಂಯೋಜಕರಾದ S.H. ದೇವರಾಜ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಬಸವರಾಜು, ಸ್ವಮೇಶ್, ಸಂತೋಷ, ಮೋಹನ್ ಕುಮಾರ, ಕೆಂಡಗಣ, ರಂಜಿತ, ಮಹಾದೇವಮೂರ್ತಿ ಹಾಗೂ ಮೈಸೂರಿನ ವೈದ್ಯಾಧಿಕಾರಿ ಸರಗೂರು ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5