Subscribe to Updates
Get the latest creative news from FooBar about art, design and business.
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
Author: admin
ತುಮಕೂರು: ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಕರಿಶೆಟ್ಟಿಹಳ್ಳಿಯ ರಸ್ತೆಬದಿ ಮಂಗಳವಾರ ಬೆಳ್ಳಂಬೆಳಗ್ಗೆ ಪತ್ತೆಯಾದ ವ್ಯಕ್ತಿಯ ಮೃತದೇಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ಬಯಲಾಗಿದೆ. ಐಯ್ಯಣ್ಣ ಎಂಬುವವರು ತನ್ನ ಪುತ್ರಿ ಸುಮಿತ್ರಾಳನ್ನು 6 ವರ್ಷದ ಹಿಂದೆ ಮೂಡ್ಲಯ್ಯಗೆ ಕೊಟ್ಟು ಮದುವೆ ಮಾಡಿದ್ದರು. ಪತ್ನಿ ಇದ್ದರೂ ಮೂಡ್ಲಯ್ಯಗೆ ಪರಸ್ತ್ರೀಯ ಚಟ ಹೊಂದಿದ್ದನು. ಈ ವಿಚಾರವಾಗಿ ಮೂಡ್ಲಯ್ಯಗೆ ಬುದ್ಧಿಮಾತು ಹೇಳಿದ್ದ ಮಾವ ಐಯ್ಯಣ್ಣ, ಮಗಳ ಜೀವನ ಬೀದಿ ಪಾಲು ಮಾಡಬೇಡ. ಪರಸ್ತ್ರೀ ಜತೆಗಿನ ಸಂಬಂಧವನ್ನು ನಿಲ್ಲಿಸುವಂತೆ ಬುದ್ದಿ ಹೇಳಿದ್ದಾರೆ. ಆದರೆ ಮೂಡ್ಲಯ್ಯ ಅವರ ಮಾತಿಗೆ ಬೆಲೆ ಕೊಡದೆ ತನ್ನ ಕೆಟ್ಟ ಚಾಳಿ ಮುಂದುವರಿಸಿದ್ದ ಇದರಿಂದ ಬೆಸತ್ತ ಅಪ್ಪ-ಮಗ ಇಬ್ಬರೂ ಮೂಡ್ಲಯ್ಯನ ಮುಗಿಸಲು ಸಂಚು ರೂಪಿಸಿದ್ದು, ಸೋಮವಾರ ತಡರಾತ್ರಿ ಬೈಕ್ ನಲ್ಲಿ ಬರುತ್ತಿದ್ದ ಮೂಡ್ಲಯ್ಯನನ್ನು ಕರಿಶೆಟ್ಟಿಹಳ್ಳಿ ಬಳಿ ಅಡ್ಡಗಟ್ಟಿದ ಮಾವ-ಬಾಮೈದುನ ಇಬ್ಬರೂ ಆತನ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಾರೆ. ಬಳಿಕ ರಸ್ತೆಬದಿ ನಗ್ನ ಸ್ಥಿತಿಯಲ್ಲಿ ಮೃತದೇಹ ಎಸೆದು, ನಡುರಸ್ತೆಯಲ್ಲಿ ಬೈಕ್ ಬಿಸಾಡಿ ಪರಾರಿಯಾಗಿದ್ದರು. ಮಂಗಳವಾರ ಬೆಳಗ್ಗೆ ಮ್ರತದೇಹ ಮತ್ತು…
ಉತ್ತರಪ್ರದೇಶ: ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದ ವೇಳೆ 18 ವರ್ಷ ವಯಸ್ಸಿನ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರೋಪಿಗಳು ತನ್ನನ್ನು ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದರು. ನಂತರ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೇರೊಬ್ಬರೊಂದಿಗೆ ಇರುವಂತೆ ಒತ್ತಾಯಿಸಿದರು ಎಂದು ಯುವತಿ ಹೇಳಿಕೆ ನೀಡಿರುವುದಾಗಿ ಝಾನ್ಸಿ ಜಿಲ್ಲೆಯ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಎಪ್ರಿಲ್ 21 ರಂದು ನಡೆಯಲಿರುವ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಎಪ್ರಿಲ್ 18 ರಂದು ತನ್ನನ್ನು ಅಪಹರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಳಗಾವಿ: ಅಪೆಕ್ಸ್ ಬ್ಯಾಂಕ್ ನಿಂದ ಶಾಸಕ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬಂಡೆಪ್ಪ ಕಾಶಂಪುರ ಸಹಿತ ಹಲವರು ಸಾಲ ಪಡೆದಿದ್ದು, ಸಾಲ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಸುಮಾರು 24 ಜನ ಅಪೆಕ್ಸ್ ಬ್ಯಾಂಕಿನಿಂದ ಸುಮಾರು ಆರು ಸಾವಿರ ಕೋಟಿ ರೂ. ವರೆಗೆ ಸಾಲ ಪಡೆದಿದ್ದಾರೆ. ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಅನೇಕರು ಸಾಲ ಪಡೆದಿದ್ದಾರೆ. ಸಾಲ ಪಡೆದವರಿಗೆ ನೋಟಿಸ್ ನೀಡಲಾಗಿದೆ ಎಂದರು. ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಸಾಲ ಬಾಕಿ ಉಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಲ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಲಾಗಿದೆ. ಸಾಲ ಕಟ್ಟದವರ ಆಸ್ತಿ ಜಪ್ತಿ ಹೇಗೆ ಮಾಡಿಕೊಳ್ಳುತ್ತದೆಯೋ ಹಾಗೆಯೇ ಅಪೆಕ್ಸ್ ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಧು ಇದೇ ವೇಳೆ…
ಬೆಂಗಳೂರು: ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿಯೋರ್ವ ಎರಡು ದಿನದ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯಲ್ಲಿ ನಡೆದಿದೆ. 19 ವರ್ಷ ವಯಸ್ಸಿನ ಸೋಮನಾಥ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಸೋಮನಾಥ್ 5ನೇ ತಾರೀಕಿನಂದು ಸ್ನೇಹಿತರು ನನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅವರಿಗಿಂತ ಮೊದಲು ನಾನೇ ಸಾಯ್ತೀನಿ ಎಂದು ಡೆತ್ ನೋಟ್ ಬರೆದಿಟ್ಟು, ಮನೆಯಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಆತನ ಪೋಷಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಇದಾದ ಬಳಿಕ ಮಾರತ ಹಳ್ಳಿ ಬಳಿ ಎಮ್ ಸ್ಯಾಂಡ್ ಅನ್ ಲೋಡ್ ಮಾಡುವ ಲಾರಿಯಲ್ಲಿ ಸೋಮನಾಥ್ ನ ಮೃತದೇಹ ಪತ್ತೆಯಾಗಿತ್ತು. ತಮಿಳುನಾಡಿನಿಂದ ಮರಳು ತುಂಬಿಕೊಂಡು ಬಂದಿದ್ದ ಟಿಪ್ಪರ್ ಲಾರಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅಪರಿಚಿತ ಶವ ಯಾವುದೆಂದು ತಿಳಿಯಲು ತಮಿಳುನಾಡು ಕ್ವಾರಿ ಮತ್ತು ಕೆ.ಆರ್ .ಪುರಂ ಸ್ಟಾಂಡ್ ನಲ್ಲೆ ಪೊಲೀಸರು ವಿಚಾರಣೆ ಮಾಡಿದ್ದಾರೆ.ಈ ವೇಳೆ ಹೊಸಕೋಟೆ ನಿವಾಸಿ ಎನ್ನುವುದು ತಿಳಿದು ಬಂದಿದೆ.…
ರಾಜಸ್ಥಾನ: ಮದುವೆ ಸಮಾರಂಭದಲ್ಲಿ ಕರೆಂಟ್ ಹೋದ ಕಾರಣ ವಧುಗಳಿಬ್ಬರು ಅದಲು-ಬದಲು ಆದ ಘಟನೆ ರಾಜಸ್ಥಾನದ ಉಜ್ಜೈನಿಯಲ್ಲಿ ನಡೆದಿದೆ. ರಾಜಸ್ಥಾನದ ಅಸ್ಲಾನಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟಿದೆ. ಪೂಜೆ ಪ್ರಾರಂಭಿಸಿ ಸಪ್ತಪದಿ ತುಳಿಯುವ ವೇಳೆ ಎರಡು ಜೋಡಿಗಳಿದ್ದ ಕಾರಣ ವಧುಗಳು ಅದಲು-ಬದಲಾಗಿದ್ದಾರೆ. ನಿಕಿತಾ ಎಂಬ ವಧು ತಮ್ಮ ಭಾವಿ ಪತಿ ಗಣೇಶ್ ಬದಲಿಗೆ ಭೋಲಾ ಕೈಹಿಡಿದಿದ್ದು, ಗಣೇಶ್ನೊಂದಿಗೆ ಕರಿಷ್ಮಾ ಕೈಹಿಡಿದು ಕುಳಿತುಕೊಂಡಿದ್ದಾರೆ. ಮದುವೆಯ ಕೆಲಕಾರ್ಯ ನಡೆದ ಬಳಿಕ ಜೋಡಿ ಅದಲು- ಬದಲು ಆಗಿರುವುದು ತಿಳಿದು ಬಂದಿದೆ. ಬಳಿಕ ತುರಾತುರಿಯಲ್ಲಿ ಜೋಡಿಯನ್ನು ಸರಿಪಡಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಕರಿಶೆಟ್ಟಿಹಳ್ಳಿ ಬಳಿ ತಡರಾತ್ರಿ ನಡೆದಿದೆ. ಇಲ್ಲಿನ ಚೌಕೇನಹಳ್ಳಿ ಗ್ರಾಮದ ನಿವಾಸಿ 40 ವರ್ಷ ವಯಸ್ಸಿನ ಮೂಡ್ಲಯ್ಯ ಹತ್ಯೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ತಡ ರಾತ್ರಿ ತೋಟದಿಂದ ಮನೆಯ ಕಡೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆನ್ನಲಾಗಿದೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಗೆ ಕಾರಣಗಳೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಹತ್ಯೆಯ ಬಳಿಕ ರಸ್ತೆ ಬದಿಯ ಕಾಲುವೆಗೆ ಮೃತದೇಹವನ್ನು ಎಸೆದು ಹೋಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗುಬ್ಬಿ ಸಿಪಿಐ ನಧಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ನಾಯಕನಹಟ್ಟಿ: ಸಂವಿಧಾನ ಹಾಗೂ ಸಂಸ್ಕೃತಿ ಬದಲಾವಣೆಯ ನಡೆಗಳಿಂದ ದೇಶಕ್ಕೆ ಹೆಚ್ಚಿನ ಅಪಾಯವಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಪಟ್ಟಣದ ತೇರುಬೀದಿಯಲ್ಲಿ ದಲಿತ ಸಂಘರ್ಷ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‍ರಾಂ ಜಯಂತ್ಯುತ್ಸವವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲೆಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ. ಹೊಸ ಸಂಸ್ಕೃತಿಯನ್ನು ಸೃಷ್ಟಿಸುತ್ತೇವೆ ಎಂಬ ಭ್ರಮೆಯಲ್ಲಿ ಕೆಲವು ರಾಜಕೀಯ ಪಕ್ಷಗಳಿವೆ. ಇದರಿಂದಾಗಿ ದೇಶದಲ್ಲಿ ಆತಂಕದ ವಾತಾವರಣ ಇದೆ ಎಂದರು. ಅಂಬೇಡ್ಕರ್ ಜಯಂತಿ ಇದೀಗ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದಾಯಕ್ಕೆ ಸೇರಿದ 18 ಶಾಸಕರಿದ್ದರು. ಇದೀಗ 6ಕ್ಕೆ ಇಳಿದಿದೆ. ಸಮುದಾಯದ ಶಾಸಕರ ಸಂಖ್ಯೆ ಇಳಿಮುಖಕ್ಕೆ ಒಗ್ಗಟ್ಟಿನ ಕೊರತೆ ಕಾರಣವಾಗಿದೆ ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್ ಸಿಪಿ, ಟಿಎಎಸ್ ಪಿ ಯೋಜನೆ ಜಾರಿಗೊಳಿಸಿದೆ. ಈಗ ಈ ಹಣ ಅನ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ, ಭೋವಿ ಸೇರಿ ಇತರೆ ಜಾತಿಗಳು ಮೀಸಲಾತಿಯನ್ನು…
ಪ್ರಮೋದ್ ಮುತಾಲಿಕ್ ರಂಥವರನ್ನ ಮೊದಲು ಒದ್ದು ಒಳಗೆ ಹಾಕಬೇಕು, ಇಂಥವರನ್ನ ಒದ್ದು ಒಳಗೆ ಹಾಕದೇ ಇದ್ದಲ್ಲಿ, ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಉಳಿಸಲಿಕ್ಕೆ ಕಷ್ಟ ಆಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಆಜಾನ್ ವಿರುದ್ಧ ಸುಪ್ರಭಾತ ವಿಚಾರವಾಗಿ ಬಾದಾಮಿಯ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇಂತಹ ವಿಷಯಗಳನ್ನ ಬೆಳೆಯೋದಕ್ಕೆ ಬಿಡಬಾರದು. ಮೌನವಾಗಿ ಒಪ್ಪಿಗೆ ಸೂಚಿಸುವುದನ್ನ ಬಿಡಬೇಕು ಎಂದರು. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಿದ್ರೆ ಆಮೇಲೆ ರಿಪೇರಿ ಮಾಡೋಕಾಗುತ್ತಾ? ಇದು ರಾಮಸೇನೆಯೋ ? ರಾವಣ ಸೇನೆಯೋ? ಇವೆಲ್ಲಾ ಒಂದು ಕಡೆ ಇರಲಿ. ಸುಪ್ರೀಂ ಆದೇಶದಂತೆ ಸರ್ಕಾರ ಒಪ್ಪಿಗೆ ಕೊಡಲಿ. ಆ ಪ್ರಕಾರ ಹನುಮಾನ ಚಾಲೀಸಾ ಇವ್ರು ಓದಲಿ. ಅದಕ್ಕೆ ದೊಡ್ಡ ಪ್ರಚಾರ ಬೇಕಿಲ್ಲ. ನಮಗೆ ಸಂಕಷ್ಟ ಅಂದ್ರೆ ದಿನಾ ನಾವೆಲ್ಲ ಮನೆಯಲ್ಲೆ ಹನುಮಾನ ಚಾಲೀಸಾ ಹೇಳಿಕೊಳ್ಳಲ್ವಾ? ಆರೋಗ್ಯ ಸಮಸ್ಯೆ ಆದ್ರೆ, ಸಮಸ್ಯೆ ಉದ್ಭವ ಆದಾಗ ಮನೆಯಲ್ಲಿ ಹೇಳಿಕೊಳ್ಳುತ್ತೇವೆ. ಅದೇನು ದೊಡ್ಡ ಸಾಧನೆ ಅಲ್ಲ…
ಆಜಾನ್ ಗೆ ಪ್ರತಿಯಾಗಿ ಹನುಮಾನ್ ಚಾಲೀಸ, ಸುಪ್ರಭಾತ ಅಭಿಯಾನ ನಡೆಸುತ್ತಿರುವ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅಭಿಯಾನ ಪ್ರಾರಂಭ ಮಾಡುತ್ತಿರುವವರು ಅವರನ್ನು ಭಯೋತ್ಪಾದಕರು ಎಂದು ಕರೆಯಬೇಕು ಎಂದು ಹೇಳಿಕೆ ನೀಡಿದ್ದಾರೆ. ಅಭಿಯಾನ ನಡೆಸುತ್ತಿರುವವರನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಇವರೆಲ್ಲರೂ ಸಂಘ ಪರಿವಾರದವರ ವಿವಿಧ ಆಕ್ಟೋಪಸ್ ಇದ್ದಂತೆ ಎಂದು ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಇವರೆಲ್ಲರೂ ಸಂಘ ಪರಿವಾರದವರ ವಿವಿಧ ಆಕ್ಟೋಪಸ್ ಇದ್ದಂತೆ. ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನ ಮಾಡುತ್ತಿರುವ ಇವರನ್ನೆಲ್ಲ ಯುಎಪಿಎ ಅಡಿಯಲ್ಲಿ ಅರೆಸ್ಟ್ ಮಾಡಬೇಕು ಎಂದು ಒತ್ತಾಯಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಂಗಳೂರು: ಮುಳಬಾಗಿಲು ಪಕ್ಷೇತರ ಶಾಸಕ, ಮಾಜಿ ಸಚಿವ ಹೆಚ್..ನಾಗೇಶ್ ಅವರು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆನ್ನಲಾಗಿದ್ದು, ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಭೇಟಿ ಬಳಿಕ ಹೇಳಿಕೆ ನೀಡಿದ ಶಾಸಕ ಹೆಚ್.ನಾಗೇಶ್, ವರುಣಾ ಕ್ಷೇತ್ರದ ಕೆಲಸದ ನಿಮಿತ್ತ ಬಂದಿದ್ದೆ. ನಮ್ಮ ಸಂಬಂಧಿಯೊಬ್ಬರ ಕೆಲಸ ಆಗುವುದಿತ್ತು. ಹಾಗಾಗಿ ಅವರ ಮಗನ ಭೇಟಿಗೆ ಬಂದೆ, ಅವರಿಲ್ಲಹೋಗುತ್ತಿದ್ದೇನೆ. ಪ್ರತಿಪಕ್ಷ ನಾಯಕರಲ್ಲವೇ , ಗೌರವ ಕೊಡಲು ಬಂದಿದ್ದೆ. ನಾನು ಬಿಜೆಪಿ ಜತೆಯೇ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಮುಂದೆ ಟಿಕೆಟ್ ಕೊಡಬೇಕಲ್ವೇ? ನೊಡೋಣ ಇನ್ನೂ ಚುನಾವಣೆಗೆ ಸಮಯವಿದೆ. ಕ್ಷೇತ್ರದ ಜನ ಏನು ಹೇಳುತ್ತಾರೆ ಅದರಂತೆ ಮಾಡುತ್ತೇನೆ ಎಂದರು. ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಗ ಮುಂದೆ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಆಸಮಯ ಬಂದಿದೆ ಏನು ಮಾಡುತ್ತಾರೆ ನೋಡೋಣ. ಸಚಿವ ಸ್ಥಾನ ಕೊಟ್ಟರೆ ಯಾರಿಗೆ ಬೇಡ ಹೇಳಿ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಇನ್ನು ಚರ್ಚಿಸಿಲ್ಲ.…