Subscribe to Updates
Get the latest creative news from FooBar about art, design and business.
- CEC ಜ್ಞಾನೇಶ್ ಕುಮಾರ್ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ
- ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಆರೋಪ: ಬಿಜೆಪಿ ಶಾಸಕ ಮುನಿರತ್ನಗೆ ಯುವಕನಿಂದ ತರಾಟೆ!
- ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!
- ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಬಂದ್: ಜಿಪಂ ಸಿಇಒ ದಿಢೀರ್ ಭೇಟಿ, ಒಂದು ದಿನದ ಸಂಬಳ ಕಟ್ ಎಚ್ಚರಿಕೆ!
- ಕೊರಟಗೆರೆ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒತ್ತು– ಸರ್ವಜನ ಶ್ರಮಜೀವಿ ಸೇವಾ ಟ್ರಸ್ಟ್ ಉದ್ಘಾಟನೆ
- ಮಾವತ್ತೂರು ಸೊಸೈಟಿ ಸರ್ವ ಸದಸ್ಯರ ಸಭೆ ರಣರಂಗ: ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪ, ಅರ್ಧದಲ್ಲೇ ಸಭೆ ಮುಂದೂಡಿಕೆ!
- ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪಾವಗಡದ ಚನ್ನಕೇಶವಪುರ ತಂಡಕ್ಕೆ ದ್ವಿತೀಯ ಸ್ಥಾನ
- ಬುಡುಬುಡಿ ವೇಷಧಾರಿ ಕಳ್ಳರ ಬಂಧನ
Author: admin
ಶಿವಮೊಗ್ಗ, ಜೂ. 3 ಹೌದು. ಇದು ವಿಚಿತ್ರವಾದರೂ ಸತ್ಯ! ಪ್ರಸ್ತುತ ಮಾರುಕಟ್ಟೆಯಲ್ಲಿ ಲೀಟರ್ ಡಿಸೇಲ್ ದರ 89ದೆ! ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ, ಪ್ರತಿ ಲೀಟರ್ ಗೆ ಸರಿಸುಮಾರು 22ರೂ. ಹೆಚ್ಚು ದರ ಹೆಚ್ಚು ನೀಡಿ ಖರೀದಿಸುತ್ತಿದೆ!ಇದು ಕೆ.ಎಸ್.ಆರ್.ಟಿ.ಸಿ.ಗೆ ಅಕ್ಷರಶಃ ದುಬಾರಿ ಯಾಗಿ ಪರಿಣಮಿಸಿದೆ. ಇಂಧನ ವೆಚ್ಚ ಕಾರಣದಿಂದಲೇ ಹಲವೆಡೆ ಬಸ್ ಓಡಿಸಲು ಹಿಂದೇಟು ಹಾಕುವಂತಾಗಿದೆ. ಈ ಕಾರಣದಿಂದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಪೆಟ್ರೋಲ್ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೂ ಅಡ್ಡಗಾಲು ಹಾಕುವ ಹುನ್ನಾರಗಳು ನಡೆಯುತ್ತಿರುವುದು ಸತ್ಯ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಇಂಧನ ಮಾರಾಟ ಮಾಡದಂತೆ ಬಂಕ್ ಗಳಿಗೆ ಪರೋಕ್ಷ ಒತ್ತಡ ಹಾಕಲಾಗುತ್ತಿದೆ. ತೈಲ ಕಂಪೆನಿಯಿಂದಲೇ ನೇರವಾಗಿ ಇಂಧನ ಖರೀದಿಸುವ ತಂತ್ರಗಳು ನಡೆಯುತ್ತಲೆ ಇದೆ. ನಷ್ಟ: ಕಳೆದೆರೆಡು ವರ್ಷಗಳ ಅವಧಿಯಲ್ಲಿ, ಕೋವಿಡ್ ಕಾರಣದಿಂದ ಸರ್ಕಾರಿ ಸಾರಿಗೆ ಸಂಸ್ಥೆಯು ಭಾರೀ ನಷ್ಟಕ್ಕೀಡಾಗಿದೆ. ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿತ್ತು. ಪ್ರಸ್ತುತ ಸಂಸ್ಥೆ ಚೇತರಿಸಿಕೊಳ್ಳುತ್ತಿದ್ದ ಸಂಸ್ಥೆಯ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಬರುತ್ತಿದೆ. ಈ…
ಅತಿವೇಗವಾಗಿ ಹೋಗುತ್ತಿದ್ದ ಸ್ಪೋರ್ಟ್ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಯಾಗಿದ್ದ ನಿವೃತ್ತ ಎಸ್ ಪಿ ಗುರುಪ್ರಸಾದ್ ಪುತ್ರ ಹಾಗೂ ಆತನ ಗೆಳತಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಗರದ ಹೊರವಲಯದ ಸರ್ಜಾಪುರದಲ್ಲಿ ಇಂದು ನಸುಕಿನಲ್ಲಿ ನಡೆದಿದೆ. ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಗಳಾದ ಮಾರತ್ ಹಳ್ಳಿಯ ಗಗನ್ ದೀಪ್ ಹಾಗೂ ಆತನ ಗೆಳತಿ ವೈಟ್ ಫೀಲ್ಡ್ ನ ಹೊಂಗಸಂದ್ರದ ಯಶಸ್ವಿನಿಮೃತ ದುರ್ದೈವಿಗಳು. ಸಿಬಿಐನಲ್ಲಿ ಎಸ್ ಪಿಯಾಗಿದ್ದ ನಿವೃತ್ತರಾಗಿದ್ದ ಗುರುಪ್ರಸಾದ್ ಅವರ ಪುತ್ರರಾಗಿದ್ದ ಗಗನ್ ದೀಪ್ ಹಾಗೂ ಆತನ ಗೆಳತಿ ಇಬ್ಬರು ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ರಾತ್ರಿ ಪಾಳೆಯಲ್ಲಿ ಕೆಲಸ ಮುಗಿಸಿದ ಇವರಿಬ್ಬರೂ ಮುಂಜಾನೆ ೨.೩೦ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಡುಕಾಟಿ ಸ್ಪೋರ್ಟ್ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿದ್ದರು. ಮಾರ್ಗ ಮಧ್ಯದ ರಸ್ತೆ ತಿರುವಿನಲ್ಲಿ ಗಗನ್ ದೀಪ್ ಅವರಿಗೆ ನಿಯಂತ್ರಣಕ್ಕೆ ಸಿಗದ ಬೈಕ್, ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ…
ಯುದ್ಧದಿಂದ ನಲುಗಿಹೋಗಿರುವ ಉಕ್ರೇನ್ ದೇಶಕ್ಕೆ ನ್ಯಾಟೋ ರಾಷ್ಟ್ರಗಳ ಬೆಂಬಲ ಸಿಕ್ಕಿದೆ. ಇದರಿಂದಾಗಿ ರಷ್ಯಾ ವಿರುದ್ದ ಹೋರಾಟ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ. ಪಾಶ್ಚಿಮಾತ್ಯ ಮಿಲಿಟರಿ ಒಕ್ಕೂಟ, ಉಕ್ರೇನ್ ಅನ್ನು ಬೆಂಬಲಿಸುವ “ಜವಾಬ್ದಾರಿ” ಹೊಂದಿದೆ ಎಂದು ನ್ಯಾಟೋ ಮುಖ್ಯಸ್ಥ ಜೆನ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆನ್ , ಉಕ್ರೇನ್‌ನಲ್ಲಿ ಸುದೀರ್ಘವಾದ ” ಯುದ್ಧವಿರೋದಿ ” ನಿಲುವು ತೆಗೆದಕೊಳ್ಳಲು ಉಕ್ರೇನ್ ಬೆಂಬಲಸಲು ನ್ಯಾಟೋ ದೇಶಗಳು ಮುಂದಾಗಿವೆ ಎಂದು ಅವರು ಹೇಳಿದ್ದಾರೆ. ಉಕ್ರೇನಿಯನ್ನರು “ಯುದ್ಧಭೂಮಿಯಲ್ಲಿ ತಮ್ಮ ದೇಶವನ್ನು ರಕ್ಷಿಸಲು ಹೆಚ್ಚಿನ ಬೆಲೆ ಪಾವತಿಸುತ್ತಿದ್ದಾರೆ, ಆದರೆ ರಷ್ಯಾ ಹೆಚ್ಚಿನ ಸಾವು ನೋವು ತೆಗೆದುಕೊಳ್ಳುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ನೋಡುತ್ತೇವೆ” ಎಂದು ಹೇಳಿದ್ದಾರೆ. ನ್ಯಾಟೋ, ರಷ್ಯಾದೊಂದಿಗೆ ನೇರ ಮುಖಾಮುಖಿಯಾಗಲು ಬಯಸುವುದಿಲ್ಲ ಎಂದು ಹೇಳಿರುವ ಅವರು ಯುದ್ಧದ ಸನ್ನಿವೇಶಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು…
ತುಮಕೂರು: ಸುಮಾರು ಮೂರೂವರೆ ತಿಂಗಳುಗಳಿಂದ ಶ್ರೀವಾಲ್ಮೀಕಿ ಸ್ವಾಮೀಜಿಯವರು ಎಸ್ ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದು, ಅವರ ಧರಣಿಯನ್ನು ಬೆಂಬಲಿಸಲು ಶನಿವಾರ ತುಮಕೂರಿನಿಂದ ನಾಯಕ ಸಮುದಾಯ ಮುಖಂಡರು ಬೆಂಗಳೂರಿಗೆ ತೆರಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿ ಸಿಗುವವರೆಗೂ ಸ್ವಾಮೀಜಿಗಳು ಹೋರಾಟ ಮುಂದುವರಿಸಲಿದ್ದಾರೆ. ಹಾಗಾಗಿ ತುಮಕೂರಿನ ನಮ್ಮ ಸಮುದಾಯದ ಎಲ್ಲ ನಾಯಕರು ಬೆಂಗಳೂರಿಗೆ ಹೋಗ್ತಾ ಇದ್ದೀವಿ, ಸ್ವಾಮೀಜಿಗಳಿಗೆ ಬೆಂಬಲ ನೀಡುತ್ತೇವೆ ಎಂದು ಮುಖಂಡರು ಇದೇ ವೇಳೆ ತಿಳಿಸಿದರು. 7.5 ಶೇ. ಮೀಸಲಾತಿ ಸಿಗುವವರೆಗೂ ಧರಣಿ ಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿಗಳು ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡರೂ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು. ತುಮಕೂರು ನಗರ ವಾಲ್ಮೀಕಿ ಜನಾಂಗದ ಮುಖಂಡರುಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಲಾ ರಾಜಣ್ಣನವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ…
ಗಾಯಕ-ರಾಪರ್ ಸಿಧು ಮೂಸೆವಾಲಾ ಹತ್ಯೆಯ ಬಳಿಕ ಜೀವ ಬೆದರಿಕೆ ಎದುರಿಸುತ್ತಿರುವ 434 ಮಂದಿಗೆ ಜೂನ್ 7 ರ ಒಳಗೆ ಭದ್ರತೆ ಮರು ನಿಯೋಜಿಸುವುದಾಗಿ ಹರಿಯಾಣ ಹೈಕೋರ್ಟ್ ಗೆ ಪಂಜಾಬ್ ರಾಜ್ಯ ಸರ್ಕಾರ ಈ ವಿಷಯ ತಿಳಿಸಿದೆ. ಕಳೆದ ವಾರ ಮೂಸೆವಾಲ ಸೇರಿದಂತೆ ಹಲವರ ಭದ್ರತೆ ಹಿಂತೆಗೆಕೊಳ್ಳಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಗಾಯಕ ಸಿಧು ಮೂಸೆವಾಲ ಹತ್ಯೆ ಮಾಡಲಾಗಿತ್ತು. ಇದರಿಂದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರದ ಭದ್ರತೆ ಹಿಂತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಉಪ ಮುಖ್ಯಮಂತ್ರಿ ಓಂ ಪ್ರಕಾಶ್ ಸೋನಿ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ, ಔಪಚಾರಿಕ ಹೇಳಿಕೆ ನೀಡಿದೆ. ಗಾಯಕ ಮೂಸ್ ವಾಲಾ ಭದ್ರತೆ ಹಿಂತೆಗೆದುಕೊಂಡ ಒಂದು ದಿನದ ನಂತರ, ಮೇ ೨೯ ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ತನ್ನ ವಾಹನದಲ್ಲಿ ಹೋಗುತ್ತಿದ್ದಾಗ ಮೂಸೆವಾಲ ಅವರ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೂಸ್…
ತುಮಕೂರು: ಮಧುಗಿರಿ ಮೋದಿ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ಆಗಿವೆ. ಪತ್ರದಲ್ಲಿ ಕಂಡು ಬಂದಿರುವಂತೆ, 9 ಜನ ಬ್ರಾಹ್ಮಣ ಕವಿಗಳ ಪಾಠ ಮಕ್ಕಳಿಗೆ ಕೊಡುತ್ತಿದ್ದೀರಿ. ನಾನು ಹೋರಾಟಗಾರ, ನನ್ನ ಪಠ್ಯವನ್ನು ಸೇರಿಸಲು ರೋಹಿತ್ ಚಕ್ರತೀರ್ಥಗೆ ಸಲಹೆ ನೀಡಿ ಎಂದು ಹಿಂದೂ ಹೋರಾಟಗಾರ ಮಧುಗಿರಿ ಮೋದಿ ಹೆಸರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆಯಲಾಗಿದೆ. ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಸಿಎಂ ಆಗಲೂ ನಾನು ಕಾರಣ. ದೇಶವ್ಯಾಪಿ ಹಿಂದುತ್ವ ಹರಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಧುಗಿರಿ ಮೋದಿ ಹೆಸರಿನ ಈ ಪತ್ರ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ. ಈ ಪತ್ರ ಮಧುಗಿರಿ ಮೋದಿಯವರೇ ಬರೆದಿರುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ತಿಪಟೂರು: ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಮನೆಯ ಮೇಲೆ ಎನ್.ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದಾಂದಲೇ ಮಾಡಿರುವ ಘಟನೆ ಖಂಡಿಸಿ ಬಿ.ಜೆಪಿ ಕಾರ್ಯಕರ್ತರು ತಿಪಟೂರು ನಗರ ಸಭಾ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷ ಹಾಗೂ ಎನ್.ಎಸ್.ಯು.ಐ. ಸಂಘಟನೆ ಬಗ್ಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಕುಮಾರ್, ಸಚಿವರ ಊರಿನಲ್ಲಿ ಇಲ್ಲದಿರುವ ವೇಳೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ. ಕಾರ್ಯಕರ್ತರು ಸಚಿವರ ಮನೆಮುಂದೆ ದಾಂಧಲೆ ನಡೆಸಿ ಬೆಂಕಿಹಚ್ಚಿರುವ ಘಟನೆ ತೀವ್ರ ಖಂಡನೀಯ ಎಂದರು. ದೇಶದ ಇತಿಹಾಸವನ್ನ ಮಕ್ಕಳಿಗೆ ತಿಳಿಸುವ ವಿಚಾರದಲ್ಲಿ ಕಾಂಗ್ರೇಸ್ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಕಾಂಗ್ರೇಸ್ ಪಕ್ಷ ಗಲಾಟೆ ಗದ್ದಲ ಮಾಡುವ ತನ್ನ ಸಂಸ್ಕ್ರತಿ ಬಿಂಬಿಸಿದೆ ಯಾವುದೇ ಕಾರಣಕ್ಕೂ ನಮ್ಮ ಶಕ್ತಿಯನ್ನ ಹಗುರವಾಗಿ ಪರಿಗಣಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ, ಎನ್.ಎಸ್.ಯೂ.ಐ. ಕಾರ್ಯಕರ್ತರ ಕೃತ್ಯ ಪೂರ್ವನಿಯೋಜಿತವಾಗಿದ್ದು…
ತಿಪಟೂರು:ತಿಪಟೂರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ತೆಂಗಿನಸಸಿ ವಿತರಸಲಾಯಿತು. ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ತಂಗಿನ ಸಸಿವಿತರಣೆ ಮಾಡಿದರು. ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿವಿತರಿಸಿದ ಅವರು, ತಿಪಟೂರು ತೋಟಗಾರಿಕೆ ಇಲಾಖೆಯಿಂದ ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ 19ಸಾವಿರ ತೆಂಗಿನ ಸಸಿ ಬೆಳೆಸಲಾಗಿದೆ. ತಿಪಟೂರು ತಳಿಯ ಉತ್ತಮಗುಣಮಟ್ಟದ ಸಸಿಗಳನ್ನ ತೆಂಗಿನ ಸಸಿಯೊಂದಕ್ಕೆ 75 ರೂಪಾಯಿಯಂತೆ ತಾಲ್ಲೂಕಿನ ರೈತರಿಗೆ ಸಸಿ ವಿತರಣೆ ಮಾಡುತ್ತಿದ್ದೇವೆ. ರೈತರು ಪಹಣಿ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳಮನ್ನು ಇಲಾಖೆಗೆ ಸಲ್ಲಿಸಿ ಸಸಿಗಳನ್ನ ಪಡೆಯಬಹುದಾಗಿದೆ ಎಂದು ತಿಳಿಸಿದರು. ತಾಲ್ಲೂಕಿನ ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಎಹೆಚ್ ಒ ಚೇತನ್.ಫಾರಂ ನಿರ್ವಾಹಕ ಶ್ರೀನಿವಾಸ್ ಉಪಸ್ಥಿತರಿದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಕನ್ನಡದ ಹಿರಿಯ ನಟ ಉದಯ್ ಹುತ್ತಿನಗದ್ದೆ ಗುರುವಾರ ಇಹಲೋಕ ತ್ಯಜಿಸಿದ್ದಾರೆ. 1987ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು.. ಕನ್ನಡದಲ್ಲಿ ನಟನಾಗಿ ಹಾಗೂ ಪೋಷಕ ಪಾತ್ರಗಳಿಂದ ಗಮನ ಸೆಳೆದಿದ್ದ ನಟ ಉದಯ್ ಹುತ್ತಿನಗದ್ದೆ ಗುರುವಾರ ಸಂಜೆ ನಿಧನರಾಗಿದ್ದಾರೆ. 1987ರಲ್ಲಿ ಆರಂಭ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಇವರು, ಜಯಭೇರಿ, ಅಮೃತ ಬಿಂದು, ಕರ್ಮ, ಉಂಡುಹೋದ ಕೊಂಡಹೋದ ಸೇರಿದಂತೆ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಚಿಕ್ಕಮಗಳೂರು ಮೂಲದ ಉದಯ್ ಹುತ್ತಿನಗದ್ದೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ‘ಅಭಿನಯ ತರಂಗ’ದಲ್ಲಿ ನಟನೆಯ ತರಬೇತಿ ಪಡೆದಿದ್ದರು. ಆ ಬಳಿಕ ಚಿತ್ರರಂಗಕ್ಕೆ ಕಲಾವಿದನಾಗಿ ಪದಾರ್ಪಣೆ ಮಾಡಿದ್ದರು. ಖ್ಯಾತ ನಾಮರೊಂದಿಗೆ ತೆರೆ ಹಂಚಿಕೊಂಡಿದ್ದರೂ ಕೂಡ ಅವರು ಕೆಲ ವರ್ಷಗಳ ನಂತರ ಚಿತ್ರರಂಗದಿಂದ ದೂರ ಉಳಿದರು. ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಪರಿಣತಿ ಹೊಂದಿದ್ದ ಉದಯ್ ಅವರು ಬೆಂಗಳೂರಿನಲ್ಲಿ ಅದೇ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಅವರು ಅದರಲ್ಲೂ…
ಪಾವಗಡ : ಕೋವಿಡ್ ನಿಂದಾಗಿ ಕುಂಠಿತಗೊಂಡಿದ್ದ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ಇತ್ತೀಚಿಗೆ ಚೇತರಿಸಿಕೊಳ್ಳುತ್ತಿದ್ದು, ಶಾಲಾ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾ ತಿನಿದ್ಯಾವನ್ನು ಹೆಲ್ಪ್ ಸೊಸೈಟಿ ನೀಡುತ್ತಿದೆ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ತಿಳಿಸಿದರು. ರಾಜಾವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಎನ್. ಬೆಟ್ಟ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯಲ್ಲಿ ಇಂದು ಹೆಲ್ಪ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಬುಕ್ ಇನ್ನಿತರ ಸಾಮಗ್ರಿಗಳನ್ನು ವಿತರಣೆ ಮಾಡುವ ಸರಳ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಶಾಲಾ ಮುಖ್ಯ್ಯೊಪಧ್ಯಾಯರಾದ ಬಸವರಾಜ್ ಮಾತನಾಡುತ್ತ ಹೆಲ್ಪ್ ಸೊಸೈಟಿ ಸಂಸ್ಥೆ ಪ್ರತಿ ನಿತ್ಯ ಒಂದಲ್ಲ ಒಂದು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ತಾಲ್ಲೂಕಿನ ಶೈಕ್ಷಣಿಕ ವಿದ್ಯಾಭ್ಯಾಸದ ಮಕ್ಕಳ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಿದೆ. ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಹಂಬಲ ಹೊಂದಿರುವ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರನ್ನು ಮುಕ್ತ ಕಂಠದಿಂದ ಅಭಿನಂದಿಸಿ ಮತ್ತಷ್ಟು ಸೇವಾ ಕಾರ್ಯಗಳನ್ನು…