Subscribe to Updates
Get the latest creative news from FooBar about art, design and business.
- ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದೂರು ನೀಡಿದ್ದ ಬೆನ್ನಲ್ಲೇ ಬೆಂಗಳೂರಿನ ಮಹಿಳೆ ನಾಪತ್ತೆ!
- ಸಿದ್ದೇಶ್ವರ ಜಾತ್ರೆ: ಶತ್ರುಗಳ ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ಮಂದಿ ಬಂಧನ
- ದ್ವಿತೀಯ ಪಿಯುಸಿ ಫಲಿತಾಂಶ 2026: ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್
- ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್
- ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್
- ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್ ಗಳು
- ಮಂಡ್ಯ: ಮಾಜಿ ಶಾಸಕ ಡಾ.ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ; ಕುಮಾರಸ್ವಾಮಿ ಕಾಲಿಗೆ ಬಿದ್ದು ಪತಿಯ ಗೋಳಾಟ!
Author: admin
ತಿಪಟೂರು: ಇಲ್ಲಿನ ಗುರುಭವನದಲ್ಲಿ ಕಿಬ್ಬನಹಳ್ಳಿ ಹೋಬಳಿ ಮತ್ತು ನೊಣವಿನಕೆರೆ ಹೋಬಳಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಡೆದ ಗುರು ಸ್ಪಂದನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜೆ .ಪ್ರಭುಸ್ವಾಮಿ ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷರಾದ ಜಿ.ಆರ್. ಜಯರಾಮ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ. ಪಟ್ಟಾಭಿರಾಮು, ಗೌರವಾಧ್ಯಕ್ಷರಾದ ಹೆಚ್.ಸಿ. ಓಂಕಾರಮೂರ್ತಿ, ಉಪಾಧ್ಯಕ್ಷರುಗಳಾದ ಹೆಚ್.ಎಸ್. ಸೋಮಶೇಖರ್, ಸಿ.ಎಂ.ಸುಮಾ, ಸಹ ಕಾರ್ಯದರ್ಶಿಗಳಾದ ಸಿ.ಎಸ್. ನಾಗರಾಜು, ಆರ್. ಸಾವಿತ್ರಮ್ಮ ಖಜಾಂಚಿ ಎಸ್.ಎಸ್. ಮಮತಾ, ಸಂಘಟನಾ ಕಾರ್ಯದರ್ಶಿ ಅನಿತಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕರಾದ ರಮೇಶ್, ಅಧೀಕ್ಷಕರಾದ ಚನ್ನಬಸವಣ್ಣ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಚ್.ಎಸ್.ವೆಂಕಟೇಶ್, ಪ್ರಥಮ ದರ್ಜೆ ಸಹಾಯಕರಾದ ಆರ್.ಪರಶಿವಮೂರ್ತಿ, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸಮಸ್ತ ಶಿಕ್ಷಕರು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಹಿರಿಯೂರು: ವ್ಯಕ್ತಿಯೊಬ್ಬರ ಬೈಕ್ ನಿಂದ ಕಳ್ಳರು ಹಣ ಕದ್ದು ಪರಾರಿಯಾಗಿರುವ ಘಟನೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನರಸಿಂಹ ಬಡಾವಣೆ ವಾಸಿ ನಿವೃತ್ತ ಶಿಕ್ಷಕರಾದ ಅಶ್ವಥ್ ನಾರಾಯಣ್ ಶುಕ್ರವಾರ ಬೆಳಿಗ್ಗೆ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಹಿರಿಯೂರು ನಗರದ ಅಂಚೆ ಕಚೇರಿಯಲ್ಲಿ ಹಣ ಡ್ರಾ ಮಾಡಿಕೊಂಡು, ಪಿ.ಬಿ.ರೋಡ್ ಶಾಖೆಯ ಎಸ್ ಬಿ ಐ ಬ್ಯಾಂಕಿನಲ್ಲಿ ರೂ. ಎರಡು ಲಕ್ಷ ಹಣವನ್ನು ಬದಲಾವಣೆ ಮಾಡಿಕೊಂಡು, ಹಿರಿಯೂರು ಖಾಸಗಿ ಬಸ್ ನಿಲ್ದಾಣದ ಸಂಜೀವಿನಿ ಆಸ್ಪತ್ರೆಯ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿ ಬೈಕ್ ನಿಲ್ಲಿಸಿ ನೀರಿನ ಬಾಟಲಿ ತೆಗೆದುಕೊಳ್ಳಲು ಬೇಕರಿ ಬಳಿಗೆ ಹೋಗಿದ್ದಾರೆ. ಇತ್ತ, ಅಶ್ವಥ್ ನಾರಾಯಣ್ ಅವರು ಹಣ ಡ್ರಾ ಮಾಡಿರುವುದನ್ನು ಕಂಡು ಫಾಲೋ ಮಾಡಿಕೊಂಡು ಬಂದಿದ್ದ ಕಳ್ಳರು ಬೈಕ್ ನಲ್ಲಿದ್ದ ಹಣವನ್ನು ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಿರಿಯೂರು ನಗರ…
ಉಜಿರೆ: ಉತ್ತಮ ಆಹಾರ ಶೈಲಿ, ಪರಿಪೂರ್ಣ ಜೀವನ ಕ್ರಮ ಹಾಗೂ ಕಾಲ ಕಾಲಕ್ಕೆ ಸರಿಯಾಗಿ ಸೂಕ್ತ ವೈದ್ಯರಿಂದ ತಪಾಸಣೆ ನಡೆಸಿದಾಗ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ಎಸ್.ಡಿ.ಎಮ್. ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ನುಡಿದರು. ಡಿ.ಕೆ.ಆರ್. ಡಿ.ಎಸ್. (ರಿ) ಬೆಳ್ತಂಗಡಿ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ-ಸ್ಪರ್ಶ ಕಾರ್ಯಕ್ರಮ, ಗ್ರಾಮ ಪಂಚಾಯತ್ ಉಜಿರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಜಿರೆ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ- ಎಸ್.ಡಿ.ಎಮ್. ಕಾಲೇಜು ಉಜಿರೆ, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ ಹಾಗೂ ಸಮಾಜ ಕಾರ್ಯ ವಿಭಾಗ- ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇವುಗಳ ಆಶ್ರಯದಲ್ಲಿ ಉಜಿರೆ ಪೇಟೆಯಲ್ಲಿ ನಡೆದ ‘ವಿಶ್ವ ಕ್ಯಾನ್ಸರ್ ದಿನಾಚರಣಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯ ವೈಪನಾ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ನಿರ್ದೇಶಕರಾಗಿರುವ ವಂ. ಫಾ. ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ…
ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ದುರಸ್ತಿ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದು ಯಕ್ಷಪಶ್ನೆಯಾಗಿ ಉಳಿದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ಡಿ.25ರಂದು ಏಕಾಏಕಿ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಜ.14ರೊಳಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಅದು ಇನ್ನು ಮುಗಿಯುವುದು ಯಾವಾಗ ಎಂಬುದನ್ನು ತಿಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಪಿಲ್ಲರ್ ಸಂಖ್ಯೆ 102, 103 ಸೇರಿದಂತೆ ವಿವಿಧ ಪಿಲ್ಲರ್ಗಳ ಗುಣಮಟ್ಟದ ಬಗ್ಗೆ ಈಗಾಗಲೇ ದೆಹಲಿಯಿಂದ ಬಂದಿದ್ದ ಇಂಜಿನಿಯರ್ಗಳು ತಪಾಸಣೆ ಮಾಡಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಪಿಲ್ಲರ್ಗಳಿಗೆ ಒತ್ತಡ ತಡೆಯಲು ಅಳವಡಿಸಲಾಗಿರುವ ಸಾಧನ ಹಾಳಾಗಿರುವುದರಿಂದ ಅದನ್ನು ದುರಸ್ತಿ ಮಾಡುವುದೇ ಒಂದು ಸವಾಲಿನ ಕೆಲಸವಾಗಿದೆ ಎಂದು ಹೇಳಲಾಗುತ್ತಿದೆ.ಇದು ಗಂಭೀರ ಸಮಸ್ಯೆ ಎಂಬುದರ ಬಗ್ಗೆ ತಿಳಿಸಲೂ ಕೂಡ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗಾಗಲಿ, ಸ್ಥಳೀಯರಿಗಾಗಲಿ ತಿಳಿಸುತ್ತಿಲ್ಲ. ತಮ್ಮ ಪಾಡಿಗೆ ತಾವು ಕೆಲವೇ ಕಾರ್ಮಿಕರೊಂದಿಗೆ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.ಸ್ಥಳೀಯರು ಹೇಳುವ ಪ್ರಕಾರ ಇನ್ನು…
ಕಿಡ್ನಿ ಸ್ಟೋನ್ ಅನ್ನು ತೆಗೆದುಹಾಕುತ್ತದೆ – ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಅಂಶಗಳು ಅಥವಾ ಯೂರಿಕ್ ಆಮ್ಲದಿಂದಾಗಿ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತದೆ. ಬಾಳೆದಿಂಡು ಮೂತ್ರಪಿಂಡಗಳಲ್ಲಿ ರೂಪುಗೊಂಡ ಕಲ್ಲುಗಳನ್ನು ವಿಭಜಿಸುವ ಮೂತ್ರವರ್ಧಕ ಮತ್ತು ಪೊಟ್ಯಾಸಿಯಮ್ ಅಂಶವನ್ನು ಹೊಂದಿರುತ್ತದೆ. ಬಾಳೆದಿಂಡಿನ ರಸವು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಪರಿಣಾಮಕಾರಿಯಾಗಿದೆ. ಉತ್ತಮ ಫಲಿತಾಂಶಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು . ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲನ್ನು ಸುಲಭವಾಗಿ ತೆಗೆದುಹಾಕಲು ನೆರವಾಗುತ್ತದೆ. ಮೂತ್ರದ ಸೋಂಕನ್ನು ದೂರವಿರಿಸುತ್ತದೆ – ಬಾಳೆ ದಿಂಡು ಮೂತ್ರದ ಸೋಂಕನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಬಿ 6 ಎಂಬ ಪೋಷಕಾಂಶಗಳು ಮೂತ್ರನಾಳದಲ್ಲಿ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ತಕ್ಷಣದ ಪರಿಹಾರ ಪಡೆಯಲು ಸೋಂಕಿನ ಸಮಯದಲ್ಲಿ ಬಾಳೆ ದಿಂಡಿನ ಜ್ಯೂಸ್ ಮಾಡಿ ಕುಡಿಯಿರಿ ಅಥವಾ ಇತರ ಪದಾರ್ಥಗಳೊಂದಿಗೆ ನಿಯಮಿತವಾಗಿ ಬೇಯಿಸಿ ಸೇವಿಸಿ. ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ – ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ.…
ಕೊರಟಗೆರೆ : ಇಂದು ಕೊರಟಗೆರೆ ಶಿಶು ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ಸರ್ಕಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಗಳು ಮತ್ತು ಪುನರ್ವಸತಿ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತಿದ್ದು, ಇದರಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ ಮಹಿಳೆಯರ ಹಾಗೂ ಮಕ್ಕಳ ಅನೈತಿಕ ಕಳ್ಳಸಾಗಣಿಕೆ, ಪೋಕ್ಸೋ ಕಾಯ್ದೆ, ಮಕ್ಕಳ ಸಮಗ್ರ ರಕ್ಷಣೆ ಹೀಗೆ ಹಲವು ವಿಷಯಗಳಾದ ಮಹಿಳೆ, ಮಕ್ಕಳು ಮತ್ತು ವೃದ್ಧರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಮಾಹಿತಿ ಪಡೆದು ಚರ್ಚಿಸಬೇಕು ಮತ್ತು ಸಮಸ್ಯೆಗಳು ಬಾರದಂತೆ ಕ್ರಮವಹಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು…
ಅವಿವಾಹಿತ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡು ಅವರ ಅನುಮತಿಯಿಲ್ಲದೆ ಖಾಸಗಿ ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚತ್ತೀಸ್ಘಡ ರಾಜ್ಯದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ (33) ಬಂಧಿತ ಆರೋಪಿ. ಈತನಿಂದ 3 ಮೊಬೈಲ್ ಹಾಗೂ 3.60 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈತ ಸಾಫ್ಟ್ವೇರ್ ಕಂಪೆನಿಯೊಂದನ್ನು ತೆರೆಯಲು ತಯಾರಿ ಮಾಡಿಕೊಳ್ಳುತ್ತಿದ್ದನು. ಆರೋಪಿ ಅಭಿಷೇಕ್ಗೆ ವಿವಾಹವಾಗಿ ಪತ್ನಿ, ಮಕ್ಕಳಿದ್ದರೂ ಸಹ ಟೆಂಡರ್ ಎಂಬ ಆ್ಯಪ್ ಮುಖಾಂತರ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರನ್ನು ಪುಸಲಾಯಿಸಿ ವಿಶ್ವಾಸಗಳಿಸುತ್ತಿದ್ದನು.ಡೇಟಿಂಗ್ ಮಾಡುವ ಮತ್ತು ಅವರ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ. ಕೊಡಿಗೆಹಳ್ಳಿಯಲ್ಲಿ ಅವಿವಾಹಿತ ಮಹಿಳೆಯನ್ನು ಟೆಂಡರ್ ಆಫ್ ಮೂಲಕ ಪರಿಚಯ ಮಾಡಿಕೊಂಡು ಅವರ ಮೊಬೈಲ್ ನಂಬರ್ ಪಡೆದುಕೊಂಡು ಅವರಿಗೆ ಫೋನ್ಕಾಲ್ ಮತ್ತು ಮೆಸೇಜ್ ಮಾಡಿ ಪುಸಲಾಯಿಸಿದ್ದಾನೆ.ಫೆ.1ರಂದು ಬೆಳಗ್ಗೆ ಆರೋಪಿ ಅಭಿಷೇಕ್ ಮಹಿಳೆ ಮನೆಗೆ ಹೋಗಿ ಬಲವಂತವಾಗಿ ಅವರನ್ನು…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಾಮಿಸಿತ್ತು. ಈ ಸಂಬಂಧ ನಮ್ಮತುಮಕೂರು.ಕಾಂನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಇದೀಗ ಸೇತುವೆ ಕಾಮಗಾರಿ ಆರಂಭಿಸಿದ್ದಾರೆ. ಮಾಧ್ಯಮ ವರದಿಯ ಬೆನ್ನಲ್ಲೇ ಹಿರಿಯೂರು ನಗರ ಸಭೆ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಕೆಲಸ ಆರಂಭವಾಗಿದೆ. ಪ್ರಮುಖ ರಸ್ತೆಯಲ್ಲೇ ಸೇತುವೆ ಬಾಯ್ದೆರೆದು ಪ್ರಾಣ ಬಲಿಗಾಗಿ ಕಾಯುತ್ತಿತ್ತು. ಆದರೆ, ಈ ಬಗ್ಗೆ ಸಂಬಂಧಪಟ್ಟವರು ಬೇಜಾವಬ್ದಾರಿವಹಿಸಿದ್ದರು. ಈ ಸಂಬಂಧ ಸವಿವರವಾದ ವರದಿಯನ್ನು ನಮ್ಮತುಮಕೂರು.ಕಾಂ ವರದಿ ಮಾಡಿದ್ದು, ಈ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಇಲ್ಲಿನ ರಸ್ತೆ ಕೂಡ ಹೊಂಡ, ಗುಂಡಿಗಳಿಂದ ತುಂಬಿದ್ದು, ವಾಹನ ಪ್ರಯಾಣಿಕರ ಪ್ರಾಣದ ಜೊತೆಗೆ ಚೆಲ್ಲಾಟ ಆಡುವಂತಿತ್ತು. ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಈ ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿದ್ದರು. ಇದೀಗ ನಮ್ಮ ತುಮಕೂರು.ಕಾಂ ವರದಿಯಿಂದ ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರ ಸುರಕ್ಷತೆ ಕ್ರಮಕೈಗೊಳ್ಳಲಾಗಿದೆ. ಹಲವು…
ಅಂಗಡಿಯಲ್ಲಿ ಮಾಲೀಕರು ಇಲ್ಲದಿದ್ದಾಗ ಲಕ್ಷಾಂತರ ಹಣದೊಂದಿಗೆ ಪರಾರಿಯಾಗಿದ್ದ ನೌಕರನನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 27 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಗಣೇಶ ವರ್ಮಾ ಬಂಧಿತ ನೌಕರ. ಎಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಗಣೇಶ ವರ್ಮಾ ಸುಮಾರು ಐದಾರು ತಿಂಗಳಿನಿಂದ ಡೆಲಿವರಿ ಕೆಲಸ ಮಾಡಿಕೊಂಡು ಮಾಲೀಕರ ನಂಬಿಕೆಗಳಿಸಿದ್ದನು. ಡಿ.21ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ಕೆಲಸದ ನಿಮಿತ್ತ ಮಾಲೀಕರು ಹೊರಗೆ ಹೋಗಿದ್ದರು. ಅಂಗಡಿಯಲ್ಲಿದ್ದ ಗಣೇಶ್ ವರ್ಮಾ, ಮಾಲೀಕರ ನಂಬಿಕೆಗೆ ದ್ರೋಹ ಬಗೆದು ಕ್ಯಾಶ್ ಬಾಕ್ಸ್ನಲ್ಲಿದ್ದ 30 ಲಕ್ಷ ರೂ.ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು. ಕೆಲ ಸಮಯದ ಬಳಿಕ ಅಂಗಡಿ ಮಾಲೀಕರು ವಾಪಸ್ ಆದಾಗ ನೌಕರನೂ ಇರಲಿಲ್ಲ. ಕ್ಯಾಶ್ ಬಾಕ್ಸ್ನಲ್ಲಿದ್ದ ಹಣವೂ ನಾಪತ್ತೆಯಾಗಿದ್ದನ್ನು ಕಂಡು ತಕ್ಷಣ ಸಿಟಿ ಮಾರ್ಕೆಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ಗೊಳಪಿಡಿಸಿ 27 ಲಕ್ಷ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯರೇಕಾವಲ್ ನ ದಲಿತ ಮುಖಂಡ ನರಸಿಂಹಯ್ಯ ಎಂಬುವರ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮುಂಜೂರು ಮಾಡಲಾಗಿದ್ದು , “ನಮ್ಮ ಗಮನಕ್ಕೆ ತರದೇ ಏಕಾಏಕಿ ಕಸವಿಲೇವಾರಿ ಘಟಕ ಮಂಜೂರು ಮಾಡಿರುವುದು ಸರಿಯಲ್ಲ ಎಂದು ನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿ, ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು. ಸುಮಾರು 30 ವರ್ಷಗಳಿಂದ ನಮ್ಮ ಜಮೀನಿನಲ್ಲಿ ನಾವೇ ಉಳುಮೆ ಮಾಡಿಕೊಂಡು ಬಂದಿದ್ದು, ಜಮೀನಿನಲ್ಲಿ ಸಾಲ ಸೂಲ ಮಾಡಿ ಬೋರ್, ಟಿಸಿ , ತೆಂಗಿನ ಗಿಡಗಳನ್ನು ನೆಟ್ಟಿದ್ದೇವೆ. ಈಗ ಏಕಾಏಕಿ ಅಧಿಕಾರಿಗಳು ನಮ್ಮ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮಾಡುವುದಕ್ಕೆ ಮುಂದಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ನಮ್ಮ ಜಮೀನಿನಲ್ಲಿ ಕಸವಿಲೆವಾರಿ ಘಟಕ ಮಾಡುವುದಕ್ಕೆ ಅವಕಾಶ ಕೊಡಲ್ಲ. ಈ ಜಮೀನು ಬಿಟ್ಟರೆ ನಮ್ಮಗೆ ವಿಷ ಕುಡಿಯುವುದೇ ವಾಸಿ ಎಂದು ನರಸಿಂಹಯ್ಯ ಅಧಿಕಾರಿಗಳ ಮುಂದೆ ಆಕ್ರೋಶ ಹೊರ ಹಾಕಿದರು. ಈ ವೇಳೆ ಚೇಳೂರು ಪೋಲೀಸರು ಮಧ್ಯೆ ಪ್ರವೇಶಿಸಿದರು. ಗ್ರಾಮಸ್ಥರು ಹಾಗೂ ಫೋಲೀಸರ ನಡುವೆ ಮಾತಿನ ಚಕಮಾಕಿ ನಡೆಯಿತ್ತು. ಪಿಡಿಓ ಮಂಜುನಾಥ್ ಮಾತನಾಡಿ,…