Author: admin

ಕೊರಟಗೆರೆ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸರ್ಕಾರ ಸೂಚಿಸಿದ್ದು, ತುರ್ತು ಕ್ರಮ ಕೈಗೊಂಡು ಗ್ರಾಮೀಣ ಭಾಗದ ಜನರಿಗೆ ಶೀಘ್ರ ಶುದ್ಧ ನೀರು ಒದಗಿಸಿ ಜಿಪಿಎಸ್‌ ಆಧಾರಿತ ಫೋಟೊ ಹಾಗೂ ದಾಖಲೆ ಕಳಿಸುವಂತೆ ಆದೇಶಿಸಿದೆ. ಗ್ರಾಮೀಣ ಭಾಗಗಳಲ್ಲಿ ಶುದ್ದೀಕರಣ ಘಟಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಮಾಧ್ಯಮ ವರದಿಗಳ  ಬೆನ್ನಲ್ಲೇ  ಮುಖ್ಯಮಂತ್ರಿ ವಿಶೇಷ ಕರ್ತಾವ್ಯಾಧಿಕಾರಿ ಕೆ.ವೈಷ್ಣವಿ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ಜಿಪಿಎಸ್ ಛಾಯಾಚಿತ್ರಗಳೊಂದಿಗೆ ಅನುಪಾಲನಾ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಆದೇಶಿಸಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಿಗೆ ಅನುದಾನ ಬಿಡುಗಡೆಗೆ ಸೂಚಿಸಿದ್ದಾರೆ. ನೀರಿನ ಘಟಕಗಳ ದುರಸ್ತಿ ಕಾರ್ಯಾಚರಣೆ ಮತ್ತು ನಿರ್ಹವಣೆ ವೆಚ್ಚ ಸೇರಿದಂತೆ ಪರಿಷ್ಕೃತ ಕ್ರಿಯಾ ಯೋಜನೆ ಅಂದಾಜು ಪಟ್ಟಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ…

Read More

ತುಮಕೂರು: ನಗರದ ಶ್ರೀ ಸಿದ್ದಾರ್ಥ ಹೈಯರ್ ಎಜುಕೇಶನ್ ಅಕಾಡೆಮಿಯ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ಇಂಪನಾ ಬಿ. ವರ್ಧನ್ ಅವರು ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಮತ್ತು ಚಿನ್ನದ ಪದಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಡಾ. ಚೈತನ್ಯ ವರ್ಧನ್ ಮತ್ತು ಡಾ.ಅನಿತಾ ವರ್ಧನ್ ಅವರ ಪುತ್ರಿಯಾಗಿರುವ ಇಂಪನಾ, ಶ್ರೀ ಸಿದ್ದಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಆಸ್ಪತ್ರೆ ಯಲ್ಲಿ ಬಿ.ಡಿ.ಎಸ್. ಪದವಿ ಪೂರೈಸಿದ್ದಾರೆ. ಇಂಪಾನ ಅವರು ನಾಲ್ಕು ವರ್ಷದ ಬಿ.ಡಿ.ಎಸ್. ಕೋರ್ಸಿನಲ್ಲಿ 19 ವಿಷಯಗಳಲ್ಲಿ 15 ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ನಾಲ್ಕೂ ವರ್ಷಗಳಲ್ಲಿ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪದಕ ಮತ್ತು ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಗಳನ್ನು ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಮತ್ತು ಶ್ರೀಸಿದ್ದಾರ್ಥ ಹೈಯರ್ ಎಜುಕೇಶನ್ ಅಕಾಡೆಮಿಯ ಚಾನ್ಸೆಲರ್ ಮತ್ತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಪ್ರಶಸ್ತಿ ಪ್ರಧಾನ ಮಾಡಿದರು.…

Read More

ತುಮಕೂರು: ತಾಲ್ಲೂಕಿನ ಪಂಡಿತನ ಹಳ್ಳಿ ಸಮೀಪದ ಮಂದರ ಗಿರಿ ಬೆಟ್ಟದಲ್ಲಿರುವ ಗುರು ಮಂದಿರ ದೇವಾಲಯದ 450 ಮೆಟ್ಟಿಲುಗಳನ್ನು 2 ವರ್ಷ 2 ತಿಂಗಳ ಮಗು ಭುವನ್‌ ರೆಡ್ಡಿ 23 ನಿಮಿಷ 8 ಸೆಕೆಂಡ್‌ ಗಳಲ್ಲಿ ಹತ್ತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2 ವರ್ಷ 2 ತಿಂಗಳ ಮಗು ಆಗಿರುವ ಭುವನ್ ರೆಡ್ಡಿ,  ವಿ. ಅನುಷಾ ಮತ್ತು ಡಿ. ರೆಡ್ಡಿ ಜಗದೀಶ್ ಎಂಬವರ ಪುತ್ರ.  ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೀರ್ತಿಗೆ ಪಾತ್ರನಾಗಿರುವ ಈ ಮಗು ಭಾರತೀಯ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಸಹ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಪಡೆಯುವಾಗ ಭುವನ್ ರೆಡ್ಡಿಗೆ 1 ವರ್ಷ 4 ತಿಂಗಳಾಗಿತ್ತು. 20 ಕ್ಕೂ ಹೆಚ್ಚು ನಿಮಿಷಗಳ ಕಾಲ ವಿರಾಮವಿಲ್ಲದೆ ನಿರಂತರವಾಗಿ ಬರಿಗಾಲಿನಲ್ಲಿ ಏರಿದ್ದು, 1.5 ಕ್ಕೂ ಹೆಚ್ಚು ಕಿ.ಮೀ. ದೂರವನ್ನು ಕ್ರಮಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸೃಷ್ಟಿಸಿದ. ನ್ಯಾಯಾಧೀಶರಾದ ಕೆ. ಮಾಧವ ರೆಡ್ಡಿ, ಡಾ.ಜೆ. ಪಾವನಿ ಮತ್ತು…

Read More

ಪಾವಗಡ: ನಿರುದ್ಯೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಕುವೆಂಪು ನಗರದ ಕೆಇಬಿ ಕಚೇರಿ ಪಕ್ಕದಲ್ಲಿ ಸೋಮವಾರ ಬೆಳಗ್ಗೆ ವರದಿಯಾಗಿದೆ. 27 ವರ್ಷದ ಚಂದನ್ ಕುಮಾರ್ ಮೃತ ವ್ತಕ್ತಿ ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ತುಮಕೂರಿನಲ್ಲಿ ಇವರು ಕುಟುಂಬ ಸಮೇತ ವಾಸವಿದ್ದು ಇತ್ತೀಚಿಗಷ್ಟೇ ಇವರ ಚಿಕ್ಕಮ್ಮನ ಮನೆಗೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರಿಯಾದ ಉದ್ಯೋಗವಿಲ್ಲದೆ ಅವಮಾನಕ್ಕೀಡಾಗಿದ್ದೆನೆಂದು ಮನನೊಂದ ಚಂದನ್ ಮಧ್ಯರಾತ್ರಿ ರಸ್ತೆ ಪಕ್ಕದಲ್ಲಿರುವ ಹುಣಿಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ  ಮಗಳನ್ನು ಕೈಗೊಂಡಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ನಗರದ ಸರಸ್ವತಿಪುರಂನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಜಿಲ್ಲಾ ಬಂಜಾರ ಭವನದ ಉದ್ಘಾಟನೆಯನ್ನು ಡಿಸೆಂಬರ್ 14ರಂದು  ನೆರವೇರಿಸಲಿದ್ದು, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಜಿಲ್ಲಾ ಬಂಜಾರ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತುಮಕೂರು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾರಾಯಣ್ ನಾಯ್ಕ ಡಿ. ತಿಳಿಸಿದ್ದಾರೆ. ಜಿಲ್ಲಾ ಬಂಜಾರ ಭವನದ ಉದ್ಘಾಟನೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಂದರ ಬಂಜಾರ ಭವನದ ಜೊತೆಗೆ ಜಿಲ್ಲಾ ಬಂಜಾರ ಸಂಘದ ಕೇಂದ್ರ  ಕಚೇರಿಯ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ತುಮಕೂರು ಜಿಲ್ಲೆಯ 11  ವಿಧಾನಸಭಾ ಕ್ಷೇತ್ರದ ಬಂಜಾರ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಬಿ., ಉಪಾಧ್ಯಕ್ಷ ಕುಬೇಂದ್ರನಾಯ್ಕೆ ಎಲ್. ಮಾತನಾಡಿದರು.  ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಇಂದಿರಾ ದೇನಾ ನಾಯ್ಕ್ ಸೇರಿದಂತೆ ಅನೇಕ…

Read More

ಸರಗೂರು:  ಪಟ್ಟಣ 4 ನೇ ವಾರ್ಡಿನ  ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಶನಿವಾರ ರಾತ್ರಿ ಬಾಗಿಲು ಬೀಗ ಒಡೆದು ಕಳ್ಳರು ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಪಟ್ಟಣದ ಶಂಕರ್ ಎಂಬುವರ ಮನೆಯಲ್ಲಿ 2 ರಿಂದ 3 ಗಂಟೆ ಸಮಯದಲ್ಲಿ ಕಳ್ಳತನವಾಗಿದೆ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.  ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿ ಬೀರುನಲ್ಲಿದ್ದ ಸುಮಾರು ಚಿನ್ನ ಬೆಳ್ಳಿ  50 ಸಾವಿರ ನಗದು ಹಣದೋಚಿದ್ದಾರೆಂದು ಮನೆಯವರು ತಿಳಿಸಿದ್ದು, ಘಟನೆ ನಡೆದ ಬಗ್ಗೆ ಸುದ್ದಿ ಹರಡಿದಾಕ್ಷಣ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಅಕ್ಕಪಕ್ಕದ ಮನೆಯವರು ನನಗೆ ಕರೆ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಎಂದು ತಿಳಿಸಿದರು. ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ,  ಮನೆಯಲ್ಲಿ ನಮ್ಮ ತಾಯಿ ಇದ್ದರು. ಅವರು ಎರಡು ಹಿಂದೆ ನಮ್ಮ ಅಜ್ಜಿ ಮನೆಗೆ ಹೋಗಿದ್ದರು. ಮನೆಯಲ್ಲಿ ಹಣ 50 ಸಾವಿರ ಹಾಗೂ ಚಿನ್ನ ಮತ್ತು ಮನೆಯ ದಾಖಲೆ ಹಾಗೂ ವಿವಿಧ ಪತ್ರಗಳನ್ನು ಹರಿದು ಹಾಕಿ ಆಚೆ ಹಾಕಿ ಮನೆಯಲ್ಲಿರುವ ಬೀರು…

Read More

ಸರಗೂರು:  ತಾಲೂಕಿನ ಪಟ್ಟಣದ 11 ನೇ ವಾರ್ಡಿನ ವ್ಯಾಪ್ತಿಯ ಬರುವ ಬಿಡುಗಲು ಗ್ರಾಮದ ಪಡವಲು ವೀರಕ್ತ ಮಠದದಲ್ಲಿ ಶನಿವಾರದಂದು ಶ್ರೀ ಹನುಮ ಸೇವಾ ಸಮಿತಿ ವತಿಯಿಂದ ಡಿ.20 ರಂದು ನಡೆಯಲಿರುವ ಎಂಟನೇ ವರ್ಷದ ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆಯ ಕರಪತ್ರವನ್ನು  ವಿರಕ್ತ ಮಠದ ಮಹದೇವಸ್ವಾಮಿಗಳು ಬಿಡುಗಡೆಗೊಳಿಸಿ ಆಶೀರ್ವಚನ  ನೀಡಿದರು. ನಂತರ ಮಾತನಾಡಿದ ಶ್ರೀ ಹನುಮ ಸೇವಾ ಸಮಿತಿ ಅಧ್ಯಕ್ಷ ಬಿಡಗಲು ರಾಜು,  ಈ ಬಾರಿ ಎಚ್.ಡಿ.ಕೋಟೆಯಲ್ಲಿ ವಿಜೃಂಭಣೆಯಿಂದ ಶ್ರೀ ಹನುಮ ಜಯಂತ್ಯೋತ್ಸವ ನಡೆಯಲಿದ್ದು, ಮೆರವಣಿಗೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಹಾಗೂ ಬೇರೆ ತಾಲೂಕಿನಿಂದ ಹನುಮ ಅಭಿಮಾನಿಗಳ ಕಾರ್ಯಕರ್ತರು ಭಾಗವಹಿಸಿದ್ದಾರೆ. ಡಿ.18 ಗುರುವಾರ ಬೆಳಗ್ಗೆ 7:30 ರಿಂದ 9 ಗಂಟೆ ವರೆಗೆ ಹನುಮ ಮಾಲ ಧಾರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾಲೆ ಧರಿಸುವ ಭಕ್ತರು ಪೂರ್ವಸಿದ್ಧತೆ ಮಾಡಿಕೊಂಡು ಆಯೋಜಕರು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಅದೇ ದಿನ ಪವಮಾನ ಹೋಮ ಬೆಳಿಗ್ಗೆ 9 ರಿಂದ 10:30ರವರಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ…

Read More

ಸರಗೂರು:  ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ, ಅವು ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಮೂಲಾಧಾರವಾಗಿವೆ ಎಂದು ಗ್ರಂಥಾಲಯ ಮೇಲ್ವಿಚಾರಕ ಬಿಡುಗಲು ಶಿವಣ್ಣ ತಿಳಿಸಿದರು. ಪಟ್ಟಣದ ಸರ್ಕಾರಿ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು  14 ರಿಂದ 20ವರೆಗೆ ಆಯೋಜಿಸಲಾಗಿದ್ದು,  ಕೊನೆಯ ದಿನವಾಗಿದ್ದ ಶುಕ್ರವಾರ ದಂದು ಗ್ರಂಥಾಲಯ ಪಿತಾಮಹಾ ಡಾ ಎಸ್.ಆರ್.ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಭಾರತದ ಮೊದಲ ಪ್ರಧಾನಮಂತ್ರಿ ನೆಹರು ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ಸಾಕ್ಷರತೆ ಮತ್ತುಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ಸಹ ಶಿಕ್ಷಣ ಪಡೆದು ಸಾಕ್ಷರರಾಗಿ ದೇಶ ಪ್ರಗತಿಹೊಂದಬೇಕು ಎಂಬ ಆಸೆಯಿಂದ ಮತ್ತು ಮಕ್ಕಳ ಮೇಲೆ ಅವರಿಗೆ ಇದ್ದ ಅಪಾರ ಪ್ರೀತಿಯಿಂದ ಅವರು ಹುಟ್ಟಿದ ದಿನ ನವೆಂಬರ್ 14ನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುವುದು  ಮಹಾನ್ ವ್ಯಕ್ತಿಗಳ ಆದರ್ಶ ತತ್ವ ಸಿದ್ಧಾಂತಗಳನ್ನು ಎಲ್ಲರು ಪಾಲಿಸಿ  ದೇಶದ ಏಳಿಗೆಗೆ ಶ್ರಮಿಸಬೇಕು ಎಂದರು. ಗ್ರಂಥಾಲಯಗಳು ಮಕ್ಕಳ ಮತ್ತು ಯುವಕರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ವಿಷಯಗಳ ಮತ್ತು ಪ್ರಕಾರಗಳ…

Read More

ಸರಗೂರು:  ಹಂಚೀಪುರ ಗ್ರಾಮದ ಕೆರೆ ಪಕ್ಕದಲ್ಲಿ ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ಮಾಡಲು ಮುಂದಾಗಿಲ್ಲ, ಹಂಚೀಪುರ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ರಸ್ತೆ ತಡೆದು ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದು ಶನಿವಾರದಂದು ಪ್ರತಿಭಟನೆ ನಡೆಸಿದರು. ತಾಲೂಕಿನ ಪಟ್ಟಣದ ಬಿ.ಮಟಕರೆ ಮತ್ತು ಸರಗೂರು ಮುಖ್ಯ ರಸ್ತೆಯ ಬಳಿ ಹಂಚೀಪುರ ಗ್ರಾಮದ ಪಾಪಣ್ಣ ಮತ್ತು ಪುಟ್ಟಯ್ಯ ಜಮೀನು ಒಂದದರಲ್ಲಿ ಬೆಳ್ಳಿಗೆ ಜಮೀನಲ್ಲಿ ನೀರು ಹಾರಿಸಲು ಹೋಗಿದ ಸಂದರ್ಭದಲ್ಲಿ ಹುಲಿ ಕಂಡು ಹೊಡಿಹೋಗಿ ಗ್ರಾಮಸ್ಥರಿಗೆ ಗಮನಕ್ಕೆ ತಂದು ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಗಮನಕ್ಕೂ ತಂದಿದ್ದರೂ ಕೂಂಬಿಂಗ್ ಕಾರ್ಯಾಚರಣೆ ಮಾಡಿಲ್ಲ . ಗ್ರಾಮಸ್ಥರು ಜಮೀನಲ್ಲಿ ಬೆಳ್ಳಿಗೆನಿಂದ ಸಂಜೆವರೆಗೆ ಕಾದರೂ ಯಾವುದೇ ಇಲಾಖೆ ಅಧಿಕಾರಿಗಳು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆ. ನಂತರ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದರಿಂದ ಹಂಚೀಪುರ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿಕೊಂಡು ಬಿ ಮಟಕರೆ ಮತ್ತು ಸರಗೂರು ಮುಖ್ಯ ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಲು…

Read More

ತುಮಕೂರು: ಶೀಲ ಶಂಕಿಸಿ ಪತ್ನಿ ಹಾಗೂ ಮಗನನ್ನು ಕೊಂದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ. ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದ ಮೋಹನ್ ಕುಮಾರ್‌ ಎಂಬಾತ ಶಿಕ್ಷೆಗೆ ಒಳಗಾಗಿದ್ದು, ಪತ್ನಿ ಕಾವ್ಯ ಹಾಗೂ 5 ವರ್ಷದ ಮಗ ಜೀವನ್ ಗೆ ಹಾರೇಕೋಲಿನಿಂದ ಹೊಡೆದು 2022 ರ ಅಕ್ಟೋಬರ್‌ ನಲ್ಲಿ ಕೊಲೆ ಮಾಡಿದ್ದ. ಆಗಿನ ಗುಬ್ಬಿ ಸಿಪಿಐ ನದಾಫ್ ಅವರು ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಜಾಣೆಹಾ‌ ಗ್ರಾಮದ ಕಾವ್ಯ ಜೊತೆ ಮೋಹನ್‌ ಕುಮಾರ್ ವಿವಾಹವಾಗಿದ್ದು, ಆರಂಭದಲ್ಲಿ ಇಬ್ಬರೂ ಅನ್ಯೂನ್ಯವಾಗಿದ್ದರು. ನಂತರ ಮೋಹನ್ ಕುಮಾರ್ ಕಾವ್ಯಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಆತನ ಕಾಟ ತಾಳಲಾರದೇ ತವರು ಮನೆಗೆ ಹೋಗಿದ್ದ ಕಾವ್ಯಳನ್ನು ನ್ಯಾಯ, ಪಂಚಾಯತಿ ಮಾಡಿ ಗಂಡನ ಮನೆಗೆ ಕರೆತಂದು ಬಿಡಲಾಗಿತ್ತು. ನಂತರವೂ ಪದೇ ಜಗಳ ಮಾಡುತ್ತಿದ್ದುದರಿಂದ ಬೇಸತ್ತು…

Read More