Author: admin

ಮಧುಗಿರಿ: ಉಪ ಲೋಕಾಯುಕ್ತ ಬಿ.ವೀರಪ್ಪ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಚರಂಡಿ ಒಳಗೆ ಹೂಳು ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸದೆ ಮೇಲ್ಬಾಗದಲ್ಲಿ ಬೀಚಿಂಗ್ ಪೌಡರ್ ಹಾಕಲಾಗಿದೆ. ನಿತ್ಯ ಇದೇ ರೀತಿ ಬೀಚಿಂಗ್ ಪೌಡರ್ ಸಿಂಪಡಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಸ್ಥಳದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಏಕೆ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇನ್ನೊಂದು ತಿಂಗಳಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ, ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದಾಗ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಂದ ಸರಿಯಾದ ಉತ್ತರ ಬಾರದ ಕಾರಣ ‘ನಿನ್ನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ’ ಎಂದರು. ಬಸ್‌ ನಿಲ್ದಾಣಕ್ಕೆ ಬಂದ ಉಪ ಲೋಕಾಯುಕ್ತರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ತುಮಕೂರು…

Read More

ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಿಎಂ ಸಿದ್ದರಾಮಯ್ಯನವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ,  ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು (ಮೂಂಗ್) ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ ಹರಿಸುವ ಉದ್ದೇಶದಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಇವು ಲಕ್ಷಾಂತರ ರೈತರ ಜೀವನಕ್ಕೆ ಆಧಾರವಾಗಿರುವ ಬೆಳೆಗಳಾಗಿವೆ. ಭಾರತ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ (MSP) ಗಣನೀಯವಾಗಿ ಕಡಿಮೆಯಾದ ಮಾರುಕಟ್ಟೆ ಬೆಲೆಗಳು ರೈತರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿವೆ. ಈ ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆ ಜೋಳ ಹಾಗೂ ಹೆಸರುಕಾಳನ್ನು 4.16 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದ್ದು, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಮೆಕ್ಕೆ ಜೋಳ ಮತ್ತು ಹೆಸರುಕಾಳು 1.983 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಸಮೃದ್ಧಿಯ ಅವಕಾಶವಾಗಬೇಕಿತ್ತು,…

Read More

ಹೊಯ್ಸಳಕಟ್ಟೆ: ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿ ಗ್ರಾಮದ ಇಂದಿರಾ ಮೆಡಿಕೇರ್ ಆವರಣದಲ್ಲಿ ಇಂದಿರಾ ಮೆಡಿಕೇರ್ ಮತ್ತು ಸಾಗರ್ ಹಾಸ್ಪಿಟಲ್ ಬೆಂಗಳೂರು ಸಹಯೋಗದಲ್ಲಿ ಉಚಿತ ನರರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನರರೋಗ ತಜ್ಞ ಡಾ.ಎಸ್.ಪ್ರಸನ್ನ ಅವರು ನವೆಂಬರ್ 23 ಭಾನುವಾರ ಬೆಳಗ್ಗೆ 10 ರಿಂದ 1 ಗಂಟೆವರೆಗೆ ರೋಗಿಗಳ ತಪಾಸಣೆ ನಡೆಸುವರು. ದೃಷ್ಟಿ ಸಮಸ್ಯೆಗಳು, ನೆನಪಿನ ಶಕ್ತಿ ಕಳೆದುಕೊಳ್ಳುವುದು ಅಥವಾ ಗೊಂದಲ ಇರುವ ರೋಗಿಗಳು ತಜ್ಞರ ಸಲಹೆ, ಸೂಚನೆ ಪಡೆಯಬಹುದು ಎಂದು ಟಿ.ಪಿ.ಶ್ರೀನಿವಾಸಗೌಡ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9986020329 ಸಂಪರ್ಕಿಸಲು ತಿಳಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರು(Namma Tumakuru): ತಂದೆ—ತಾಯಿ ಆಸ್ತಿ ದಾನ ಮಾಡಿದ ನಂತರ, ಅವರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ಕಾನೂನಿನ ಮೂಲಕ ತಂದೆ ತಾಯಿ ತಕ್ಕ ಪಾಠ ಕಲಿಸಿದ್ದು, ತಾವು ದಾನವಾಗಿ ನೀಡಿದ ಆಸ್ತಿಯನ್ನು ವಾಪಾಸ್ ಪಡೆದುಕೊಳ್ಳುವ ಮೂಲಕ, ಮಕ್ಕಳಿಗೆ ಬುದ್ಧಿ ಕಳಿಸಿದ್ದಾರೆ. ವಯೋವೃದ್ಧೆಯಿಂದ ದೂರು: ಶಿರಾ ತಾಲ್ಲೂಕಿನ ಸಪ್ತಗಿರಿ ಬಡಾವಣೆಯ ರಂಗಮ್ಮ ಅವರು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ(Senior Citizens Helpline)ವನ್ನು ಸಂಪರ್ಕಿಸಿದ್ದರು. ಈ ಮೂಲಕ ದೂರು ನೀಡಿದ ಅವರು,  ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಮಠ ಗ್ರಾಮದ ಸ.ನಂ. 37ರ 3-26 ಎ/ಗುಂಟೆ ಜಮೀನನ್ನು ದಿನಾಂಕ 23-12-2021 ರಂದು ತಮ್ಮ ಮೂವರು ಪುತ್ರರಾದ ಗುಜ್ಜಾರಪ್ಪ, ಶಿವಣ್ಣ ಮತ್ತು ಹನುಮಂತಯ್ಯ ಅವರಿಗೆ ದಾನಪತ್ರದ ಮೂಲಕ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ ದಾನಪತ್ರ ಪಡೆದ ನಂತರ ಮಕ್ಕಳು ತಾಯಿಯ ಹಾಗೂ ತಂದೆಯ ಆರೈಕೆ, ಆಹಾರ, ಚಿಕಿತ್ಸಾ ನೆರವು, ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ದಾನಪತ್ರವನ್ನು ರದ್ದುಪಡಿಸಬೇಕು ಎಂದು…

Read More

ಸರಗೂರು:  ಹಳ್ಳಿಗಾಡಿನ ಜನರಿಗೆ ಆರೋಗ್ಯವೃದ್ಧಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುತ್ತಿರುವ ಹಾರ್ಟ್ ಸಂಸ್ಥೆಯ ಕಾರ್ಯ ಪ್ರಶಂಸನಿಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು. ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಸುಂಡ ಗ್ರಾಮದಲ್ಲಿ ಶುಕ್ರವಾರದಂದು ಹಾರ್ಟ್  ಸಂಸ್ಥೆ ಮೈಸೂರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ , ಪ್ರಾಥಮಿಕ ಆರೋಗ್ಯ ಕೇಂದ್ರ ಸಾಗರೆ, ಇವರ ಸಹಯೋಗದೊಂದಿಗೆ  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 8ನೇ ಬಾರಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ, ಈ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ಮಧುಮೇಹ ಮತ್ತು ರಕ್ತದೊತ್ತಡ, ಹೃದಯ ಸಂಬಂಧಿತ ತೊಂದರೆಗಳು, 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮುಟ್ಟಿನ ಕಾಯಿಲೆ ಬಗ್ಗೆ ತಪಾಸಣೆ ಮಾಡಿ. ಪಾಪ್ ಸ್ಮಿಯರ್ ಮಾಡಲಾಗುತ್ತದೆ ಮತ್ತು ಉಸಿರಾಟದಲ್ಲಿ ತೊಂದರೆ ಬಗ್ಗೆ ತಪಾಸಣೆ ಮಾಡಲಾಗುತ್ತದೆ ಇಸಿಜಿ ತಪಾಸಣೆ ಮಾಡಲಾಗುತ್ತದೆ,  ಸುತ್ತಮುತ್ತಲ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಶಿಬಿರವನ್ನು…

Read More

ಸರಗೂರು:  ತಾಲ್ಲೂಕಿನ ನೇಮ್ಮನಹಳ್ಳಿ ಗ್ರಾಮದಲ್ಲಿ ದುಂಡಿ ಮಾರಮ್ಮ ದೇವಿ ಜಾತ್ರಾ ವಾರ್ಷಿಕೋತ್ಸವ  ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಮಹಿಳೆಯರು ಹೊಂಬಾಳೆಯಿಂದ ಸಿಂಗರಿಸಿದ ಆರತಿಗಳನ್ನು ದೇವಿಗೆ ಅರ್ಪಿಸಿದರು. ರಾತ್ರಿಯಿಡೀ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಗ್ರಾಮದಲ್ಲಿ ದೇವಸ್ಥಾನದ ಆವರಣದಲ್ಲಿ ಸುಣ್ಣ ಬಣ್ಣ ಬಳಿದು ಸಿಂಗಾರಗೊಳಿಸಿ ಕಡೆ ಕಾರ್ತಿಕ ಮಾಸದಲ್ಲಿ ನುಗು ಜಲಾಶಯ ಹಿನ್ನೀರಿನಿಂದ ಗ್ರಾಮಸ್ಥರು ಸೇರಿಕೊಂಡು ಗಂಗೆ ಪೂಜೆ ಸಲ್ಲಿಸಿ ಬೆಳ್ಳಿ ರಥ ಮೂಲಕ ಮೆರವಣಿಗೆ ಮೂಲಕ ಮೂರುದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.ದುಂಡಿ ಮಾರಮ್ಮ ದೇವಿ, ದೇವರುಗಳ ಮೆರವಣಿಗೆ ನಡೆದವು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ಭೇಟಿ ನೀಡಿ ತಾಯಿಯ ದರ್ಶನ ಪಡೆದು ಪುನೀತದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮಹದೇವನಾಯಕ,ಮಲ್ಲೇಶನಾಯಕ, ಯೋಗೇಶ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ ಜಿ., ಒಕ್ಕಲಿಗ ಸಂಘದ ಅಧ್ಯಕ್ಷ ಸುಧೀರ್ ಗೌಡ,ತಾಪಂ ಮಾಜಿ ಅಧ್ಯಕ್ಷ ಹನು, ಜೆಡಿಎಸ್ ಪಕ್ಷದ ಕಾರ್ಯದರ್ಶಿ, ಮಹೇಂದ್ರ, ಮುಖಂಡರು…

Read More

ಸರಗೂರು:  ಪ್ರಾದೇಶಿಕ ಪಕ್ಷವನ್ನು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಘಟನೆ ಮಾಡಬೇಕು. ಪಕ್ಷದ ಚಿನ್ಹೆಯಲ್ಲಿ ಶಾಸಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲಾರೂ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ 25 ವರ್ಷಗಳ ರಜತ ಮಹೋತ್ಸವ ಸಂಭ್ರಮ ಅಂಗವಾಗಿ ಗುರುವಾರ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು. ಜನತಾದಳ ಜಾತ್ಯತೀತ ಪಕ್ಷ ಕರ್ನಾಟಕದಲ್ಲಿ ಹುಟ್ಟಿ 25 ವರ್ಷ ಪೂರೈಸಿದೆ. ಕರ್ನಾಟಕದಾದಂತ್ಯ ರಜತ ಮಹೋತ್ಸವ ಹಬ್ಬ ನಡೆಯುತ್ತಿದೆ, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೈಜೋಡಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದರು. ಬಿಹಾರದಲ್ಲಿ ಎನ್ ಡಿಎ ಗೆಲುವು ದಾಖಲಿಸಿದ ಮಾದರಿಯಲ್ಲಿ  2028ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎನ್ ಡಿ ಎ ಪಕ್ಷ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗುತ್ತದೆ. ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ…

Read More

ತುಮಕೂರು: ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ನ. 22ರಂದು ನಡೆಯಲಿದೆ ಎಂದು ಸಾಹೇ ವಿ.ವಿ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಗುರುವಾರ ತಿಳಿಸಿದರು. ನಗರದ ಹೊರ ವಲಯದ ಅಗಳಕೋಟೆಯಲ್ಲಿರುವ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಘಟಿಕೋತ್ಸವ ನಡೆಯಲಿದ್ದು, ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದ, ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಾಹೇ ವಿ.ವಿ ಕುಲಾಧಿಪತಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರ, ಡಾ.ಜಿ.ಎಸ್.ಆನಂದ್‌ ಭಾಗವಹಿಸಲಿದ್ದಾರೆ ಎಂದು ಹೇಳಿದರು. ವೈದ್ಯಕೀಯ 3, ದಂತ ವೈದ್ಯಕೀಯ 2, ಎಂಜಿನಿಯರಿಂಗ್ 8, ಎಂಸಿಎ ಎಂಟೆಕ್ 2 ಸೇರಿದಂತೆ 15 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 14…

Read More

ತಿಪಟೂರು: ಕಲ್ಪೋತ್ಸವದ ಎರಡನೇ ದಿನವಾದ ಗುರುವಾರದ ಜನಪದ ಸಂಭ್ರಮದಲ್ಲಿ ನಗರದ ಕೆಂಪಮ್ಮ ದೇವಸ್ಥಾನದಿಂದ ಕಲ್ಪತರು ಕ್ರೀಡಾಂಗಣದವರೆಗೆ ಅಂಬಾರಿ ಉತ್ಸವ ನಡೆಯಿತು. ತಾಲ್ಲೂಕು ಆಡಳಿತ, ಕಲಾಕೃತಿ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ಸಂಭ್ರಮಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು. ನೊಣವಿನಕೆರೆ ಕಾಡಸಿದ್ದೇಶ್ವರ ಮಠದ 22 ವರ್ಷದ ಆನೆ ಲಕ್ಷ್ಮಿ ಎಂಬ ಹೆಣ್ಣು ಆನೆ ಮೇಲೆ ಅಂಬಾರಿಯನ್ನಿಟ್ಟು ಕನ್ನಡಾಂಬೆಯ ಭಾವ ಚಿತ್ರದೊಂದಿಗೆ ಉತ್ಸವ ಜರುಗಿತು. ಉತ್ಸವದಲ್ಲಿ ಬೆಳ್ಳಿರಥದಲ್ಲಿ ಹೊಸಳ್ಳಿ ಪುರದ ಬಸವೇಶ್ವರ ವಿಗ್ರಹ, ಕುದುರೆ, ಎತ್ತು ಹಸು ನಗಾರಿ, ನಂದಿಧ್ವಜ ಕುಣಿತ, ವೀರಗಾಸೆ, ಸೋಮನ ಕುಣಿತ, ನಾನಾ ಜನಪದ ಕಲಾ ತಂಡಗಳ ಮೆರವಣಿಗೆ, ಕನ್ನಡದ ಕೆಂಪು ಹಳದಿ ಬಾವುಟಗಳು ರಾರಾಜಿಸಿತು. ವಿವಿಧ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಜೊತೆಗೂಡಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಮಹಿಳೆಯರು ಪುರುಷರು ತಲೆಗೆ ಪೇಟ ಧರಿಸಿ ಸಂಭ್ರಮಿಸಿದರು. ಕ್ರೀಡಾಂಗಣದಲ್ಲಿ ಸಾಕು ಪ್ರಾಣಿಗಳ…

Read More

ತುಮಕೂರು: ರೈತ ಹೋರಾಟಗಾರ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿ.ಅಜ್ಜಪ್ಪ (75) ಗುರುವಾರ ನಿಧನ ಹೊಂದಿದರು. ನಗರದಲ್ಲಿ ನೆಲೆಸಿದ್ದು, ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಸಮೀಪದ ಶಿವಪುರ ಬಳಿ ತಮ್ಮ ಜಮೀನಿಗೆ ಹೋಗಿದ್ದ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ. ಮೃತರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ನಗರದ ಜನ ಚಳವಳಿ ಕೇಂದ್ರದಲ್ಲಿ ಸಂಜೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತ ದೇಹವನ್ನು ಅವರ ಹುಟ್ಟೂರಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಗೆ ತೆಗೆದುಕೊಂಡು ಹೋಗಲಾಯಿತು. ಶುಕ್ರವಾರ ಬೆಳಿಗ್ಗೆ ಸೂರನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಆರಂಭದಲ್ಲಿ ಎಸ್‌ ಎಫ್‌ ಐ ಮೂಲಕ ಹೋರಾಟ, ವಿದ್ಯಾರ್ಥಿ ಚಳವಳಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ನಿವೃತ್ತಿಯ ನಂತರ ರೈತ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿಜ್ಞಾನ ಕೇಂದ್ರದ ಭಾರತ ಜ್ಞಾನ ವಿಜ್ಞಾನ ಸಮಿತಿ…

Read More