Author: admin

ತುಮಕೂರು: ನಗರದ ಸರಸ್ವತಿಪುರಂ ಬಡಾವಣೆಯಲ್ಲಿರುವ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನ.21ರಂದು ಮತ್ತು 22 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ವರೆಗೆ ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ವಿಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಧುನಿಕ ಸೌಲಭ್ಯಗಳು, ವೈದ್ಯಕೀಯ ಪ್ರಗತಿ, ಗ್ರಂಥ ಜ್ಞಾನದ ಆವಿಷ್ಕಾರಗಳು ಮತ್ತು ಕೃಷಿ ಬೆಳವಣಿಗೆಯ ಮೂಲಕ ನಮ್ಮ ಜೀವನವನ್ನು ಸುಲಭ ಮತ್ತು ಅನುಕೂಲಕರವಾಗಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯಂತಹ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ. ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕುವ ಮೂಲಕ ಕಲಿಕೆಯನ್ನು ಉತ್ತೇಜಿಸುವ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಪ್ರಮುಖ ಕಾರ್ಯನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸ ಹೊಸ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಕಾರ್ಯಕ್ರಮವನ್ನು ಹನುಮಂತಪ್ಪ ಎಂ., ಕೆ.ಇ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿಗಳು, ತುಮಕೂರು ತಾಲ್ಲೂಕು,…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಪಾಷಾಪುರ ಗ್ರಾಮದ ಯುವ ರೈತ ಪವನ ಮಾರುತಿ ಆಲೂರೆ (25) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಾಗಿ ಖಾಸಗಿ ಸಾಲ ಮಾಡಿದ್ದು, ಸಾಲ ತೀರಿಸಲು ಆಗದ ಕಾರಣ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ವರದಿ: ಅರವಿಂದ ಮಲ್ಲಿಗೆ,  ಬೀದರ್  ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಶ್ರೀಕ್ಷೇತ್ರ ಕಾಗಿನೆಲೆ: ಇಲ್ಲಿನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ವತಿಯಿಂದ ನ.22 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ‘ತಲ್ಲಣಿಸದಿರು ಮನವೆ’ ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ ಆಯೋಜಿಸಲಾಗಿದೆ. ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಚಿಂತನಾ ಗೋಷ್ಠಿಯ ಸಾನಿಧ್ಯವನ್ನು ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ಭಾಗವಹಿಸುವರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆಯಲ್ಲಿ ಸೋಮವಾರ ಸಾಂಪ್ರದಾಯಿಕ ಗೋವಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಫಸಲು ಕಟಾವಿಗೆ ಬರುವ ಮುನ್ನ ದನ, ಕರುಗಳನ್ನು ಪೂಜಿಸುವುದು ವಾಡಿಕೆ. ಈ ಹಬ್ಬದಂದು ಉತ್ಸವ ಮೂರ್ತಿಗಳ ಸುತ್ತ ಜಾನುವಾರು ಪ್ರದಕ್ಷಿಣೆ ಹಾಕುವುದರಿಂದ ರೋಗರುಜಿನ ಬರುವುದಿಲ್ಲವೆಂಬ ನಂಬಿಕೆ ಈ ಭಾಗದಲ್ಲಿದೆ. ಹಬ್ಬದಲ್ಲಿ ಗೌಡ ಗೊಂಚುಗಾರ, ಗುರಿಕಾರ, ತಳವಾರ, ಕುರುಬ ಗೌಡ, ಗೊಲ್ಲ ಗೌಡ, ಮನೆಗಾರರು ಭಾಗವಹಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ತಾಲೂಕಿನ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಕಡೆಕಾರ್ತಿಕ ಮಾಸದ ಜಾತ್ರಾ ಮಹೋತ್ಸವ ಅಂಗವಾಗಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಹುಲಿ ದಾಳಿಯಿಂದ ಭಯಭೀತರಾಗಿದ್ದ ಸರಗೂರು ತಾಲೂಕು ಸೇರಿದಂತೆ ಇತರೆ ತಾಲೂಕಿನ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಾನವ–ಕಾಡುಪ್ರಾಣಿಗಳಿಗೆ ಕಿಂಚಿಂತ್ತೂ ತೊಂದರೆಯಾಗದಂತೆ ಅರಣ್ಯ ಇಲಾಖೆ, ಮುಜರಾಯಿ ಇಲಾಖೆಯು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ವಿಶೇಷವಾಗಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಹಾವಳಿಯೂ ಜೋರಾಗಿದ್ದರಿಂದ ಅರಣ್ಯ ಇಲಾಖೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹದೇಶ್ವರಸ್ವಾಮಿಯ ಕೊಂಡೋತ್ಸವ ಆಚರಿಸಿದರು. ಇದರ ಅಂಗವಾಗಿ ದೇವಸ್ಥಾನವನ್ನ ವಿವಿಧ ಬಣ್ಣಗಳಿಂದ ಬಳಿದು, ಸಿಂಗರಿಸಿದ್ದರು. ದೇವಸ್ಥಾನವನ್ನು ಮಧುವಣಗಿತ್ತಿಯಂತೆ ಅಲಂಕೃತಗೊಳಿಸಿದ್ದರು. ಇದಲ್ಲದೆ ಕಾಡಿನೊಳಗಿನ ರಸ್ತೆಯಲ್ಲಿ ಧೂಳು ಎಳದಂತೆ ನೀರು ಹಾಕಲಾಗಿತ್ತು. ಶ್ರೀಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ಭಾನುವಾರ ನಡೆದವು. ಸೋಮವಾರ ದೇವರಿಗೆ ದೇವಸ್ಥಾನದ ಸಮೀಪದಲ್ಲಿರುವ ಕೆರೆಯಿಂದ ವಿವಿಧ ಪೂಜೆಗಳನ್ನು…

Read More

ತುರುವೇಕೆರೆ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಜಿಜೆಸಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳೆಂದರೆ ಜನರಿಗೆ ತಾತ್ಸಾರ ಮನೋಭಾವ ಮೂಡಿದೆ. ಸರ್ಕಾರಿ ಶಾಲೆಗಳಲ್ಲಿ ಹಲವು ಸವಲತ್ತುಗಳಿವೆ. ನುರಿತ ಮತ್ತು ವಿದ್ಯಾವಂತ ಶಿಕ್ಷಕರು ಇದ್ದಾರೆ. ಆದರೂ ಜನರಿಗೆ ಸರ್ಕಾರಿ ಶಾಲೆಗಳು ಬೇಡವಾಗಿದೆ. ಇದಕ್ಕೆ ಕಾರಣವೇನು ಎನ್ನುವುದನ್ನು ಅರಿಯಬೇಕು. ಉದಾಸೀನತೆಗೆ ಇರುವ ಕಾರಣವನ್ನು ಹುಡುಕಲು ಪೋಷಕರು, ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.  ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನಂತರಾಮು, ಬಿ.ಆರ್.ಸಿ.ಸುರೇಶ್, ಉಪ ಪ್ರಾಂಶುಪಾಲ ವೆಂಕಟೇಶ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ನಳಿನಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ, ಬಿ.ಆರ್.ಪಿ ಕೆ.ಆರ್.ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜು, ಮುನಿಯೂರು ರಂಗಸ್ವಾಮಿ, ನಂಜೇಗೌಡ, ಗುರುಮೂರ್ತಿ ಪಾಲ್ಗೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು: ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಸರ್ಕಾರದ ಆಶ್ರಯ ಪಡೆಯುವುದು ನಿಲ್ಲಿಸಬೇಕು. ಸಾಹಿತಿ ದುಡಿದು ಸಂಪಾದಿಸಬೇಕು, ಮಾಸಾಶನದಿಂದಲ್ಲ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು. ನಗರದಲ್ಲಿ ಭಾನುವಾರ ಬಹುಮುಖಿ ಬಳಗದಿಂದ ಹಮ್ಮಿಕೊಂಡಿದ್ದ ‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಸಾಶನ ಪಡೆದು ದಿನ ಪೂರ್ತಿ ಬರೆಯುತ್ತಾ ಕುಳಿತರೆ ಕ್ರಿಯಾಶೀಲ ಸಾಹಿತಿ ಎನ್ನಲು ಆಗುವುದಿಲ್ಲ. ಅವರಿಗೆ ಜೀವನ ಅನುಭವ ಇರುವುದಿಲ್ಲ. ಬದುಕಿನ ಜತೆಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಸಾಹಿತ್ಯ ಸೃಜನೆ ಸಾಧ್ಯ. ಪ್ರಸ್ತುತ ಯುವ ಬರಹಗಾರರು ತೆರೆದ ಕಣ್ಣಿನಿಂದ ನೋಡಿದ, ಬದುಕಿನ ಅನುಭವದ ಬಗ್ಗೆ ಬರೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಭರವಸೆಯ ಬರಹಗಾರರು ಕನ್ನಡಕ್ಕೆ ಬಂದಿದ್ದಾರೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು. ಜನಪ್ರತಿನಿಧಿ, ಆಡಳಿತಾಧಿಕಾರಿ ತಪ್ಪು ಮಾಡಿದರೆ ಸಂದರ್ಭ, ರಾಜಕಾರಣದ ಒತ್ತಡ ಎಂದು ಹೇಳಬಹುದು. ಆದರೆ ಒಬ್ಬ ಸಾಹಿತಿಯ ಆಲೋಚನೆ, ಕ್ರಿಯೆ, ತೀರ್ಪುಗಳಲ್ಲಿ ತಪ್ಪಾದರೆ ನಾಡಿನ ಮನಸಾಕ್ಷಿ ಸತ್ತು ಹೋಗುತ್ತದೆ. ಆತಂಕ ಶುರುವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಲೇಖಕಿ ಬಾ.ಹ.ರಮಾಕುಮಾರಿ…

Read More

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತಿಪಟೂರು ತಾಲ್ಲೂಕಿನ ಕೋಡಿಹಳ್ಳಿಯ ಹೋಟೆಲ್ ಸಿಬ್ಬಂದಿಯೊಬ್ಬರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಎಚ್.ಎಸ್.ಶಿವಕುಮಾರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು,  ಆನ್‌ ಲೈನ್‌ ನಲ್ಲಿ ಕೆಲಸ ಮಾಡುತ್ತಾ ಹಣ ಗಳಿಸಬಹುದು ಎಂಬ ಜಾಹೀರಾತು ವೀಕ್ಷಿಸಿದ್ದಾರೆ. ನಂತರ ಯಾವ ಕೆಲಸ ಎಂದು ಮಸೇಜ್ ಮಾಡಿದ್ದಾರೆ. ಬಳಿಕ ಅವರ ನಂಬರ್ ಅನ್ನು “Wealth Group 605′ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿದೆ. ‘ನಾವು ಹೇಳಿದಂತೆ ಹಣ ವರ್ಗಾಯಿಸಿದರೆ, ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡುತ್ತೇವೆ’ ಎಂದು ಆರೋಪಿಗಳು ತಿಳಿಸಿದ್ದಾರೆ. ವಂಚಕರ ಮಾತು ನಂಬಿದ ಶಿವಕುಮಾರ್ ಹಂತ ಹಂತವಾಗಿ ಒಟ್ಟು 14.08 ಲಕ್ಷ ವರ್ಗಾವಣೆ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ “ಇನ್ನೂ 14 ಲಕ್ಷ ವರ್ಗಾಯಿಸಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು’ ಎಂದಿದ್ದಾರೆ. ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಆಗಿರುವುದು ಗೊತ್ತಾಗಿದೆ. ಆಮಿಷ ನೀಡಿ,…

Read More

ಶಿರಾ: ತಾಲ್ಲೂಕಿನ ಹುಯಿಲ್‌ ದೊರೆ ಬಳಿ ಭಾನುವಾರ ಎರಡು ಲಾರಿಗಳ ನಡುವೆ ಸಂಭವಿಸಿದೆ. ಅಪಘಾತದ ವೇಳೆ ಗೋದಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಡಿದ್ದ ಗೋದಿಯನ್ನು ತುಂಬಿಕೊಳ್ಳಲು ಜನರು ಮುಗಿಬಿದ್ದರು. ಶಿರಾದಿಂದ ಹುಳಿಯಾರು ಕಡೆ ಗೋದಿ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಹುಳಿಯಾರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಚೆಲ್ಲಾಡಿದ ಗೋದಿ ತುಂಬಿಕೊಳ್ಳಲು ಮುಗಿಬಿದ್ದ ಜನರು ಪೊರಕೆ ಹಿಡಿದು ಗೋದಿಯನ್ನು ಒಟ್ಟುಗೂಡಿಸಿಕೊಂಡು ಚೀಲದಲ್ಲಿ ತುಂಬಿಕೊಂಡು ಮನೆಗಳಿಗೆ ಕೊಂಡೊಯ್ದರು. ಘಟನೆ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಮಧುಗಿರಿ:  ಮಧುಗಿರಿ ಪಟ್ಟಣದಲ್ಲಿ ಸೊಳ್ಳೆಯ ಕಾಟಕ್ಕೆ ಜನ ಬೇಸತ್ತಿದ್ದಾರೆ. ಪಟ್ಟಣದ ಎಲ್ಲೆಡೆಗಳಲ್ಲಿ  ಸೊಳ್ಳೆಗಳ ವಿಪರೀತ ಕಾಟಕ್ಕೆ ಜನ ಬಳಲಿ ಬೆಂಡಾಗಿದ್ದಾರೆ. ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಪುರಸಭೆ, ಡಿವೈಎಸ್‌ ಪಿ ಕಚೇರಿ, ಶಾಲಾ- ಕಾಲೇಜು ತಹಶೀಲ್ದಾರ್ ಕಚೇರಿ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಪಾಡಂತು ಹೇಳತೀರದು. ರೋಗ ನಿವಾರಣೆಗಾಗಿ ಆಸ್ಪತ್ರೆ ದಾಖಲಾದರೆ, ಸೊಳ್ಳೆಗಳ ಕಡಿತದಿಂದ ರೋಗ ಉಲ್ಬಣವಾಗುವ ಆತಂಕ ಎದುರಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ. ಪಟ್ಟಣದ ದೊಡ್ಡ ದೊಡ್ಡ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದ ಕಸ ಮತ್ತು ಕಡ್ಡಿ ಕಟ್ಟಿಕೊಂಡು ಅನುಪಯುಕ್ತ ಗಿಡಗಳು ಅಳೆತ್ತರ ಬೆಳೆದಿರುವುದರಿಂದ ಸೊಳ್ಳೆಗಳ ಅವಾಸ ಸ್ಥಾನವಾಗಿದೆ. ಸೊಳ್ಳೆಗಳ ಸಂತತಿ ಹೆಚ್ಚಾಗಿ ಜನರ ರಕ್ತ ಹೀರತೊಡಗಿವೆ. ಪಟ್ಟಣ ವ್ಯಾಪ್ತಿಯ ಕೆಲವು ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲವಾಗಿದ್ದು, ಚರಂಡಿಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿವೆ. ಕೊಳಚೆ ನೀರನ್ನು ತೆಗೆದು ಸ್ವಚ್ಛ ಮಾಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆಕ್ರೋಶದ…

Read More