Author: admin

ಬೆಂಗಳೂರು: ನಾಡಿನ ಹೆಸರಾಂತ ಬರಹಗಾರರು, ಸಾಹಿತಿಗಳು, ಕಲಾವಿದರು, ಚಿಂತಕರು ಭಾಷೆ, ನೆಲ, ಜಲ, ಅಭಿವೃದ್ಧಿಗೆ ಶ್ರಮಿಸುತ್ತಿದ್ದರು ಕೂಡ ಕೆಲವರು ರಾಜಕೀಯ ಪಕ್ಷದ ಪರವಾಗಿ ಧ್ವನಿಯೆತ್ತಿ ತಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದು ಕನ್ನಡ ಭಾಷೆ, ನೆಲ, ಜಲ  ಮತ್ತು ಕನ್ನಡ ಅಭಿವೃದ್ಧಿಗೆ ಅಪಾಯ  ತಂದೊಡ್ಡುತ್ತಿದ್ದಾರೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್  ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಜುಡಿಷಿಯಲ್ ಲೇಔಟ್‌ ನಲ್ಲಿ ಬಡಾವಣೆಯ ಕನ್ನಡ ಕಸ್ತೂರಿ ಸಂಘ ಹಾಗೂ  ವಿವಿಧ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಅದ್ದೂರಿಯ 70 ನೇ ಕನ್ನಡ ರಾಜೋತ್ಸವದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸರ್ಕಾರದ ಕೆಲವು  ಸಮಿತಿಗಳಲ್ಲಿ, ಪ್ರಾಧಿಕಾರಗಳಲ್ಲಿ ಅಧ್ಯಕ್ಷರು, ಸದಸ್ಯರು ಆಗಲು ಮತ್ತು ಪ್ರಶಸ್ತಿಗಳನ್ನು ಪಡೆದುಕೊಳ್ಳಲು ರಾಜಕಾರಣಿಗಳ ಜೊತೆ ಲಾಭಿ ನಡೆಸಿ ಅಧಿಕಾರ ಅನುಭವಿಸಲು  ಹಾತೊರೆಯುತ್ತಿರುವುದರಿಂದ  ಕನ್ನಡ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡಿದೆ ಎಂದರು. ಜೊತೆಗೆ ಉತ್ತರ ಭಾರತದಿಂದ ಉದ್ಯೋಗ ಅರಸಿ ಬರುವ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರಾಜ್ಯ  ಸರ್ಕಾರ ವಿಫಲವಾಗಿದ್ದು,…

Read More

ಸರಗೂರು:   ಕೂಡಗಿ ಗ್ರಾಮದ  ರೈತರೊಬ್ಬರ ಮೇಲೆ ನಡೆದ ಹುಲಿ ದಾಳಿ ತೀವ್ರ ನೋವು ತಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಸ್.ಸಿ ಮಹದೇವಪ್ಪ ತಿಳಿಸಿದರು. ತಾಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಕೂಡಗಿ ಗ್ರಾಮದ ದೊಡ್ಡನಿಂಗಯ್ಯ  ಶುಕ್ರವಾರದಂದು ಹುಲಿ ದಾಳಿಗೆ ಮೃತಪಟ್ಟ ಹಿನ್ನೆಲೆ ಅವರ ಮನೆಗೆ ಶನಿವಾರ ಡಾ.ಎಸ್.ಸಿ.ಮಹದೇವಪ್ಪ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿ ಕುಟುಂಬಸ್ಥರಿಗೆ ಸ್ವಾತಂನ ಹೇಳಿದರು. ನಂತರ ಗ್ರಾಮಸ್ಥರು ಮತ್ತು ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು. ಹುಲಿ ಓಡಾಟದ ಬಗ್ಗೆ ದೂರು ಬಂದಿದ್ದರೂ ಬೋನು ಇಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರೆ ಮಾಹಿತಿಯನ್ನು ಸ್ಥಳೀಯ ಶಾಸಕರು ತಿಳಿಸಿದ್ದಾರೆ. ನೊಂದ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಯೋಜನೆಯಡಿಯಲ್ಲಿ ಮನೆ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಮಾನವ–ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ, ಹಿಂದಿನಿಂದಲೂ ಇದೆ.…

Read More

ಸಾಂಪ್ರದಾಯಿಕ ಕಲೆಗಳ ಪರಂಪರೆ ಮತ್ತು ಜನಪದ ಸಂಸ್ಕೃತಿಯ ಸೊಬಗಿನ ನಡುವೆ, ಸ್ಥಳೀಯ ಪ್ರತಿಭೆಗಳನ್ನು ಅಣಿಗೊಳಿಸಿ ರೂಪುಗೊಂಡಿರುವ ಹೊಸ ದೃಶ್ಯಮಾಲಿಕೆ “ಪ್ರೊಡಕ್ಷನ್ ನಂ 01” ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶ್ರೀ ಗಂಗಾಧರೇಶ್ವರ ಸ್ವಾಮಿಗಳ ಆಶೀರ್ವಾದದಿಂದ, ಕಲ್ಪತರು ಪ್ರೊಡಕ್ಷನ್ ರವರಿಂದ ಪ್ರಥಮ ಕೃತಿಯಾಗಿ ಮೂಡಿ ಬಂದಿರುವ ಈ ಕೃತಿ ಕನ್ನಡ ಸಂಸ್ಕೃತಿಯ ಮಣ್ಣಿನ ವಾಸನೆ ತಂದುಕೊಡುವ ಭರವಸೆ ವ್ಯಕ್ತಪಡಿಸಿದೆ. ಕಥೆ -– ಚಿತ್ರಕಥೆ -– ಸಂಭಾಷಣೆ / ಸಹಿತ / ನಿರ್ದೇಶನ ಶ್ರೀಕಾಂತ್ ಕುಮಾರ್ ನಿರ್ಮಾಪಕರು ಭೋಜರಾಜ್ -– ವೆಂಕಟೇಶ್ ಪ್ರಚಾರ ಗೀತೆ ಕುಶಿ ಇವೆಂಟ್ ಬಾಯಾಗ್ರಾಹಕ/ಅಡ್ವೈಜ ರ್‌ಗಳು ಕಲಾವಿದರು ಭೋಜರಾಜ್, ವೆಂಕಟೇಶ್, ಕುಮಾರ್, ಶ್ರೀಕಾಂತ್, ಶುಭಾ ಚಿತ್ರದ ಹೈಲೈಟ್ಸ್: ಮೂಲಭೂತ ಜನಪದ ಭಾವನೆಗಳು ಮಣ್ಣಿನ ಸಂಗತಿ, ಸಂಸ್ಕೃತಿ ಮತ್ತು ಮನುಷ್ಯ ಮೌಲ್ಯಗಳ ತೆರೆಯ ಮೇಲೆ ಮೂಡಿಸುವ  ಪ್ರಯತ್ನ ಶ್ರದ್ಧಾ, ನಂಬಿಕೆ ಮತ್ತು ಕಲೆಯನ್ನು ಸೇರ್ಪಡಿಸುವ ಸುಂದರ ಯತ್ನ ವಿಶೇಷ ಸಂದೇಶ: “ಸಮಾಜದ ನಾಡಿಯ ಜನತೆಗೆ…

Read More

ಕೊರಟಗೆರೆ: ನಮ್ಮ ಕರ್ನಾಟಕ ಕೇವಲ ಒಂದು ಪ್ರದೇಶವಲ್ಲ ಅದು ಶ್ರೀಮಂತ ಸಂಸ್ಕೃತಿ, ಭವ್ಯ, ಇತಿಹಾಸ ಮತ್ತು ಪ್ರಕೃತಿಯ ಸೌಂದರ್ಯವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಪುಣ್ಯಭೂಮಿ ಎಂದು ತಹಶೀಲ್ದಾರ್ ಕೆ.ಮಂಜುನಾಥ ತಿಳಿಸಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ 70ನೇ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು. ಕನ್ನಡದಲ್ಲಿ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕುವೆಂಪು ಅವರು ಹೇಳುವಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆ ನೆಲೆಸಿದೆ. ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎಂದು ಹೇಳಿದರು. ಆದಿಕವಿ ವಾಲ್ಮೀಕಿಯಿಂದ ಆರಂಭವಾಗಿ ಪಂಪ, ರನ್ನ ಮೊದಲಾದ ಕವಿಗಳು ತಮ್ಮ ಕಾವ್ಯದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಮನದುಂಬಿ ಹೊಗಳಿದ್ದಾರೆ. ಕರ್ನಾಟಕವು ತನ್ನದೇ ಆದ…

Read More

ಕೊರಟಗೆರೆ : ಇಂದಿನ ಯುವಜನತೆ ಅನಾವಶ್ಯಕ ವಿಷಯಗಳಲ್ಲಿ ತೊಡಗಿಕೊಳ್ಳುವುದರಿಂದ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜೀವನದ ಗುರಿಯನ್ನು ಅರಿತು, ಉತ್ತಮ ಭವಿಷ್ಯ ಮತ್ತು ಸಮಾಜ ನಿರ್ಮಾಣಕ್ಕೆ ಅಗತ್ಯವಾದ ವಿಷಯಗಳತ್ತ ಕೇಂದ್ರೀಕರಿಸಬೇಕು, ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ತಿಳಿಸಿದರು. ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಬೆಂಗಳೂರಿನ ವಿವೇಕಾನಂದ ಮಹಿಳಾ ಕಾಲೇಜಿನ ಎನ್‌ ಎಸ್‌ ಎಸ್‌ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾತನಾಡಿದರು. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ, ಅವರ ತ್ಯಾಗದ ಬೆಲೆ ಮಕ್ಕಳಿಗೆ ಅರಿವಾಗಬೇಕು, ಯಾವುದೇ ಅಡ್ಡದಾರಿಗಳನ್ನೂ ತುಳಿಯದೆ, ಶ್ರದ್ಧೆ, ಶ್ರಮ ಮತ್ತು ನೈತಿಕತೆಯಿಂದ ಓದಬೇಕು. ನಿಜವಾದ ಶಿಕ್ಷಣ ಎಂದರೆ ಕೇವಲ ಪುಸ್ತಕದ ಅಕ್ಷರಗಳಲ್ಲ, ಅದು ವ್ಯಕ್ತಿತ್ವದ ಬೆಳವಣಿಗೆಯ ಮಾರ್ಗವಾಗಿದ್ದು ಇದನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣವು ರಾಷ್ಟ್ರದ ಪ್ರಗತಿಯ ಮೂಲ. ಹೆಣ್ಣೊಂದು ಕಲಿತರೆ ಮನೆ, ಶಾಲೆ,…

Read More

ಕೊರಟಗೆರೆ: ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಈಶ್ವರಯ್ಯ ಮತ್ತು ಉಪಾಧ್ಯಕ್ಷರಾಗಿ ಭಾಗ್ಯಮ್ಮ  ಶುಕ್ರವಾರ ನಡೆದ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಸದಸ್ಯರ ಒಗ್ಗಟ್ಟಿನಿಂದ ಯಾವುದೇ ಸ್ಪರ್ಧೆ ಇಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಸಂಘದ ಕಚೇರಿಯು ಹರ್ಷೋದ್ಗಾರದ ವಾತಾವರಣದಿಂದ ಕಂಗೊಳಿಸಿತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ನೂತನ ಅಧ್ಯಕ್ಷ ಈಶ್ವರಯ್ಯ ಗೃಹ ಸಚಿವರ ಆಶೀರ್ವಾದ ಮತ್ತು ಸದಸ್ಯರ ಸಹಕಾರದಿಂದ ನನಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಸಂಘದ ಅಭಿವೃದ್ಧಿ ಮತ್ತು ರೈತರ ಹಿತಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವುದೇ ನನ್ನ ಧ್ಯೇಯ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಮಾತನಾಡಿ, ಕ್ಷೇತ್ರದ ಶಾಸಕರು ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್  ಆಶಯದಂತೆ ಸಂಘವು ರೈತರ ಪರವಾಗಿ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಎ.ಡಿ. ಬಲರಾಮಯ್ಯ ಮಾತನಾಡಿ, ಗೃಹ…

Read More

ಕೊರಟಗೆರೆ : ಭ್ರಷ್ಟಾಚಾರವು ಕೇವಲ ಹಣದ ವ್ಯವಹಾರವಲ್ಲ, ಅದು ನೈತಿಕ ಮೌಲ್ಯಗಳ ಕುಸಿತವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾರದರ್ಶಕತೆ, ನೈತಿಕತೆ ಮತ್ತು ಹೊಣೆಗಾರಿಕೆಯಿಂದ ನಡೆದುಕೊಂಡಾಗ ಮಾತ್ರ ಶುದ್ಧ ಆಡಳಿತ ಸಾಧ್ಯ ಎಂದು ತುಮಕೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ ಹೇಳಿದರು. ಭ್ರಷ್ಟಾಚಾರವೆಂಬ ಸಾಮಾಜಿಕ ವ್ಯಾಧಿಗೆ ಅಂತ್ಯಗೊಳಿಸುವ ದೃಢಸಂಕಲ್ಪದೊಂದಿಗೆ “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ–2025” ಕಾರ್ಯಕ್ರಮವನ್ನು ಕರ್ನಾಟಕ ಲೋಕಾಯುಕ್ತ, ತುಮಕೂರು ಘಟಕದ ವತಿಯಿಂದ ಕೊರಟಗೆರೆ ತಾ.ಪಂ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ಜನಸಾಮಾನ್ಯರ ಸಹಕಾರವಿಲ್ಲದೆ ಭ್ರಷ್ಟಾಚಾರ ವಿರೋಧಿ ಚಳವಳಿ ಯಶಸ್ವಿಯಾಗಲಾರದು, ಈ ಪಿಡುಗಿಗೆ ಯಾರೊಬ್ಬರೂ ಒಳಗಾಗಬಾರದು ವೃತ್ತಿಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ತಹಶೀಲ್ದಾರ್ ಮಂಜುನಾಥ ಕೆ. ಮಾತನಾಡಿ, ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವ ಹೋರಾಟ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಾನೂನಿನಲ್ಲಿ ಭ್ರಷ್ಟಾಚಾರ ವಿರುದ್ಧ ಕಠಿಣ ಶಿಕ್ಷೆಗಳು ಇದ್ದರೂ, ಜನರು ತಮ್ಮ ಹಕ್ಕುಗಳನ್ನು ಅರಿತು ಧೈರ್ಯವಾಗಿ ದೂರು ನೀಡಬೇಕಾಗಿದೆ, ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನ ಬಳಕೆಯು ಸಹಾಯಕವಾಗುತ್ತದೆ ಇದನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಬಳಕೆ…

Read More

ಸರಗೂರು: ವ್ಯಾಪ್ತಿಯ ಕಾಡಂಚಿನ ಭಾಗದಲ್ಲಿ ಹುಲಿ ದಾಳಿಯು ಮುಂದುವರಿದಿದ್ದು, ಹುಲಿ ಸೆರೆ ಕಾರ್ಯಾಚರಣೆ ನಡುವೆಯೇ ತಾಲೂಕಿನ ಕೂರ್ಣೇಗಾಲ ಸಮೀಪದ ಜಮೀನುವೊಂದರಲ್ಲಿ ದನಗಾಯಿ ರೈತನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದಿದೆ. ತಾಲೂಕಿನ ಕೂಡಗಿ ಗ್ರಾಮದ ರೈತ ದೊಡ್ಡ ನಿಂಗಯ್ಯ (55) ಹುಲಿ ದಾಳಿಗೆ ಬಲಿಯಾದ ಮೃತ ದುರ್ದೈವಿ. ಇತ್ತ ಮುಳ್ಳೂರು ಸಮೀಪದ ಬೆಣ್ಣೆಗೆರೆ ಬಳಿ ರೈತ ರಾಜಶೇಖರ್‌ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್‌ ನಡೆಸುತ್ತಿರುವಾಗಲೇ ಕೂರ್ಣೆಗಾಲ ಬಳಿ ದೊಡ್ಡ ನಿಂಗಯ್ಯರನ್ನು ಹುಲಿ ಬಲಿ ಪಡೆದಿದೆ. ದೊಡ್ಡ ನಿಂಗಯ್ಯ ಎಂದಿನಂತೆ ತಮ್ಮ ಸ್ವಗ್ರಾಮ ಕೂಡಗಿ ಸಮೀಪದ ಕೂರ್ಣೇಗಾಲದ ಜಮೀನುವೊಂದರಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಸಂಜೆ ಸುಮಾರು 3.30ರ ವೇಳೆಗೆ ಜಾನುವಾರುಗಳನ್ನು ಕರೆದುಕೊಂಡು ಮನೆಗೆ ಹಿಂದಿರುಗುವ ವೇಳೆ ಏಕಾಏಕಿ ಹುಲಿಯೊಂದು ದಾಳಿ ನಡೆಸಿದ್ದು, ಅವರ ಕುತ್ತಿಗೆಯನ್ನು ಹಿಡಿದ ಪರಿಣಾಮ ದೊಡ್ಡ ನಿಂಗಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಜೊತೆಗಿದ್ದ ಉಳಿದಿಬ್ಬರ ಕೂಗಾಟದಿಂದ ಹುಲಿ ಮೃತದೇಹವನ್ನು ಬಿಟ್ಟು ಓಡಿದೆ ಎನ್ನಲಾಗಿದೆ. ಘಟನಾ…

Read More

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೋಳವೊಂದು ಒಂದೇ ದಿನ ನಾಲ್ಕು ಜನರ ಮೇಲೆ ತೋಳ ದಾಳಿ ನಡೆಸಿ ಆತಂಕ ಸೃಷ್ಠಿಸಿದೆ. ಈ ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೋಲದಲ್ಲಿ ಕೆಲಸ ಮಾಡುತ್ತಿದ್ದ ಆಲೂರ್ (ಬಿ) ಗ್ರಾಮದ ರುಕ್ಮಿಣಬಾಯಿ ಮೇತ್ರೆ ಹಾಗೂ ಜೋಜನಾ ಗ್ರಾಮದ ಲಾಲಮ್ಮ ಕಾಂಬ್ಳೆ ಅವರ ಮೇಲೆ ತೋಳ ಹಿಂಬದಿಯಿಂದ ದಾಳಿ ನಡೆಸಿ ತಲೆ, ಕಿವಿ, ಬೆನ್ನು ಹಾಗೂ ಸೋಂಟ ಭಾಗಕ್ಕೆ ಗಾಯಮಾಡಿದೆ. ಜೀರ್ಗಾ (ಬಿ) ಗ್ರಾಮದ ಮಂಗಲಾ ಸ್ವಾಮಿ ಅವರು ಹೋಲದಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ತೋಳದ ದಾಳಿಗೆ ಒಳಗಾಗಿದ್ದಾರೆ. ಅವರ ಕೂಗನ್ನು ಕೇಳಿ ಪತಿ ಶರಣಯ್ಯ ಸ್ವಾಮಿ ಓಡಿ ಬಂದು ತೋಳವನ್ನು ಓಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಅದೇ ಗ್ರಾಮದ 15 ವರ್ಷದ ಬಾಲಕನ ಮೇಲೂ ತೋಳ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ನಾಲ್ವರನ್ನು ಬೀದರ್ ಜಿಲ್ಲಾ…

Read More

ಕರ್ನಾಟಕ ಬರೀ ನಾಡಲ್ಲ ನಮ್ಮ ಸಂಸ್ಕೃತಿಯ ಧಾತು ಕನ್ನಡ ಕೇವಲ ನುಡಿಯಲ್ಲ ನಮ್ಮ ಅಂತರಂಗದ ಮಾತು ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ರಾಜ್ಯೋತ್ಸವದ ಜೊತೆಗೆ ನಾಲ್ಕು ವರ್ಷದ ಸಂಭ್ರಮಾಚರಣೆ ಆಚರಿಸುತ್ತಿರುವ ನಮ್ಮ ತುಮಕೂರು ನ್ಯೂಸ್ ಚಾನೆಲ್  ಹಾಗೂ ಇದರ ಆಧಾರ ಸ್ತಂಭ  ಹಾಗೂ ಸಂಸ್ಥಾಪಕರಾದ ನಟರಾಜು ಜಿ.ಎಲ್. ಅವರಿಗೂ ವಾರ್ಷಿಕೋತ್ಸವದ ಶುಭಾಶಯಗಳು ನಾಲ್ಕು ವರ್ಷಗಳ ಹಿಂದೆ ಈ ಚಾನೆಲ್ ಆರಂಭವಾದಾಗ ಅದರ ಉದ್ದೇಶ ಸರಳವಾಗಿತ್ತು — “ಸತ್ಯವನ್ನೇ ಹೇಳುವುದು, ಯಾರ ಪರವಾಗಿಯೂ ಅಲ್ಲ; ಜನರ ಪರವಾಗಿಯೇ ನಿಲ್ಲುವುದು.” ಮಾಧ್ಯಮದ ವ್ಯವಹಾರೀಕರಣದ ಮಧ್ಯೆ ಈ ಮಾತುಗಳು ಸವಾಲಿನಂತೆ ಕೇಳಿಸಬಹುದು. ಆದರೆ ಈ ಚಾನೆಲ್ ತನ್ನ ಆರಂಭದಿಂದಲೇ ಆ ಮೌಲ್ಯವನ್ನು ಕಾಪಾಡಿಕೊಂಡು ಬಂತು. ಪ್ರಾರಂಭಿಕ ದಿನಗಳಲ್ಲಿ ಸಣ್ಣ ತಂಡ, ಸೀಮಿತ ಸಂಪನ್ಮೂಲಗಳಿದ್ದರೂ ಜನಪ್ರಿಯತೆ ಬೆಳೆಸಿದ ರೀತಿಯು ಶ್ಲಾಘನೀಯವಾಗಿದೆ. ಪತ್ರಿಕೋದ್ಯಮವು ಸಮಾಜದ ನಾಲ್ಕನೇ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ. ಪ್ರಜಾಪ್ರಭುತ್ವದ ಬಲವಾದ ಅಸ್ತಿವಾರವನ್ನು ಕಟ್ಟುವಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮುಖ್ಯವಾಗಿದೆ. ಈ ಪೈಕಿ, ನಮ್ಮ ನ್ಯೂಸ್ ಚಾನೆಲ್ ಕಳೆದ…

Read More