Subscribe to Updates
Get the latest creative news from FooBar about art, design and business.
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
- ತುಮಕೂರಿನಲ್ಲಿ ಆ.11ರಂದು ನೇರ ಸಂದರ್ಶನ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ
Author: admin
ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಶಿವರಾಜ್ ಕುಮಾರ್ ಅವರು, ಹೊಸ ವರ್ಷದ ಸಂದರ್ಭದಲ್ಲಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾಗಿದ್ದು, ತಮ್ಮ ಆರೋಗ್ಯ ಹಾಗೂ ಹೊಸ ವರ್ಷದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ವಿಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಮಾತನಾಡಿರುವ ಗೀತಾ ಶಿವರಾಜ್ ಕುಮಾರ್ ಅವರು, ಶಿವರಾಜ್ ಕುಮಾರ್ ಅವರ ಆರೋಗ್ಯ ಚೇತರಿಕೆಯಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು, ಶಿವರಾಜ್ ಕುಮಾರ್ ಅವರು ಸಂಪೂರ್ಣವಾಗಿ ಕ್ಯಾನ್ಸರ್ ನಿಂದ ಗುಣಮುಖವಾಗಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಕ್ಯಾನ್ಸರ್ ಸೆಂಟರ್ ನವರು ಬಹಳ ಚೆನ್ನಾಗಿ ನನ್ನನ್ನು ಆರೈಕೆ ಮಾಡಿದರು. ಅವರಿಗೆ ಧನ್ಯವಾದಗಳು ಇದು ಸಣ್ಣ ಆಪರೇಷನ್ ಅಲ್ಲ, ತಮಾಷೆಯ ಮಾತೇ ಅಲ್ಲ ಯಾಕಂದ್ರೆ ಆಗಿರೋದು ದೊಡ್ಡ ಆಪರೇಷನ್. ಆದರೆ ಯಾರೂ ಆಪರೇಷನ್ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ. ತುಂಬಾ ಸಿಂಪಲ್ ಆಗಿ ಆಪರೇಷನ್ ನಡೆದಿದೆ. ಆಪರೇಷನ್ ಬಗ್ಗೆ ವಿವರವಾಗಿ ಹೇಳಲು ಹೋದರೆ ಎಲ್ಲರೂ ಗಾಬರಿಯಾಗುತ್ತಾರೆ ಎನ್ನುವ ಭಯವಷ್ಟೇ ಎಂದಿದ್ದಾರೆ.…
ಬೆಂಗಳೂರು: ಹೊಸ ವರ್ಷದ ದಿನವೇ ನಟ ದರ್ಶನ್ ತಮ್ಮ ಡೆವಿಲ್ ಸಿನಿಮಾದ ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಸಿನಿಮಾರಂಗಕ್ಕೆ ಮರು ಎಂಟ್ರಿ ನೀಡಿದ್ದಾರೆ. ಕಳೆದ ವರ್ಷದಲ್ಲಿ ನಡೆದ ಅಹಿತಕರ ಘಟನೆಗಳಿಂದಾಗಿ ಸಿನಿಮಾ ಕೆಲಸಗಳಿಂದ ದೂರವಿದ್ದ ದರ್ಶನ್ ಇದೀಗ ಮರುಪ್ರವೇಶ ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ನಟ ದರ್ಶನ್ ಡೆವಿಲ್ ಡಬ್ಬಿಂಗ್ ಕಾರ್ಯ ಆರಂಭ ಮಾಡಿದ್ದಾರೆ. ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದೀಗ ಹೊಸ ವರ್ಷದ ಆರಂಭದಲ್ಲೇ ಡಬ್ಬಿಂಗ್ ನಲ್ಲಿ ಭಾಗಿಯಾಗಿರುವ ದರ್ಶನ್, ಹೊಸ ವರ್ಷಕ್ಕೆ ವೃತ್ತಿ ಜೀವನದ ಮರು ಆರಂಭ ಬರೆದಿದ್ದಾರೆ. ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಫೆ.22ರ ಬಳಿಕ ಡೆವಿಲ್ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಮಿಲನಾ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಂಗಳೂರಿನ ಹುಡುಗಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಬೆಂಗಳೂರು: ಇತ್ತೀಚಿಗೆ ನಡೆದ ಕರ್ನಾಟಕ ಜೈನ ಅಸೋಸಿಯೇಷನ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನೂತನ ಪದಾಧಿಕಾರಿಗಳು ಈ ಕೆಳಕಂಡಂತೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ : ಎಸ್. ಜಿತೇಂದ್ರ ಕುಮಾರ್ ಉಪಾಧ್ಯಕ್ಷರಾಗಿ : 1) (ಕೇಂದ್ರ ಸ್ಥಾನ) ರಾಜಾ ಕೀರ್ತಿ 2)ಕಲಾ ಗೌಡ ಭುಜೇಗೌಪಾಟೀಲ್ (ಶೀತಲ್) ಸಹ ಕಾರ್ಯದರ್ಶಿ ಗಳಾಗಿ: 1 ) ಡಾ.ನೀರಜಾನಾಗೇಂದಕುಮಾರ್ 2) ಪ್ರಶಾಂತ್. ವಿ ಸಹ ಕೋಶಾಧಿಕಾರಿ: ಎ.ಸಿ .ಧರಣಿಂದ್ರಯ್ಯ ಮಹಿಳಾ ಸ್ಥಾನ( ಮೀಸಲು) ಬೆಂಗಳೂರು ವಿಭಾಗ 1)ಬಿ .ಕೋಮಲ ಬ್ರಹ್ಮದೇವಯ್ಯ 2) ಪದ್ಮಶ್ರೀ ನಿರ್ದೇಶಕರುಗಳಾಗಿ: 1).ಶೀತಲ್ ಕುಮಾರ್ 2 ).ಜಿ.ಬಿ. ಸ್ವರೂಪ ಜೈನ್ 3 ).ಪದ್ಮಿನಿ ಪ್ರಶಾಂತ್ 4). ಮಾಳ ಹರ್ಷೇಂದ್ರ ಕುಮಾರ್ 5 ).ಪಿ.ವಿ .ಜಿನೇಂದ್ರ ಕುಮಾರ್ 6).ಜೆ .ಪ್ರಕಾಶ್ 7). ಕೆ.ಬಿ.ಅಶೋಕ್ ಕುಮಾರ್ 8).ವಿ .ಜೆ .ಬ್ರಹ್ಮಯ್ಯ 9).ಎಸ್. ಅನಿಲ್ ಕುಮಾರ್ 10).ಚಿತ್ತ ಜಿನೇಂದ್ರ .ಎಂ 11).ಪಿ .ಸಿ. ರಾಜೇಶ್ ಜಿಲ್ಲಾವಾರು ನಿರ್ದೇಶಕರುಗಳ ಆಯ್ಕೆ ಪಟ್ಟಿ: 1)ಎಂ. ಆರ್. ಸುನಿಲ್ ಕುಮಾರ್ ಮೈಸೂರು ವಿಭಾಗ .…
ಬೆಂಗಳೂರು: ಇದೇ ಮೊದಲ ಬಾರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷಿತವಾಗಿ ಹೊಸ ವರ್ಷಾಚರಣೆ ಮಾಡಿರುವುದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಪೊಲೀಸರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ರಾತ್ರಿ ಲಕ್ಷಾಂತರ ಯುವಕರು, ನಾಗರಿಕರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಈ ವರ್ಷ ಪೊಲೀಸ್ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು ಮತ್ತು ಯುವ ಪೀಳಿಗೆ ಕೂಡ ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಿತು. ಇದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅನೇಕ ನಗರಗಳಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು. ಮುಂಬೈನಲ್ಲಿ ಜುಹು ಬೀಚ್, ಚೌಪಾಟಿ ಬೀಚ್ ಮತ್ತು ವರ್ಸೋವಾ ಬೀಚ್ಗಳಲ್ಲಿ ಜನರು ಜಮಾಯಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ನವದೆಹಲಿ: ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದು, 2025 ಎಲ್ಲರಿಗೂ ಹೊಸ ಅವಕಾಶ, ಯಶಸ್ಸನ್ನು ತರಲಿ ಎಂದು ಶುಭ ಕೋರಿದ್ದಾರೆ. ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಸಂತೋಷವನ್ನು ತರಲಿ. ಹೊಸ ವರ್ಷ ಎಲ್ಲರಿಗೂ ಆರೋಗ್ಯ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ ಎಂದು ಎಕ್ಸ್ ನಲ್ಲಿ ಪ್ರಧಾನಿ ಮೋದಿ ಶುಭ ಹಾರೈಇಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಶುಭಾಶಯಗಳನ್ನು ಹಂಚಿಕೊಂಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನಲ್ಲಿ 14 ಕೆ.ಜಿ. 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿದ ಆರೋಪದಲ್ಲಿ ಬಂಧನವಾಗಿದ್ದ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಚಂದ್ರಾ ಲೇಔಟ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಜಾಮೀನು ಮಂಜೂರಾದ ಹಿನ್ನೆಲೆ ಆರೋಪಿಗಳನ್ನು ಮಂಗಳವಾರ ರಾತ್ರಿಯೇ ಕಸ್ಟಡಿಯಿಂದ ರಿಲೀಸ್ ಮಾಡಲಾಗಿದೆ. ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಆರೋಪಿ ಐಶ್ವರ್ಯ 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 9ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಹೈಕೋರ್ಟ್ ಜಾಮೀನು ನೀಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ಬೀದಿ ನಾಯಿಗಳು—ಜಾನುವಾರುಗಳು ಸರ್ಕಾರಿ ಆಸ್ಪತ್ರೆ ಆವರಣದ ಒಳಗೆ ಹಾಗೂ ಹೊರಗೆ ಪ್ರವೇಶ ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ. ಆಸ್ಪತ್ರೆಗಳ ಒಳಗೆ ಹಾಗೂ ಆವರಣಗಳನ್ನು ಪ್ರವೇಶಿಸುವ ಬೀದಿ ನಾಯಿಗಳು, ಒಳ ರೋಗಿ, ಹೊರ ರೋಗಿ, ಗರ್ಭಿಣಿಯರು, ತಾಯಿ–ಮಕ್ಕಳಿಗೆ ಅಪಾಯ ಉಂಟುಮಾಡುತ್ತಿರುವುದು ಕೆಲವೆಡೆ ವರದಿಯಾಗುತ್ತಿದೆ. ಆರೋಗ್ಯ ಸಂಸ್ಥೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಆಸ್ಪತ್ರೆಗಳಲ್ಲಿ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಸಂಭವನೀಯ ಅಪಾಯ ತಡೆಗಟ್ಟಲು ಜಾನುವಾರು ಮತ್ತು ಬೀದಿ ನಾಯಿಗಳಿಗೆ ಪ್ರವೇಶ ನಿರ್ಬಂಧಿಸುವ ಅವಶ್ಯಕತೆಯಿದೆ ಎಂದು ತಿಳಿಸಲಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯ ಮತ್ತು ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದೆ ಇರುವುದೇ ಬೀದಿ ನಾಯಿಗಳು ಆಸ್ಪತ್ರೆಗಳ ಆವರಣ ಪ್ರವೇಶಿಸುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಆರೋಗ್ಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಅಗತ್ಯ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಎಚ್ಚರಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಲಕ್ನೋ: ವ್ಯಕ್ತಿಯೊಬ್ಬ ಹೊಸ ವರ್ಷದಂದೇ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹತ್ಯೆ ಮಾಡಿರುವ ಘಟನೆ ಲಕ್ನೋದ ಹೊಟೇಲ್ ವೊಂದರಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಗ್ರಾ ಮೂಲದ ಅರ್ಷದ್ (24) ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಮೃತರನ್ನು ಅರ್ಷದ್ನ ಸಹೋದರಿಯರಾದ ಅಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ಆರೋಪಿಯ ತಾಯಿ ಅಸ್ಮಾ ಎಂದು ಪೊಲೀಸರು ತಿಳಿಸಿದ್ದಾರೆ. ಲಖನೌನ ನಾಕಾ ಪ್ರದೇಶದ ಹೋಟೆಲ್ ಶರಣಜಿತ್ ನಲ್ಲಿ ಈ ಘಟನೆ ನಡೆದಿದೆ. ಸದ್ಯದ ಮಾಹಿತಿಗಳ ಪ್ರಕಾರ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಘಟನೆ ಸಂಬಂಧ ವಿವರವಾಗಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಫೋರೆನ್ಸಿಕ್ ತಂಡಗಳನ್ನು ಅಪರಾಧ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಡಿಸಿಪಿ ತ್ಯಾಗಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: 2025ನೇ ಇಸವಿಯನ್ನು ದೇಶಾದ್ಯಂತ ಜನರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಹೋಗಿ ಪೂಜೆ–ಪುನಸ್ಕಾರಗಳ ಮೂಲಕ ಬರಮಾಡಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿದೆ. ಅಯೋಧ್ಯೆ ಸೇರಿ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ವೈಭವ ನಡೆಯುತ್ತಿದೆ. ಇಂದು ಬೆಳ್ಳಂಬೆಳಗ್ಗೆಯೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುತ್ತಿದ್ದಾರೆ. ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಭಕ್ತರು ಗಂಗಾ ಮಾತೆ ಮತ್ತು ಸೂರ್ಯನಿಗೆ ದೀಪ ಬೆಳಗುವುದು ಕಂಡುಬಂತು. ಅದೇ ರೀತಿ ಪಂಜಾಬ್ ನಲ್ಲಿರುವ ಅಮೃತ್ ಸರ್ ಸ್ವರ್ಣಮಂದಿರದಲ್ಲೂ ಭಕ್ತರ ದಂಡು ಕಂಡುಬಂದಿತು. ಬೆಳಗ್ಗೆ ಕುಟುಂಬ ಸಮೇತ ಮಂದಿರಕ್ಕೆ ಆಗಮಿಸಿದ ಭಕ್ತರು, ಹೊಸ ವರ್ಷವನ್ನು ಸ್ವಾಗತಿಸಿದರು. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಸ್ಥಳಗಳಲ್ಲಿ ಯುವಜನರು ಸೇರಿದಂತೆ ಅಪಾರ ಜನಸಮೂಹ ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವುದರ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಕಳೆದ ಕೆಲವು ವರ್ಷಗಳಿಂದ ಹೊಸ ವರ್ಷ ಆಚರಣೆಗೆ ಸಾಕಷ್ಟು ನಿರ್ಬಂಧ ಹಾಕಲಾಗಿತ್ತು. ಈ ಬಾರಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ, ರಾತ್ರಿ 1ರಿಂದ 2 ಗಂಟೆಗಳ ವರೆಗೆ ಹೊಸ ವರ್ಷಾಚರಣೆ ಸುಸೂತ್ರವಾಗಿ, ಸಂಭ್ರಮದಿಂದ ಆಚರಿಸಲ್ಪಟ್ಟಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತುಈ ಬಾರಿ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx