ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಶಿವರಾಜ್ ಕುಮಾರ್ ಅವರು, ಹೊಸ ವರ್ಷದ ಸಂದರ್ಭದಲ್ಲಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷವಾಗಿದ್ದು, ತಮ್ಮ ಆರೋಗ್ಯ ಹಾಗೂ ಹೊಸ ವರ್ಷದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ವಿಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಮಾತನಾಡಿರುವ ಗೀತಾ ಶಿವರಾಜ್ ಕುಮಾರ್ ಅವರು, ಶಿವರಾಜ್ ಕುಮಾರ್ ಅವರ ಆರೋಗ್ಯ ಚೇತರಿಕೆಯಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು, ಶಿವರಾಜ್ ಕುಮಾರ್ ಅವರು ಸಂಪೂರ್ಣವಾಗಿ ಕ್ಯಾನ್ಸರ್ ನಿಂದ ಗುಣಮುಖವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ಕ್ಯಾನ್ಸರ್ ಸೆಂಟರ್ ನವರು ಬಹಳ ಚೆನ್ನಾಗಿ ನನ್ನನ್ನು ಆರೈಕೆ ಮಾಡಿದರು. ಅವರಿಗೆ ಧನ್ಯವಾದಗಳು ಇದು ಸಣ್ಣ ಆಪರೇಷನ್ ಅಲ್ಲ, ತಮಾಷೆಯ ಮಾತೇ ಅಲ್ಲ ಯಾಕಂದ್ರೆ ಆಗಿರೋದು ದೊಡ್ಡ ಆಪರೇಷನ್. ಆದರೆ ಯಾರೂ ಆಪರೇಷನ್ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ. ತುಂಬಾ ಸಿಂಪಲ್ ಆಗಿ ಆಪರೇಷನ್ ನಡೆದಿದೆ. ಆಪರೇಷನ್ ಬಗ್ಗೆ ವಿವರವಾಗಿ ಹೇಳಲು ಹೋದರೆ ಎಲ್ಲರೂ ಗಾಬರಿಯಾಗುತ್ತಾರೆ ಎನ್ನುವ ಭಯವಷ್ಟೇ ಎಂದಿದ್ದಾರೆ.
ನಮ್ಮ ಎಲ್ಲ ಹಂತದಲ್ಲೂ ನಮ್ಮೊಂದಿಗೆ ಇದ್ದೀರಿ ಎನ್ನುವುದೇ ಖುಷಿ. ನಿಮ್ಮೆಲ್ಲರ ಆಶೀರ್ವಾದ ನಾನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಐ ವಿಲ್ ಬಿ ಬ್ಯಾಕ್ ಶಿವಣ್ಣ ಮೊದಲು ಹೇಗಿದ್ದನೋ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx