ತುಮಕೂರು: ಬಾಲ್ಯ ವ್ಯವಸ್ಥೆಯಲ್ಲಿ ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಪ್ರಾಥಮಿಕ ಹಂತದಲ್ಲಿ ಕಲಿತ ಕಲಿಕೆ ಅತ್ಯಂತ ಅಮೂಲ್ಯವಾದ ಕಲಿಕೆಯಾಗಿದೆ. ಪಾಠ ಪ್ರವಚನಗಳು ಅರ್ಥವಾಗದಿದ್ದರೆ ನೀವು ನಿಮ್ಮ ಶಿಕ್ಷಕರ ಬಳಿ ಕೇಳಿ ಅಥವಾ ಪ್ರಶ್ನೆ ಮಾಡಿ ನಿಮಗೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಬೇಕು. ಪ್ರಶ್ನೆ ಮಾಡುವುದು ತಪ್ಪಲ್ಲ ಎಂದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ಧಗಂಗಾಮಠದ ಪೀಠಾಧ್ಯಕ್ಷರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.
ನಗರದ ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಸಿದ್ಧಗಂಗಾಮಠದಲ್ಲಿ ನಡೆದ ಮಂಜುನಾಥಗೌಡ ಶಿಕ್ಷಕರು ರಚಿಸಿದ ಪುಸ್ತಕ ಎಫ್.ಎಲ್.ಎನ್. ಓದು ಮತ್ತು ಬರಹ ಎನ್ನುವ ಪುಸ್ತಕ ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳು ಹಾಗೂ ಗಣ್ಯರು ಪುಸ್ತಕ ಲೋಕಾರ್ಪಣೆಯನ್ನು ಮಾಡಿ ಮಾತನಾಡಿದರು.
ಶಿಕ್ಷಕರು ತಂದೆ ತಾಯಿ ಇದ್ದಂತೆ ಅವರ ಪಾಠಗಳನ್ನು ನೀವು ಶ್ರದ್ಧೆಯಿಂದ ಕಲಿತಬೇಕು. ಶಿಕ್ಷಕರು ಯಾವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೆ ಅವರಿಗೆ ಪ್ರೋತ್ಸಾಹ ಮಾಡಿ ಅವರ ಕಲಿಯುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಿ. ಮಂಜುನಾಥ ಗೌಡ ಅವರು ಬರೆದಿರುವ ಎಫ್.ಎಲ್.ಎನ್ ಓದು ಮತ್ತು ಬರಹ ಎನ್ನುವ ಪುಸ್ತಕ ತುಂಬಾ ಉಪಯುಕ್ತವಾಗಿದೆ. ಕಲಿಯುವ ವಿದ್ಯಾರ್ಥಿ ಮತ್ತು ಕಲಿಸುವ ಶಿಕ್ಷಕ ಮನಸುಗಳಿಗಾಗಿ ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈ ವೇಳೆ ಶಿಕ್ಷಣ ಇಲಾಖೆಯ ಸಿ.ಆರ್.ಪಿ ನವೀನ್ ಮಾತನಾಡಿ, ಈ ಪುಸ್ತಕವು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿ ಇಂತ ಕಾರ್ಯಗಳನ್ನು ಮಾಡುತ್ತಿರುವುದು ಸಂತಸ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಪುಸ್ತಕದ ಕರ್ತೃ ಮಂಜುನಾಥ್ ಗೌಡ ಮಾತನಾಡಿ, ನಾನು ಕೂಡ ಶ್ರೀ ಮಠದ ಹಳೆಯ ವಿದ್ಯಾರ್ಥಿ, ಶ್ರೀ ಮಠವು ತ್ರಿವಿಧ ದಾಸೋಹದ ಮೂಲಕ ಶಿಕ್ಷಣವನ್ನು ನೀಡುತ್ತದೆ. ಮುಖ್ಯವಾಗಿ ಅಕ್ಷರ ದಾಸೋಹ ಮಾಡುತ್ತಿದೆ. ತಮ್ಮ ಶ್ರೀ ಮಠದ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠದ ಜೊತೆಗೆ ಇದನ್ನು ಬಳಸಬೇಕು ಬರಹ ಸರಳವಾಗಿ ಅಕ್ಷರಗಳನ್ನು ಹೇಗೆ ಅಭ್ಯಾಸ ಮಾಡಬೇಕು ಎಂದು ತಿಳಿಸುತ್ತದೆ. ಸ್ಪಷ್ಟವಾಗಿ ಉತ್ತಮ ಅಕ್ಷರ ಅಭ್ಯಾಸ ಮಾಡುವ ಕಾಗುಣಿತವನ್ನು ಬರೆಯಲು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಮಹಾರುದ್ರಯ್ಯ ಎಚ್.ಪಿ ವಹಿಸಿದ್ದರು.
ಶ್ರೀ ಸಿದ್ಧಗಂಗಾಮಠದ ಹಳೆಯ ವಿದ್ಯಾರ್ಥಿ ಮಂಜುನಾಥಗೌಡ ಜೆ. ಅವರು ಕನ್ನಡ ಕಲಿಯುತ್ತಿರುವ ಮಕ್ಕಳಿಗಾಗಿ ಎಫ್ ಎಲ್ ಎನ್ ಓದು ಮತ್ತು ಬರಹ ಪುಸ್ತಕವನ್ನು ಶ್ರೀಮಠದ ಹಿತೈಷಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ 1,500 ಪುಸ್ತಕಗಳನ್ನು ಶ್ರೀ ಸಿದ್ಧಗಂಗಾಮಠದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಚ್ ವಸಂತಕುಮಾರ್, ಮಹಾರುದ್ರಯ್ಯ ಎಚ್.ಪಿ., ಟಿ.ಎಸ್. ರಮೇಶ್, ಶಿಕ್ಷಣ ಇಲಾಖೆ ಸಿ.ಸಿ.ಇ ಶ್ರೀನಿವಾಸ ಮೂರ್ತಿ, ಗುಂಡಪ್ಪ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು, ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
