ಗುಬ್ಬಿ: ತೋಟದಲ್ಲಿ ಅಮಲು ಭರಿಸುವ ಗಾಂಜಾ ಗಿಡಗಳನ್ನು ಗೊಬ್ಬರ ಹಾಕಿ ಸೊಗಸಾಗಿ ಬೆಳೆಸಿದ್ದ ಖಚಿತ ಮಾಹಿತಿ ಮೇರೆಗೆ ಚೇಳೂರು ಪೊಲೀಸರು ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ದಾಳಿ ನಡೆಸಿ ಅಗಸೆ ಗಿಡಗಳ ನಡುವೆ ಬೆಳೆದಿದ್ದ 8 ಅಡಿ ಉದ್ದದ ಗಾಂಜಾ ಗಿಡ ಅಂದಾಜು 950 ಗ್ರಾಂ ತೂಕದ ಗಾಂಜಾ ಸೊಪ್ಪು ಸೇರಿದಂತೆ ತೋಟದ ಮಾಲೀಕ ಪೊಲೀಸಪ್ಪನ ಮಗನನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.
ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಹಟ್ಟಿ ಗ್ರಾಮದ ಪೊಲೀಸರೊಬ್ಬರ ಮಗ ಹಿತೇಂದ್ರ ಎಂಬ ವ್ಯಕ್ತಿ ಪ್ರಸ್ತುತ ಪೊಲೀಸರ ಅತಿಥಿಯಾಗಿರುವ ಯುವಕ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚೇಳೂರು ಪೊಲೀಸ್ ಠಾಣೆಯಲ್ಲಿ ಗಾಂಜಾ ಕೇಸಿನಲ್ಲಿ ಪ್ರಕರಣ ದಾಖಲಾಗಿರುವುದು ಒಂದಡೆಯಾದರೆ, ಅದೇ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ಮಗ ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿ ಎಂಬುದು ಅಚ್ಚರಿ ತಂದಿದೆ. ಅವರದ್ದೇ ತೋಟದಲ್ಲಿ ಸುಮಾರು 8 ಅಡಿ ಉದ್ದದ ಸೊಂಪಾದ ಗಾಂಜಾ ಗಿಡವನ್ನು ಬಹಳ ದಿನಗಳಿಂದ ಗೊಬ್ಬರ ನೀರು ಹಾಕಿ ಆರೈಕೆ ಮಾಡಿದ್ದ ಹಿತೇಂದ್ರ, ಓರ್ವ ಪೊಲೀಸ್ ಸಿಬ್ಬಂದಿ ಮಗನಾಗಿ ಯಾವ ಕಾರಣಕ್ಕಾಗಿ ಬೆಳೆಸಿದ್ದ ಎಂಬ ವಿಚಾರ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
ವಿಷಯ ತಿಳಿದ ಕೂಡಲೇ ಗುಬ್ಬಿ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ಚೇಳೂರು ಪಿಎಸ್ಐ ಮಾಳಪ್ಪ.ಎನ್ ದಾಳಿ ನಡೆಸಿದ್ದರು. 8 ಅಡಿ ಉದ್ದದ ಒಂದೇ ಗಿಡದ ಪೈಕಿ 950 ಗ್ರಾಂ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಗುಬ್ಬಿ ಪೊಲೀಸರು ತೋಟಕ್ಕೆ ನೀರುಣಿಸುವ ಕೆಲಸ ಮಾಡುತ್ತಿದ್ದ ಮಹೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ತೋಟದ ಮಾಲೀಕ ಪೊಲೀಸಪ್ಪನ ಮಗ ಹಿತೇಂದ್ರನದು ಈ ಕೃತ್ಯ ಎಂದು ತಿಳಿದು ಬಂದಿದೆ. ಆಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ನಾನು ಧಾರ್ಮಿಕ ಆಚರಣೆಗೆ ಬೆಳೆಸಿದ್ದೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
