Author: admin

ತಿಪಟೂರು: ತಾಲ್ಲೂಕಿನ ಕೋಟನಾಯಕನಹಳ್ಳಿ ಹತ್ತಿರದ ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಕೋಟನಾಯಕನಹಳ್ಳಿ, ಮಡೆನೂರು ಹಾಗೂ ಸಿದ್ದಾಪುರದ ಬಳಿ ರಸ್ತೆಗಳು ಜಲಾವೃತವಾಗಿದ್ದವು. ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲಸಗಳು ಅಮೆಗತಿಯಲ್ಲಿ ಸಾಗುತ್ತಿವೆ. ಇದರಿಂದ ಎಲ್ಲ ವಾಹನಗಳು ಸರ್ವೀಸ್ ರಸ್ತೆ ಮುಖಾಂತರ ಚಲಿಸಬೇಕಿದೆ. ಈ ರಸ್ತೆಯಲ್ಲೂ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಕೆಎಸ್‌ ಆರ್‌ ಟಿಸಿ ಬಸ್, ಆಟೊ ನೀರಿನಿಂದ ಆವೃತವಾಗಿದ್ದ ರಸ್ತೆಯಲ್ಲಿ ಸಾಗಿದವು. ಕೆಲ ವಾಹನಗಳು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ದೃಶ್ಯಗಳು ಕಂಡು ಬಂದವು. ಕೆಳ ಸೇತುವೆ ಅವೈಜ್ಞಾನಿಕ ಕಾಮಕಾರಿಗಳಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆಯಾಯಿತು. ಪ್ರತಿ ಸಾರಿ ಮಳೆ ಬಂದಾಗಲೂ ಈ ಸಮಸ್ಯೆ ಪುನರಾವರ್ತನೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ಇದ್ದಾರೆ ಎಂಬುವುದು ಸ್ಥಳೀಯರ ಆರೋಪ. ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ, ವೈಜ್ಞಾನಿಕವಾಗಿಯೂ ಇಲ್ಲ. ಮಳೆ ಬಂದರೆ ರಸ್ತೆ ನದಿಯಂತಾಗುತ್ತದೆ. ಅಗತ್ಯ ಮುಂಜಾಗ್ರತಾ…

Read More

ಬಂತೋ.. ಬಂತೋ.. ದೀಪಾವಳಿ ಬಂತೋ.. ತಂತೋ.. ತಂತೋ.. ಸಡಗರ ತಂತೋ.. ಸಿರಿ ತಂದಿತಪ್ಪ ಈ ಬೆಳಕಿನ ಹಬ್ಬ ಸಂತಸದ ರೂಪ ಈ ದೀಪಾವಳಿ ಹಬ್ಬ ಮನೆಯ ಅಂಗಳದಿ ಬಣ್ಣದ ರಂಗೋಲಿ ಮನೆಯ ಬಾಗಿಲು ಮಾವಿನ ತೋರಣ ಸಾಲು ಸಾಲು ಹಣತೆಯ ದೀಪ ಅಂಗಳ ತುಂಬಿ ಬೆಳಗಿತೇ ದೀಪ ಊರ ತುಂಬೇಲ್ಲಾ ಹೊಸತು ನೋಡಾ ನಾಡಿನ ಜನದ ಹಿಗ್ಗು ನೋಡಾ ಹಬ್ಬದ ಸಿರಿಗೆ ತುಪ್ಪದ ಘಮ ಘಮ ಹಸಿರಿನ ಗರಿಗೆ ಸಂಭ್ರಮದ ಸಮ ಸಮ ಹರಿಯುವ ನೀರಲ್ಲಿ ತಲೆ ಎಣ್ಣೆ ಸ್ನಾನ ನಾರಿಯರ ಮುಡಿ ತುಂಬ ಮಲ್ಲಿಗೆ ತರ ತರಹದ ಪಟಾಕಿ ಬೆಳಕು ಬೀರಿ ಸಿಡಿಯುತ್ತೆ ದೀಪಗಳ ಸಾಲು ಈ ದೀಪಾವಳಿ ಹಬ್ಬ ಸಂತಸದ ರೂಪ ಈ ದೀಪಾವಳಿ ಹಬ್ಬ ವಿ.ಎಂ.ಎಸ್.ಗೋಪಿ,  ಲೇಖಕರು, ಸಾಹಿತಿಗಳು,  ಬೆಂಗಳೂರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ರೈತರ ಬಳಿ ಹಣ ಕೇಳಿರುವ ಆಡಿಯೋ ಆರೋಪದಡಿ ಔರಾದ್‌ ತಾಲ್ಲೂಕಿನ ವಡಗಾಂವ(ದೇ) ಗ್ರಾಮದ ಗ್ರಾಮ ಲೆಕ್ಕಿಗ ನಾಮದೇವ ಮೇತ್ರೆ ಅವರನ್ನು ಅಮಾನತು ಮಾಡಲಾಗಿದೆ. ರೈತರ ವಿವಿಧ ರೀತಿಯ ಕಡತಗಳನ್ನು ಮತ್ತು ಜನನ ಪ್ರಮಾಣ ಪತ್ರಗಳ ಪಂಚನಾಮ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಪತ್ರ ಹಾಗೂ ಲಂಚ ಕೇಳಿರುವ ಆಡಿಯೋ ವೈರಲ್‌ ಆದ ಹಿನ್ನೆಲೆ ಶಿಸ್ತು ಪ್ರಾಧಿಕಾರ ಹಾಗೂ ಬೀದರ್‌ ಸಹಾಯಕ ಆಯುಕ್ತ ಎಂ.ಡಿ.ಶಕೀಲ್‌ ಅಮಾನತು ಮಾಡಿ ಆದೇಶಿಸಿದ್ದಾರೆ. ಸದರಿ ನೌಕರರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಲಿಖಿತ ಸಮಜಾಯಿಸಿ ಉತ್ತರ ನೀಡಿದ ನೌಕರ ʼನನ್ನ ಕರ್ತವ್ಯದಲ್ಲಿ ಯಾವುದೇ ವಿಳಂಬ ಮಾಡಿರುವುದಿಲ್ಲ, ಯಾರ ಬಳಿಯೂ ಹಣ ಕೇಳಿಲ್ಲʼ ಎಂದು ಉತ್ತರಿಸಿದರು. ಗ್ರಾಮಸ್ಥರು ನೀಡಿದ ದೂರಿನ್ವಯ ಔರಾದ್‌ ತಹಸೀಲ್ದಾರ್‌ ಅವರು ಸದರಿ ನೌಕರ ವಿರುದ್ಧ ಸಿಸಿಎ ನಿಯಮಾವಳಿ ಪ್ರಕಾರ ಶಿಸ್ತು ಕ್ರಮಕೈಗೊಳ್ಳಲು ಸಲ್ಲಿಸಿದ ಪ್ರಸ್ತಾವನೆ ವರದಿ ಆಧರಿಸಿ ಅಮಾನತು ಮಾಡಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 98ರ ಅನುಸಾರ ಸದರಿ ಸಿಬ್ಬಂದಿಯವರು…

Read More

ತುಮಕೂರು: ತಾಲ್ಲೂಕಿನ ನೆಲಹಾಳ್ ಬಳಿ ಸೋಮವಾರ ಬೆಳಗಿನ ಜಾವ ಕಾರು ಹಳ್ಳಕ್ಕೆ ಉರುಳಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೃಷ್ಣ (33) ಮೃತರು. ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕೃಷ್ಣ, ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಬೆಳಗಿನ ಜಾವ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಹಳ್ಳಕ್ಕೆ ಉರುಳಿದೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಹಿರಿಯರು ಕಿರಿಯರೆನ್ನದೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿಕೊಳ್ಳುವವರೇ ಹೆಚ್ಚು. ತಾಲೂಕಿನ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಜನರು ಪಟಾಕಿ ಖರೀದಿಗೆ ಕಡಿಮೆಯಾಗಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿ ಒಂದೇ ಕಡೆಗಳಲ್ಲಿ ಮಾತ್ರ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಪಟ್ಟಣದ ಆಶ್ರಯ ಬಡಾವಣೆ ಬಳಿ ಕಬಿನಿ ನಿರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ನಿರ್ಮಿಸಲು ಸ್ಥಳ ನಿಗದಿ ಮಾಡಿದ್ದು, ಈಗಾಗಲೇ ಹಲವು ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಸ್ಥಾಪಿಸಲಾಗಿದೆ. ಈ ಅಂಗಡಿಗಳಲ್ಲಿ ಭಾನುವಾರ ಮತ್ತು ಸೋಮವಾರ ಸಂಜೆಯ ವೇಳೆ ಖರೀದಿ ಜೋರಾಗಿತ್ತು. ಈ ಬಾರಿ ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ತುಸು ಜಾಸ್ತಿಯಾಗಿದೆ. ಆದರೂ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸದಿರಲು ಸಾಧ್ಯವಿಲ್ಲ. ಅಂಗಡಿಯಿಂದ ಮಕ್ಕಳಿಗೆ ಬೇಕಾದ  ಪಟಾಕಿ ಅಂಗಡಿಗೆ ಖರೀದಿಗೆ ಬಂದಿದ್ದ ಗ್ರಾಹಕ ಅಣ್ಣಯ್ಯ ಸ್ವಾಮಿ ತಿಳಿಸಿದರು. ಆಶ್ರಯ ಬಡಾವಣೆ ಬಳಿ  10 ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಂಗಳವಾರ ಮತ್ತು…

Read More

ಸರಗೂರು:  ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಮತ್ತೊಂದು ಹುಲಿಯ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಸೋಮವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ, ಹುಲಿ ಕುರುಹು ಪತ್ತೆಯಾಗಿಲ್ಲ. ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ ಹಿಡಿದ ಬೆನ್ನಲೇ ಶನಿವಾರ ರಾತ್ರಿ ಮತ್ತೊಂದು ಹುಲಿ ಶಬ್ದ ಗ್ರಾಮಸ್ಥರಿಗೆ ಕೇಳಿತ್ತು. ವಿಷಯವನ್ನು ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಾಗ ಶನಿವಾರ ತಡರಾತ್ರಿ ಮೂರು ಗಂಟೆವರೆಗೂ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಶಬ್ಧವಾಗಲೀ, ಹುಲಿ ಇರುವ ಕುರುಹು ಆಗಲೀ ಸಿಗಲಿಲ್ಲ. ತಡರಾತ್ರಿ ನಾಲ್ಕು ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿ, ಸೋಮವಾರ ಬೆಳಗ್ಗೆಯಿಂದಲೇ ಮೂರು ಸಾಕಾನೆಗಳಾದ ಭೀಮ, ಮಹೇಂದ್ರ, ಭಗೀರಥ ಆನೆಗಳನ್ನು ಬಳಸಿಕೊಂಡಿ ಗ್ರಾಮದ ಜಮೀನು, ಕೆರೆ ಸೇರಿದಂತೆ ಅರಣ್ಯದಂಚಿನಲ್ಲಿ ಕೂಂಬಿಂಗ್ ನಡೆಸಿದರು. ನುಗು ವನ್ಯಜೀವಿ ವಲಯ, ಬೇಗೂರು, ಹೆಡಿಯಾಲ, ಗುಂಡ್ರೆ, ಐನೂರು ಮಾರಿಗುಡಿ ವಲಯದಿಂದ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಗಳು ತಂಡ ರಚಿಸಿಕೊಂಡು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಡೆಸಿದರು. ಭಾನುವಾರ ರಾತ್ರಿಯೂ 8…

Read More

ಕೊರಟಗೆರೆ : ಮಾವತ್ತೂರು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಧೋರಣೆ ಹಾಗೂ ರೈತರ  ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬೇಸತ್ತು 6 ಜನ ನಿರ್ದೇಶಕರು ರಾಜೀನಾಮೆ ನೀಡಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ಮಾವತ್ತೂರು ಗ್ರಾಮದಲ್ಲಿರುವ ವಿಎಸ್‌ ಎಸ್‌ ಎನ್ ಸಂಘದಲ್ಲಿ ಒಟ್ಟು 14 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. 2024 ರಿಂದ ಈಗಿನ ಕಮಿಟಿ ಅಸ್ತಿತ್ವಕ್ಕೆ ಬಂದಿದ್ದು, ರೈತರಿಗೆ 2019ರಲ್ಲಿ ಕೆಸಿಸಿ ಸಾಲ ಹೊರೆತು ಪಡಿಸಿದರೆ ಇಲ್ಲಿಯವರೆಗೂ ಬೇರೆ ಯಾವುದೇ ಸಾಲ ಸೌಲಭ್ಯ ಗೋಬ್ಬರು, ವಾಹನ ಸಾಲ, ಬೀದಿಬದಿಯ ವ್ಯಾಪಾರಸ್ಥರಿಗೆ ಸಾಲವನ್ನ ನೀಡಿಲ್ಲ. ಈಗಿನ ಹಾಲಿ ಅಧ್ಯಕ್ಷರು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಬಗ್ಗೆ ಮಾತಾಡಿದ ಪರಿಣಾಮ ಹಾಗೂ ಅವರ ಧೋರಣೆಯಿಂದಾಗಿ ಗ್ರಾಮೀಣ ಭಾಗದ ರೈತರಿಗೆ ನೀಡಬೇಕಾದ ಸೌಲಭ್ಯವನ್ನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಾಜಿನಾಮೆ ನೀಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಅ.13ರಂದು ಮಂಜುನಾಥ್, ನವೀನ್‌ ಕುಮಾರ್, ಭಾಗ್ಯಸಿದ್ದಲಿಂಗಯ್ಯ, ಪಾರ್ವತಮ್ಮ 4 ಜನ ನಿರ್ದೇಶಕರು ರಾಜಿನಾಮೆ ಸಲ್ಲಿಸಿದ್ದಾರೆ. ಅ.14…

Read More

ತುರುವೇಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದಲ್ಲಿ ಗಣವೇಷಧಾರಿಗಳ ಪಥಸಂಚಲನ ನಡೆಯಿತು. ಪಟ್ಟಣದ ಉಡಸಲಮ್ಮ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ತಾಲ್ಲೂಕಿನ ಸಾವಿರಾರು ಗಣವೇಷಧಾರಿಗಳು ಭಾರತಾಂಬೆ ಫೋಟೊಗೆ ಪೂಜೆ. ಧ್ವಜವಂದನೆ ಸಲ್ಲಿಸಿದರು. ನಂತರ ಪಥಸಂಚಲನ ಆರಂಭಿಸಿದರು. ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಪಥಸಂಚಲನ ಸಂತೆ ಮೈದಾನದಿಂದ ಬಾಣಸಂದ್ರ ರಸ್ತೆ, ಎಸ್‌.ಬಿ.ಎಂ ಬ್ಯಾಂಕ್ ರಸ್ತೆ, ತಿಪಟೂರು ರಸ್ತೆ ಮೂಲಕ ಸಾಗಿ ಉಡಸಲಮ್ಮದೇವಿ ಅವರಣದಲ್ಲಿ ಮುಕ್ತಾಯವಾಯಿತು. ಗಣವೇಷಧಾರಿಗಳಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಶಾಸಕ ಮಸಾಲ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತಿಪಟೂರು: ಸಮಾಜದಲ್ಲಿನ ಸಾಮರಸ್ಯ ಹಾಗೂ ಸೌಹಾರ್ದದ ಕೊರತೆಯಿಂದ ರಾಜ್ಯದಲ್ಲಿ ವೀರಶೈವ ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ನಡೆದರೆ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಬಾಳೆಹೊನ್ನೂರು ರಂಬಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮದ ಆದರ್ಶಗಳನ್ನು ತಿಳಿದು ಸಮಾಜ ಕಟ್ಟುವ ಕೆಲಸವಾಗಬೇಕು. ಸಮುದಾಯದ ಜನ ಒಗ್ಗೂಡಿ ಗಟ್ಟಿ ಹೆಜ್ಜೆ ಇಡಬೇಕು. ಸ್ವಾಭಿಮಾನ, ಸಂಘಟನೆಯ ವೈಫಲ್ಯದಿಂದಾಗಿ ಸಮಾಜ ಛಿದ್ರವಾಗುತ್ತಿದೆ. ಸಂಘಟನೆಗೆ ಅಸಾಧ್ಯವಾದದ್ದನ್ನು ಸಾಧ್ಯಮಾಡುವ ಶಕ್ತಿಯಿದೆ ಎಂದು ಹೇಳಿದರು. ಇಂದು ಬಸವಣ್ಣನ ಹೆಸರು ಹೇಳುವವರು ವೀರಶೈವ, ಲಿಂಗಾಯತ ಬೇರೆ ಎಂದು ಹೇಳಿ ದ್ವಂದ್ವ ಹುಟ್ಟು ಹಾಕಿ, ಕಲುಷಿತ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ…

Read More

ತುಮಕೂರು: ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯ ಬಾಲಕರ ಮತ್ತು ಬಾಲಕಿಯರ ವಿಭಾಗಗಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಶ್ರಯದಲ್ಲಿ ನಡೆದ ಎರಡು ದಿನಗಳ ಟೂರ್ನಿಯಲ್ಲಿ 30 ಜಿಲ್ಲೆಗಳಿಂದ ಒಟ್ಟು 66 ತಂಡಗಳು ಭಾಗವಹಿಸಿದ್ದವು.  ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36–26 ಅಂಕಗಳಿಂದ ವಿಜಯಪುರ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ವಿಜಯಪುರ ರನ್ನರ್ಸ್ ಅಪ್ ಆಯಿತು. ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ಮತ್ತು ದಕ್ಷಿಣ ಕನ್ನಡ ತಂಡಗಳ ಮಧ್ಯೆ ಪ್ರಶಸ್ತಿಗೆ ಪೈಪೋಟಿ ಏರ್ಪಟ್ಟಿತ್ತು. ರೋಚಕವಾಗಿದ್ದ ಈ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ದಕ್ಷಿಣ ಕನ್ನಡದ ಬಾಲಕಿಯರು 46– 44ರಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಸಂಭ್ರಮಿಸಿದರು. ಬಾಲಕರಲ್ಲಿ ಉತ್ತಮ ರೇಡರ್ ಸಂದೀಪ್ (ವಿಜಯಪುರ), ಉತ್ತಮ ಡಿಫೆಂಡರ್ ಆನಂದ್‌ (ದಕ್ಷಿಣ ಕನ್ನಡ), ಉತ್ತಮ ಆಲ್‌ ರೌಂಡರ್ ಸಯೀಮ್ (ಉಡುಪಿ), ಬಾಲಕಿಯರಲ್ಲಿ…

Read More