Subscribe to Updates
Get the latest creative news from FooBar about art, design and business.
- “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು
- 26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!
- ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!
- ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು
- ಸಿರಾ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬ್ಲಾಕ್ ಕಾಂಗ್ರೆಸ್ ಒತ್ತಾಯ
- ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
- ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
- ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
Author: admin
ಶಿರಾ: ಪ್ರಧಾನ ಮಂತ್ರಿ ಕುಸುಮ್ (PM-KUSUM) ಯೋಜನೆಯಡಿ ತಮ್ಮ ಪಾಲಿನ ವಂತಿಗೆ ಹಣ ಪಾವತಿಸಿ ವರ್ಷಗಳೇ ಕಳೆದರೂ ರೈತರಿಗೆ ಸೌರ ವಿದ್ಯುತ್ ಸಂಪರ್ಕ ನೀಡದೆ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಶಿರಾದಲ್ಲಿ ಸುಮಾರು 134 ರೈತರು ಸೌರ ವಿದ್ಯುತ್ ಪಂಪ್‌ಸೆಟ್‌ಗಳಿಗಾಗಿ (5 ರಿಂದ 12 HP ವರೆಗೆ) ಸಾಲ ಮಾಡಿ ಹಣ ಪಾವತಿಸಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಬೇಕಿದ್ದರೂ, ಇದುವರೆಗೂ ಒಬ್ಬ ರೈತನಿಗೂ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಕೆಆರ್‌ಇಡಿಎಲ್ (KREDL) ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 10 ಕಂಪನಿಗಳಿಗೆ ಒಟ್ಟು ₹1.77 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ಆದರೂ ಕಾಮಗಾರಿಗಳು ಪ್ರಾರಂಭವಾಗದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಮಳೆಯಿಲ್ಲದೆ ಕೆರೆ–ಕುಂಟೆಗಳು ಬತ್ತುತ್ತಿವೆ, ಮತ್ತೊಂದೆಡೆ ಕೊಳವೆಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಇಲ್ಲದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮುಡಿಮಡು ರಂಗಶ್ವಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಅಧಿಕಾರಿಗಳು ರೈತರ ಬದುಕಿನ…
ಯಾದಗಿರಿ: ಅತ್ತೆ–ಸೊಸೆಯ ಸಂಬಂಧ ಎಂದರೆ ಜಗಳ, ಭಿನ್ನಾಭಿಪ್ರಾಯಗಳೇ ಹೆಚ್ಚು ಎಂಬ ಸಮಾಜದ ಸಾಮಾನ್ಯ ಕಲ್ಪನೆಯನ್ನು ಸುಳ್ಳು ಮಾಡಿರುವ ಅಪರೂಪದ ಘಟನೆಯೊಂದು ಯಾದಗಿರಿಯಲ್ಲಿ ನಡೆದಿದೆ. ಸಾವಿನ ದವಡೆಯಲ್ಲಿದ್ದ ತನ್ನ ಸೊಸೆಗೆ ಅತ್ತೆಯೊಬ್ಬರು ತಮ್ಮ ಕಿಡ್ನಿ (ಮೂತ್ರಪಿಂಡ) ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾಂತಾಬಾಯಿ ಎಂಬುವವರ ಸೊಸೆ ಕಳೆದ ಕೆಲವು ಸಮಯದಿಂದ ಎರಡು ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದರು. ವೈದ್ಯರು ತುರ್ತಾಗಿ ಕಿಡ್ನಿ ಕಸಿ ಮಾಡಬೇಕೆಂದು ಸೂಚಿಸಿದ್ದರು. ಆದರೆ ಸೂಕ್ತ ದಾನಿಗಳು ಸಿಗದೆ ಕುಟುಂಬದವರು ಆತಂಕದಲ್ಲಿದ್ದರು. ಈ ಸಂದರ್ಭದಲ್ಲಿ ಸ್ವತಃ ಅತ್ತೆಯೇ ಮುಂದೆ ಬಂದು ತನ್ನ ಕಿಡ್ನಿಯನ್ನು ಸೊಸೆಗೆ ನೀಡಲು ನಿರ್ಧರಿಸಿದರು. ವೈದ್ಯಕೀಯ ಪರೀಕ್ಷೆಗಳ ನಂತರ ಅತ್ತೆಯ ಕಿಡ್ನಿ ಸೊಸೆಗೆ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರಕ್ತಸಂಬಂಧ ಇಲ್ಲದಿದ್ದರೂ ಅತ್ತೆ ತೋರಿಸಿದ ಈ ಔದಾರ್ಯ ಮತ್ತು ಮಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. “ನನ್ನ ಸೊಸೆ ಈ ಮನೆಯ ಮಗಳು, ಆಕೆಯ ಜೀವ ಉಳಿಸುವುದು ನನ್ನ ಕರ್ತವ್ಯ”…
ಬೀದರ್: ಜಿಲ್ಲೆಯಲ್ಲಿ ಗುಡುಗು ಸಹಿತ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಯುವರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 25 ವರ್ಷದ ರಾಹುಲ್ ಭಾಸ್ಕರ್ ಎಂದು ಗುರುತಿಸಲಾಗಿದೆ. ರಾಹುಲ್ ಎಂದಿನಂತೆ ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಜಮೀನಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಹವಾಮಾನ ಬದಲಾಗಿ ಸಿಡಿಲು ಸಹಿತ ಮಳೆ ಆರಂಭವಾಗಿದೆ. ಜಮೀನಿನಲ್ಲಿದ್ದ ರಾಹುಲ್ ಅವರಿಗೆ ನೇರವಾಗಿ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ರಾಹುಲ್ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದರು ಎನ್ನಲಾಗಿದೆ. ಯುವ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ಸೇರಿದಂತೆ ಹಲವೆಡೆ ಇಂದು ಮುಂಜಾನೆ ಮಳೆಯಾದ ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
ಬೆಂಗಳೂರು: ಉದ್ಯೋಗ ಅರಸಿ ಸಿಲಿಕಾನ್ ಸಿಟಿಗೆ ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿದ್ದ ಥಾಯ್ಲೆಂಡ್ ಮೂಲದ ಸಂತ್ರಸ್ತ ಮಹಿಳೆಯನ್ನು ಕೂಡಲೇ ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಥಾಯ್ಲೆಂಡ್ ಮೂಲದ ಜಿರಾಟ್ಜಾಯಾ ಎಂಬ ಮಹಿಳೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆದರೆ, ಇಲ್ಲಿನ ಕೆಲವರು ಆಕೆಯನ್ನು ಪುಸಲಾಯಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದರು. 2026ರ ಫೆಬ್ರವರಿ 3ರಂದು ರಾಮಮೂರ್ತಿನಗರದ ‘ಟ್ರಿನಿಟಿ ಥಾಯ್ ಸ್ಪಾ ವೆಲ್‌ನೆಸ್ ಸೆಂಟರ್’ ಮೇಲೆ ದಾಳಿ ನಡೆಸಿದ್ದ ಪೊಲೀಸರು ಆಕೆಯನ್ನು ರಕ್ಷಿಸಿದ್ದರು. ರಕ್ಷಣೆಗೊಳಗಾದ ಮಹಿಳೆಯನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ವಶಕ್ಕೆ ನೀಡಲಾಗಿತ್ತು. ಆಕೆಯ ವೀಸಾ ಅವಧಿ ಮುಗಿದಿದ್ದರಿಂದ ತುಮಕೂರಿನ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ತನ್ನನ್ನು ಸ್ವದೇಶಕ್ಕೆ ಕಳುಹಿಸಿಕೊಡುವಂತೆ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಅರ್ಜಿದಾರರು ವೇಶ್ಯಾವಾಟಿಕೆ ದಂಧೆಯ ಸಂತ್ರಸ್ತೆಯಾಗಿದ್ದಾರೆ. ಆಕೆ ಬೇರೆ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಬಾಕಿ…
ತುಮಕೂರು: ಬಡವ ಶ್ರೀಮಂತ ಎನ್ನದೆ ಪ್ರತಿಯೊಬ್ಬರೂ ಉತ್ತಮವಾದ ಆರೋಗ್ಯ ಸೇವೆಯನ್ನು ಪಡೆಯುವಂತೆ ನೋಡಿಕೊಳ್ಳುವುದು ಪ್ರತಿ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದ ಹೊರವಲಯದಲ್ಲಿರುವ ಅಗಲಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿನ ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತುಮಕೂರು ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಅತೀ ಹೆಚ್ಚು ವೈದ್ಯರು ಹೊರಬರುತ್ತಿರುವುದು ಭಾರತದಿಂದ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದು ಆರೋಗ್ಯ ಕ್ಷೇತ್ರದ ಮೇಲೆ. ಒಂದು ದೇಶದ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಉತ್ತಮವಾದ ಆರೋಗ್ಯ ಸೇವೆಯನ್ನು ನೀಡುತ್ತಿದ್ದರೆ ಆ ದೇಶ ಆರೋಗ್ಯವಾಗಿರುತ್ತದೆ ಎಂದರು. ವೈದ್ಯರು ಸಮಾಜಕ್ಕೆ ತಮ್ಮಿಂದ ಯಾವ ರೀತಿ ಸೇವೆಯನ್ನು ನೀಡಬೇಕು ಎಂಬುದನ್ನು ಚಿಂತಿಸಬೇಕು. ಇಂದು ಸಾಕಷ್ಟು ವಿದೇಶಿ ನೇರ ಬಂಡವಾಳಗಳು ಹೂಡಿಕೆಯಾಗುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಇದು ಹೆಚ್ಚಾದರೆ ಸಾಮಾನ್ಯ ಬಡ ಜನರಿಗೆ ಉತ್ತಮವಾದ…
ಪಾವಗಡ: ತಾಲ್ಲೂಕಿನ ಕ್ಯಾತಗಾನಕೆರೆ ಗ್ರಾಮದ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ, ಸುಮಾರು 20 ಕುರಿಗಳು ಸಾವನ್ನಪ್ಪಿರುವ ಧಾರುಣ ಘಟನೆ ಸಂಭವಿಸಿದೆ. ಗ್ರಾಮದ ವೆಂಕಟೇಶ್ (ತಂದೆ ನಾರಾಯಣಪ್ಪ) ಅವರಿಗೆ ಸೇರಿದ ಕುರಿಗಳನ್ನು ಎಂದಿನಂತೆ ಜಮೀನಿನಲ್ಲಿ ಕಟ್ಟಿ ಹಾಕಲಾಗಿತ್ತು. ಮಧ್ಯರಾತ್ರಿ ಸುಮಾರು 3:00 ಗಂಟೆಯ ಸುಮಾರಿಗೆ ಏಕಾಏಕಿ ನುಗ್ಗಿದ ನಾಯಿಗಳ ಗುಂಪು ಕುರಿಗಳ ಮೇಲೆ ಭೀಕರ ದಾಳಿ ನಡೆಸಿವೆ. ನಾಯಿಗಳ ಅಟ್ಟಹಾಸಕ್ಕೆ ಸ್ಥಳದಲ್ಲೇ 20 ಕುರಿಗಳು ಪ್ರಾಣ ಬಿಟ್ಟಿವೆ. ಕುಟುಂಬಕ್ಕೆ ಆರ್ಥಿಕ ಪೆಟ್ಟು: ಕುರಿಗಾಹಿ ವೆಂಕಟೇಶ್ ಅವರು ಪಾರ್ಶ್ವವಾಯು (Paralysis) ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯ ಜವಾಬ್ದಾರಿಯನ್ನೆಲ್ಲಾ ಅವರ ಪತ್ನಿಯೇ ಹೊತ್ತುಕೊಂಡಿದ್ದರು. ಕುರಿ ಸಾಕಾಣಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಬಡ ಕುಟುಂಬಕ್ಕೆ, ಈ ದುರ್ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡ ಕುಟುಂಬವು ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಧಿಕಾರಿಗಳ ಭೇಟಿ: ವಿಷಯ ತಿಳಿಯುತ್ತಿದ್ದಂತೆಯೇ ಪಶು ಇಲಾಖೆಯ ಸಹಾಯಕ ನಿರ್ದೇಶಕ…
ತುಮಕೂರು: ವಿಜ್ಞಾನ ಬಿಂದು, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಮ್ಯಾಥ್ ಲ್ಯಾಬ್ ಸಹಯೋಗದಲ್ಲಿ ವಿಜ್ಞಾನ–ಗಣಿತ ಒಲಂಪಿಯಾಡ್, ಮಕ್ಕಳ ಕ್ರಿಯಾತ್ಮಕ–ಸ್ಪರ್ಧಾತ್ಮಕ ಕಲಿಕಾ ಸಾಮರ್ಥ್ಯ, ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಕ್ಕಳು ಬೇಸಿಗೆ ರಜೆ ಸದುಪಯೋಗ ಪಡಿಸಿಕೊಳ್ಳಲು ಏಪ್ರಿಲ್ 1ರಿಂದ ಮೇ 30ರವರೆಗೆ ಪ್ರತಿದಿನ ಸಂಜೆ 4ರಿಂದ 8ಗಂಟೆವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. ಶಾಲೆಯಲ್ಲಿ ಕಷ್ಟ ಅನಿಸುವ ಗಣಿತ, ವಿಜ್ಞಾನ, ಭಾಷೆ, ಸಮಾಜ ವಿಜ್ಞಾನ ವಿಷಯಗಳನ್ನು ಸರಳ–ಸುಲಭ–ಪ್ರಾಯೋಗಿಕವಾಗಿ ಕಲಿಸಿ, ನೈಜ ತರಗತಿಗಿಂತ 2-3 ವರ್ಷ ಮುಂದಿನ ಕಲಿಕೆಯಲ್ಲಿ ಪರಿಣತಿ ಉಂಟು ಮಾಡಲಾಗುವುದು. ಕಲಿಕೆಯನ್ನು ತರಗತಿ–ಪಠ್ಯ–ಪರೀಕ್ಷೆ–ಅಂಕಗಳಿಗೆ ಸೀಮಿತ ಮಾಡದೇ ನಿತ್ಯದ ಬದುಕಿನಲ್ಲಿ ಸಮೀಕರಿಸಲು ತರಬೇತಿ ನೀಡಲಾಗುವುದು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯುಗದಲ್ಲಿ ಬದುಕಬೇಕಿರುವ ಪೀಳಿಗೆಯಲ್ಲಿ ಗಣಿತ, ಭಾಷಾ ಸಂವಹನ, ಜೀವನ ಕೌಶಲ್ಯಗಳನ್ನು ಪರಿಚಯಿಸಲಾಗುವುದು. ಕನ್ನಡ/ಆಂಗ್ಲ ಮಾಧ್ಯಮದ ರಾಜ್ಯ/ಸಿಬಿಎಸ್ ಇ/ಐಸಿಎಸ್ ಇ ಪಠ್ಯಕ್ರಮ ಓದುತ್ತಿರುವ 2ರಿಂದ 10ನೇ ತರಗತಿ ವಿದ್ಯಾರ್ಥಿಗಳು ಆಸಕ್ತಿಯ ವಿಷಯಗಳಲ್ಲಿ ತರಬೇತಿ ಪಡೆಯಬಹುದು.…
ತುಮಕೂರು: ರಾಜ್ಯ ಸರ್ಕಾರ ಮಾ.27 ರಂದು ಸಚಿವ ಸಂಪುಟದ ಸಭೆ ನಡೆಸಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ, ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನೆಪದಲ್ಲಿ ಸಭೆಯನ್ನು ಮುಂದೂಡುವ ಮೂಲಕ ಮಾದಿಗ ಸಮುದಾಯದ ತಾಳ್ಮೆ ಪರೀಕ್ಷಿಸುತ್ತಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತೋರಿಸಿರುವ ನಿರ್ಲಕ್ಷ್ಯವನ್ನು ಖಂಡಿಸಿ, ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಶನಿವಾರ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ಅಧ್ಯಕ್ಷತೆಯನ್ನು ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ತಾವೇ ಬೊಕ್ಕಸದಿಂದ ನೂರಾರು ಕೋಟಿ ರೂ ಖರ್ಚು ಮಾಡಿ ಪಡೆದ ನ್ಯಾ.ನಾಗಮೋಹನದಾಸ್ ವರದಿಗೂ ಸರ್ಕಾರಕ್ಕೆ ನಂಬಿಕೆ ಇಲ್ಲದಂತಾಗಿದೆ. ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಅಂಗೀಕಾರವಾಗಿ, ರಾಜ್ಯಪಾಲರ ಅಂಕಿತ ಬಿದ್ದರೂ ಒಳಮೀಸಲಾತಿ ಜಾರಿಗೆ ಕಂಟಕ ತಪ್ಪಿಲ್ಲ. ಹಾಗಾಗಿ ರಾಜ್ಯ…
ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಭಗವಾನ್ ಮಹಾವೀರ ಜಯಂತಿಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಶಿವಾನಂದ್ ಜಾಜಿ ಅವರು, “ಮಹಾವೀರರು ಜಗತ್ತಿಗೆ ಅಹಿಂಸೆ, ಸತ್ಯ ಮತ್ತು ತ್ಯಾಗದ ಶ್ರೇಷ್ಠ ಮಾರ್ಗವನ್ನು ತೋರಿಕೊಟ್ಟಿದ್ದಾರೆ. ಅವರ ತತ್ವಗಳು ಮತ್ತು ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಇಡೀ ಮಾನವಕುಲಕ್ಕೆ ಸದಾ ಬೆಳಕಾಗಿರಲಿ. ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳು ವೃದ್ಧಿಯಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ,” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಗುರು ಅಂಕಲಗಿ, ಸುಕೇಶನಿ, ಪ್ರಿಯಾಂಕ, ಅಂಬಿಕಾ, ಶ್ರೀಕಾಂತ್, ಆಕಾಶ್, ಕಿರಣ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ವೈ.ಎನ್.ಹೊಸಕೋಟೆ: ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಸಹ ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಧ್ವಜದ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಸೂರ್ಯಾಸ್ತದ ನಂತರವೂ ಧ್ವಜವನ್ನು ಇಳಿಸದೆ ಹಾಗೆಯೇ ಬಿಡುವ ಮೂಲಕ ಸಿಬ್ಬಂದಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದಾರೆ. ರಾಜ್ಯದ ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪ್ರತಿದಿನ ರಾಷ್ಟ್ರಧ್ವಜಾರೋಹಣ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಭಾರತೀಯ ಧ್ವಜ ಸಂಹಿತೆ–2002ರ ಪ್ರಕಾರ, ಧ್ವಜವನ್ನು ಸೂರ್ಯೋದಯದ ನಂತರ ಹಾರಿಸಿ, ಸೂರ್ಯಾಸ್ತಕ್ಕೂ ಮುನ್ನ ಗೌರವಪೂರ್ವಕವಾಗಿ ಇಳಿಸಬೇಕು. ಆದರೆ ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಮಧ್ಯರಾತ್ರಿಯಲ್ಲೂ ಹಾರಾಡುತ್ತಿದ್ದ ಧ್ವಜ: ಶುಕ್ರವಾರ ಮಧ್ಯರಾತ್ರಿ ಸಮಯದಲ್ಲಿ ಧ್ವಜವು ಸ್ತಂಭದಲ್ಲೇ ಇರುವುದನ್ನು ಗಮನಿಸಿದ ಸಾರ್ವಜನಿಕರು ಫೋಟೋ ತೆಗೆದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮರುಕಳಿಸುತ್ತಿರುವ ಘಟನೆ: ಈ ಹಿಂದೆಯೂ ಇಂತಹದ್ದೇ ಘಟನೆ ನಡೆದಾಗ ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಸಿಬ್ಬಂದಿಗಳ ಬೇಜವಾಬ್ದಾರಿತನ ಮುಂದುವರಿದಿರುವುದು ಎದ್ದು ಕಾಣುತ್ತಿದೆ. ಈ ಗಂಭೀರ ನಿಯಮ ಉಲ್ಲಂಘನೆಯ…