ಗುಬ್ಬಿ: ಬಸವ ಜಯಂತಿ ಆಚರಣಾ ಸಮಿತಿ, ತಾಲ್ಲೂಕು ಘಟಕ ಗುಬ್ಬಿ ಇವರ ವತಿಯಿಂದ ಮೇ 25 ರಂದು ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನ, ಹೇರೂರು ಇಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಇದರ ಅಂಗವಾಗಿ ಬೆಳಗ್ಗೆ 8.30 ರಿಂದ 7.30ರವರೆಗೆ ಇಷ್ಟಲಿಂಗಪೂಜೆ, 9.30 ಗಂಟೆಗೆ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ನಂದಿಧ್ವಜ, ಲಿಂಗದವೀರರ ಕುಣಿತ, ಕರಡಿ ಮೇಳ ಮತ್ತು ವಾದ್ಯ ಮೇಳದೊಂದಿಗೆ ಗುಬ್ಬಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಹೊರಟು ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನ, ಹೇರೂರು ಇಲ್ಲಿ ತಲುಪುವುದು.
ಆನಂತರ ಬೆಳಗ್ಗೆ 11 ಗಂಟೆಗೆ ಸಮುದಾಯ ಭವನದಲ್ಲಿ ಬಸವತತ್ವ ಚಿಂತನಾ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನ ಮಠಾಧೀಶರು, ಮಾತಾಜಿಯವರು ಮತ್ತು ಸಮಾಜದ ಮುಖ್ಯಸ್ಥರು ಭಾಗವಹಿಸುವರು. ಇದೇ ಸಂದರ್ಭದಲ್ಲಿ 2026ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ತಾಲ್ಲೂಕಿನ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ನಂತರ ಚಾಲುಕ್ಯ ಆಸ್ಪತ್ರೆ ಗುಬ್ಬಿ ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


