Author: admin

ಕೊರಟಗೆರೆ:  ತುಂಬಾಡಿ ಕೆರೆಯ ಸೊಬಗು ನೋಡಲು ಹೋದ ತಂದೆ ಮಗಳು ನೀರಿಗೆ ಬಿದ್ದು ಮುಳುಗಿ ಸಾವನ್ನಪ್ಪಿದ ಘಟನೆ ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿಯ ಹೊಸಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಶಿವಾಜಿನಗರದ ಪಿರ್ದೂಷ್(39) ಮತ್ತು ಮಗಳು ಹೈಮಾ(8) ಸಾವನ್ನಪ್ಪಿದವರಾಗಿದ್ದಾರೆ. ಮೃತನ ಮಡದಿ ಸರಿನಾ(28) ಎಂಬಾಕೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ತುಂಬಾಡಿ ಕೆರೆಯ ಸೊಬಗು ನೋಡಲು ಈ ಕುಟುಂಬ ಆಗಮಿಸಿತ್ತು. ಹೊಸಕೆರೆಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಮಗಳು ಹೈಮಾ ಕಾಲು ಜಾರಿ ಹಂದಿಗುಂಡಿಗೆ ಬಿದ್ದಿದ್ದಾಳೆ. ಈ ವೇಳೆ ಆಕೆಯನ್ನು ರಕ್ಷಿಸಲು ಪಿರ್ದೂಷ್ ಹಾರಿದ್ದು, ಪಿರ್ದೂಷ್ ಅವರನ್ನ ರಕ್ಷಿಸಲು ಅವರ ಪತ್ನಿ ಸರಿನಾ ಕೂಡ ಹಾರಿದ್ದಾರೆ. ಇದೇ ವೇಳೆ ತಂದೆ, ತಾಯಿ ಮತ್ತು ತಂಗಿಯ ರಕ್ಷಣೆಗಾಗಿ ಮತ್ತೋರ್ವಳು ಮಗಳು ಕೂಗಿಕೊಂಡಿದ್ದಾಳೆ. ಆಕೆಯ ಕೂಗು ಕೇಳಿ ಸ್ಥಳೀಯ ಗ್ರಾಮಸ್ಥರು ಆಗಮಿಸಿದ್ದು,  ಸರಿನಾ ಅವರನ್ನು ರಕ್ಷಣೆ ಮಾಡಿದ್ದಾರೆ. ಆದರೆ  ಪಿರ್ದೂಷ್(39) ಮತ್ತು ಮಗಳು ಹೈಮಾಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕೊರಟಗೆರೆ ತಹಶೀಲ್ದಾರ್, ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ…

Read More

ತಿಪಟೂರು: ತಾಲೂಕಿನ ಬಿದರೆಗುಡಿ ವಲಯದ ಗೋವಿನಪುರ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸ್ಥಳೀಯ ಮುಖಂಡರಾದ ಮಂಜುನಾಥ್ ರವರು ಯೋಜನಾಧಿಕಾರಿ ಉದಯ್ ಕೆ. ರವರ ಉಪಸ್ಥಿತಿಯಲ್ಲಿ ನೂತನ ಗ್ರಾಹಕ ಕೇಂದ್ರವನ್ನು ಉದ್ಘಾಟಿಸಲಾಯಿತು. ನಂತರ ಮಾತನಾಡಿದ ತಾಲೂಕಿನ ಯೋಜನಾಧಿಕಾರಿಗಳಾದ ಉದಯ ಕೆ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಬಂಧುಗಳಿಗೆ ಉಪಯುಕ್ತವಾಗಲೆಂದು ಯೋಜನೆಯ ವತಿಯಿಂದ ಗ್ರಾಹಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಪಾಸ್ಪೋರ್ಟ್ ನೋಂದಾವಣಿ ಅಭಿಯಾನ ನಡೆಯುತ್ತಿದ್ದು, ಕೇವಲ ಸರಕಾರ ನಿಗದಿಪಡಿಸಿದ ಶುಲ್ಕ ರೂ 1,600/- ಕಡಿಮೆ ಮೊತ್ತದಲ್ಲಿ ಮಾಡಿಸಲಾಗುತ್ತಿದೆ. ಹಾಗೂ ಪಾಲುದಾರ ಬಂಧುಗಳ ಆರ್ಥಿಕ ಬದುಕು ಕಟ್ಟಿಕೊಳ್ಳಲು ಬ್ಯಾಂಕಿನ ಮುಖಾಂತರ ಸಾಲ ಸೌಲಭ್ಯದ ವ್ಯವಸ್ಥೆ, ಹಣ ಮರುಪಾವತಿಯ ಕರ್ತವ್ಯವು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದಲ್ಲದೆ ಪಾಲುದಾರ ಬಂಧುಗಳಿಗೆ ಹಾಗೂ ರೈತಪಿ ವರ್ಗದವರಿಗೆ ಉಪಯುಕ್ತವಾಗಲೆಂದು ಸರ್ಕಾರದ ಕಾರ್ಯಕ್ರಮಗಳಾದ ಆಯುಷ್ಮಾನ್, ಈ ಶ್ರಮ್ , ಸ್ವಉದ್ಯೋಗಕ್ಕೆ ಪೂರಕವಾದ ವಿಶ್ವಕರ್ಮ ಯೋಜನೆ ಹೀಗೆ ಹತ್ತು ಹಲವರು ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ…

Read More

ಹೈದರಾಬಾದ್: ದೇಶದ ಗಡಿಗಳನ್ನು ಸುರಕ್ಷಿತವಾಗಿಸುವಷ್ಟೇ, ದೇಶದ ಸಂಸ್ಕೃತಿಯನ್ನು ಭದ್ರಪಡಿಸುವುದು ಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೋಟಿ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ ಏಕತೆ ದುರ್ಬಲಗೊಂಡಾಗ, ಆಕ್ರಮಣಕಾರರು ನಮ ನಾಗರಿಕತೆ ಮತ್ತು ನಮ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನವನ್ನು ಮಾಡಿದ್ದಾರೆ, ಇತಿಹಾಸದಿಂದ ಕಲಿಯುವ ಮೂಲಕ ಏಕತೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು. ವಿಭಜಿಸುವವರು, ಅವರು ವಿವಿಧ ಧರ್ಮಗಳು, ಜಾತಿಗಳು ಮತ್ತು ಪಂಗಡಗಳು ಸೇರಿದಂತೆ ಹಲವು ರೀತಿಯಲ್ಲಿ ಒಡೆಯಲು ಪ್ರಯತ್ನಿಸುತ್ತಾರೆ ಆದರೆ, ನೀವು ವಿಭಜನೆಯಾಗಬಾರದು, ಇಡೀ ದೇಶ ಒಟ್ಟಿಗೆ ಇರಬೇಕು, ನಾವು ಒಗ್ಗಟ್ಟಿನಿಂದ ಇರಬೇಕು, ನಾವು ವಿಭಜನೆಯನ್ನು ತಪ್ಪಿಸಿದರೆ, ನಾವು ಅಭಿವೃದ್ಧಿಯತ್ತ ಸಾಗುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದರು. ಇದೇ ಏಕತೆಯನ್ನು ಖಾತ್ರಿಪಡಿಸುವ ಮೂಲಕ, ಭಾರತವು ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ಮೂಲಕ ದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿಗೆ ಬೆಳಕು ಹರಡಬೇಕು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆ ಕೇಂದ್ರ ಸರ್ಕಾರ ಭಾನುವಾರ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದು, ನ.24 ರಂದು ಬೆಳಿಗ್ಗೆ ಸಭೆ ಕರೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅಧಿವೇಶನವು ನವೆಂಬರ್ 25 ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 20 ರಂದು ಮುಕ್ತಾಯಗೊಳ್ಳುತ್ತದೆ. ಸಂವಿಧಾನದ ಅಂಗೀಕಾರದ 75 ನೇ ವಾರ್ಷಿಕೋತ್ಸವವನ್ನು ಗುರುತಿಸಲು, ಸಂವಿಧಾನ್ ಸದನದ ಸೆಂಟ್ರಲ್ ಹಾಲ್ ಅಥವಾ ಹಳೆಯ ಸಂಸತ್ತಿನ ಕಟ್ಟಡದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತನ್ನ ಶಾಸಕಾಂಗ ಕಾರ್ಯಸೂಚಿಯ ವಿರೋಧವನ್ನು ತಿಳಿಸಲು ಮತ್ತು ಸಂಸತ್ತಿನಲ್ಲಿ ಯಾವ ಪಕ್ಷಗಳು ಚರ್ಚಿಸಲು ಬಯಸುವ ವಿಷಯಗಳನ್ನು ಚರ್ಚಿಸಲು ಅಧಿವೇಶನಗಳಿಗೆ ಮುಂಚಿತವಾಗಿ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆಯುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮಕ್ಕೆ  ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ ಪೂಜೆ ಸಲ್ಲಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನಗಿರಿಯಿಂದ ಪ್ರಾರಂಭಗೊಂಡು ರಾಜ್ಯದಾದ್ಯಂತ ಸಂಚರಿಸುತ್ತಾ ಕನ್ನಡ ಮಾತೆಯು ನಮ್ಮನ್ನು ಹುಡುಕಿ ಗಡಿನಾಡಿಗೆ ಬಂದಿರುವುದು ಸಂತೋಷದ ವಿಷಯ. ಗಡಿನಾಡಿನ ಜನತೆಯು ರಥ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಕ್ಕೆ ಧನ್ಯವಾದಗಳು ಎಂದರು. ಗ್ರಾಮಕ್ಕೆ ಆಗಮಿಸಿದ ಸಾಹಿತ್ಯ ಸಮ್ಮೇಳನದ ಜನ ಜಾಗೃತಿ ರಥವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು, ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯ ಅಧ್ಯಕ್ಷ ಎ.ಓ.ನಾಗರಾಜು, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆತ್ಮೀಯವಾಗಿ ಬರಮಾಡಿಕೊಂಡರು. ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು,…

Read More

ಪಾವಗಡ: ಶಾಸಕ  ಹೆಚ್.ವಿ.ವೆಂಕಟೇಶ್ ಮತ್ತು ಮಾಜಿ ಸಚಿವ  ವೆಂಕಟರಮಣಪ್ಪ ಶ್ರೀ ಕ್ಷೇತ್ರ ನಾಗಲಮಡಿಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತಾಲ್ಲೂಕಿನ ಒಳಿತಿಗಾಗಿ ಪ್ರಾರ್ಥಿಸಿದರು. ನಂತರ ನಾಗಲಮಡಿಕೆ ಡ್ಯಾಮ್ (ಉತ್ತರ ಪಿನಾಕಿನಿ ನದಿ) ತುಂಬಿರುವ ಹಿನ್ನೆಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಪುರಸಭಾ ಅಧ್ಯಕ್ಷರಾದ ಪಿ. ಹೆಚ್.ರಾಜೇಶ್, ಉಪಾಧ್ಯಕ್ಷರಾದ ಆರ್.ಎ.ಹನುಮಂತರಾಯಪ್ಪ, ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ, ವೆಂಕಟಮ್ಮನಹಳ್ಳಿ ಬತ್ತೀನೇನಿ ನಾನಿ, ನಾಗಲಮಡಿಕೆ ಗ್ರಾ.ಪಂ. ಅಧ್ಯಕ್ಷರಾದ ಪುರುಷೋತ್ತಮ ರೆಡ್ಡಿ, ಸದಸ್ಯರುಗಳಾದ ಎನ್.ರವಿ, ನಾಗಭೂಷಣ್ ರೆಡ್ಡಿ, ಜಯರಾಮ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಮಂಜುನಾಥ್, ಕೆ.ಬಿ.ನಾಗರಾಜ್, ಸರ್ಫುದ್ದಿನ್, ಪೀಕನಾಯ್ಕ್ ,  ತಿಮ್ಮಮ್ಮನಹಳ್ಳಿ ಹನುಮಂತರಾಯಪ್ಪ,  ಸೇರಿ ನೂತನ ನಾಮಿನಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಪ್ರಮುಖ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್​ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​ಕೌಂಟರ್​​ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ. ಈ ಕೂಂಬಿಂಗ್​​ ನಲ್ಲಿ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ಇದ್ದ ಎನ್ನಲಾಗಿದ್ದು, ಗುಂಡಿನ ದಾಳಿಗೆ ಈತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ದಾವಣಗೆರೆ: ಭರತ ಖಂಡದ ಸಂಸ್ಕೃತಿ– ಸಂಸ್ಕಾರದ ಪ್ರತೀಕವಾಗಿರುವ ಜಾನಪದ ಸಂಸ್ಕಾರದ ಮೂಲ ಬೇರಾಗಿರುವ ಜಿನಭಜನೆಯ ಸಂಸ್ಕೃತಿ- -ಸಂಸ್ಕಾರದಿಂದ ಮಕ್ಕಳು ಸುಸಂಸ್ಕೃತರಾಗಲು ಸಹಕಾರಿಯಾಗಲಿದೆ ಎಂದು ಜಿನ ಭಜನೆಯ ಪ್ರಧಾನ ರೂವಾರಿಗಳು, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅವರಿಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಭವನದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ –8, ದಾವಣಗೆರೆ ಜೈನ್ ಮಿಲನ್, ಶ್ರೀ ಆದಿನಾಥ ಜೈನ್ ಮಿಲನ್, ಸಮಸ್ತ ದಿಗಂಬರ ಜೈನ ಸಮಾಜದ, ದಾವಣಗೆರೆ ವಿಭಾಗ ಮಟ್ಟದ ಹಿರಿಯ ಹಾಗೂ ಹಿರಿಯರ ಜಿನಭಜನ ಸ್ಪರ್ಧೆ ಎಂಟನೇ ಆವೃತ್ತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿನ ಭಜನೆ ಸಂಸ್ಕಾರ ನೀಡುವವರು ಯೋಚನೆ –ಯೋಜನೆ ಮಾಡುವುದು ಅಗತ್ಯ, ಇದರಿಂದ ಹಲವಾರು ಕುಟುಂಬಗಳು ಜೂಜು, ಕುಡಿತ ದಂತಹ ದುಶ್ಚಟಗಳನ್ನು ಬಿಟ್ಟು ಶಿಸ್ತು ಬದ್ಧ ಜೀವನ ನಡೆಸುತ್ತಿದ್ದಾರೆ, ಇದಕ್ಕೆ ಹೆಗ್ಗಡೆ ಕುಟುಂಬ ಕಾರಣವಾಗಿದೆ ಎಂದು ಅವರು,…

Read More

ಪ್ರಕೃತಿ ಮಾತೆಯ ಮುಂದೆ ಎಲ್ಲರೂ ಶೂನ್ಯ ಮಳೆಗಾಲದ ಅತಿಥಿ ಯಾರಿಗೆಲ್ಲ ಇಷ್ಟ ಕಂಡ ತಕ್ಷಣ ಬಾಯಲ್ಲಿ ನೀರೂರಿಸುವ ರುಚಿಕರವಾದ ಮಳೆಗಾಲದಲ್ಲಿ ಮಾತ್ರ ಸಿಗುವ ಹುತ್ತದ ಅಣಬೆ ತಿಂದವನೇ ಬಲ್ಲ ಇವುಗಳ ರುಚಿ ಇದಕ್ಕೆ ಹೇಳುವುದು ನಮ್ಮ ಮಲೆನಾಡು ಸ್ವರ್ಗ ಅಂತ ಮಳೆಗಾಲದ ಸ್ನೇಹಿತ ತುಳುನಾಡಿನಲ್ಲಿ ಇದು ಚಿರ ಪರಿಚಿತ ಇದರ ಹೆಸರು ಹೇಳಿ ನೋಡೋಣ. ಒಂದೇ ರಾತ್ರಿಯಲ್ಲಿ ಬೆಳೆದು ನಿಲ್ಲುವ ನಾಯಿ ಕೊಡೆಯಲ್ಲಿ ಹಲವಾರು ತರಾವಳಿಗಳಿದ್ದು ಇದು ನಮ್ಮ ಆಹಾರಕ್ಕೆ ಆಗದಿದ್ದರೂ ನೋಡಲು ಸುಂದರ. ಇದು ಯಾರು ಬೆಳೆಸಿದ್ದು ಅಲ್ಲ ತನ್ನಿಂದ ತಾನೇ ಹುಟ್ಟುತ್ತವೆ. ಇದರಲ್ಲಿ ಎಲ್ಲವೂ ಆಹಾರವಾಗುವುದಿಲ್ಲ ಕೆಲವಷ್ಟೇ ಸೀಮಿತವಾಗಿದೆ ನೋಡಿ ತಿಳಿದು ಬಳಸಬೇಕು ಕೆಲವು ವಿಷಕಾರಿಯೂ ಆಗಿದೆ ಮಶ್ರೂಮ್ ಎಂದು ಅಣಬೆಯನ್ನು ಕರೆಯುತ್ತೇವೆ ಕಲ್ಲಣಬೆ, ನಾಯಿಮಿರಿ ,ಸುರುಳಿ,ನಾಯಿಕೊಡೆ ಹೇಗೆ ಹಲವಾರು ಅಲ್ಲದೆ ಮರ ಅಣಬೆಗಳು ನೆಲದಲ್ಲೂ ಅದ್ಭುತವಾದ ಮಹಿಳೆಯರಂತೆ ನಿಲುವಂಗಿ ಹಾಕಿದ   ಅಣಬೆ, ಇವು ಕೀಟಗಳನ್ನು ಆಕರ್ಷಿಸುತ್ತವೆ ಇದರ ದೇಹ ಬಲೆ ಆಕಾರದಲ್ಲಿರುತ್ತದೆ. ಈಗ  ಇಲ್ಲಿ ಚಿತ್ರಿಸಿದ ಅಣಬೆ…

Read More

ಬೆಂಗಳೂರು: ಸಾಂಕ್ರಾಮಿಕ ರೋಗ ಕೋವಿಡ್– 19 ಮಾರಕ ಕಾಯಿಲೆಯಿಂದ  ಮುಖ್ಯವಾಗಿ ನಮ್ಮ ರಾಜ್ಯದಲ್ಲಿ ಸಾವಿರಾರು ಸಾವುಗಳು ಸಂಭವಿಸಿದ್ದು, ಈ ರೋಗದಿಂದ ರಾಜ್ಯದ ನಾಗರಿಕರು ತತ್ತರಿಸಿ ಜೀವನ್ಮರಣದ ಹೋರಾಟ ನಡೆಸುವ ಸಂದರ್ಭದಲ್ಲಿ  ನಾಗರಿಕರನ್ನು ರಕ್ಷಿಸಲು ಹೊಣೆ ಹೊತ್ತಿರುವ ಗುರುತರ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮುಖ್ಯಮಂತ್ರಿ, ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ಮಾಡಿರುವುದು  ನ್ಯಾಯಮೂರ್ತಿ ಮೈಕೆಲ್ ಡಿ ಕುನ್ನರವರ ನೇತೃತ್ವದ ಆಯೋಗ ವರದಿಯಲ್ಲಿ ಉಲ್ಲೇಖವಾಗಿದ್ದು ನಾಗರೀಕರ ಜೀವದ ಜೊತೆ ಚೆಲ್ಲಾಟವಾಡಿರುವ ಮತ್ತು ಈ ಸಾಂಕ್ರಾಮಿಕ ರೋಗದಿಂದಲೇ ಹಣ ಗಳಿಸುವ ಉದ್ದೇಶದಿಂದ ಹಲವಾರು ಕಂಪನಿಗಳ ಜೊತೆ ಕೈಜೋಡಿಸಿ  ವೈದ್ಯಕೀಯ ಸಾಮಗ್ರಿ, ಉಪಕರಣಗಳನ್ನು ಕೊಂಡುಕೊಳ್ಳಲು ಮಾಡಿರುವ ವ್ಯವಹಾರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನ್ಯಾಯಮೂರ್ತಿ ಮೈಕಲ್ ಡಿ ಕುನ್ನ ಅವರು ತಮ್ಮ  ತನಿಖಾ ವರದಿಯಲ್ಲಿ ಬೆಳಕನ್ನು ಚೆಲ್ಲಿದ್ದಾರೆ. ಈ ವರದಿಯ ಬಗ್ಗೆ ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ  ನೈಜ ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಇಮೇಲ್ ಮೂಲಕ ವಿಶೇಷ ಮನವಿ  ಸಲ್ಲಿಸಿದೆ. ಬಹಳ ಮುಖ್ಯವಾಗಿ ಕೋವಿಡ್ 19…

Read More