Author: admin

ಹಾವೇರಿ: ಜೇನು ಹುಳು ಕಡಿದು ತೀವ್ರ ಗಾಯಗೊಂಡಿದ್ದ ವೃದ್ಧೆಯೊಬ್ಬರು  ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿಗ್ಗಾವಿ ತಾಲ್ಲೂಕಿನ ಸಿಂಗಾಪೂರ ಗ್ರಾಮದಲ್ಲಿ ನಡೆದಿದೆ. ನಿಂಗವ್ವ ಯಲ್ಲವ್ವ ಶಿರಬಡಗಿ (65)  ಮೃತಪಟ್ಟ ವೃದ್ಧೆಯಾಗಿದ್ದಾರೆ. ಜೇನು ಹುಳ ಕಡಿದು ಗಂಭೀರವಾಗಿ ಗಾಯಗೊಂಡಿದ್ದ ಅವರು ಹುಬ್ಬಳ್ಳಿ ಕಿಮ್ಸ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ‌ಶಿಗ್ಗಾವಿ ತಾಲ್ಲೂಕಿನ ಸಿಂಗಾಪೂರ ಗ್ರಾಮದ ನಿವಾಸಿ ನಿಂಗವ್ವ ಅವರು ನ. 13ರಂದು ಚೆಂಡು ಹೂವು ಬಿಡಿಸಲು ಹೊಲಕ್ಕೆ ಹೋಗಿದ್ದರು.  ಅದೇ ಸಂದರ್ಭದಲ್ಲಿ ಅವರಿಗೆ ಜೇನು ಹುಳುಗಳು ಕಡಿದಿದ್ದವು. ಜೇನು ಹುಳು ಕಡಿದು ನಿಂಗವ್ವ ಮೃತಪಟ್ಟಿದ್ದಾರೆ. ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು‌ ಕುಟುಂಬಸ್ಥರು ದೂರು‌ ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಂಕಾಪುರ‌ ಪೊಲೀಸರು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಕನಕಪುರ: ಟ್ಯಾಂಕರ್ ಲಾರಿಯ ಮೇಲ್ಭಾಗ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್  ಕಂಬವೊಂದು ಮುರಿದು ಬಿದ್ದಿದ್ದು, ಮೂರು ಕಂಬಗಳು ಬಾಗಿರುವ ಘಟನೆ  ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಹೆದ್ದಾರಿ–209ರಲ್ಲಿ ಹಲಗೂರು ಕಡೆಗೆ ತೆರಳುತ್ತಿದ್ದ ಭಾರಿ ಗಾತ್ರದ ಟ್ಯಾಂಕರ್ ಹೊತ್ತ ಲಾರಿಯು ರಸ್ತೆಯಲ್ಲಿ ಅಡ್ಡವಾಗಿ ಹಾಕಿದ್ದ ವಿದ್ಯುತ್ ಕಂಬಗಳ ತಂತಿಗಳಿಗೆ ತಾಗಿ ತುಂಡಾಗಿದೆ. ಅದನ್ನು ಗಮನಿಸದ ಲಾರಿ ಚಾಲಕ ಮುಂದೆ ಹೋಗಿದ್ದಾನೆ. ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ವಾಹನಗಳ ಸಂಚಾರವನ್ನು ಕೆಲ ಹೊತ್ತು ತಡೆದು, ಬೆಸ್ಕಾಂನವರಿಗೆ ಮಾಹಿತಿ ನೀಡಿದರು. ಘಟನೆಯಿಂದಾಗಿ ರಸ್ತೆಯಲ್ಲಿ ಸುಮಾರು 15 ನಿಮಿಷ ವಾಹನಗಳ ಸಂಚಾರ ಬಂದ್ ಆಯಿತು. ಆದರೂ, ವಿದ್ಯುತ್ ತಂತಿ ಗಮನಿಸದ ಬೈಕ್ ಸವಾರನೊಬ್ಬ ಬಂದು ಅಪಘಾತಕ್ಕೀಡಾಗಿ ಗಾಯಗೊಂಡ. ಕೂಡಲೇ ಸ್ಥಳೀಯರು ಆತನನ್ನು ಆರೈಕೆ ಮಾಡಿ, ಆಸ್ಪತ್ರೆಗೆ ಕಳಿಸಿದರು. ನಂತರ ಸ್ಥಳಕ್ಕೆ ಬಂದ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಸಂಚಾರಕ್ಕೆ…

Read More

ಸಿದ್ಧಾರ್ಥನಗರ: ಮದುವೆ ಮೆರವಣಿಗೆಯೊಂದರಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ನೋಟುಗಳ ಕಟ್ಟುಗಳನ್ನು ಎಸೆದಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವರು ಮನೆಯ ಛಾವಣಿ ಮತ್ತು ಜೆಸಿಬಿಗಳ ಮೇಲೆ ಹತ್ತಿ ಕರೆನ್ಸಿ ನೋಟುಗಳ ಕಟ್ಟುಗಳನ್ನು ಗಾಳಿಗೆ ಎಸೆದಿದ್ದಾರೆ. ಇದೆಲ್ಲವನ್ನೂ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈಗ ಅದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಅನೇಕ ಜನರು ನೋಟುಗಳನ್ನು ಗಾಳಿಗೆ ಎಸೆಯುವುದನ್ನು ಕಾಣಬಹುದು. 100, 200 ಮತ್ತು 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ. ಹಣವನ್ನು ಎಸೆಯುವುದಕ್ಕಾಗಿಯೇ ಜೆಸಿಬಿಯನ್ನು ಸಹ ತರಲಾಗಿತ್ತು. ಕೆಲವರು ಅದರ ಮೇಲೆ ನಿಂತಿದ್ದರೆ, ಇತರರು ಕಟ್ಟಡದ ಛಾವಣಿಯ ಮೇಲೆ ನಿಂತು ಕರೆನ್ಸಿ ನೋಟುಗಳನ್ನು ಎಸೆಯುತ್ತಿದ್ದರು. ಈ ನೋಟುಗಳನ್ನು ಸಂಗ್ರಹಿಸಲು ಅನೇಕ ಜನರು ಜಮಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…

Read More

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮಟ್ಟ ಏರಿಕೆ ಹಿನ್ನೆಲೆ ಸರ್ಕಾರಿ ಕಚೇರಿಗಳ ಅರ್ಧದಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಬುಧವಾರ ತಿಳಿಸಿದ್ದಾರೆ. ಈ ಸಂಬಂಧ ಎಕ್ಸ್/ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ, ಮಾಲಿನ್ಯ ನಿಯಂತ್ರಿಸುವ ಸಲುವಾಗಿ, ಸರ್ಕಾರಿ ನೌಕರರಿಂದ ಮನೆಯಿಂದಲೇ ಕೆಲಸ ಮಾಡಿಸಲು ನಿರ್ಧರಿಸಲಾಗಿದೆ. ಶೇ 50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ನಿಯಮ ಜಾರಿಗೆ ಸಂಬಂಧಿಸಿಂತೆ ಮಧ್ಯಾಹ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದ್ದರೂ ಕಠಿಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಳಂಬ ಏಕಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಎವರ್ ಗ್ರೀನ್ ಹಾಡುಗಳ ಸರದಾರ, ಮ್ಯೂಜಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸಾಯಿರಾ ಬಾನು ಅವರು ಎ.ಆರ್ ರೆಹಮಾನ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ಸುದೀರ್ಘ 29 ವರ್ಷಗಳ ದಾಂಪತ್ಯ ಪಯಣದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನವೆಂಬರ್ 19ರಂದು ಏಕಾಏಕಿ ಇಬ್ಬರೂ ದೂರವಾಗುವ ಸುದ್ದಿಯನ್ನು ನೀಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸಾಯಿರಾ ಬಾನು ಅವರಿಂದ ಎ.ಆರ್ ರೆಹಮಾನ್ ಅವರು ದೂರವಾಗುತ್ತಿರುವುದು ಡಿವೋರ್ಸ್ ಪಡೆದುಕೊಳ್ಳುತ್ತಿರುವುದು ಇದೀಗ ಅಧಿಕೃತವಾಗಿದೆ. ಡೈವೋರ್ಸ್ನ ಬಗ್ಗೆ ಎ.ಆರ್ ರೆಹಮಾನ್ ಟ್ವೀಟ್ ಮಾಡಿ ಮನದ ನೋವನ್ನು ಹಂಚಿಕೊಂಡಿದ್ದಾರೆ. ನಾವಿಬ್ಬರೂ ಅನ್ಯೂನ್ಯವಾಗಿ 30 ವರ್ಷದ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಕನಸು ಕಂಡಿದ್ದೆವು. ಆದರೆ, ಇದೆಲ್ಲವೂ ಅನಿರೀಕ್ಷಿತ ಅಂತ್ಯ ಕಂಡಿದೆ ಎಂದೆನಿಸುತ್ತದೆ ಎಂದು ರೆಹಮಾನ್ ಹೇಳಿದ್ದಾರೆ. ಮುಂದುವರಿದು, ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ (ದೇವರಿಗೂ ಮರುಕ ಹುಟ್ಟಿರಬಹುದು) ಅಲುಗಾಡಿರಬಹುದು. ಆದರೆ, ಈ ಬಿರುಕಿನ ಪರಿಸ್ಥಿತಿಯಲ್ಲಿ ಒಡೆದ ಹೃದಯಗಳು ಮತ್ತೆ ಸೇರಲು ಸಾಧ್ಯವಿಲ್ಲ. ನಾವೇ…

Read More

ತುಮಕೂರು: ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರತಿಕ್ರಿಯಿಸಿದ್ದು, ಬಿಪಿಎಲ್ ಕಾರ್ಡ್ ಅರ್ಹರು ಯಾರೂ ಆತಂಕ ಪಡಬೇಕಿಲ್ಲ ಎಂದು ಧೈರ್ಯ ತುಂಬಿದ್ದಾರೆ. ಕಾರ್ಡ್ ಅನರ್ಹಕ್ಕೆ ಮೊದಲು ಕಂಡಿಷನ್ ಏನೇನು ಅಂತ ತಿಳಿದುಕೊಳ್ಳಬೇಕು, ಗೌರ್ನಮೆಂಟ್ ಎಂಪ್ಲಾಯ್ ಇದ್ದಾರೆ, ಅವರ ಫ್ಯಾಮಿಲಿ ಇನ್ ಕಂ 1.2 ಲಕ್ಷಕ್ಕಿಂತ ಹೆಚ್ಚಿದೆ. ಆದಾಯ ತೆರಿಗೆ ಪಾವತಿದಾರರು ಯಾರಿದ್ದಾರೆ. ಅಂತವರು ನಮ್ಮ ಜಿಲ್ಲೆಯಲ್ಲಿ 24 ಸಾವಿರ ಜನ ಅಂತ ಆಯ್ಕೆ ಮಾಡಿದ್ದೇವೆ. ಈ ಕಂಡಿಶನ್ ಒಳಗೆ ಇರುವವರನ್ನ, ಪುಡ್ ಇನ್ಸ್ ಪೆಕ್ಟರ್ ಮೂಲಕ ಚೆಕ್ ಮಾಡಿಸಿ. ಸ್ಥಳದಲ್ಲಿ ಹೋಗಿ ಚೆಕ್ ಮಾಡಿ, ಮಹಜರು ಮಾಡಿ, ನಂತರವೇ ವಜಾಗೊಳಿಸಲು ರಾಜ್ಯಕ್ಕೆ ಕಳಿಸುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಜನರಲ್ಲಿ ಆತಂಕ ಬೇಡ. ಯಾರು ಅರ್ಹರಿದ್ದಾರೆ ಅವರೆ ಖಂಡಿತ ತೊಂದರೆ ಆಗಲ್ಲ. ಅಂತಹವರ ಹೆಸರು ತೆಗಿಸಲ್ಲ. ಹಾಗೇನಾದ್ರೂ ಹಾಗಿದ್ರೆ ರಿಕ್ವೆಷ್ಟ ಕೊಡಿ. ತಕ್ಷಣ ಚೆಕ್ ಮಾಡಿ ಪುನಃ ಸರಿಪಡಿಸುತ್ತೇವೆ ಎಂದು ಅವರು ತಿಳಿಸಿದರು. 19 ಸಾವಿರ ಜನರ…

Read More

ಲಕ್ನೋ : ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯಿತು.  ಮತದಾರರು ಬೆಳಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಕಟೆಹಾರಿ, ಕರ್ಹಾಲ್‌‍, ಮೀರಾಪುರ್‌, ಘಾಜಿಯಾಬಾದ್‌, ಮಜವಾನ್‌, ಸಿಸಾಮಾವು, ಖೈರ್‌, ಫುಲ್ಪುರ್‌ ಮತ್ತು ಕುಂದರ್ಕಿ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ವೃದ್ಧರು, ಯುವಕರು ಹಾಗೂ ದೈಹಿಕವಾಗಿ ಅಸಾಮರ್ಥ್ಯ ಹೊಂದಿರುವವರು ಮತದಾನದಲ್ಲಿ ಭಾಗಿಯಾಗಿ ತಮ ಹಕ್ಕು ಚಲಾಯಿಸಿದರು. ಲೋಕಸಭೆಗೆ ಹಾಲಿ ಶಾಸಕರ ಚುನಾವಣೆಯ ನಂತರ ಎಂಟು ಸ್ಥಾನಗಳು ಖಾಲಿಯಾಗಿದ್ದರೆ, ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ ಸೋಲಂಕಿ ಅವರು ಕ್ರಿಮಿನಲ್‌ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ವಿಧಾನಸಭೆಯಿಂದ ಅನರ್ಹಗೊಂಡ ಕಾರಣ ಸಿಸಮಾವುನಲ್ಲಿ ಮತದಾನವನ್ನು ನಡೆಸಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಬೆಸ್ತರಹಳ್ಳಿ ರಸ್ತೆಯ ಮುದ್ದು ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಸಂಜೆ  ಸಮಸ್ತ ಜನತೆಯ ಸಂಕಲ್ಪದಂತೆ ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನಿಗೆ ಕಾರ್ತಿಕ ಮಾಸ ಅಂಗವಾಗಿ ಐದನೇ ವರ್ಷದ ಲಕ್ಷದೀಪೋತ್ಸವ ನಡೆಯಿತು. ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎನ್.ಆರ್. ಅಶ್ವತ್ ಕುಮಾರ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ‌. ಟ್ರಸ್ಟ್ ವೈ.ಎನ್.ಹೊಸಕೋಟೆ ವಲಯ ಇವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಆಗಮಿಸಿ ದೀಪ ಹಚ್ಚಿ ಮುದ್ದು ಮಲ್ಲೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದರು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ನಾಗಲಮಾಡಿಕೆ ಹೋಬಳಿಯ ವ್ಯಾಪ್ತಿಗೆ ಬರುವ ಪಳ್ಳವಳ್ಳಿ ಗ್ರಾಮದಲ್ಲಿ ಮಂಗಳವಾರದಂದು ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ನಾಗಲಮಾಡಿಕೆ ಹೋಬಳಿಯ ಪ್ರಭಾರ ಉಪತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಾದ ಕೆ.ವಿ. ನಾರಾಯಣ ರವರು ಫಲಾನುಭವಿಗಳಿಗೆ ವಿವಿಧ ಮಾಶಾಸನ ಆದೇಶ ಪತ್ರಗಳನ್ನು ವಿತರಿಸಿದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳು, ನಾಡಕಚೇರಿ ಸಿಬ್ಬಂದಿ, ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬೆಂಗಳೂರು: ಕೃಷಿ ಇಲಾಖೆಯ ಪ್ರಮುಖ ಆಧಾರ ಸ್ತಂಭಗಳಾದ ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಸಚಿವರು ಮಾಹಿತಿ ನೀಡಿದರು. ಬೆಳೆಗಳಲ್ಲಿ ಕಂಡುಬರುವ ಕೀಟ/ ರೋಗ ಬಾಧೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನಿಖರವಾಗಿ ಗುರುತಿಸಿ, ಪೀಡೆ ಬಾಧೆಯ ತೀವ್ರತೆಗನುಗುಣವಾಗಿ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಲುಪಿಸಲು ಇ-ಸ್ಯಾಪ್ ತಂತ್ರಜ್ಞಾನವನ್ನು ಜಾರಿಗೊಳಿಸಿ ಇಲ್ಲಿಯವರೆಗೆ 70,016 ರೈತರಿಗೆ 1,30,152 ವಿವಿಧ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಮಣ್ಣು ಪರೀಕ್ಷೆಗೆ ಭೂಸಾರ ಆಪ್ ತಂತ್ರಾಂಶ ಬಳಸಿ 4.76 ಲಕ್ಷ ಮಣ್ಣು ಮಾದರಿಗಳ ಗುರಿಗೆ ಇಲ್ಲಿಯವರೆಗೆ 4.54…

Read More