Subscribe to Updates
Get the latest creative news from FooBar about art, design and business.
- ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ
- ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ
- ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ: ಸರಗೂರಿನಲ್ಲಿ ಅಧಿಕರ್ನಾಟಕ ಮಹಾಸಭಾ ಸಭೆ
- ಸರಗೂರು: ಎಸ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ — ಪ್ರತಿಭಟನೆಯ ಎಚ್ಚರಿಕೆ
- ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ
- ಸರಗೂರು: ಸಾಧಕ ಪ್ರಸನ್ನ ಕುಮಾರ್ ಅವರಿಗೆ ‘ಪಟ್ಟಣದ ಸ್ನೇಹಿತರು’ ಬಳಗದಿಂದ ಸನ್ಮಾನ
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
Author: admin
ಕೊರಟಗೆರೆ: ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಬೀರದೇನಹಳ್ಳಿ ತಂಗುದಾಣದಲ್ಲಿ ಬಳಿ ಗಾಂಜಾ ಮಾರಾಟ ಜಾಲವನ್ನು ಕೊರಟಗೆರೆ ಪೊಲೀಸರು ಪತ್ತೆಹಚ್ಚಿದ್ದಾರೆ. ಬಿರದೇನಹಳ್ಳಿ ತಂಗುದಾಣದಲ್ಲಿ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಮೇಲೆ ಮಾರುವೇಷದಲ್ಲಿ ಪಿಎಸೈ ಚೇತನ್ ಕುಮಾರ್ ನೇತೃತ್ವದ ಪೊಲೀಸರ ತಂಡದಿಂದ ದಾಳಿ ನಡೆಸಿದೆ. ತುಂಬಾಡಿಯಿಂದ ಸಿದ್ದರಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಬೀರದೇನಹಳ್ಳಿ ತಂಗುದಾಣದ ಸಮೀಪ ಹಳ್ಳಿಯ ಯುವಕರಿಗೆ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಪೊಲೀಸರು ಸಿದ್ದರಬೆಟ್ಟದ ವಾಸಿಯಾದ ಹೇಮಂತಕುಮಾರ್(21) ಮತ್ತು ನೇಗಲಾಲದ ಭೀಮರಾಜು(35) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1ಲಕ್ಷ 50 ಸಾವಿರ ಮೌಲ್ಯದ 2ಕೆ.ಜಿ. 400ಗ್ರಾಂ ಗಾಂಜಾಸೊಪ್ಪು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊರಟಗೆರೆ ಪಿಎಸೈ ಚೇತನ್ ಕುಮಾರ್, ಕ್ರೈಂ ಸಿಬ್ಬಂಧಿಗಳಾದ ದೊಡ್ಡಲಿಂಗಯ್ಯ, ಮೋಹನ್, ಪ್ರದೀಪ್, ಸಿದ್ದರಾಮ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ಮೂಲಕ ಸಿದ್ದರಬೆಟ್ಟದ ಸೂರ್ಯನ ಗುಹೆಯ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಗಾಂಜಾಗಿಡ ಬೆಳೆದು ಕೊರಟಗೆರೆಯ ಹಲವೆಡೆ ಮಾರಾಟ ಮಾಡುತ್ತಿದ್ದ ಜಾಲವನ್ನು…
ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರನ್ನು ದುರುಪಯೋಗ ಮಾಡಿಕೊಂಡು ಲೆಟರ್ ಹೆಡ್ ಅನ್ನು ನಕಲು ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರುತಿ ಬಂಧಿತ ಆರೋಪಿಯಾಗಿದ್ದಾನೆ. ಡಾ.ಜಿ.ಪರಮೇಶ್ವರ್ ರವರ ಹೆಸರನ್ನು ಮತ್ತು ಗೃಹ ಖಾತೆಯ ಹೆಸರಿನ ಲೆಟರ್ ಹೆಡ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಲ್ಯಾಪ್ ಟ್ಯಾಪ್ ನಲ್ಲಿ ಎಡಿಟ್ ಮಾಡಿಕೊಂಡು ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶ ಹೊಂದಿದ್ದನು. ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ತಾನು ಸೃಷ್ಟಿ ಮಾಡಿರುವ ಸಚಿವರ ಲೆಟರ್ಹೆಡ್ ಅನ್ನು ನೀಡಿ ಭಕ್ತಾಧಿಗಳಿಂದ ಸುಮಾರು 6,000/– ರೂ. ನಿಂದ 10,000/- ರೂ. ನಂತೆ ವಸೂಲಿ ಮಾಡುತ್ತಿದ್ದನು. ನಂತರ ಆಂಧ್ರಪ್ರದೇಶ್ ರಾಜ್ಯದ ಮುಖ್ಯಮಂತ್ರಿಗಳ ಕಛೇರಿ ಕರೆ ಮಾಡಿ ತನಗೆ ಬೇಕಾದ ಫ್ಯಾಮಿಲಿ ಮೆಂಬರ್ ಐಡಿ ದೇವಸ್ಥಾನಕ್ಕೆ ಬರುತ್ತಾರೆ. ಅವರಿಗೆ ದೇವರ ದರ್ಶನಕ್ಕೆ ಅನುವುಮಾಡಿಕೊಡಿ ಇಲ್ಲವಾದಲ್ಲಿ ನಿಮ್ಮನ್ನು ಅಮಾನತ್ತುಪಡಿಸುವುದಾಗಿ ಬೆದರಿಸುತ್ತಿದ್ದನು. ಸೃಷ್ಟಿ ಮಾಡಿರುವ ಲೆಟರ್ ಹೆಡ್ ಅನ್ನು ಆಂಧ್ರ ಸಿ ಎಂ ಕಛೇರಿ ಸಿಬ್ಬಂದಿಗೆ ವಾಟ್ಸ್ ಆಪ್…
ತುಮಕೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕ-ಕೆ.1000 ಕಾರು ರಾಲಿ ಜನರನ್ನು ಆಕರ್ಷಿಸಿತು. ರಾಲಿಯಲ್ಲಿ 56ಕ್ಕೂ ಹೆಚ್ಚು ಕಾರುಗಳು ಟ್ರಾಕ್ ನಲ್ಲಿ ಧೂಳೆಬ್ಬಿಸಿ ಸಾಗಿದವು. ಜನರು ಕೇಕೆ ಶಿಳ್ಳೆ ಹಾಕುತ್ತಾ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಗುಬ್ಬಿ ಮತ್ತು ತಿಪಟೂರು ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಟ್ರಾಕ್ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 50 ಕಿ.ಮೀ. ಅಂತರದ ಟ್ರಾಕ್ ನಲ್ಲಿ 56 ವಿವಿಧ ಹೆಸರಾಂತ ಕಂಪನಿಯ ಕಾರುಗಳು ಸಂಚರಿಸಿದವು. ಇದುವರೆಗೂ ಕರ್ನಾಟಕ–ಕೆ.1000 ವತಿಯಿಂದ ಇದುವರೆಗೂ ನಿರಂತರವಾಗಿ 48 ರಾಲಿಗಳನ್ನು ನಡೆಸಿಕೊಂಡು ಬರಲಾಗಿದ್ದು, ಅದ್ರಲ್ಲಿ ಇದುವರೆಗೂ 25 ರಾಲಿಗಳು ತುಮಕೂರು ಜಿಲ್ಲೆಯಲ್ಲಿಯೇ ನಡೆದಿರುವುದು ವಿಶೇಷವಾಗಿದೆ. ಅನೇಕ ರಾಲಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಹೆಸರಾಂತ ರೈಡರ್ ಗೌರವ ಗಿಲ್, ಶನ ಪಿ , ಆದಿತ್ಯ, ವೀರೇಂದ್ರ ಕಾಶಿಪ್ ಅವರುಗಳು ಸೇರಿದಂತೆ ಅನೇಕ ಮಂದಿ ರಾಲಿಯಲ್ಲಿ ಭಾಗವಹಿಸಿದ್ದರು. ಎಂ ಆರ್ ಎಫ್., ಮಹೀಂದ್ರ, ವೋಕ್ಸ ವ್ಯಾಗನ್, ಮಾರುತಿ, ಎಂ ಆರ್ ಎಫ್ ಸೇರಿದಂತೆ ಹೆಸರಾಂತ ಕಂಪನಿಯ ಕಾರುಗಳು ಟ್ರಾಕ್ ನಲ್ಲಿ…
ತುಮಕೂರು: ಡ್ರೋನ್ ಪ್ರತಾಪ್ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮದುಗಿರಿ ಕೋರ್ಟ್ ಇಂದು ಆದೇಶ ನೀಡಿದೆ. ಇದೇ ತಿಂಗಳ 26 ರ ರವರೆಗೆ ನ್ಯಾಯಾಂಗ ಬಂಧನಕ್ಕೆ ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯದಿಂದ ಆದೇಶಿಸಲಾಗಿದೆ. ಇಂದು ಮಧುಗಿರಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಮಿಡಿಗೇಶಿ ಪೊಲೀಸರು. ವಾದ ಆಲಿಸಿ 10 ದಿನಗಳ ಕಾಲ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ವ್ಯಕ್ತಿಯೊಬ್ಬ ಹೆಬ್ಬಾವಿನೊಂದಿಗೆ ಸರಸವಾಡಲು ಹೋಗಿ ಅಪಾಯಕ್ಕೆ ಸಿಲುಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬೆಚ್ಚಿಬೀಳಿಸುವಂತಿದೆ. ಟ್ವಿಟರ್ ಖಾತೆ @Poonam_1992 ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿದ್ದಾರೆ. 15 ಸೆಕೆಂಡ್ ನ ಈ ವಿಡಿಯೋ ಭಯಾನಕವಾಗಿದೆ. ವ್ಯಕ್ತಿ ಹೆಬ್ಬಾವಿಗೆ ಮುತ್ತಿಕ್ಕಲು ಮುಂದಾದ್ದಾನೆ. ಈ ವೇಳೆ ಹೆಬ್ಬಾವು ಆತನ ಮುಖಕ್ಕೆ ಗಟ್ಟಿಯಾಗಿ ಕಚ್ಚಿ ಹಿಡಿದುಕೊಂಡಿದೆ. ಹೆಬ್ಬಾವಿನ ಹಲ್ಲು ಆತನ ಕೆನ್ನೆಯೊಳಗೆ ಇಳಿದಿದ್ದು, ಆತ ಎಷ್ಟು ಪ್ರಯತ್ನಿಸಿದರೂ ಹಲ್ಲು ಹೊರ ಬಾರದೇ ಆತ ನರಳಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. शायद रील बनाने का शौक़ महंगा पड़ गया 😂😂#RedAlert #Encounter #Spirit #BanSabarmatiInJNU #OneNationOneElection #vivoX200Series #HimalayaAtWAC pic.twitter.com/Z50K88DV2X — PoonamSharma (@Poonam_1992) December 12, 2024 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ. 6 ತಿಂಗಳ ಹಿಂದೆ ಜೈಲು ಸೇರಿದ್ದ ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇಂದು ಬೆಳಗ್ಗೆ ಬಿಡುಗಡೆಯ ಎಲ್ಲ ಪ್ರಕ್ರಿಯೆಗಳು ಮುಗಿಯಲಿದ್ದು, ಪರಪ್ಪನ ಅಗ್ರಹಾರದಿಂದ ಪವಿತ್ರಾ, ಅನುಕುಮಾರ್, ಪ್ರದೂಶ್ ಬಿಡುಗಡೆಯಾದರೆ ಶಿವಮೊಗ್ಗ ಜೈಲಿನಿಂದ ಜಗದೀಶ್, ಲಕ್ಷಣ್, ಕಲಬುರಗಿಯಿಂದ ನಾಗರಾಜ್ ರಿಲೀಸ್ ಆಗಲಿದ್ದಾರೆ ಎಂದು ವರದಿಯಾಗಿದೆ. ಇಂದು ಮಧ್ಯಾಹ್ನ ಹೊತ್ತಿಗೆ ಎಲ್ಲಾ ಆರೋಪಿಗಳು ಜೈಲಿನಿಂದ ಹೊರಬರಲಿದ್ದಾರೆ. ಎಲ್ಲಾ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಶಿವಮೊಗ್ಗ: ತುಂಗಾ ನದಿಯಲ್ಲಿ ಸ್ನಾನ ಮಾಡಿ ವಾಪಸ್ ಬರುವಷ್ಟರಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರ ಬೈಕ್ ಕಳವು ಆಗಿರುವ ಘಟನೆ ವಾದಿ ಎ ಹುದಾ ತುಂಗಾ ನದಿ ಸೇತುವೆ ಸಮೀಪ ನಡೆದಿದೆ. ಶಿವಮೊಗ್ಗದ ಶುಭಮಂಗಳ ಸಮುದಾಯ ಭವನ ಸಮೀಪದ ನಿವಾಸಿ ಗೋಪಿ ಅವರ ಬೈಕ್ ಕಳವು ಮಾಡಲಾಗಿದೆ. ಬೆಳಗಿನ ಜಾವ ತುಂಗಾ ನದಿಯಲ್ಲಿ ಸ್ನಾನ ಮಾಡಿ ವಾಪಸ್ ಬರುವ ವೇಳೆಗೆ ಬೈಕ್ ಕಳವು ಮಾಡಲಾಗಿದೆ. ಶಬರಿಮಲೆ ಯಾತ್ರೆಗೆ ಹೋಗುವ ಸಲುವಾಗಿ ಮಾಲೆ ಹಾಕಿಕೊಂಡಿರುವ ಗೋಪಿ ಸೀಗೆ ಹಟ್ಟಿಯ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ರಾತ್ರಿ ವೇಳೆ ತಂಗುತ್ತಿದ್ದರು. ಬೆಳಗ್ಗೆ ತುಂಗಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಘಟನೆ ಸಂಬಂಧ ತುಂಗಾ ನಗರ ಠಾಣೆಗೆ ಗೋಪಿ ದೂರು ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಅವರಿಗೆ ಜಾಮೀನು ದೊರೆತಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ಇಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಲಿದ್ದಾರೆ ಎಂದು ಹೇಳಲಾಗಿದೆ. ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆದುಕೊಂಡಿದ್ದ ದರ್ಶನ್ ಫಿಜಿಯೋಥೆರಪಿ ಮಾಡಿಸಿದ್ದು, ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಯಾವಾಗ ಬೇಕಾದರೂ ಸರ್ಜರಿ ಮಾಡಿಸಿಕೊಳ್ಳಬಹುದೆಂಬ ಚಿಂತನೆಯಲ್ಲಿದ್ದಾರೆ. ಸದ್ಯ ವಿಶ್ರಾಂತಿ ಪಡೆಯಲು ವೈದ್ಯರು ದರ್ಶನ್ ಗೆ ಸಲಹೆ ನೀಡಿದ್ದಾರೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಮಧ್ಯಾಹ್ನದ ನಂತರ ನಟ ದರ್ಶನ್ ಡಿಸ್ಟಾರ್ಜ್ ಆಗಿ ಮನೆಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಚಾಮರಾಜನಗರ: ಚಾಮರಾಜನಗರದ ಶಿವನಸಮುದ್ರಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಭೇಟಿ ನೀಡಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಗಣಪತಿ ದೇವಸ್ಥಾನ, ಮಧ್ಯರಂಗ ಹಾಗೂ ಮೀನಾಕ್ಷಿ ಸಮೇತ ಸೋಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಚಕ್ರ ದರ್ಶನ ಪಡೆದು ಆದಿಶಕ್ತಿ ಮಾರಮ್ಮ ದೇವಸ್ಥಾನಕ್ಕೆ ಸೂಈರೆ ಸಮರ್ಪಿಸಿದರು. ಕೆಲ ದಿನಗಳ ಹಿಂದೆ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಕೊಟ್ಟಿದ್ದರು. ಇದೀಗ ಶಿವನಸಮುದ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವರಾಜ್ ಕುಮಾರ್ ಶೀಘ್ರದಲ್ಲಿ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಿದ್ದು, ಅದಕ್ಕೂ ಮುನ್ನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಗದಗ: ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ — ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ ಎಂದು ಸಿಎಂ ಹೇಳಿದರು. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ — ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ…