ಕೊರಟಗೆರೆ: ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಬೀರದೇನಹಳ್ಳಿ ತಂಗುದಾಣದಲ್ಲಿ ಬಳಿ ಗಾಂಜಾ ಮಾರಾಟ ಜಾಲವನ್ನು ಕೊರಟಗೆರೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಬಿರದೇನಹಳ್ಳಿ ತಂಗುದಾಣದಲ್ಲಿ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಮೇಲೆ ಮಾರುವೇಷದಲ್ಲಿ ಪಿಎಸೈ ಚೇತನ್ ಕುಮಾರ್ ನೇತೃತ್ವದ ಪೊಲೀಸರ ತಂಡದಿಂದ ದಾಳಿ ನಡೆಸಿದೆ.
ತುಂಬಾಡಿಯಿಂದ ಸಿದ್ದರಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಬೀರದೇನಹಳ್ಳಿ ತಂಗುದಾಣದ ಸಮೀಪ ಹಳ್ಳಿಯ ಯುವಕರಿಗೆ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಪೊಲೀಸರು ಸಿದ್ದರಬೆಟ್ಟದ ವಾಸಿಯಾದ ಹೇಮಂತಕುಮಾರ್(21) ಮತ್ತು ನೇಗಲಾಲದ ಭೀಮರಾಜು(35) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1ಲಕ್ಷ 50 ಸಾವಿರ ಮೌಲ್ಯದ 2ಕೆ.ಜಿ. 400ಗ್ರಾಂ ಗಾಂಜಾಸೊಪ್ಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ಪಿಎಸೈ ಚೇತನ್ ಕುಮಾರ್, ಕ್ರೈಂ ಸಿಬ್ಬಂಧಿಗಳಾದ ದೊಡ್ಡಲಿಂಗಯ್ಯ, ಮೋಹನ್, ಪ್ರದೀಪ್, ಸಿದ್ದರಾಮ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಈ ಮೂಲಕ ಸಿದ್ದರಬೆಟ್ಟದ ಸೂರ್ಯನ ಗುಹೆಯ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಗಾಂಜಾಗಿಡ ಬೆಳೆದು ಕೊರಟಗೆರೆಯ ಹಲವೆಡೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx