Author: admin

ತುಮಕೂರು: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟಬಹುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸಲಹೆ ನೀಡಿದರು. ನಗರದ ಎಂಪ್ರೆಸ್ ಬಾಲಕಿಯ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಎಲ್.ಇ.ಡಿ. ವಾಹನಗಳ ಮುಖಾಂತರ ರಸ್ತೆ ಸುರಕ್ಷತಾ ನಿಯಮ ಕುರಿತು ಜನ–ಜಾಗೃತಿ ಮೂಡಿಸುವ ವಿಡಿಯೋ ಸಂದೇಶವುಳ್ಳ ತುಣುಕುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಚಾಲಕರ ಬೇಜವಾಬ್ದಾರಿಯಿಂದ ಅಪಘಾತಗಳು ಸಂಭವಿಸುತ್ತಿವೆ. ಹೆಲ್ಮೆಟ್ ಇಲ್ಲದ ವಾಹನ ಚಾಲನೆ ವೀಲಿಂಗ್ ಸಾಹಸಗಳಿಂದ ಯುವಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಸಾದ್ ಎ.ವಿ. ಮಾತನಾಡಿ, ತುಮಕೂರು ನಗರದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಬಸ್ ನಿಲ್ದಾಣ, ಮಾರುಕಟ್ಟೆಗಳಲ್ಲಿ ಎಲ್.ಇ.ಡಿ. ವಾಹನಗಳ ಮುಖಾಂತರ ಜನ-ಜಾಗೃತಿ ಮೂಡಿಸುವ ವಿಡಿಯೋ ಸಂದೇಶವುಳ್ಳ ತುಣುಕುಗಳನ್ನು ಪ್ರದರ್ಶಿಸುವ 250 ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಉಪನಿರ್ದೇಶಕ ಡಾ:…

Read More

ತುಮಕೂರು: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕಾನೂನು ಪಾಲನೆ ಕುರಿತು ಮೊಬೈಲ್ ಕ್ಯಾಮೆರಾ ಸಹಾಯದಿಂದ ಕಿರುಚಿತ್ರ ತಯಾರಿಸಿ ಕಳುಹಿಸಲು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕು ಸೇವನೆಗೆ ದಾಸರಾಗುತ್ತಿದ್ದು, ಯುವಜನರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಿರು ಚಿತ್ರಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಆಸಕ್ತರು ತಂಬಾಕು ದುಷ್ಪರಿಣಾಮ ಕುರಿತು ಕಿರುಚಿತ್ರಗಳನ್ನು ತಯಾರಿಸಿ ಇಲಾಖೆಯ ಇ–ಮೇಲ್ datctumkur@gmail.comಗೆ ಕಳುಹಿಸಬಹುದಾಗಿದೆ. ಈ ಕಿರುಚಿತ್ರಗಳಿಗೆ ಇಲಾಖೆ ವತಿಯಿಂದ ಯಾವುದೇ ಸಂಭಾವನೆ/ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು:  ಪ.ಜಾತಿ/ಪ.ಪಂಗಡ ಸಮುದಾಯಗಳ ಸಮಸ್ಯೆಗಳನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ.ಜಾತಿ ಮತ್ತು ಪ.ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಸ್ಮಶಾನ ಭೂಮಿ ಅಭಿವೃದ್ಧಿ, ನಿವೇಶನ ಹಂಚಿಕೆ, ಸಾಗುವಳಿ ಚೀಟಿ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕುಂದು ಕೊರತೆ ಸಭೆಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ತಾಲ್ಲೂಕು ಹಂತದಲ್ಲೇ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಜಿಲ್ಲೆಯ ಹಲವಾರು ಗ್ರಾಮಗಳಲ್ಲಿನ ಪ.ಜಾತಿ ಮತ್ತು ಪ.ಪಂಗಡಗಳ ಸ್ಮಶಾನ ಭೂಮಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡದಿರುವ ಬಗ್ಗೆ ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಸ್ಮಶಾನಕ್ಕಾಗಿ ಪ್ರತ್ಯೇಕ ಭೂಮಿಯನ್ನು ಮೀಸಲಿಟ್ಟಿದ್ದು, ಜಿ.ಪಿ.ಎಸ್ ಮೂಲಕ ಸರ್ವೇ ನಡೆಸಿ ಸ್ಮಶಾನ ಭೂಮಿಗೆ ಆವರಣ ಗೋಡೆ ನಿರ್ಮಾಣದ ಜೊತೆಗೆ…

Read More

ತುಮಕೂರು: ಭಾರತ ಸೇವಾದಳ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ತಾಲ್ಲೂಕು ಮಟ್ಟದ ಮಕ್ಕಳ ನಾಯಕತ್ವ ತರಬೇತಿ ಶಿಬಿರವನ್ನು ಗುಬ್ಬಿಯ  ಸರ್ಕಾರಿ ಬಾಲಕಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ನಟರಾಜು ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ನಾಯಕ–ನಾಯಕಿಯರಾಗಿ ನಡೆಯಲು ಸೇವಾದಳದ ನಾಯಕತ್ವ ಶಿಬಿರದ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕಾ ಹಂತ ಹಾಗೂ ತಮ್ಮೆಲ್ಲರ ಮುಂದಿನ ಜೀವನಕ್ಕೆ ಪೂರಕವಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಜಿ. ವೆಂಕಟೇಗೌಡ ಮಾತನಾಡಿ, ಮಕ್ಕಳಲ್ಲಿ ಸೇವಾ ಮನೋಭಾವನೆಯೊಂದಿಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಗುಬ್ಬಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ. ರಮೇಶ್ ಮಕ್ಕಳನ್ನು ಕುರಿತು ಮಾತನಾಡಿ, ಗುರು ಹಿರಿಯರನ್ನು, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳನ್ನು ಗೌರವಿಸಬೇಕು.  ದೇಶ ಪ್ರೇಮವನ್ನು ಬೆಳೆಸಿಕೊಳ್ಳುವುದರಿಂದ ದೇಶದ ನಾಗರಿಕನಾಗಲು ಸಾಧ್ಯ ಎಂದರು. ಜಿಲ್ಲಾ ಉಪಾಧ್ಯಕ್ಷರಾದ ಜಿ. ವೆಂಕಟೇಶ್…

Read More

ಶ್ರವಣಬೆಳಗೊಳ: ಶಾಂತಿ ಸರಳತೆ ಮತ್ತು ತ್ಯಾಗದ ಸಂದೇಶವನ್ನು ಬಾಹುಬಲಿಯು ಇಡೀ ಜಗತ್ತಿಗೆ ಸಾರಿದ್ದಾರೆ. ಅಂತಹ ವ್ಯಕ್ತಿಯ ಈ ಆರ‍್ಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದಾಗ ಪರಿಪೂರ್ಣತೆಯ ಸಾರ್ಥಕ ಜೀವನ ನಡೆಸಬಹುದೆಂದು ಮೈಸೂರು ಶಾರದಾ ವಿಲಾಸ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎನ್.ವಿಶ್ವನಾಥ್ ಹೇಳಿದರು. ಗೊಮ್ಮಟ ನಗರದ ಎಸ್.ಎನ್.ಪದವಿ ಪರ್ವ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಸ್ನೇಹಲೋಕ ಹಿರಿಯ ವಿದ್ಯಾರ್ಥಿಗಳ ಬಳಗದವರು ಆಯೋಜಿಸಿದ್ದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿ ಭಾನುವಾರ ಮಾತನಾಡಿದರು. ಶಿಕ್ಷಣ ಪಡೆಯುವ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆಯ ಗುರಿಯನ್ನು ಸಾಧಿಸಬೇಕಾದರೆ ಕಲಿಯುವಿಕೆಯಲ್ಲಿ ಬದಲಾಗುವ ಮನಸ್ಥಿತಿಯನ್ನು ರೂಡಿಸಿಕೊಂಡಾಗ ತನ್ನ ಸ್ವಂತಿಕೆಯ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು. ಜೀವನದಲ್ಲಿ ನಿಂತ ನೀರಾಗದೇ ಸದಾ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಕಷ್ಟ ಪಟ್ಟಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಯುವರಾಜ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ  ಬಬನ್ ಪಿ.ದತ್ತವಾಡೆ ಪ್ರಾಂಶುಪಾಲ…

Read More

ವೈ.ಎನ್.ಹೊಸಕೋಟೆ: ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಟ್ಟಿಕೊಡುವುದೇ ಮುಖ್ಯ ಶಿಕ್ಷಣ ಎಂದು ನಿವೃತ್ತ ಉಪಪ್ರಾಂಶುಪಾಲರಾದ ಡಿ.ಎನ್.ಸುಬ್ಬಣ್ಣ ತಿಳಿಸಿದರು. ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ ೧೯೯೮–೯೯ ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಬಳಗ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತಾಪಿತೃಗಳನ್ನು ಗುರುಗಳನ್ನು ಗೌರವಿಸುವುದು ಮತ್ತು ಪೂಜಿಸುವುದು ಈ ನೆಲದ ಸಂಸ್ಕೃತಿ. ಆ ಸಂಸ್ಕೃತಿಯನ್ನು ನಮ್ಮ ಈ ಶಾಲೆ ಕಟ್ಟಿದೆ. ವಿದ್ಯಾರ್ಥಿಗಳಲ್ಲಿ ಪಾಠಗಳ ಜೊತೆಗೆ ಮೌಲ್ಯಗಳನ್ನು ಕಟ್ಟಿಕೊಟ್ಟಾಗ ಅದು ಉತ್ತಮ ಶಿಕ್ಷಣವಾಗುತ್ತದೆ. ಸಂಸ್ಕಾರವನ್ನು ಕಟ್ಟಿದ ಈ ಶಾಲೆಗೆ ಹಳೆಯ ವಿದ್ಯಾರ್ಥಿಗಳಾದ ತಾವು ಸಹಕಾರ ನೀಡಿದರೆ ಶಾಲಾ ಪ್ರಗತಿ ಸಾಧ್ಯ ಎಂದರು. ಸುವರ್ಣ ಸಂಭ್ರಮದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನಮ್ಮ ಬದುಕು ಸಾರ್ಥಕವೆನಿಸುತ್ತಿದೆ. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮದಡಿ ನಮಗೆ ನೀಡಿದ ಗೌರವಾಧಾರಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಹುಸೇನ್ ತಿಳಿಸಿದರು. ನಾನು ಕಲಿತ  ಈ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ದೊರೆತ ಪುಣ್ಯ ಎಂದು ಭಾವಿಸಿದ್ದೇನೆ.…

Read More

ಪಾವಗಡ : ತಾಲೂಕಿನ ಎಸ್.ಎಸ್.ಕೆ.ಸಮುದಾಯ ಭವನದಲ್ಲಿ  ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕಾಯ೯ಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕ್ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಡಿ.ಜಿ.ಸುನೀತ, ಪೂಜ್ಯ ಡಾ ವಿರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರ ಆಶೀವಾ೯ದದೊಂದಿಗೆ ಕೇಂದ್ರಗಳ ಮೂಲಕ ನಿಮಗೆ ವಿವಿಧ ರೀತಿಯ ಜಾಗೃತಿ ಕಾಯ೯ಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ನೀವೆಲ್ಲರೂ‌‌‌‌ ಯೋಜನೆಯ ಹಾಗೂ ಇಲಾಖೆಗಳ ಕಾಯ೯ಕ್ರಮಗಳನ್ನ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ಬೆಂಗಳೂರು ಪ್ರಾಧೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಸಂಧ್ಯಾಶೆಟ್ಟಿಯವರು ಜ್ಞಾನವಿಕಾಸ ಸಂಘಗಳ ಸದಸ್ಯರ ಜವಾಬ್ಧಾರಿಗಳು, ಕಾಯ೯ಕ್ರಮಗಳ ಬಗ್ಗೆ ಮಾತನಾಡಿದರು‌‌. ಪಾವಗಡ ತಾಲೂಕಿನ ತಾಲ್ಲೂಕ್ ಯೋಜನಾಧಿಕಾರಿಗಳಾದ ಮಹೇಶ್ ಹೆಚ್.,  ಯೋಜನೆಯ ಪ್ರಾರಂಭ ದಿನಗಳಿಂದ ಇಲ್ಲಿಯವರೆಗೂ ಯೋಜನೆ ನಡೆದು ಬಂದ ದಾರಿ ಹಾಗೂ ಯೋಜನೆಯ ಕಾಯ೯ಕ್ರಮಗಳ ಬಗ್ಗೆ ಹಾಗು ಜ್ಞಾನವಿಕಾಸ ಕೇಂದ್ರಗಳ ಗುರಿ ಉದ್ದೇಶಗಳ ಬಗ್ಗೆ ಮಾತನಾಡಿದರು. ಪೂಜಾ ವೈದ್ಯಾಧಿಕಾರಿಗಳು ಮಹಿಳಾ ಆರೋಗ್ಯಸಮಸ್ಯೆಗಳು ಸವೈ೯ಕಲ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಕಾಯ೯ಕ್ರಮದ…

Read More

ಪಾವಗಡ: ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರ ಹುಟ್ಟು ಹಬ್ಬದ ಪ್ರಯುಕ್ತ  ಸೋಮವಾರರಂದು  ಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ಕಣಿವೇನಹಳ್ಳಿ ಗೇಟ್ ಬಳಿಯಿರುವ ಅನಾಥಾಶ್ರಮದಲ್ಲಿ ಬ್ರೇಡ್ ಮತ್ತು ಹಣ್ಣುಗಳನ್ನು ವಿತರಣೆ ಮಾಡಿ ಬಳಿಕ, ಪಕ್ಷದ ಕಚೇರಿಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಮ್ಮರಾಯಪ್ಪ, ತಾಲ್ಲೂಕು ಅಧ್ಯಕ್ಷರಾದ ಎನ್.ಎ. ಈರಣ್ಣ, ಗೌರವಾಧ್ಯಕ್ಷರಾದ ರಾಜಶೇಕರಪ್ಪ, ಸತ್ಯಪ್ಪ, ಚನ್ನಮಲ್ಲಯ್ಯ, ಬಲರಾಮರೆಡ್ಡಿ, ಗೋವಿಂದಬಾಬು, ಅಕ್ಕಲಪ್ಪನಾಯ್ಡು ಗೋವಿಂದಪ್ಪ, ರಾಜಗೋಪಾಲ, ನಾಗರಾಜು, ಶಿವಕುಮಾರ್, ಗಡ್ಡಂತಿಮ್ಮಪ್ಪ, ಕಾವಲಗೇರಿ ರಾಮಾಂಜಿ, ಮನು, ವೆಂಕಟೇಶ್, ನಾಗೇಂದ್ರ,  ಗೋಪಾಲ, ಆಫ್ ಬಂಡೆ ಗೋಪಾಲ, ಗಂಗಾಧರ ನಾಯ್ಡು, ಯೂನಸ್, ಧರ್ಮಪಾಲ, ಭರತ್, ಸೆಲೇಕ್ಟ್ ಟೈಲರ್ ಹನುಮಂತರೆಡ್ಡಿ,  ಅಂಭಿಕಾ, ಶಿಲ್ಪ ಮಹೇಶ್, ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ: ನಂದೀಶ್ ನಾಯ್ಕ ಪಿ.,  ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ಮೈಸೂರು ಜಿಲ್ಲೆ , ಹುಣಸೂರು ತಾಲೂಕಿನ, ಬಿಳಿಕೆರೆ ಹೋಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಗೋಮ್ಮಟಗಿರಿಯ ಶ್ರೀ ಬಾಹುಬಲಿ ಮಹಾ ಮಸ್ತಕಾ ಭಿಷೇಕ ಡಿಸೆಂಬರ್ 12ರಿಂದ 15ರವರೆಗೆ ವೈಭವದಿಂದ ನಡೆದು ಸಂಪನ್ನಗೊಂಡಿತು. ಶ್ರೀ ಕ್ಷೇತ್ರ ಹೊಂಬುಜ ಪೀಠಾಧ್ಯಕ್ಷರಾದ  ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟರಕ ಭಟ್ಟಾಚಾರ್ಯ  ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರು ಕೀರ್ತಿ  ಭಟ್ಟರಕ ಶ್ರೀಗಳು, ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠ ದ ಸ್ವಸ್ತಿ ಶ್ರೀ  ಭುವನ ಕೀರ್ತಿ ಭಟ್ಟರಕ ಮಹಾಸ್ವಾಮಿಗಳು, ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಶ್ರೀಗಳು,  ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ದೇಶಕೇಂದ್ರಿ ಮಹಾಸ್ವಾಮಿಗಳು ಭಾಗವಹಿಸಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ನಾಲ್ಕು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ,ಮೇಘಾಲಯದ ರಾಜ್ಯಪಾಲರಾದ ಸಿ.ಎಚ್.ವಿಜಯ್ ಶಂಕರ್, ವಿಧಾನ ಪರಿಷತ್ ಸದಸ್ಯ ಗೋ ಮಧುಸೂಧನ್,…

Read More

ಗೌರಿಬಿದನೂರು:   ಜೈನ ಧರ್ಮದ ಯಾವುದೇ ಧರ್ಮ ಕಾರ್ಯದ ಯಶಸ್ವಿಗೆ  “ಪುಣ್ಯ ಸಂಪಾದನೆ”  ಅಗತ್ಯವಾಗಿದ್ದು ಇದರಿಂದ ಎಲ್ಲಾ ಕಾರ್ಯಗಳ ಯಶಸ್ಸು ಸಾಧ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕಿನ, ಶ್ರೀ ಕ್ಷೇತ್ರ ಗುಂಡ್ಲಹಳ್ಳಿಯಲ್ಲಿ ಶ್ರೀ ಶೀತಲನಾಥ ತೀರ್ಥಂಕರ ಹಾಗೂ ಬ್ರಹ್ಮ  ಯಕ್ಷರ 38ನೇ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಾತನವಾದ ಜೈನ ಧರ್ಮದಲ್ಲಿ ಯುವ ಪೀಳಿಗೆಯಲ್ಲಿ ಸಂಪ್ರದಾಯ, ಧಾರ್ಮಿಕತೆ ಕಡಿಮೆಯಾಗುತ್ತಿದೆ ಆಧುನಿಕತೆ, ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿದ್ದು, ವಿದ್ಯಾವಂತರಿಗೆ ಸರಿಯಾದ ಹೆಣ್ಣು ಸಿಗುತ್ತಿಲ್ಲ, ಹೆಣ್ಣು ಮಕ್ಕಳಿಗೆ ಗಂಡು ಸಿಗುತ್ತಿಲ್ಲ, ಉದ್ಯೋಗ ಸಿಗುತ್ತಿಲ್ಲ ಎಂಬ ಕೊರಗಿದ್ದು ಇದೊಂದು ಯಕ್ಷ ಪ್ರಶ್ನೆ ಆಗಿದೆ ಇವುಗಳ ನಿವಾರಣೆಗೆ ಪುಣ್ಯ ಸಂಪಾದನೆ ಅಗತ್ಯವಾಗಿದೆ ಎಂದು ಭಟ್ಟಾರಕಶ್ರೀ ಗಳು , ಯುವ ಜನಾಂಗ ನಿತ್ಯ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಬೆಳೆದಾಗ ಪುಣ್ಯ ಸಂಪಾದನೆಯಾಗಿ…

Read More