ತುಮಕೂರು: ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಎಸಿ, ವಾಣಿಜ್ಯ ವಿಭಾಗದ ವತಿಯಿಂದ ಚಾರ್ಟೆಡ್ ಅಕೌಂಟೆಂಟ್ ಒರಿಯೆಂಟೇಶನ್ ಕಾರ್ಯಕ್ರಮವನ್ನು ಐ ಸಿ ಏ ಐ ಜೊತೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿ ಜೀವನದಲ್ಲಿ ಎಲ್ಲ ವಿದ್ಯಾರ್ಥಿಗಳು ಕನಸು ಕಾಣ್ತಾರೆ ಅದನ್ನು ನನಸು ಮಾಡವುದು ಮುಖ್ಯ ಜವಾಬ್ದಾರಿ. ಎಲ್ಲರಿಗೂ ಕೆಲಸ ಸಿಗುತ್ತೆ ಆದರೆ ಕನಸು ಕಂಡ ಕೆಲಸ ಸಿಗಬೇಕೆಂದು ಕನಸನ್ನು ನನಸು ಮಾಡುವುದೇ ವಿದ್ಯಾರ್ಥಿಯ ಗುರಿಯಾಗಿರಬೇಕು. ಚಾರ್ಟೆಡ್ ಅಕೌಂಟ್ ಪರೀಕ್ಷೆ ಕ್ಲಿಯರ್ ಮಾಡೋದು ಸುಲಭದ ಮಾತಲ್ಲ ಆದರೆ “ಮನಸ್ಸಿದ್ದರೆ ಮಾರ್ಗ” ಎಂಬಂತೆ ನಿಮ್ಮ ಓದಿನಲ್ಲಿನ ಶ್ರಮ ,ಆಸಕ್ತಿ ಇದ್ದರೆ ಎಲ್ಲವೂ ಸಾಧ್ಯ ನಾಲ್ಕೈದು ವರ್ಷ ಕಷ್ಟಪಟ್ಟು ಜೊತೆಗೆ ಇಷ್ಟದಿಂದ ಓದಿನಲ್ಲಿ ಆಸಕ್ತಿ ವಹಿಸಿದರೆ ಪರೀಕ್ಷೆಯನ್ನು ಎದುರಿಸಲು ಯಾವುದೇ ತೊಂದರೆ ಇರುವುದಿಲ್ಲ. ಮೊದಲ ಬಾರಿಗೆ ಪ್ರಯತ್ನ ವಿಫಲವಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಿಸಿ ಮುಂದೆ ಒಂದಿನ ಸಿಎ ಆಗ್ತೀರಾ. ನಿಮ್ಮ ಓದಿನಲ್ಲಿ ಆತ್ಮವಿಶ್ವಾಸ ಮುಖ್ಯ ಜೊತೆಗೆ ಸಂಬಂಧಪಟ್ಟ ಟೆಸ್ಟ್ ಬುಕ್ ನಾಲೆಡ್ಜ್ ಬೆಳೆಸಿಕೊಳ್ಳುವುದು ಉತ್ತಮ ಸಂಗತಿ ಎಂದು ತುಮಕೂರಿನ ಎಸ್ ಎಸ್ ಇಎಸ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಬಿ ನಂಜುಂಡಪ್ಪ ವಿದ್ಯಾರ್ಥಿಗಳಿಗೆ ಪ್ರೇರಣೆ ಮಾತುಗಳನ್ನಾಡಿದರು.
ತುಮಕೂರಿನ ಶ್ರೀ ಸಿದ್ಧಾರ್ಥ ಪಿಯು ಕಾಲೇಜ್ ಸರಸ್ವತಿಪುರo ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸುನಿಲ್.ಹೆಚ್, ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸಹಾಯ ಆಗಬೇಕೆಂಬ ಉದ್ದೇಶದಿಂದ ಚಾರ್ಟೆಡ್ ಅಕೌಂಟ್ ಓರಿಯೆಂಟೇಶನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಿಕ್ಕಿರುವಂತ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು, ನಿಮ್ಮ ಜೀವನವನ್ನು ಯಾವ ರೀತಿ ನಿರ್ಮಿಸಿಕೊಳ್ತೀರಾ ಅನ್ನುವುದಕ್ಕೆ ನೀವೇ ಜವಾಬ್ದಾರಿ. ಋಣಾತ್ಮಕ ಅಂಶವನ್ನು ತೊರೆದು ಧನಾತ್ಮಕ ಅಂಶವನ್ನು ತಲೆಗೆ ಬಿತ್ತಿಕೊಳ್ಳಿ ಆಗ ಮಾತ್ರ ಜೀವನದಲ್ಲಿ ಒಳ್ಳೆ ಐಡೆಂಟಿಟಿ ಸಿಗುತ್ತೆ ಎಂದರು.
ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ ಹೇಮಲತಾ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಅಧ್ಯಕ್ಷತೆ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸ್ಪೋಕ್ ಪರ್ಸನ್ ಸಿಎ ಛಾಯಾಶ್ರೀ TRG, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಅಧಿಕಾರಿಗಳಾದ ಕಲಂದರ್ ಪಾಷ್, ಕನ್ನಡ ವಿಭಾಗದ ಮುಖ್ಯಸ್ಥರಾದ ರಮೇಶ್ ಮಣ್ಣೇ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ , ಐ ಕ್ಯೂ ಎಸಿ ಸಂಯೋಜಕರು ಹಾಗೂ ಎಂಕಾಂ ವಿಭಾಗದ ಮುಖ್ಯಸ್ಥರಾದ ಸಯ್ಯದ್ ಬಾಬು ಹಾಗೂ ಎಲ್ಲಾ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಜೊತೆಗೆ ಸಿದ್ಧಾರ್ಥ ಸಂಸ್ಥೆಯ ವಿವಿಧ ಪಿಯು ಕಾಲೇಜ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx