ಪಾವಗಡ : ಆರೋಗ್ಯದ ಕಾಳಜಿ ಬಗ್ಗೆ ಸಾರ್ವಜನಿಕರು ಹೆಚ್ಚು ಗಮನ ನೀಡಿ, ಹೆಲ್ಪ್ ಸೊಸೈಟಿ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಜೊತೆಗೆ ಹೆಲ್ಪ್ ಸೊಸೈಟಿ ಸೇವಾ ಕಾರ್ಯಕ್ಕೆ ನಾವು ಕೂಡ ಕೈ ಜೋಡಿಸಿ ಮತ್ತಷ್ಟು ಸೇವೆಗೆ ಸಹಕಾರಿಯಾಗಬೇಕೆಂದು ಕರೆ ನೀಡಿದರು.
ಪಾವಗಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಹೆಲ್ಪ್ ಸೊಸೈಟಿ, ಸೇವಾ ಟ್ರಸ್ಟ್, ಹಾಗೂ ಆಕಾಶ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಬೆಂಗಳೂರು ರವರ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮವನ್ನು ಕುರಿತು ತಿಳಿಸಿದರು.
ಕಮ್ಮ ಸಂಘದ ಅಧ್ಯಕ್ಷರಾದ ವೈ ಆರ್ ಚೌದರಿ, ನಿವೃತ್ತ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ರವರು ಮಾತನಾಡುತ್ತ ಗಡಿ ಭಾಗದ ಭೀಮನಕುಂಟೆ ಗ್ರಾಮದಲ್ಲಿ ಅರೋಗ್ಯ ಶಿಬಿರ ಆಯೋಜನೆಗೆ ಹೆಲ್ಪ್ ಸೊಸೈಟಿ ಮುಂದಾದಲ್ಲಿ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡುತ್ತ ಹೆಲ್ಪ್ ಸೊಸೈಟಿ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಿಬಿರದ ಆಯೋಜಕರಾದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸೇವಾ ಟ್ರಸ್ಟ್ ಮಾರ್ಗದರ್ಶಕರಾದ ಶ್ರೀಮತಿ ಸಂದ್ಯಾ ಮಾನಂ ಶಶಿಕಿರಣ್ ಪುರಸಭೆ ಸದಸ್ಯರಾದ ಗೊರ್ತಿ ನಾಗರಾಜ್, ಪ್ರಿನ್ಸಿಪಾಲ್ ರಾಮಕೃಷ್ಣ, ಜೂನಿಯರ್ ಕಾಲೇಜು, ಪಾವಗಡ ಅಮಿಲಿನೆನಿ ನರಸಿಂಹಮೂರ್ತಿ, ಅಮಿಲಿನೆನಿ ನರೇಶ್, ವೀರಮ್ಮನಹಳ್ಳಿ ಮಾಸಿನೆನಿ ಲೋಕೇಶ್, ಹೆಲ್ಪ್ ಸೊಸೈಟಿ ರಾಕೇಶ್,ನರೇಶ್, ಉಪಸ್ಥಿತರಿದ್ದರು.
ಆಕಾಶ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ವೈದ್ಯರನ್ನು ಅತಿಥಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ, ಗಡಿನಾಡು ಪಾವಗದಲ್ಲಿ ಮತ್ತಷ್ಟು ಸೇವೆ ನೀಡುವಂತೆ ಸ್ಮರಿಸಿ ಸತ್ಕರಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx