Author: admin

ಬೆಂಗಳೂರು/ಉತ್ತರ ಕನ್ನಡ: ಕರಾವಳಿ ಕರ್ನಾಟಕ ಭಾಗದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಕುಂಬಾರಕೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಣಧೀರರ ವೇದಿಕೆಯ ನೂತನ ಜಿಲ್ಲಾ ಘಟಕ ಉದ್ಘಾಟನೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ನೆರವೇರಿಸಿದರು. ನೂತನ ಜಿಲ್ಲಾ ಘಟಕವನ್ನ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ಸೂರಜ್ ಪಾಂಡುರಂಗ ನಾಯ್ಕ ರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ನೂತನ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಕಿರಣ ಚಂದ್ರಹಾಸ ಗಾಂವಾಕರ ಮತ್ತು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಪ್ರಿಯಾ ವಿಷ್ಣು ನಾಯ್ಕ, ಜಿಲ್ಲಾ ಸಮಿತಿ ಸದಸ್ಯರನ್ನು ನೇಮಕ ಮಾಡಿ ಆದೇಶ ಪತ್ರ ಮತ್ತು ಗುರುತಿನ ಚೀಟಿ ನೀಡಿ ಅಧಿಕಾರ ವಹಿಸಿದರು. ಕನ್ನಡಿಗರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆಗೆ ಮುಕ್ತಿ ನೀಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ಭಾಷೆಯ ತಾರತಮ್ಯ ನೀತಿಯನ್ನ ಸರ್ಕಾರಗಳು ಬಿಡಬೇಕು, ದ್ವಿಭಾಷಾ…

Read More

ಪಾವಗಡ: ತಾಲ್ಲೂಕು ಯೋಜನಾ ಕಚೇರಿ ವ್ಯಾಪ್ತಿಯ ಪಳವಳ್ಳಿ ವಲಯದ ದೊಡ್ಡಹಳ್ಳಿ ಗ್ರಾಮದಲ್ಲಿ ಸಾಮೂಹಿಕ‌ ಶ್ರೀಸತ್ಯನಾರಾಯಣ ಪೂಜೆ‌ ಧಾಮಿ೯ಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ಸದಸ್ಯರಾದ  ಅಶ್ವಥ್ ಕುಮಾರ್,  ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರು ಎಲ್ಲಾ ಸಾವ೯ಜನಿಕರು ಸ್ವ –ಸಹಾಯ ಸಂಘಗಳ ಸದಸ್ಯರು‌ ಸೇರಿಕೊಂಡು ಸಾಮೂಹಿಕವಾಗಿ ಸರಳವಾಗಿ ಪೂಜಾ ಕಾಯ೯ಕ್ರಮ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮೆಲ್ಲರ ಪುಣ್ಯ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿಗಳಾದ ಮಹೇಶ್ ಮಾತನಾಡಿ,  ಪೂಜ್ಯರ ದೂರದೃಷ್ಠಿ‌ ಆಶಯದಂತೆ‌ ನಮ್ಮ ತಾಲ್ಲೂಕಿನಲ್ಲಿ ಸ್ವ–ಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಬ್ಯಾಂಕ್ ಗಳ ಆಥಿ೯ಕ ಸಹಾಯದೊಂದಿಗೆ‌  ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿದೆ ಎಂದು ತಿಳಿಸಿದರು. ‌ ಕಾಯ೯ಕ್ರಮ ದಲ್ಲಿ‌ ದಿವ್ಯಸಾನಿಧ್ಯವಹಿಸಿ‌‌ ಆಶೀವ೯ಚನ ನೀಡಿದ‌‌ ನಿಡಗಲ್ ಸಂಸ್ಥಾನದ‌ ವಾಲ್ಮೀಕಿ ‌ಶ್ರೀ ಸಂಜಯ್ ಕುಮಾರ್ ಮಹಾಸ್ವಾಮಿಗಳು,‌ ಧಮ೯ಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರು ಎಲ್ಲಾ ವಗ೯ಗಳ‌ ಕೋಟ್ಯಾಂತರ‌‌‌‌ ‌ಕುಟುಂಬಗಳ‌ ಸವ೯ತೋಮುಖ ಅಭಿವೃದ್ದಿಗೆ‌ ಸಹಾಯ ಮಾಡುತ್ತಿರುವುದು‌‌ ದೇಶದಲ್ಲಿಯೇ ಶ್ಲಾಘನೀಯ  ಎಂದರು. ಈ ಕಾಯ೯ಕ್ರಮದಲ್ಲಿ ಚಿಕ್ಕಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರು‌‌…

Read More

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆಗೆ ಶನಿವಾರದಂದು ಚುನಾವಣೆ ನಡೆದಿದೆ. ಕುತೂಹಲ ಭರಿತವಾದಂತಹ ಈ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಯತಿ ಕುಮಾರ್ ಹಾಗೂ ಕಂದಾಯ ಇಲಾಖೆಯ ರವಿಕುಮಾರ್ ಕಣದಲ್ಲಿದ್ದು, ಖಜಾಂಚಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ರಾಮಾಂಜನೇಯಲು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ಶೇಖರ್ ಬಾಬು ಕಣದಲ್ಲಿದ್ದಾರೆ. ಒಟ್ಟು 33 ಮತಗಳ ಪೈಕಿ 31 ಮತ ಚಲಾವಣೆಯಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಧಾಮಪ್ಪ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಅಭ್ಯರ್ಥಿಯಾಗಿರುವ ಯತಿ ಕುಮಾರ್ ಮತಗಟ್ಟೆಯ ಕಡೆ ತಲೆ ಹಾಕದಿರುವುದು ಕುತೂಹಲಕ್ಕೆ ಕಾರಣವಾಗಿತ್ತು, ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತಹ ಸಂದರ್ಭದಲ್ಲಿ ಮೊದಲಿಗೆ ಯತಿ ಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು ನಂತರ ಸ್ವೀಕರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಚುನಾವಣಾ ಅಧಿಕಾರಿ ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಧಾಮಪ್ಪ ಅವರು…

Read More

ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ನವೆಂಬರ್ 18ರಿಂದ ಮಳೆಯ ಪ್ರಮಾಣ ಕಡಿಮೆಯಾಗಿ 20ರಿಂದ ಒಣಹವೆ ಆವರಿಸುವ ಲಕ್ಷಣಗಳಿವೆ. ಮಲೆನಾಡು : ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಮಳೆ ಹಾಗೂ ಉಳಿದ ಭಾಗಗಳಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಒಳನಾಡು: ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೋಡ…

Read More

ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಚೇಳೂರು , ಗುಬ್ಬಿ ತಾಲೂಕು , ತುಮಕೂರಿನಲ್ಲಿ ಚಿತ್ರಕಲಾ ಶಿಕ್ಷಕರರಾದ ಆನಂದ್ ಎಸ್.ವಿ.ರವರು ಮುಖ್ಯ ಶಿಕ್ಷಕರಾದ ಗಿರೀಶ್ ಜಿ.ಎಚ್. ರವರ ಸಹಕಾರದಿಂದ ತಮ್ಮ ಶಾಲೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗಾಗಿ ಚಿತ್ರಕಲೆಯ ವಿಷಯಗಳ ಬಗ್ಗೆ ಮತ್ತು ಅದರ ಪ್ರಕಾರಗಳ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಚಿತ್ರಕಲಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಇಲ್ಲಿ ಚಿತ್ರಕಲೆಯ ವಿಷಯಗಳು ಅವುಗಳ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ತಿಳಿಸಲಾಯಿತು. ಅಂಕ ಗಳಿಕೆಯ ಹುಚ್ಚು ಪೈಪೋಟಿಯ ನಡುವೆ ಮಕ್ಕಳ ಮನಸ್ಸನ್ನು ಮುದಗೊಳಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಹದಗೊಳಿಸುವ ಈ ಕಾರ್ಯಾಗಾರವು ಕ್ರಿಯಾಶೀಲವಾಗಿ ನಡೆದಿರುವುದು ಶಾಲೆಯ ಮಕ್ಕಳು , ಶಿಕ್ಷಕರು ಮತ್ತು ಪೋಷಕರಿಗೆ ಅರ್ಥಪೂರ್ಣವೆನಿಸಿದೆ. ಇಂದು ರಂಗೋಲಿ ಕಲೆಯು ಭಾರತೀಯ ಚಿತ್ರಕಲೆಯ ಒಂದು ಪ್ರಕಾರವಾಗಿ ಗುರುತಿಸಲ್ಪಟ್ಟಿದೆ. ರಂಗೋಲಿಗೆ ಭಾರತೀಯ ಜನಪದದ ಪುರಾತನ  ಮಹತ್ವವಿದೆ. ಶುಭದ ಸಂಕೇತವಾಗಿ ನೆಲದ ಮೇಲೆ   ಬಿಡಿಸಲಾಗುವ ಈ ರಂಗೋಲಿಯನ್ನು ಬಾಗಿಲ ಅಂಚು ಮತ್ತು ಗೋಡೆಗಳ ಅಂಚುಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಅಳಿವಿನಂಚಿನಲ್ಲಿ ಇರುವ…

Read More

ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಮಿಂಚಿದ್ದ ಲಾಯರ್‌ ಜಗದೀಶ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರಂತೆ. ಆದ್ರೆ ಈ ಬಾರಿ ರಾಷ್ಟ್ರಮಟ್ಟದಲ್ಲಿ ಜಗದೀಶ್ ಮಿಂಚಲಿದ್ದಾರೆ ಅಂತ ಹೇಳಲಾಗಿದೆ. ಈ ಬಗ್ಗೆ ಲಾಯರ್ ಜಗದೀಶ್ ಅವರೇ ವಿಡಿಯೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹಿಂದಿ ಬಿಗ್‌ ಬಾಸ್‌ ಗೆ ಎಂಟ್ರಿ ಕೊಡುವ ಬಗ್ಗೆ ಲಾಯರ್‌ ಜಗದೀಶ್ ಅವರೇ ಮಾತನಾಡಿದ್ದಾರೆ. ನಾನು ಇಷ್ಟರಲ್ಲೇ ಹಿಂದಿ ಬಿಗ್‌ ಬಾಸ್‌ಗೆ ಹೋಗ್ತಾ ಇದ್ದೀನಿ ಅಂತ ಲಾಯರ್‌ ಜಗದೀಶ್ ಅವರೇ ಹೇಳಿಕೊಂಡಿದ್ದಾರೆ.  ಕರ್ನಾಟಕದ ಹಲವು ಗಣ್ಯರು ಬಾಲಿವುಡ್‌ಗೆ ಎಂಟ್ರಿಕೊಟ್ಟು ಮಿಂಚಿದ್ದಾರೆ. ಆ ಅದೃಷ್ಟ ಈಗ ನನ್ನನ್ನೂ ಹುಡುಕಿಕೊಂಡು ಬಂದಿದೆ. ಕರ್ನಾಟಕದಿಂದ ಪ್ರಕಾಶ್‌ ರಾಜ್‌, ಐಶ್ವರ್ಯಾರೈ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಈಗಾಗಲೇ ಹಲವರು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಇದೀಗ ನನಗೂ ಆ ಅವಕಾಶ ಸಿಕ್ಕಿದೆ. ನಾನೂ ಸಹ ಬಾಲಿವುಡ್‌ ನಲ್ಲಿ ಮಿಂಚಲಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಬಾಲಿವುಡ್ ನಿಂದ ಆಫರ್ ಬಂದಿದೆ ಅದರ ಬಗ್ಗೆ ಡಿಸ್ಕಷ್ನ್‌ ನಡಿತಿದೆ. ಸೋಮವಾರವೇ ಇದು…

Read More

ಹುಬ್ಬಳ್ಳಿ: ಆರ್ಥಿಕವಾಗಿ‌ ದಿವಾಳಿಯಾಗಿದ್ದರಿಂದ ರಾಜ್ಯ ಸರ್ಕಾರ ಪಡಿತರ ಚೀಟಿಗಳನ್ನು ಕಡಿತ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದ್ದಾರೆ. ರಾಜ್ಯದ ಆಹಾರ ಮತ್ತು‌ ನಾಗರಿಕ‌ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ.  ಕೇಂದ್ರ ಸರ್ಕಾರ ಪ್ರತಿಯೊಬ್ಬ ಅರ್ಹ ಪಡಿತರದಾರನಿಗೆ 5 ಕೆ.ಜಿ.ಯಷ್ಟು ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇಷ್ಟಾದರು ಪಡಿತರ ಚೀಟಿ‌ ಕಡಿತ ಯಾಕೆ ಮಾಡುತ್ತಿದ್ದಾರೆ ಇದರಿಂದ ಬಡವರಿಗೆ ತೊಂದರೆ ಆಗುತ್ತದೆ. ಕನಿಷ್ಠ ಬೆಂಬಲ‌ ಬೆಲೆಯಲ್ಲಿ‌ ಗೋಧಿ, ಭತ್ತ ಇನ್ನಿತರ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಮುಂದಾಲೋಚನೆ, ಯೋಜನಾ ಬದ್ದವಿಲ್ಲದ ಗ್ಯಾರಂಟಿಗಳ ಜಾರಿಯೇ ಇದಕ್ಕೆಲ್ಲ‌ ಕಾರಣವಾಗಿದೆ ಎಂದರು. ಸಿಎಂ‌ ಸಿದ್ದರಾಮಯ್ಯ ನುಡಿದಂತೆ ನಡೆಯುತ್ತೇವೆ ಎನ್ನುತ್ತಾರೆ. ಆದರೆ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು‌ ಆರೋಪಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ನವದೆಹಲಿ: ನೈಜೀರಿಯಾದ ರಾಜಧಾನಿ ಅಬುಜಾಗೆ ಆಗಮಿಸಿದ ಪ್ರಧಾನಿ ಮೋದಿಗೆ ಭಾರತೀಯ ವಲಸಿಗರು ಆತ್ಮೀಯವಾಗಿ ಸ್ವಾಗತಿಸಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಇದೇ ವೇಳೆ ಬಾಲಕಿಯರು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು. ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಜನರ ಆಶಯಗಳನ್ನು ಒಪ್ಪಿಕೊಂಡರು. ಸಾಂಪ್ರದಾಯಿಕ ಉಡುಪನ್ನು ಧರಿಸಿದ ಭಾರತೀಯ ಸಮುದಾಯದ ಜನರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿದ್ದರು. ಈ ಸಂದರ್ಭದಲ್ಲಿ ಕೆಲವರು ಪ್ರಧಾನಿ ಮೋದಿಯವರ ಆಟೋಗ್ರಾಫ್ ಕೂಡ ತೆಗೆದುಕೊಂಡರು. ವಲಸೆ ಸಮುದಾಯದ ಅನೇಕ ಸದಸ್ಯರು ಭಾರತೀಯ ಧ್ವಜಗಳನ್ನು ಹಿಡಿದು ಉತ್ಸಾಹದಿಂದ ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ  ಕಂಡುಬಂದಿದೆ. ಭಾರತೀಯ ವಲಸಿಗರ ಸಂಘದ ಸದಸ್ಯ ಗಿರೀಶ್ ಜಯಕರ್ ಮಾತನಾಡಿ, ನಮ್ಮ ಪ್ರಧಾನಿಯನ್ನು ಭೇಟಿಯಾಗುವುದು ತುಂಬಾ ರೋಮಾಂಚನಕಾರಿಯಾಗಿದೆ. ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿಯಾಗಿದೆ ಎಂದು ಕೊಂಡಾಡಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ವಿದ್ಯಾರ್ಥಿಗಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಅಮೆರಿಕಾದ ಮಿಸೌರಿಯ ಡಿಕ್ಸನ್ ಸ್ಕೂಲ್ ಡಿಸ್ಟ್ರಿಕ್ಟ್‌ನ 30 ವರ್ಷದ ಮಾಜಿ ಶಿಕ್ಷಕಿ ಕ್ಯಾರಿಸ್ಸಾ ಜೇನ್ ಸ್ಮಿತ್ ಳನ್ನು ಪೊಲೀಸರು ಬಂಧಿಸಿದ್ದಾರೆ. ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ವಿದ್ಯಾರ್ಥಿಗಳಿಗೆ ಈಕೆ ಹಣ, ಮದ್ಯ, ಮಾದಕ ವಸ್ತುಗಳನ್ನು ನೀಡುತ್ತಿದ್ದಳು ಎನ್ನುವ ಆರೋಪ ಕೂಡ ಈಕೆಯ ಮೇಲಿದೆ. ಆಗಸ್ಟ್ 2023 ಮತ್ತು ಸೆಪ್ಟೆಂಬರ್ 2024 ರ ನಡುವೆ ಸಂಭವಿಸಿವೆ ಈ ಘಟನೆ ನಡೆದಿತ್ತು. ಈಗಾಗಲೇ ಮದುವೆಯಾಗಿರುವ ಸ್ಮಿತ್, ಲೈಂಗಿಕತೆಯನ್ನು ಹೊಂದಲು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಮತ್ತು ಇತರ ಸ್ಥಳಗಳಿಗೆ ಆಹ್ವಾನಿಸುತ್ತಿದ್ದಳು ಎಂದು ಅಲ್ಲಿನ ಮಾಧ್ಯಮಗಳ ವರದಿ ಮಾಡಿವೆ. ಸ್ನ್ಯಾಪ್‌ ಚಾಟ್ ಮೂಲಕ ತನ್ನ ನಗ್ನ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದ ಈಕೆ 100 ಡಾಲರ್ ಅಥವಾ ಗಾಂಜಾ ಕಳಿಸುತ್ತಿದ್ದಳಂತೆ.  ಡಿಕ್ಸನ್ ಹೈಸ್ಕೂಲ್‌ಗೆ  ಆಕೆಯ ರಾಜೀನಾಮೆ ಆಗಸ್ಟ್ 2024 ರಲ್ಲಿ ಬಂದಿದ್ದು ಪ್ರಸ್ತುತ, ಆಕೆಯ ಮೇಲೆ ಒಟ್ಟು 19 ಅಪರಾಧಗಳ ಆರೋಪವಿದೆ. ಅತ್ಯಾಚಾರ, ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ, ಲೈಂಗಿಕ ದುರ್ನಡತೆ, ವೇಶ್ಯಾವಾಟಿಕೆಯನ್ನು…

Read More

ತುಮಕೂರು:  ಚಾಕುವಿನಿಂದ ಚುಚ್ಚಿ ಯುವಕನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ. ರಿಹಾನ್ ಪಾಷ (20) ಕೊಲೆಯಾದ ಯುವಕನಾಗಿದ್ದಾನೆ. ಮನೆಯಲ್ಲಿ ಊಟ ಮಾಡುತ್ತಿದ್ದವನ್ನ ಕರೆಸಿ  ಬರ್ಬರವಾಗಿ ಚಾಕುವಿನಿಂದ ಚುಚ್ಚಿದ ಕೊಲೆ ಮಾಡಿದ್ದಾರೆ. ಹುಡುಗಿ ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆ ಇದ್ದು, ಮಾತಾಡಬೇಕು ಬಾ ಎಂದು ಕರೆಸಿ ಹೊಟ್ಟೆಭಾಗಕ್ಕೆ ಇರಿದಿರುವ ಪಾತಕಿಗಳು. ತೀವ್ರ ರಕ್ತಸ್ರಾವದಿಂದ ಯುವಕ ಕುಸಿದು ಬಿದ್ದನು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು,  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮರಳೂರು ದಿಣ್ಣೆಯಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More