Author: admin

ಚಿಕ್ಕಮಗಳೂರು: ಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ. ಶೀಘ್ರವಾಗಿ ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಹರ್ ಘರ್ ಜಲ್ ಎಂಬ ಘೋಷಣೆಯೊಂದಿಗೆ ದೇಶದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಹಾಗೂ ಸಮರ್ಪಕ  ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಕಾಮಗಾರಿಯನ್ನು ಪ್ರದೇಶಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಯೋಜನೆ ಸಿದ್ದಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರತಿಯೊಂದು ಮನೆಗೆ ನೀರು ಒದಗಿಸಲು ಕ್ರಮವಹಿಸಿ ಎಂದು ತಿಳಿಸಿದರು. ಕಾಮಗಾರಿಗೆ ಬಳಸುವ ಪೈಪ್, ಟ್ಯಾಪ್, ಮೀಟರ್‌ಗಳು ಹಾಗೂ ಇನ್ನಿತರ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ನಂತರ…

Read More

ರಾಜ್ಯದಾದ್ಯಂತ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. ಇವತ್ತಿನಿಂದ ರಾಜ್ಯದಲ್ಲಿ ಛಳಿಯ ಪ್ರಮಾಣ ಕಡಿಮೆಯಾಗುವ ಸೂಚನೆಗಳಿವೆ. ಬಂಗಾಳಕೊಲ್ಲಿಯ ತಮಿಳುನಾಡು ಕರಾವಳಿಯಲ್ಲಿರುವ ಪೆಂಗಾಲ್ ಚಂಡಮಾರುತವು ಡಿಸೆಂಬರ್ 1ರಂದು ಪಾಂಡಿಚೇರಿ ಮೂಲಕ ಭೂ ಪ್ರವೇಶಿಸುವ ಸಾಧ್ಯತೆಗಳಿದ್ದು, ಡಿಸೆಂಬರ್ 2 ಹಾಗೂ 3 ರಂದು ತಮಿಳುನಾಡು – ಕರ್ನಾಟಕ ಗಡಿ ಭಾಗಗಳಲ್ಲಿ ಸಾಗಿ ಕೇರಳದ ಕೋಜಿಕ್ಕೊಡು ಮೂಲಕ ಅರಬ್ಬಿ ಸಮುದ್ರ ಸೇರುವ ಲಕ್ಷಣಗಳಿವೆ. ರಾಜ್ಯದಲ್ಲಿ ಡಿಸೆಂಬರ್ 2 ರಿಂದ ಡಿಸೆಂಬರ್ 4ರ ತನಕ ದಕ್ಷಿಣ ಒಳನಾಡು, ಕೊಡಗು, ಹಾಸನ, ದಕ್ಷಿಣ ಕರಾವಳಿ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತುಂತುರು ಮಳೆಯ ಸಾಧ್ಯತೆ ಇದ್ದರೆ ಉತ್ತರ ಒಳನಾಡು ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು. ಚಂಡಮಾರುತವು ಅರಬ್ಬಿ ಸಮುದ್ರಕ್ಕೆ ಪ್ರವೇಶಿಸಿದ ನಂತರವೂ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಸೆಳೆಯಲ್ಪಡುವುದರಿಂದ ಹಿಂಗಾರು ರೀತಿಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ತಾಯಂದಿರು ಮೃತಪಟ್ಟಿರುವ  ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರನ್ನು ತಕ್ಷಣ ಬಂಧಿಸಬೇಕು ಎಂದು ನೈಜ್ಯ ಹೋರಾಟಗಾರರ ವೇದಿಕೆ ಮತ್ತು ಮಾಹಿತಿ ಅಧ್ಯಯನ ಕೇಂದ್ರ ಒತ್ತಾಯಿಸಿದೆ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ತಾಯಂದಿರು ಮೃತಪಟ್ಟಿರುವ  ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನಾವು ಮಾನವ ಹಕ್ಕುಗಳ ಆಯೋಗಕ್ಕೆ ಪ್ರಕರಣ ಸಂಖ್ಯೆ 4637/10/3/2024 ರಲ್ಲಿ ದಿನಾಂಕ ದಂದು ದೂರನ್ನು ಸಲ್ಲಿಸಿದ್ದೇವೆ.   ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ  ಈ ಪ್ರಕರಣದ ಮುಖ್ಯ ಆರೋಪಿಯೆಂದು ನಾವು ಪರಿಗಣಿಸಿದ್ದೇವೆ ಎಂದು ನೈಜ ಹೋರಾಟಗಾರರ ವೇದಿಕೆ ತಿಳಿಸಿದೆ. IV fluid ಔಷಧಿಯನ್ನು 2024 ಮಾರ್ಚ್ ತಿಂಗಳಿಂದ ಸರಬರಾಜು ಮಾಡಲು Paschim Bangs pharmaceutical companyಗೆ  ಔಷಧಿಗಳನ್ನು ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಆದೇಶ ನೀಡಿದ್ದರು. ಆದರೆ  ಸದರಿ ಕಂಪನಿಯವರು  ಸರಬರಾಜು ಮಾಡಿರುವ ಔಷಧಿಯು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರದ ಡ್ರಗ್ ಕಂಟ್ರೋಲರ್(…

Read More

ತುಮಕೂರು: ನಗರದ ವಾರ್ಡ್‌ ನಂ.3ರ ಶಿರಾಗೇಟ್‌ ನ 80 ಅಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಕೂಡಲೇ ಸರಿಪಡಿಸುವಂತೆ ʼಎಕ್ಸ್‌ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ಕೋರಿದ್ದರು. ತಕ್ಷಣವೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಹಳೆಯ ಎನ್‌ ಹೆಚ್‌ — 4 ರ ರಸ್ತೆಯ ಎಸ್‌ ಮಾಲ್‌ ಮುಂಭಾಗ ಅಮಾನಿಕೆರೆ ನೀರು ಹರಿಯಲು ಸೇತುವೆ ನಿರ್ಮಾಣಕ್ಕಾಗಿ ರಸ್ತೆಯನ್ನು ಬಂದ್‌ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸಿರುವುದರಿಂದ ರಸ್ತೆಯು ಗುಂಡಿ ಬಿದ್ದು ಹಾಳಾಗಿರುತ್ತದೆ. ಜುಲೈ ತಿಂಗಳಲ್ಲೇ ಈ ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗಿದೆ. ಆದರೆ, ಎಸ್‌ ಮಾಲ್‌ ಬಳಿ ಸೇತುವೆ ಕಾಮಗಾರಿಯು ಮುಕ್ತಾಯಗೊಳ್ಳುವುದು ನಿಧಾನವಾದ್ದರಿಂದ, ಸದರಿ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದ ಎಲ್ಲಾ ವಾಹನಗಳು ಐಡಿಎಸ್‌ಎಂಟಿ ಮುಖ್ಯರಸ್ತೆಯನ್ನೇ ಬಳಸಿಕೊಂಡು ಸಂಚರಿಸುತ್ತಿರುವುದರಿಂದ ರಸ್ತೆಯು ಹಾಳಾಗಿರುತ್ತದೆ. ಆದ್ದರಿಂದ ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಲು ಪಾಲಿಕೆ ವತಿಯಿಂದ ಟೆಂಡರ್‌ ಆಹ್ವಾನಿಸಿ…

Read More

ತುಮಕೂರು: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ  ಸಂಯುಕ್ತಾಶ್ರಯದಲ್ಲಿ 2024–25 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಶನಿವಾರ  ಉದ್ಘಾಟಿಸಲಾಗಿದೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಯುವಕರು ಮತ್ತು ಯುವತಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ ಆಹಾರದ ಬಗ್ಗೆ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್ ಯಾಕೆ…! ಇಂತಹ ಸಾತ್ವಿಕ ಆಹಾರ ಸವಿ ಸವಿ ರುಚಿಯ ದಿಡೀರಾಗಿ ಅತಿರಸ ಎಂದಾಗಲೇ ಬಾಯಿಯಲ್ಲಿ ನೀರೂರಿಸುವ ಜನ ಸವಿಯಲು ಅತ್ಯಂತ ರುಚಿಕರವಾದ ತಿಂಡಿ ಸ್ವಾದ ಬಾಯಿ ಚಪ್ಪರಿಸಿ ಸವಿಯೋದಕ್ಕೆ ಬೆಸ್ಟ್ ಫುಡ್ ಸವಿದು ಮೆಚ್ಚಿಗೆ ಸೂಚಿಸಿದ ಜನ ನಾವು ಈಗ ರೆಡಿ ಟು ಈಟ್ ಬಿಸಿ ಸೀಸನ್ ನಲ್ಲಿ ಇರುವ ಜನ ಆಹಾರ ಸವಿ ಸವಿ ಇದು ಆರೋಗ್ಯಕರ ಫುಡ್ ಡಿಫರೆಂಟ್ ಕೈ ರುಚಿ ವಾವ್ ಫೆಂಟಾಸ್ಟಿಕ್… ಸಕ್ಕತ್ ಆಗಿದೆ… ಖಾದ್ಯ ಹಬ್ಬದ ಅಡುಗೆಯಲ್ಲಿ ಈ ವಿಶೇಷವಾದ ಅತಿರಸವನ್ನ  ಮಾಡುವುದು ಹೇಗೆ ಎಂದು ನೋಡೋಣ.. ಬೇಕಾಗುವ ಪದಾರ್ಥಗಳು : ಒಂದು ಕಪ್ಪು ಬೆಳ್ತಿಗೆ ಅಕ್ಕಿ, ಒಂದು ಕಪ್ ಬೆಲ್ಲ, ಕಾಲ್ ಕಪ್…

Read More

ಬೆಳಗಾವಿ:   ಕಾಂಗ್ರೆಸ್ ಪಕ್ಷ ನನಗೆ ಯಾವುದೇ ಕೆಟ್ಟದ್ದು ಮಾಡಿರಲಿಲ್ಲ. ಆದರೆ, ಒಬ್ಬ ವ್ಯಕ್ತಿಯ ಷಡ್ಯಂತ್ರದಿಂದ ನಾನು ಕಾಂಗ್ರೆಸ್ ನಿಂದ  ಹೊರ ಬಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿದ್ದಾಗ ಎಲ್ಲರೂ ಸೇರಿ ಷಡ್ಯಂತರ ಮಾಡಿದರಿಂದ ಕಾಂಗ್ರೆಸ್ ಪಕ್ಷದಿಂದ ಹೊರಬಂದೆ. ಬಳಿಕ ಬಿಜೆಪಿ ಸೇರಿಕೊಂಡೆ ಆದರೆ ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಇಲ್ಲೂ ಕೂಡ ಷಡ್ಯಂತರ ಮಾಡಿದರು. ಅದಕ್ಕೂ ನಾನು ಹೆದರಲಿಲ್ಲ ಎಂದಿದ್ದಾರೆ. ಜನರಿಗೆ ಮೋಸ ಮಾಡಿದ್ದರೆ ಹೆದರುತ್ತಿದ್ದೆ. ಆದರೆ ಸಿಡಿಗೆ ಹೆದರಲ್ಲ ಎಂದು ನನಗೆ ಧೈರ್ಯ ಹೇಳಲು ಬಂದಿದ್ದ ಸ್ವಾಮೀಜಿಗಳಿಗೆ ನಾನು ಹೇಳಿದ್ದೆ. ನನ್ನ ವಿರುದ್ಧ ವೈಯಕ್ತಿಕ ಷಡ್ಯಂತರ ನಡೆದಿದೆ ಅಂತ ಹೇಳಿದ್ದೆ ಎಂದರು. ಒಡೆದು ಆಳುವ ನೀತಿಯಿಂದ ಹಿಂದುಳಿದ ಸಮುದಾಯಗಳಿಗೆ ಧಕ್ಕೆಯಾಗಿದೆ. ಕೊನೆ ಗಳಿಗೆಯಲ್ಲಿ ಹಿಂದುಳಿದ ಸಮುದಾಯ ಒಂದಾಗಿದೆ. ಎಸ್ಟಿ, ಕುರುಬರು ಹಾಗೂ ಉಪ್ಪಾರ ಸೇರಿದಂತೆ ಹಿಂದುಳಿದ ಸಮಾಜ ಶೇಕಡ 74 ರಷ್ಟಿದೆ ಕೇವಲ 26 ಪರ್ಸೆಂಟ್…

Read More

ತುಮಕೂರು: ಹಣ ಅಂತಸ್ತು ಅಥವಾ ಅಧಿಕಾರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ದೇಹವನ್ನು ಸಮತೋಲನದಲ್ಲಿ ಇಟ್ಟುಕೊಂಡಿದ್ದಲ್ಲಿ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ  ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಎಸ್ ವಿ ಎಸ್ ಪ್ರಥಮ ದರ್ಜೆ ಕಾಲೇಜಿನ  ವಿದ್ಯಾರ್ಥಿಗಳು, ಎಸ್ ವಿ ಎಸ್ ಕ್ಲಿನಿಕ್ ಹಾಗೂ ಡಾ.ಸುರೇಶ್ ಬಾಬು ಮತ್ತು ಡಾ.ಹೇಮಾವತಿರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ  ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆರೋಗ್ಯ ಶಿಬಿರ ಉದ್ಘಾಟಿಸಿ, ಆರೋಗ್ಯ ಕಾಪಾಡಿಕೊಳ್ಳುವ  ಬಗ್ಗೆ ಜಾಗೃತರಾಗಿ ಎಂದು ಆಶೀರ್ವಚನ ನೀಡಿದರು. ಆಯೋಜಕಾರದ ಡಾ.ಸುರೇಶ್ ಬಾಬು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ರಸ್ತೆಗಳಲ್ಲಿ ಮಾರಾಟ ಮಾಡುವ ಅಂಗಡಿ ತಿನಿಸು, ಜಂಕ್ ಫುಡ್ ಸೇವಿಸುವುದನ್ನು ನಿಲ್ಲಿಸಿ, ಮನೆಯ ಆರೋಗ್ಯಕರ ಆಹಾರವನ್ನು ಸೇವಿಸಿ. ಆಟ, ವ್ಯಾಯಾಮ ಗಳಲ್ಲಿ ಹೆಚ್ಚುತೊಡಗಿಸಿಕೊಂಡು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ  ಎಸ್ ವಿ ಎಸ್ ಕಾಲೇಜಿನ  ಪ್ರಾಂಶುಪಾಲರಾದ ಡಾ.…

Read More

ತುಮಕೂರು:ಏಕಾಗ್ರತೆಯಿಂದ ಯೋಗಾಭ್ಯಾಸ ಮಾಡಿದರೆ ಯೋಗ ಚೇತನವು ಧ್ಯಾನದ ಮೂಲಕ ಆಧ್ಯಾತ್ಮಿಕತೆಯನ್ನು ಬೆಳೆಸಿ, ಆರೋಗ್ಯಕರ ಮತ್ತು ಸುಸ್ಥಿರ ಸಮಾಜರೂಪಿಸಲು ಸಹಕಾರಿಯಾಗಲಿದೆ ಎಂದು ವಿವಿಯ ಕಲಾ ನಿಕಾಯದ ಡೀನ್‌ ಪ್ರೊ.ಎಂ.ಕೊಟ್ರೇಶ್ ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ ಕಾಲೇಜು ಯೋಗ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಯೋಗವು ಬದುಕಿನ ಭಾಗವಾಗಬೇಕು. ಯೋಗ ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತುದೇಹದ ಕಲ್ಮಶಗಳನ್ನು ಹೋಗಲಾಡಿಸಿ ಹೊಸ ಚೈತನ್ಯವನ್ನು ಸೃಜಿಸುತ್ತದೆ. ದೇಹದಲ್ಲಿನ ಅಸಮತೋಲನವನ್ನು ಸರಿಪಡಿಸಲು ಯೋಗಾಭ್ಯಾಸ ನಿರಂತರವಾಗಿರಬೇಕು ಎಂದರು. ಸೂರ್ಯ ನಮಸ್ಕಾರದ13 ವ್ಯಾಯಾಮಗಳು ಸ್ನಾಯುಗಳು, ಕೀಲುಗಳು ಮತ್ತುಆಂತರಿಕ ಅಂಗಗಳ ಸರಿಯಾದಕಾರ್ಯನಿರ್ವಹಣೆಗೆಸಹಕಾರಿಯಾಗುತ್ತವೆ ಎಂದು ತಿಳಿಸಿದರು. ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಯೋಗದಿಂದಆಧ್ಯಾತ್ಮಿಕ ಸತ್ವ ಸಿಗುತ್ತದೆ. ಜೀವನದಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಅಳವಡಿಸಿಕೊಳ್ಳಲು ಯೋಗವು ಬದುಕಿನ ದಿನಚರಿಯ ಭಾಗವಾಗಬೇಕು.ಇದರಿಂದ ದೇಹ ಮತ್ತು ಮನಸ್ಸುಎರಡೂ ಶಾಂತವಾಗಿರುತ್ತವೆ. ಯಶಸ್ಸನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು. ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಸವರಾಜ್ ಜಿ. ಮಾತನಾಡಿ, ಸ್ಪರ್ಧೆಗಿಂತ ಭಾಗವಹಿಸುವಿಕೆ ಮೌಲ್ಯವನ್ನು ತಿಳಿಸಿದರು. ಜಿಲ್ಲೆಯ…

Read More

ತುಮಕೂರು :  ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಗುಡುಗು–ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ 4 ದಿನಗಳ ಕಾಲ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಮುಂಜಾಗ್ರತೆ ವಹಿಸಲು ಅಧಿಕಾರಿ ಸಿಬ್ಬಂದಿಗೆ ಸೂಚನೆ : ಭಾರೀ ಮಳೆಯಿಂದ ಉಂಟಾಗಬಹುದಾದ ಪ್ರವಾಹದಿಂದ ಯಾವುದೇ ಜನ–ಜಾನುವಾರುಗಳ ಜೀವಹಾನಿಯಾಗದಂತೆ ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿ ಹೊಂದಿರಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭಾರೀ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಮಳೆ ಮುನ್ನಚ್ಚರಿಕೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಬೇಕು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂಭವವಿರುತ್ತದೆ. ಇದರಿಂದ ಸಾವು–ನೋವುಗಳು ಉಂಟಾಗಬಹುದಾದ್ದರಿಂದ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿ ಹೇಳಬೇಕು ಎಂದು ತಿಳಿಸಿದ್ದಾರೆ. ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದ ಅಧಿಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದುಕೊಂಡು ಮಳೆಯಿಂದ ಯಾವುದೇ…

Read More