Subscribe to Updates
Get the latest creative news from FooBar about art, design and business.
- ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ
- ಸರಗೂರು: ಸಾಧಕ ಪ್ರಸನ್ನ ಕುಮಾರ್ ಅವರಿಗೆ ‘ಪಟ್ಟಣದ ಸ್ನೇಹಿತರು’ ಬಳಗದಿಂದ ಸನ್ಮಾನ
- ಔರಾದ್: ಗ್ರಾಮೀಣ ಬದುಕಿಗೆ ಆಸರೆಯಾದ ‘ವಿಬಿ-ಜಿ ರಾಮ್ ಜಿ’ ಯೋಜನೆ – 125 ದಿನಗಳ ಉದ್ಯೋಗ, ದಿನಗೂಲಿ ₹382ಕ್ಕೆ ಏರಿಕೆ
- ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
- ಸರಗೂರು: ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ ಶುಭಾರಂಭ
- ಭೀಕರ ಬೈಕ್ ಅಪಘಾತ: ಮರದ ತುಂಡಿಗೆ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ದುರಂತ ಸಾವು, ಇಬ್ಬರ ಸ್ಥಿತಿ ಗಂಭೀರ
- ಬಾಡಿಗೆ ಕಾರು ಚಾಲಕನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ
- ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
Author: admin
ಮುಂಬೈ: ಅಶ್ಲೀಲ ಚಲನಚಿತ್ರಗಳ ಅಕ್ರಮ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ನೋಟಿಸ್ ನೀಡಿದೆ. ಈ ವಾರ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಕುಂದ್ರಾಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಕುಂದ್ರಾ ವಿರುದ್ಧದ ಎರಡನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ. ಈ ವರ್ಷದ ಆರಂಭದಲ್ಲಿ ಇಡಿ ಕ್ರಿಪ್ರೋಕರೆನ್ಸಿ ಪ್ರಕರಣದಲ್ಲಿ ಕುಂದ್ರಾ ಮತ್ತು ಶೆಟ್ಟಿ ಅವರ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಆದಾಗ್ಯೂ, ದಂಪತಿಗಳು ಈ ಲಗತ್ತು ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್‌ನಿಂದ ಪರಿಹಾರವನ್ನು ಪಡೆದರು. ಆಪಾದಿತ ಅಶ್ಲೀಲ ಚಿತ್ರಗಳ ದಂಧೆಯಲ್ಲಿ ಬಳಸಲಾದ ಹಾಟ್‌ಶಾಟ್ಸ್ ಅಪ್ಲಿಕೇಶನ್ ಅನ್ನು ಕಾನೂನಿನಡಿಯಲ್ಲಿ ಅಪರಾಧದೊಂದಿಗೆ ಸಂಪರ್ಕಿಸುವ ಪ್ರಾಸಿಕ್ಯೂಷನ್ (ಮುಂಬೈ ಪೊಲೀಸ್) ಬಳಿ ಒಂದು ಸಣ್ಣ ಸಾಕ್ಷ್ಯವೂ ಇಲ್ಲ ಎಂದು ಉದ್ಯಮಿ 2021 ರಲ್ಲಿ ಸ್ಥಳೀಯ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದರು. ನಮ್ಮತುಮಕೂರಿನ…
ಪಂಜಾಬ್: ಕುರ್ ಆನ್ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಎಎಪಿ ಶಾಸಕ ನರೇಶ್ ಯಾದವ್ ಗೆ ಪಂಜಾಬ್ ನ ಮಲೇರ್ ಕೋಟ್ಲಾ ಜಿಲ್ಲೆಯ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. 2016ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ನರೇಶ್ ಯಾದವ್ ದೋಷಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪರ್ಮಿಂದರ್ ಸಿಂಗ್ ಗ್ರೆವಾಲ್ ತೀರ್ಪು ನೀಡಿದ್ದು, ನಿನ್ನೆ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆ ಪ್ರಕಟವಾದಾಗ ನ್ಯಾಯಾಲಯಕ್ಕೆ ಹಾಜರಾದ ನರೇಶ್ ಯಾದವ್‌ಗೆ 11,000 ದಂಡವನ್ನೂ ವಿಧಿಸಲಾಗಿದೆ. ನ್ಯಾಯಾಲಯವು ಇತರ ಇಬ್ಬರಿಗೆ ಎರಡು ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದಿದೆ – ವಿಜಯ್ ಕುಮಾರ್ ಮತ್ತು ಗೌರವ್ ಕುಮಾರ್ – ಮತ್ತು ಇನ್ನೊಬ್ಬ ಆರೋಪಿ ನಂದ್ ಕಿಶೋರ್ ಅವರನ್ನು ಕೆಳ ನ್ಯಾಯಾಲಯವು ಖುಲಾಸೆಗೊಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದೆ. ನಿನ್ನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಇನ್ನೂ ಮೂರು ದಿನ ಮುಂದುವರೆಯುವ ಮುನ್ಸೂಚನೆಗಳಿವೆ. ಚಂಡಮಾರುತದ ಪರಿಣಾಮದಿಂದ ಆಗಾಗ್ಗೆ ತಂಪಾದ ಮೇಲೈ ಗಾಳಿ ಹಾಗೂ ತುಂತುರು ಮಳೆ ಬೀಳುವುದರಿಂದ ಹಗಲಿನಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ವರದಿ ತಿಳಿಸಿದೆ. ಚಂಡಮಾರುತವು ತಮಿಳುನಾಡಿನ ಕಡಲೂರು, ಪಾಂಡಿಚೇರಿ ಬಳಿ ಇದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣವಾಗಿ ವ್ಯಾಪಕ ಮಳೆಯಾಗಿದೆ. ಕರಾವಳಿಯ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ. ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿ. 2 ಮತ್ತು 3 ರಂದು ಎಲ್ಲೋ ಅಲರ್ಟ್…
ಮುಂಬೈ: ನಮ್ಮ ಮೇಲಿನ ಪ್ರತಿ ದಾಳಿಯೂ ನಮ್ಮನ್ನು ಹಾಗೂ ನಮ್ಮ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. ಯುಎಸ್ ಡಿಪಾರ್ಟೆಂಟ್ ಆಫ್ ಜಸ್ಟೀಸ್ ಮತ್ತು ದೋಷಾರೋಪಣೆಯಿಂದ ವಂಚನೆ ಆರೋಪ ಎದುರಿಸುತ್ತಿರುವ ಅವರು, ನಮ್ಮ ಕಂಪನಿಯು ಅನುಸರಣೆಗೆ ಬದ್ಧವಾಗಿದೆ ಮತ್ತು ಪ್ರತಿ ದಾಳಿಯು ನಮನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ. ಎರಡು ವಾರಗಳ ಹಿಂದೆ, ನಾವು ಅದಾನಿ ಗ್ರೀನ್ ಎನರ್ಜಿಯಲ್ಲಿ ಅನುಸರಣೆ ಅಭ್ಯಾಸಗಳ ಬಗ್ಗೆ ಯುಎಸ್ನಿಂದ ಆರೋಪಗಳನ್ನು ಎದುರಿಸಿದ್ದೇವೆ. ನಾವು ಇಂತಹ ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ನಾನು ನಿಮಗೆ ಹೇಳಬಲ್ಲದು ಪ್ರತಿ ದಾಳಿಯು ನಮನ್ನು ಬಲಪಡಿಸುತ್ತದೆ ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅನಂತರ ನನಗೆ ಬೇರೆ ದಾರಿ ಇಲ್ಲದೆ ಅಹಿಂದ ಸಂಘಟನೆ ಮಾಡಿದ್ದೆ. ಈಗ ಹಾಸನದಲ್ಲಿ ಸಮಾವೇಶ ನಡೆಸುತ್ತಿರುವುದರ ಹಿಂದೆ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಂಗಲ್ ಹನುಮಂತಯ್ಯ ಅವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಆಹ್ವಾನಿಸಲಾಗಿದೆ. ಪಕ್ಷ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು. ಹಿಂದೆ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿದಾಗ ನಾನು ಏನು ಮಾಡಬೇಕಿತ್ತು? ವಿರೋಧ ಮಾಡುವ ಸಲುವಾಗಿ ಅಹಿಂದ ಸಂಘಟನೆ ಮಾಡಬೇಕಾಯಿತು. ಜಾತ್ಯತೀತ ಜನತಾದಳ ಪಕ್ಷ ಕಟ್ಟಿದವರು ನಾವು. ಈಗ ಕೋಮುವಾದಿಗಳ…
ಬೆಂಗಳೂರು: ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಿನ ಫೆಬ್ರವರಿ ವೇಳೆಗೆ ತಯಾರಿ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮತದಾರರ ಪಟ್ಟಿ ಕೂಡ ಸಿದ್ಧಗೊಳ್ಳುತ್ತಿದೆ. ಚುನಾವಣೆಯನ್ನಂತು ನಿಲ್ಲಿಸಲು ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ಮತದಾನದ ಸಾಧ್ಯತೆ ಇದೆ ಎಂದರು. ಸಚಿವ ಸಂಪುಟ ಪುನರ್ ರಚನೆ ಚರ್ಚೆಯೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಖಾಲಿ ಇದೆ. ಬೆಳಗಾವಿಯ ಅಧಿವೇಶನದ ಬಳಿಕ ಅದನ್ನು ಭರ್ತಿ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ.ಸಂಪುಟ ಪುನರ್ ರಚನೆಯಂತೂ ಸದ್ಯಕ್ಕಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿ ನಡವಳಿಕೆಗಳ ಮೇಲೆ ನಿಗಾ ವಹಿಸಲು ಹೈಕಮಾಂಡ್ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ನಾನು ಈ ಕುರಿತು ವರದಿ ನೀಡುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ.…
ತುಮಕೂರು: ತುಮಕೂರಿನಲ್ಲಿ ಡಿಸೆಂಬರ್ 2ರಂದು ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮದ ಸಮಾವೇಶದಲ್ಲಿ ‘ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನ ಕೊಡ್ತೀನಿ.’ ಅಲ್ಲದೆ ಒಟ್ಟು 10 ಲಕ್ಷ ರೂ.ಗಳನ್ನು ಇದಕ್ಕಾಗಿ ತೆಗೆದಿರಿಸಿದ್ದೇನೆ ಎಂದು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಆಡಿಯೋ ಬಾರಿ ವೈರಲ್ ಆಗಿದ್ದು ಇದಕ್ಕೆ ಮಾಜಿ ಶಾಸಕ ಗೌರಿಶಂಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುರೇಶ ಗೌಡ ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಸುರೇಶ್ ಗೌಡ ಮಾತನಾಡಿದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ. ಅನುದಾನ ತಾರತಮ್ಯ ವಿರೋಧಿಸಿ ಸಿಎಂ ವಿರುದ್ಧ ಬಿಜೆಪಿ ಜೆಡಿಎಸ್ ಶಾಸಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಸಿಎಂ ಸಿದ್ದರಾಮಯ್ಯ ಸಮಾರಂಭಕ್ಕೆ ಬಿಜೆಪಿ ಧಿಕ್ಕಾರ ಕೂಗಿ ತಡೆಯೊಡ್ಡಲು ಪ್ಲಾನ್ ಮಾಡಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಮಾತಾನಾಡಿರುವ…
ಪಾವಗಡ: ತಾಲ್ಲೂಕಿನ ನಿಡಗಲ್ ವಲಯದ ಮದ್ದೆ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾಮಿ೯ಕ ಸಭಾ ಕಾರ್ಯಕ್ರಮವನ್ನ ಕೆ.ಎಂ.ಪ್ರಭಾಕರ ಪಾವಗಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸವ೯ಜನಾಂಗಗಳ ಎಲ್ಲಾ ವಗ೯ಗಳ ಜನರು ಕೂಡಿಕೊಂಡು ಸರಳ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ಅವಕಾಶ ಮಾಡಿ ಕೊಟ್ಟಂತಹ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರಿಗೆ ನಿಮ್ಮೆಲ್ಲರ ಪರವಾಗಿ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆಂದು ತಿಳಿಸಿದರು. ಪಾವಗಡ ತಾಲೂಕಿನ ಮಾನ್ಯ ತಾಲೂಕು ಯೋಜನಾಧಿಕಾರಿಗಳಾದ ಮಹೇಶ್ ರವರು ಪೂಜ್ಯರ ದೂರದೃಷ್ಠಿ ಆಶಯದಂತೆ ನಮ್ಮ ತಾಲ್ಲೂಕಿನಲ್ಲಿ ಸ್ವ –ಸಹಾಯ ಸಂಘಗಳ ಮೂಲಕ ಯೋಜನೆಯಿಂದ ಅನುಷ್ಠಾನಗೊಳ್ಳುವ ಅನೇಕ ಜನಪರ ಕಾಯ೯ಕ್ರಮಗಳ ನಮ್ಮೂರ ನಮ್ಮ ಕೆರೆ ಜ್ಞಾನವಿಕಾಸ ಕಾರ್ಯಕ್ರಮಗಳು ಲಾಭಾಂಶ ವಿತರಣೆ, ಸುಜ್ಞಾನ ಶಿಷ್ಯ ವೇತನ ಜ್ಞಾನದೀಪ. ಶಿಕ್ಷಕರ ನಿಯೋಜನೆ ಸಿ ಎಸ್ ಸಿ ಕಾರ್ಯಕ್ರಮಗಳು ಇನ್ನೂ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀವ೯ಚನ ನೀಡಿ ಮಾತನಾಡಿದ ಕೊರಟಗೆರೆ ಪೂಜ್ಯ ಬಸವಮಹಾಲಿಂಗ ಮಹಾಸ್ವಾಮಿಗಳು, ಧಮ೯ಸ್ಥಳದ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರ ಮಾಗ೯ದಶ೯ನದಲ್ಲಿ ಸಾವ೯ಜನಿಕರ ಸಹಭಾಗಿತ್ವದಲ್ಲಿ…
ಪಾವಗಡ: ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ನರಸಿಂಹಮೂರ್ತಿ (ಸಣ್ಣಪ್ಪ)ರವರು ಆಯ್ಕೆಯಾಗಿದ್ದಾರೆ. ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ರವರು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನವು ತೆರವುಗೊಂಡಿತ್ತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು ಅದರಲ್ಲಿ ಜೆಡಿಎಸ್ ಬೆಂಬಲಿತ 11 ಕಾಂಗ್ರೆಸ್ ಬೆಂಬಲಿತ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರು ಇಂದು ನಡೆದ ಚುನಾವಣೆಯಲ್ಲಿ ಒಟ್ಟು 15 ಜನ ಸದಸ್ಯರ ಭಾಗವಹಿಸಿದ್ದು ಭಾಗವಹಿಸಿದ್ದು ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಅವರಿಗೆ ಮೂರು ಮತಗಳ ಲಭಿಸಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನರಸಿಂಹಮೂರ್ತಿ (ಸಣ್ಣಪ್ಪ) ಅವರಿಗೆ 12 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಜಯಶೀಲರಾದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಮ್. ತಿಮ್ಮರಾಯಪ್ಪ ಮಾತನಾಡಿ, ನಿರೀಕ್ಷೆ ಅಂತೆ ನಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದು, ನಮ್ಮ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರು ಗ್ರಾಮ ಪಂಚಾಯಿತಿಯಲ್ಲಿ ಜನರಿಗೆ ಉತ್ತಮ ಆಡಳಿತ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ…
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅನ್ಯಭಾಷಿಗರೊಂದಿಗಿನ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿದ್ದು, ಪ್ರೇಮಿಗಳಿಗೆ ವಿಶೇಷ ಸಲಹೆ ನೀಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಬೇರೆ ಭಾಷೆಯವರೊಂದಿನ ಕನ್ನಡಿಗರ ಪ್ರೀತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬೇರೆ ಭಾಷೆಯ ಹುಡುಗಿಯರನ್ನು ಪ್ರೀತಿ ಮಾಡುವ ಕನ್ನಡದ ಹುಡುಗರು, ಮೊದಲು ಅವರು ಕನ್ನಡವನ್ನು ಪ್ರೀತಿಸುವಂತೆ ಕೇಳಬೇಕು, ಬಳಿಕ ನೀವು ಅವರನ್ನು ಪ್ರೀತಿ ಮಾಡುವುದಾಗಿ ಹೇಳಿ ಎಂದು ಸಲಹೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಹೆದರಬೇಡಿ. ನಿಮ್ಮ ಪ್ರೀತಿಯು ಕನ್ನಡದ ಮುಖೇನವಾಗಿಯೇ ಸಾಗಲಿ ಎಂದು ಹೇಳಿದ್ದಾರೆ. ಕನ್ನಡವನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಕನ್ನಡಿಗರೂ ಪ್ರೀತಿಸುತ್ತಾರೆ ಎಂದು ಟಿ.ಎ.ನಾರಾಯಣಗೌಡರು ಒತ್ತಿ ಹೇಳಿದ್ದಾರೆ. ಮಾಸ್ತಿಯವರ ಮಾತೃಭಾಷೆ ತಮಿಳು, ದ.ರಾ.ಬೇಂದ್ರೆಯವರ ಮಾತೃಭಾಷೆ ಮರಾಠಿ, ಟಿ.ಪಿ.ಕೈಲಾಸಂ ಅವರ ಮಾತೃಭಾಷೆ ತಮಿಳು, ಈ ಕನ್ನಡದ ಶಾಲು ಕೊಟ್ಟ ಮ.ರಾಮಮೂರ್ತಿ ಅವರ ಮಾತೃಭಾಷೆ ತೆಲುಗು. ಅವರೆಲ್ಲ ಕನ್ನಡವನ್ನು ಪ್ರೀತಿಸಿದರು, ಕನ್ನಡಿಗರೂ…