ತುಮಕೂರು: ತುಮಕೂರಿನಲ್ಲಿ ಡಿಸೆಂಬರ್ 2ರಂದು ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮದ ಸಮಾವೇಶದಲ್ಲಿ ‘ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನ ಕೊಡ್ತೀನಿ.’ ಅಲ್ಲದೆ ಒಟ್ಟು 10 ಲಕ್ಷ ರೂ.ಗಳನ್ನು ಇದಕ್ಕಾಗಿ ತೆಗೆದಿರಿಸಿದ್ದೇನೆ ಎಂದು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಆಡಿಯೋ ಬಾರಿ ವೈರಲ್ ಆಗಿದ್ದು ಇದಕ್ಕೆ ಮಾಜಿ ಶಾಸಕ ಗೌರಿಶಂಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುರೇಶ ಗೌಡ ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಸುರೇಶ್ ಗೌಡ ಮಾತನಾಡಿದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ.
ಅನುದಾನ ತಾರತಮ್ಯ ವಿರೋಧಿಸಿ ಸಿಎಂ ವಿರುದ್ಧ ಬಿಜೆಪಿ ಜೆಡಿಎಸ್ ಶಾಸಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ಸಿಎಂ ಸಿದ್ದರಾಮಯ್ಯ ಸಮಾರಂಭಕ್ಕೆ ಬಿಜೆಪಿ ಧಿಕ್ಕಾರ ಕೂಗಿ ತಡೆಯೊಡ್ಡಲು ಪ್ಲಾನ್ ಮಾಡಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಮಾತಾನಾಡಿರುವ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆ ಮಾಡಿ ಅದು ಎಲ್ಲರ ಹಕ್ಕು. ಆದ್ರೆ ಪ್ರತಿಭಟನೆ ಮಾಡಲು ಹಣ ನೀಡೋದು ತಪ್ಪು. ಎಷ್ಟು ಲಕ್ಷ ಬೇಕಾದರೂ ಕೊಡ್ತಿವಿ ಅಂದಿದ್ದಾರೆ ಎಂದು ಆಡಿಯೋ ಪ್ಲೆ ಮಾಡಿ ಸುರೇಶ್ ಗೌಡರ ವಿರುದ್ಧ ಆರೋಪ ಮಾಡಿದರು.
ಸಿಎಂ ಬಂದಾಗ ಪ್ರೋವೋಕ್ ಮಾಡಿ ಎತ್ತಿಕಟ್ಟುವ ಯತ್ನ ಮಾಡ್ತಿದಿರಾ? ಹೋರಾಟದ ಮೂಲಕ ಹಕ್ಕುಗಳನ್ನ ಪಡೆಯಬೇಕು ಎಂದರು.
ಆಡಿಯೋ ದಲ್ಲಿ ಸುರೇಶ್ ಗೌಡ ಮಾತನಾಡಿರೋ,
2 ನೇ ತಾರಿಕು ಪಂಚಾಯತಿಗೆ ಬಸ್ ಕಳಿಸುತ್ತೇನೆ ಎಲ್ಲರೂ ಹೋರಾಟ ಮಾಡಬೇಕು
ಗ್ರಾಪಂ ಅಧ್ಯಕ್ಷರು ಕಪ್ಪು ಬಾವುಟ ಹಾರಿಸಬೇಕು
ಭಾಷಣ ಮಾಡುವಾಗ ಸಿದ್ದರಾಮಯ್ಯ ಗೆ ಧಿಕ್ಕಾರ ಕೂಗಿ
ಧಿಕ್ಕಾರ ಕೂಗಿದವರಿಗೆ ಒಂದು ಲಕ್ಷ ಬಹುಮಾನ ಘೋಷಣೆ
ಎಲ್ಲಾ ಮೀಡಿಯಾ ಆಗ ಡೈವರ್ಷನ್ ಆಗುತ್ತೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ
ನಮ್ಮ ಕಾರ್ಯಕರ್ತರು ಘೋಷಣೆ ಕೂಗಬೇಕು
ನಮ್ಮ ಕಾರ್ಯಕರ್ತರು ಅದನ್ನ ಗಮನಿಸಿ ಎಷ್ಟು ಜನರು ಕೂಗ್ತಾರೋ ಅವರಿಗೆ ಒಂದು ಲಕ್ಷ, ಐವತ್ತು ಸಾವಿರ ಬಹುಮಾನ ಘೋಷಣೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತಪಡಿಸಿ.
ಯಾರು ಕೂಗ್ತಾರೋ ಅವರಿಗೆ ಒಂದು ಲಕ್ಷ, 50 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಸುರೇಶ್ ಗೌಡ ಆಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗೌರಿ ಶಂಕರ್, ಆರ್ ಎಸ್ ಎಸ್ ಇದೇನಾ ಹೇಳಿಕೊಟ್ಟಿರೋದು.ಇದು ಎಫ್ ಐ ಆರ್ ಆಗಿ ತನಿಖೆ ಆಗಬೇಕು. ತುಮಕೂರು ಜಿಲ್ಲಾ ಎಸ್ ಪಿ ಗೆ ದೂರು ನೀಡಲು ಜಿಲ್ಲಾ ಕಾಂಗ್ರೆಸ್ ಘಟಕ ಮುಂದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx