ಬೆಳಗಾವಿ: ಕಾಂಗ್ರೆಸ್ ಪಕ್ಷ ನನಗೆ ಯಾವುದೇ ಕೆಟ್ಟದ್ದು ಮಾಡಿರಲಿಲ್ಲ. ಆದರೆ, ಒಬ್ಬ ವ್ಯಕ್ತಿಯ ಷಡ್ಯಂತ್ರದಿಂದ ನಾನು ಕಾಂಗ್ರೆಸ್ ನಿಂದ ಹೊರ ಬಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿದ್ದಾಗ ಎಲ್ಲರೂ ಸೇರಿ ಷಡ್ಯಂತರ ಮಾಡಿದರಿಂದ ಕಾಂಗ್ರೆಸ್ ಪಕ್ಷದಿಂದ ಹೊರಬಂದೆ. ಬಳಿಕ ಬಿಜೆಪಿ ಸೇರಿಕೊಂಡೆ ಆದರೆ ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಇಲ್ಲೂ ಕೂಡ ಷಡ್ಯಂತರ ಮಾಡಿದರು. ಅದಕ್ಕೂ ನಾನು ಹೆದರಲಿಲ್ಲ ಎಂದಿದ್ದಾರೆ.
ಜನರಿಗೆ ಮೋಸ ಮಾಡಿದ್ದರೆ ಹೆದರುತ್ತಿದ್ದೆ. ಆದರೆ ಸಿಡಿಗೆ ಹೆದರಲ್ಲ ಎಂದು ನನಗೆ ಧೈರ್ಯ ಹೇಳಲು ಬಂದಿದ್ದ ಸ್ವಾಮೀಜಿಗಳಿಗೆ ನಾನು ಹೇಳಿದ್ದೆ. ನನ್ನ ವಿರುದ್ಧ ವೈಯಕ್ತಿಕ ಷಡ್ಯಂತರ ನಡೆದಿದೆ ಅಂತ ಹೇಳಿದ್ದೆ ಎಂದರು.
ಒಡೆದು ಆಳುವ ನೀತಿಯಿಂದ ಹಿಂದುಳಿದ ಸಮುದಾಯಗಳಿಗೆ ಧಕ್ಕೆಯಾಗಿದೆ. ಕೊನೆ ಗಳಿಗೆಯಲ್ಲಿ ಹಿಂದುಳಿದ ಸಮುದಾಯ ಒಂದಾಗಿದೆ. ಎಸ್ಟಿ, ಕುರುಬರು ಹಾಗೂ ಉಪ್ಪಾರ ಸೇರಿದಂತೆ ಹಿಂದುಳಿದ ಸಮಾಜ ಶೇಕಡ 74 ರಷ್ಟಿದೆ ಕೇವಲ 26 ಪರ್ಸೆಂಟ್ ಇರುವ ಜನರು ಜನ ನಮ್ಮನ್ನು ಒಡೆದು ಆಳುತ್ತಿದ್ದಾರೆ. 74% ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು ಇಲ್ಲವಾದರೆ ನಾನು ಬಂಡಾಯ ಏಳುತ್ತೇನೆ. ಈವರೆಗೂ ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಕುರುಬರು ಉಪ್ಪಾರ ಸುಣಗಾರ ಸಮಾಜದವರು ಅಧಿಕಾರಕ್ಕೆ ಬರಬೇಕು. ಓಬಿಸಿ ಗಿಂತ ಎಸ್ ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಅನ್ನೋದು ನನ್ನ ಬೇಡಿಕೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx