Author: admin

ಕೊರಟಗೆರೆ : ಕೊರಟಗೆರೆಯ ಗ್ರಾಮೀಣ ಮತ್ತು ಪಟ್ಟಣದಲ್ಲಿ ಇದುವರೇಗೆ 168 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಸ್ವಚ್ಚತೆ ಇಲ್ಲದೇ ಅನೈರ್ಮಲ್ಯ ಹೆಚ್ಚಾಗಿ ಡೇಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 168 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂಜ್ವರ ಹೆಚ್ಚಾಗಿ ಕೊರಟಗೆರೆಯ ಪಟ್ಟಣ ಮತ್ತು ಗ್ರಾಮೀಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಜೆಟ್ಟಿಅಗ್ರಹಾರ ಗ್ರಾಮ ಪಂಚಾಯಿತಿಯ ಜಂಪೇನಹಳ್ಳಿ ಕ್ರಾಸಿಗೆ ಮೂಲಸೌಲಭ್ಯವೇ ಮರೀಚಿಕೆಯಾಗಿದೆ. ಜಂಪೇನಹಳ್ಳಿ ಕ್ರಾಸ್ ಒಂದೇ ಗ್ರಾಮದಲ್ಲೇ 8ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಚರಂಡಿ ಮತ್ತು ರಸ್ತೆಗಳೇ ಇಲ್ಲದ ಜಂಪೇನಹಳ್ಳಿ ಕ್ರಾಸಿನಲ್ಲಿ ಅನೈರ್ಮಲ್ಯ ಹೆಚ್ಚಳವಾಗಿದೆ. ಚರಂಡಿಗಳೇ ಇಲ್ಲದೇ ಕೆರೆಯಂತಾದ ರಸ್ತೆಗಳ ಅಕ್ಕಪಕ್ಕ ಅನೈರ್ಮಲ್ಯ ತಾಂಡವವಾಡುತ್ತಿದೆ. ಜೆಟ್ಟಿಅಗ್ರಹಾರ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಾಲೂಕು ಪಂಚಾಯಿತಿ ಇಓ ನಿರ್ಲಕ್ಷ್ಯದ  ವಿರುದ್ದ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಂಗ್ಯುಊ ಪ್ರಕರಣ ಏರಿಕೆಯಾದ್ರು ಆರೋಗ್ಯ ಮತ್ತು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವಹಿಸಿದೆ. ಹಳ್ಳಿಗಳಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ 24 ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ…

Read More

ಬೆಂಗಳೂರು : ನನಗೆ 30 ವರ್ಷದ ಹಿಂದೆಯೇ ಸಕ್ಕರೆ ಖಾಯಿಲೆ ಬಂದಿದೆ. 24 ವರ್ಷದ ಹಿಂದೆಯೇ ಸ್ಟಂಟ್ ಅಳವಡಿಕೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ನನಗೆ 30 ವರ್ಷದ ಹಿಂದೆಯೇ ಸಕ್ಕರೆ ಖಾಯಿಲೆ ಬಂದಿದೆ. 24 ವರ್ಷದ ಹಿಂದೆಯೇ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಆದರೂ ಇಂದಿಗೂ ಪಕ್ಷದ ಕಾರ್ಯ, ಸರ್ಕಾರದ ಕಾರ್ಯ ಮಾಡುತ್ತಾ, ಚುನಾವಣಾ ಪ್ರಚಾರ ಮಾಡುತ್ತಾ ಆರಾಮವಾಗಿ ಓಡಾಡಿಕೊಂಡು ಇದ್ದೀನಿ. ಇದಕ್ಕೆ ಕಾರಣ ವೈದ್ಯರ ಸಲಹೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹ ಆರೋಗ್ಯ ಯೋಜನೆಯ ಮೂಲಕ ನಿಮ್ಮ ಮನೆ ಬಾಗಿಲಲ್ಲಿ ಆರೋಗ್ಯ ತಪಾಸಣಾ ವ್ಯವಸ್ಥೆ ಬರುತ್ತಿದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ಸೇರಿದಂತೆ ಬಹುಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲೇ ಪತ್ತೆಮಾಡಿ, ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸುವುದು ಈ ಯೋಜನೆಯ ಉದ್ದೇಶ. ನೀವಿನ್ನು ನಿಶ್ಚಿಂತರಾಗಿರಿ,…

Read More

ಮುಂಬೈ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಇತ್ತೀಚೆಗೆ ಹತ್ಯೆಗೀಡಾದ ಎನ್ ಸಿಪಿ ಮುಖಂಡ ಬಾಬಾ ಸಿದ್ದೀಕಿ ಅವರ ಪುತ್ರ, ಮುಂಬೈ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೀಶನ್ ಸಿದ್ದೀಕಿ ಶುಕ್ರವಾರ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಾಂದ್ರಾ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಬಾ ಸಿದ್ದೀಕಿ ಅವರು ಕೆಲವು ವರ್ಷಗಳ ಹಿಂದಷ್ಟೇ ಎನ್ ಸಿಪಿಗೆ ಸೇರ್ಪಡೆಗೊಂಡಿದ್ದರು. ಇದಕ್ಕೂ ಮುನ್ನ ದೀರ್ಘಕಾಲ ಕಾಂಗ್ರೆಸ್ ಸದಸ್ಯರಾಗಿದ್ದರು. ಅಕ್ಟೋಬರ್ 12ರಂದು ಬಾಬಾ ಸಿದ್ದೀಕಿ ಅವರನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದನ್ನು ಭಾವನಾತ್ಮಕ ಕ್ಷಣ ಎಂದು ಕರೆದ ಜೀಶನ್, 2019 ರಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದಿರುವ ಬಾಂದ್ರಾ ಪೂರ್ವ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್ ಸಿಪಿ ಯಿಂದ ಸ್ಪರ್ಧಿಸುವುದಾಗಿ ಹೇಳಿದರು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ದಿನವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಮೇಲೆ…

Read More

2008ರ ನವೆಂಬರ್ 7ರಂದು ಮೊದಲ ಬಾರಿಗೆ ಚಿತ್ರ ತೆರೆಕಂಡಿದ್ದ ನಟ ದರ್ಶನ್ ಅಭಿನಯದ ‘ನವಗ್ರಹ’ ಚಿತ್ರ ನ. 8 ರಂದು ಮರು ಬಿಡುಗಡೆಯಾಗಲಿದೆ. ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಭರ್ಜರಿ ಯಶಸ್ಸು ಕಂಡಿದ್ದ ಈ ಚಿತ್ರ ಮತ್ತೊಮ್ಮೆ ತೆರೆ ಕಾಣುತ್ತಿರುವುದು ದರ್ಶನ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ನನ್ನ ನಿರ್ದೇಶನದ 2ನೇ ಚಿತ್ರ ‘ನವಗ್ರಹ’, ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳ್ಳಿತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8 ರಂದು ಮರುಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಗುಣಲಕ್ಷಣಗಳಿವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವರಿಗೆ ಇದು ಹಾನಿಕಾರಕವೂ ಹೌದು. ಥೈರಾಯ್ಡ್: ನೀವು ಹೈಪೋಥೈರಾಯ್ಡ್ ಹೊಂದಿದ್ದರೆ ಕಡಲೆಕಾಯಿಯು ನಿಮಗೆ ಹಾನಿ ಮಾಡುತ್ತದೆ. ಕಡಲೆಕಾಯಿಯನ್ನು ತಿನ್ನುವುದರಿಂದ TSH (ಥೈರಾಯ್ಡ್-ಉತ್ತೇಜಿಸುವ ಹಾರ್ಮೋನ್) ಮಟ್ಟ ಹೆಚ್ಚಾಗುತ್ತದೆ. ಇದು ಹೈಪೋಥೈರಾಯ್ಡಿಸಮ್ ಅನ್ನು ಹೆಚ್ಚಿಸುತ್ತದೆ. ಆದರೆ ಕಡಲೆಕಾಯಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಯಕೃತ್ತಿನ ಸಮಸ್ಯೆ: ಯಕೃತ್ತಿನ ಸಮಸ್ಯೆ ಇದ್ದರೆ ನೀವು ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು. ಕಡಲೆಕಾಯಿಯಲ್ಲಿರುವ ಅಂಶಗಳು ಯಕೃತ್ತಿನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಇದನ್ನು ತಿನ್ನುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಲೆಕಾಯಿಯನ್ನು ಹೆಚ್ಚು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಮತ್ತು ಅಜೀರ್ಣ ಉಂಟಾಗುತ್ತದೆ. ಅಲರ್ಜಿ: ಕೆಲವರಿಗೆ ಕೆಲವು ಬಗೆಯ ಆಹಾರಗಳೆಂದರೆ ಅಲರ್ಜಿ. ಅನೇಕರಿಗೆ ಕಡಲೆಕಾಯಿ ತಿಂದರೆ ಅಲರ್ಜಿಯಾಗುತ್ತದೆ. ಅಂಥವರು ಅದರಿಂದ ದೂರವಿರಿ. ಅಲರ್ಜಿ ಸಮಸ್ಯೆ ಇದ್ದರೂ ಕಡಲೆಕಾಯಿ ತಿಂದರೆ ಉಸಿರಾಟದ ತೊಂದರೆ ಮತ್ತು ಚರ್ಮದ ತುರಿಕೆಗೆ ಒಳಗಾಗಬಹುದು. ತೂಕ ಹೆಚ್ಚಳ: ಕಡಲೆಕಾಯಿಯಲ್ಲಿ ಪೋಷಕಾಂಶಗಳು…

Read More

ಥಾಣೆ: ಕಾರು ಮತ್ತು ಡಂಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನವಿ ಮುಂಬೈನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತಪಟ್ಟವರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರು ಪುಣೆಯಿಂದ ಮುಂಬೈಗೆ ಹೋಗುತ್ತಿದ್ದಾಗ ವಾಶಿ ಕ್ರೀಕ್ ಸೇತುವೆಯ ಮೇಲೆ ಮುಂಜಾನೆ 4:15 ರ ಸುಮಾರಿಗೆ ಅವರ ಕಾರು ಅಪಘಾತಕ್ಕೀಡಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರು ಡಂಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಆದರೆ, ಅಪಘಾತ ಹೇಗೆ ಸಂಭವಿಸಿತು ಎಂಬುದು ಪೊಲೀಸರಿಗೆ ಇನ್ನೂ ಖಚಿತವಾಗಿಲ್ಲ ಎನ್ನಲಾಗಿದೆ. ಇಬ್ಬರು ಪುರುಷರು ಮತ್ತು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ, ಪೊಲೀಸರು ಎಫ್‌ಐಆರ್ ದಾಖಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚನ್ನರಾಯಪಟ್ಟಣ: ಕೆರೆಯಲ್ಲಿ ಮುಳುಗಿ ತಾಯಿ-ಮಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಸಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ನಂಜಮ (60), ಮಗಳು ಗೀತಾ (34) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಹಸು ತೊಳೆಯಲು ಗ್ರಾಮದ ಕೆರೆಗೆ ಹೋಗಿದ್ದು, ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದ ಮಗಳು ಗೀತಾಳನ್ನು ರಕ್ಷಿಸಲು ತಾಯಿ ನಂಜಮ ನೀರಿಗಿಳಿದಿದ್ದಾರೆ. ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಪುಣೆ: ಸಾಕು ನಾಯಿಯನ್ನು ಮರಕ್ಕೆ ನೇತುಹಾಕಿ ಕೊಂದ ಆರೋಪದ ಮೇಲೆ ತಾಯಿ–ಮಗನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುಲ್ಶಿ ತಹಸಿಲ್ನ ಪಿರಂಗುಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪ್ರಭಾವತಿ ಜಗತಾಪ್ ಮತ್ತು ಅವರ ಪುತ್ರ ಓಂಕಾರ್ ಜಗತಾಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆ ಕುರಿತು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಕೃತ್ಯಕ್ಕೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪುಣೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಮಿಷನ್ ಪಾಸಿಬಲ್ ಫೌಂಡೇಶನ್ ಎಂಬ ನಾಯಿಗಳ ಆಶ್ರಯಧಾಮ ನಡೆಸುತ್ತಿರುವ ಪ್ರಾಣಿ ಕಾರ್ಯಕರ್ತೆ ಪದ್ಮಿನಿ ಸ್ಟಂಪ್ ಅವರು ತಾಯಿ ಮತ್ತು ಮಗನ ವಿರುದ್ಧ ಪುಣೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ‘ಅಕ್ಟೋಬರ್ 22ರಂದು ಪ್ರಭಾವತಿ ಅವರು ತಮ್ಮ ಸಾಕು ನಾಯಿಯ ಮೇಲೆ ಕೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಬಳಿಕ…

Read More

ಮೀರತ್ : ಮಹಿಳೆಯ ಮೊಬೈಲ್ ಕದ್ದ ಕಳ್ಳನಿಗೆ ಸ್ಥಳೀಯರು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮಾರುಕಟ್ಟೆ ಪ್ರದೇಶದಲ್ಲಿ ಯುವಕ ಮಹಿಳೆಯ ಫೋನ್ ಕಸಿದು ಕೊಂಡು ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಆತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸುತ್ತಿರುವ ಜನರೊಂದಿಗೆ ಸೇರಿ ಮೊಬೈಲ್ ಕಳೆದುಕೊಂಡು ಮಹಿಳೆ ಕೂಡ ಯುವಕನಿಗೆ ಥಳಿಸಿದ್ದಾಳೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೊಡೆಯಬೇಡಿ ಎಂದು ಯುವಕ ಬೇಡಿಕೊಂಡರೂ, ಕ್ಷಮೆಯಾಚಿಸಿದರೂ, ಮಹಿಳೆ ಮತ್ತು ಜನರು ಹಲ್ಲೆ ನಡೆಸುತ್ತಲೇ ಇದ್ದರು. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬೇಗಂಪುಲ್ ಬಳಿ ಈ ಘಟನೆ ನಡೆದಿದೆ. ಆರೋಪಿಯನ್ನು ಅರ್ಮಾನ್ ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ತುಮಕೂರು: ಮಕ್ಕಳನ್ನು ಕೆಲಸಕ್ಕಲ್ಲ. ಶಾಲೆಗೆ ಕಳುಹಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಅವರು ಪೋಷಕರಲ್ಲಿ ಮನವಿ ಮಾಡಿದರು. ಕಾರ್ಮಿಕ ಇಲಾಖೆಯಿಂದ ನಗರದ ಕುರಿ ಪಾಳ್ಯದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಗುರುವಾರ ಬಾಲಕಾರ್ಮಿಕ ವಿರೋಧಿ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಕಳುಹಿಸದೆ ಶಿಕ್ಷಣ ನೀಡಬೇಕು. ಶಿಕ್ಷಣವಿಲ್ಲದೆ ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು ಎಂದು ಜಾಗೃತಿ ಮೂಡಿಸಿದರು. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ಕಾರ್ಮಿಕ ನಿರೀಕ್ಷಕರಾದ ನಾಗಭೂಷಣ, ಚಂದ್ರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.

Read More