Author: admin

ತುಮಕೂರು:  ಜಿಲ್ಲೆಯಲ್ಲಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳ 2024–25ನೇ ಸಾಲಿಗಾಗಿ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವು 2017–18ರ ಪೂರ್ವದಲ್ಲಿ ನೋಂದಣಿ ಪಡೆದು ನಡೆಸಲಾಗುತ್ತಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ತುಮಕೂರು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ದಿನಾಚರಣೆ–2024ರ ಅಂಗವಾಗಿ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 06–18 ವರ್ಷ (2006ರ ಆಗಸ್ಟ್ 1ರಂದು ಹಾಗೂ ನಂತರ ಜನಿಸಿದ)ದೊಳಗಿನ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಹಸ ಪ್ರದರ್ಶಿಸಿದ ಪ್ರಕರಣವು 2023ರ ಆಗಸ್ಟ್ 1 ರಿಂದ 2024ರ ಜುಲೈ 1ರೊಳಗೆ ನಡೆದಿರಬೇಕು. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ 10,000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತುಮಕೂರು/ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಯುವಜನ ಸೇವೆ ಮತ್ತು ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ…

Read More

ತುಮಕೂರು:  ದೇಶದ ಅಭಿವೃದ್ಧಿಗೆ ಸಾಕ್ಷರತೆ ಪೂರಕವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಡಯಟ್, ಬೆಂಗಳೂರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಲೋಕ ಶಿಕ್ಷಣ ವಿಭಾಗ), ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ “ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೊಟ್ಟ ಮೊದಲ ಬಾರಿಗೆ ಯುನೆಸ್ಕೊದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಪ್ರಸಕ್ತ 2024ರ ಸಾಕ್ಷರತಾ ದಿನಾಚರಣೆಯನ್ನು “ಬಹು ಭಾಷೆಗಳ ಮೂಲಕ ಸಾಕ್ಷರತೆಯ ಉತ್ತೇಜನ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸಾಕ್ಷರತೆಯಿಂದ ನಮ್ಮಲ್ಲಿರುವ ಜ್ಞಾನವೃದ್ಧಿಯಾಗುವುದಲ್ಲದೆ, ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ನಿವಾರಿಸಬಹುದಾಗಿದೆ ಎಂದು ತಿಳಿಸಿದರು. ಸಾಕ್ಷರತೆಯಿಂದ ಅನಕ್ಷರಸ್ಥರಲ್ಲಿ ಸ್ವಾವಲಂಬನೆ ಹೆಚ್ಚುತ್ತದೆ. ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಶೇ.85.70 ಪುರುಷರು ಹಾಗೂ ಶೇ.67.38 ಮಹಿಳೆಯರು…

Read More

ತುಮಕೂರು: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಏಕಾಗ್ರತೆ, ನಿರಂತರ ಪ್ರಯತ್ನದ ಜೊತೆಗೆ ಹಠದ ಹಸಿವು ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಕ್ಕಳಿಗೆ ಕಿವಿ ಮಾತು ಹೇಳಿದರು. ಜಿಲ್ಲೆಯ ಕ್ರೀಡಾ ವಸತಿ ಶಾಲಾ ಕ್ರೀಡಾಪಟುಗಳಿಗಾಗಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕ್ರೀಡಾ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಹೇಳಿದರಲ್ಲದೆ, ವಿಶ್ವದಲ್ಲಿರುವ ಸುಮಾರು 900 ಕೋಟಿ ಜನಸಂಖ್ಯೆಯಲ್ಲಿ ಶೇ.15ಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಭಾರತ ದೇಶವು ಉತ್ತಮ ಕ್ರೀಡಾ ಸಾಧಕರನ್ನು ಹೊಂದಿರುವ ರಾಷ್ಟçವೆನಿಸಿಕೊಂಡಿದೆ. ಕ್ರೀಡಾ ಸಾಧಕರನ್ನು ಆದರ್ಶವಾಗಿರಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್ ಮಾತನಾಡಿ, 92 ಕ್ರೀಡಾಪಟುಗಳಿಗೆ ಕಿಟ್ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು. ಈ…

Read More

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಅಶ್ಲೀಲ ಮೆಸೇಜ್‌ ಮಾಡಿದ್ದೇ ಕೊಲೆಗೆ ಪ್ರಮುಖ ಕಾರಣವಾಗಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ ಬಳಿಕ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿದೆ. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾತ್ರವಲ್ಲದೆ ಬೇರೆ ಅವರಿಗೂ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದ ಎಂದು ಪ್ರಕರಣದ ಎ14 ಆರೋಪಿ ಪ್ರದೂಶ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾನೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮಸೇಜ್‌ ಮಾಡಿದ್ದಾನೆ ಎಂದು ಪ್ರದೋಶ್‌ ಹೇಳಿಕೆ ನೀಡಿದ್ದ. ಈ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆ ಇಬ್ಬರು ನಟಿಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಾಗಿಣಿ, “ನಕಲಿ ಖಾತೆ ಇಂತಹ ಮೆಸೇಜ್ ಗಳು ಬರುತ್ತಲೇ ಇರುತ್ತವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನಗೆ ಗೌತಮ್‌ ಎನ್ನುವ ಖಾತೆಯಿಂದ ಮೆಸೇಜ್‌ ಬಂದಿರುವ ಬಗ್ಗೆ ಮಾಹಿತಿಯಿಲ್ಲ. ನಾನು…

Read More

ಅಮರಾವತಿ: ಗೋಡಂಬಿ ಸಾಗಿಸುತ್ತಿದ್ದ ಮಿನಿ ಟ್ರಕ್‌ ವೊಂದು ಅಪಘಾತಕ್ಕೀಡಾದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಗೋಡಂಬಿ ಚೀಲಗಳ ಅಡಿಯಲ್ಲಿ ಸಿಲುಕಿಕೊಂಡ ಏಳು ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಒಬ್ಬರು ಬದುಕುಳಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನರಸಿಂಹ ಕಿಶೋರ್ ಹೇಳಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಗೋಣಿಚೀಲದ ಅಡಿಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೊವ್ವೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಕಿಶೋರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಸಿಂದಗಿ: ಬಯಲು ಬಹಿರ್ದೆಸೆಗೆ ಹೋಗಲು ರಸ್ತೆ ಮಾಡಿಕೊಡಿ ಅಂತ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಘಟನೆ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ರೆ ರಸ್ತೆಗಳೆಲ್ಲ ಹದಗೆಟ್ಟಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ರೊಜ್ಜುಮಯವಾಗಿ ತಿರುಗಾಡಲು ಸಾಧ್ಯವಾಗದಷ್ಟು ಕೆಟ್ಟು ಹೋಗಿವೆ ಅಂತ ಮಹಿಳೆಯರು ಅಳಲು ತೋಡಿಕೊಂಡರು. ಈ ವಿಚಾರ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಕೆಲಸ ಆಗಿಲ್ಲ.  ಇನ್ನಾದರೂ ರಸ್ತೆಗಳು, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರಾದಿಯಾಗಿ ಅಧ್ಯಕ್ಷರು, ಕಾರ್ಯಾಲಯದ ಅಧಿಕಾರಿ ವರ್ಗ ಮುಂದಾಗಬೇಕು ಎಂದು ಕೈ ಮುಗಿದು ಕೇಳುತ್ತೇವೆ. ಒಂದು ಸಲವಾದರೂ ಅಧಿಕಾರಿ ವರ್ಗ ಗ್ರಾಮದ ದುಃಸ್ಥಿತಿ ಬಂದಾದರೂ ನೋಡಿ ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ಬುಡ್ಡಾ ಬುಡ್ಡಿ ತಾಂಡ ಉಪ್ಪಾರಹಳ್ಳಿ  ಗ್ರಾಮದಲ್ಲಿ ಶ್ರೀ ಸೇವಾಲಾಲ್ ವಿದ್ಯಾ ವಿನಾಯಕ ಯುವಕರ ಸಂಘದಿಂದ 6 ನೇ ವರ್ಷದ ಗಣೇಶ ವಾರ್ಷಿಕೋತ್ಸವದ ಅಂಗವಾಗಿ ತುಮಕೂರಿನ  ಗಗನ್ ಮೆಲೋಡೀಸ್ ಅವರಿಂದ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು. 4ನೇ ದಿನವಾದ ಮಂಗಳವಾರ ರಾತ್ರಿ ವಿಶೇಷವಾಗಿ ಗಣೇಶನಿಗೆ ಪೂಜೆ ಸಲ್ಲಿಸಲಾಗಿದ್ದು, ರಸಮಂಜರಿ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳ ಜನರು ಭಾಗವಹಿಸಿ ಸಂಭ್ರಮಿಸಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಸ್ಯಾಂಡಲ್‌ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ  ಅವರು ಮದುವೆಯಾಗುತ್ತಿದ್ದಾರೆ. ನವೆಂಬರ್‌ ನಲ್ಲಿ ಮದುವೆ ನಡೆಯಲಿದೆ. ಬಹುಕಾಲದ ಉದ್ಯಮಿ‌ ಗೆಳೆಯನ ಜೊತೆ ನಟಿ ರಮ್ಯಾ, ದಿವ್ಯ ಸ್ಪಂದನ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಎಂಗೇಜ್‌ ಮೆಂಟ್ ನಡೆದಿದೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು. ಸೆಪ್ಟೆಂಬರ್ 8 ರಂದು ನಟಿ ರಮ್ಯಾ ಅವರು ಆಪ್ತರೊಬ್ಬರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಸುದ್ದಿ ಹಬ್ಬಿತು. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡ ತೊಡಗಿದ್ದರು. ಯಾರು ವರ? ಏನು ಮಾಡುತ್ತಿದ್ದಾರೆ? ಎಲ್ಲಿಯವರು? ಎಂದೆಲ್ಲ. ಯಾವಾಗ ಈ ಸುಳ್ಳು ಎಂದು ತಿಳಿಯಿತೋ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇದೀಗ ಈ ಸುದ್ದಿಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋಹಕ ತಾರೆ ರಮ್ಯಾ ಅವರು ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. “ಮಾಧ್ಯಮಗಳಿಂದ ನಾನು ಹಲವಾರು ಬಾರಿ…

Read More

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ India   ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ… ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666 ಮದುವೆಯಲ್ಲಿ ಮುಖ್ಯವಾದುದು ಪ್ರೀತಿ, ವಿಶ್ವಾಸ ಮತ್ತು ಸಂವಹನ. ಆದ್ದರಿಂದ, ಯಾರಾದರೂ ತಮ್ಮ ರಾಶಿಚಕ್ರದ ಚಿಹ್ನೆಗೆ…

Read More