ಕಾರವಾರ: ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ 2.0 ವ್ಯವಸ್ಥೆಯಡಿಯಲ್ಲಿ ಕೊರಿಯರ್, ಎಕ್ಸ್‌ಪ್ರೆಸ್ ಮತ್ತು ಪಾರ್ಸೆಲ್ ಜಾಲವನ್ನು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಭಾರತೀಯ ಅಂಚೆ ಇಲಾಖೆಯು ಹೊಸ ಫ್ರಾಂಚೈಸಿ ಯೋಜನೆ 2.0 ಪ್ರಾರಂಭಿಸಿದೆ.
ಈ ಯೋಜನೆಯು ಸ್ಥಳೀಯ ಅಂಗಡಿಕಾರರು, ಸಣ್ಣ ಉದ್ಯಮಿಗಳು, ಲಾಜಿಸ್ಟಿಕ್ ಸಂಸ್ಥೆಗಳು, ಅಗ್ರಿಗೇಟರ್‌ಗಳು ಮತ್ತು ಯುವಕರಿಗೆ ಭಾರತೀಯ ಅಂಚೆಯೊಂದಿಗೆ ಬುಕಿಂಗ್, ಪಾರ್ಸೆಲ್ ಡೆಲಿವರಿ ಮತ್ತು ಮನೆಬಾಗಿಲ ಸಂಗ್ರಹಣೆ ಸೇವೆಗಳನ್ನು ಒದಗಿಸಲು ಅತ್ಯುತ್ತಮ ಸ್ವಯಂ ಉದ್ಯೋಗದ ಹಾಗೂ ಉದ್ಯಮಶೀಲತೆಯ ಅವಕಾಶವನ್ನು ನೀಡುತ್ತದೆ.
ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ 15 ದಿನಗಳ ಒಳಗೆ ನಿಶ್ಚಿತಾರ್ಥ ಪತ್ರ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ, ಮಾರ್ಗದರ್ಶಿಗಳಿಗಾಗಿ ಹತ್ತಿರದ ಅಂಚೆ ಕಚೇರಿ ಹಾಗೂ ದೂ.ಸಂ: 08382221431 / 221435, ಮೊ.ಸಂ: 9686541879 ನ್ನು ಸಂಪರ್ಕಿಸಿ ಅಥವಾ www.indiapost.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
