Subscribe to Updates
Get the latest creative news from FooBar about art, design and business.
- ‘ಗರ್ಭಿಣಿನೂ ಇಲ್ಲ, ಮಹಿಳೆಯೂ ಇಲ್ಲ… ಕಾರಿನಲ್ಲಿ ಒಬ್ಬರೇ ಇದ್ದಿದ್ದು!’: ಝೀರೋ ಟ್ರಾಫಿಕ್ ಪ್ರತಿಭಟನೆಯ ಅಸಲೀಯತ್ತು ಬಿಚ್ಚಿಟ್ಟ ಬೆಂಗಳೂರು ಪೊಲೀಸರು
- ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಜೂನ್ 3 ರಂದು ವಿಧಾನಸೌಧ ಸುತ್ತಮುತ್ತಲಿನ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ
- ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಕಾಂಗ್ರೆಸ್ ಮುಖಂಡ ಒತ್ತಾಯ
- ಮಿಡಿಗೇಶಿ: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಯುವಕ ಪ್ರಾಣಾಪಾಯದಿಂದ ಪಾರು!
- ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ಮಾಹಿತಿಗೆ ಸೂಚನೆ
- ಸಾರಿಗೆ ಬಲಪಡಿಸಲು ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಿ: ಕೆ.ಎನ್.ರಾಜಣ್ಣ ಕರೆ
- ತಿಪಟೂರು ರೋಟರಿ ಕ್ಲಬ್ ನ ಪಬ್ಲಿಕ್ ಇಮೇಜ್ ಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
Author: admin
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನುಡಿದಂತೆ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಜಗನ್ನಾಥ ಅವರ ಪುತ್ರಿಗೆ ಕೆಲಸ ಕೊಡಿಸಿದ್ದಾರೆ. ಕೃತಿಕಾ ಅವರಿಗೆ ಕೆಲಸ ಕೊಡಿಸುವುದಾಗಿ ಕುಮಾರಸ್ವಾಮಿ ಮಾತುಕೊಟ್ಟಿದ್ದರು. ಇದೀಗ ಕೊಟ್ಟ ಮಾತಿನಂತೆ ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್ ಇಎಲ್ ನಲ್ಲಿ ಕೃತಿಕಾ ಗೆ ಉದ್ಯೋಗ ಕಲ್ಪಿಸಲಾಗಿದೆ. ದೂರವಾಣಿ ಮೂಲಕ ಕುಮಾರಸ್ವಾಮಿ ಉದ್ಯೋಗ ಖಾತರಿಪಡಿಸಿದ್ದಾರೆ. ಮತ್ತೊರ್ವ ಪುತ್ರಿ ಪಲ್ಲವಿ ನಾಯಕ ಅವರಿಗೂ ಕಳೆದ ವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಭಾರತೀಯ ರೈಲ್ವೇ ಒಬ್ಬರು ಸಾಗಿಸಬಹುದಾದ ಸರಕುಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮವನ್ನು ಪ್ರಕಟಿಸಿದೆ. ಈ ನಿಯಮದ ಪ್ರಕಾರ ರೈಲಿನಲ್ಲಿ 70 ಕೆಜಿಗಿಂತ ಹೆಚ್ಚು ತೂಕದ ಸರಕುಗಳನ್ನು ಸಾಗಿಸುವಂತಿಲ್ಲ. ಆದಾಗ್ಯೂ, ಪ್ರಸ್ತುತ, ಜನರು ತಲಾ 4 ಚೀಲಗಳನ್ನು ಒಯ್ಯುತ್ತಾರೆ. ಇದು ವಾಸ್ತವವಾಗಿ ಭಾರತೀಯ ರೈಲ್ವೇ ನಿಯಮಗಳಿಗೆ ವಿರುದ್ಧವಾಗಿದೆ. ರೈಲ್ವೆ ಅಧಿಕಾರಿಗಳು ನಿಮಗೆ ದಂಡ ವಿಧಿಸುವ ಸಾಧ್ಯತೆಯಿದೆ. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಅನಗತ್ಯ ವಸ್ತುಗಳನ್ನು ಕೊಂಡೊಯ್ಯದಿರುವುದು ಉತ್ತಮ. ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರು ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಬಾರದು. ಹಾಗೆ ಮಾಡುವುದನ್ನು ಅನ್ಯಾಯವೆಂದು ಪರಿಗಣಿಸಲಾಗುತ್ತದೆ. ರೈಲ್ವೆ ಅಧಿಕಾರಿಗಳು ದಂಡವನ್ನೂ ವಿಧಿಸಲಿದ್ದಾರೆ. ಹಾಗಾಗಿ, ಇಂತಹ ಪರಿಸ್ಥಿತಿ ಎದುರಾದರೆ ಕೂಡಲೇ ರೈಲ್ವೆ ಸಿಬ್ಬಂದಿಗೆ ದೂರು ನೀಡಬಹುದು. ಭಾರತೀಯ ರೈಲ್ವೇಯಲ್ಲಿ ಮತ್ತೊಂದು ಪ್ರಮುಖ ನಿಯಮವಿದೆ. ಹಾಡುಗಳನ್ನು ಕೇಳಬೇಡಿ ಅಥವಾ ಸ್ಪೀಕರ್ ಬಳಸಿ ಫೋನ್‌ನಲ್ಲಿ ಮಾತನಾಡಬೇಡಿ. ರಾತ್ರಿ 10 ಗಂಟೆಯ ನಂತರ ಜೋರಾಗಿ ಆಡಿಯೋ ಅಥವಾ ವೀಡಿಯೋ ಪ್ಲೇ ಮಾಡುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಬಹುದು…
ಕರ್ನಾಟಕದಲ್ಲಿ ಪ್ರತಿಯೊಬ್ಬರು ನಮ್ಮ ಮಾತೃ ಭಾಷೆಗೆ ಗೌರವ ಕೊಡಬೇಕು ಅಂದರೆ ಕನ್ನಡದಲ್ಲಿ ಮಾತನಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವವರನ್ನು ಕೀಳಾಗಿ ಕಾಣುತ್ತಿರುವ ಘಟನೆಗಳು ನಡೆಯುತ್ತಿವೆ.ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಮೊನ್ನೆಯಷ್ಟೇ ಯುವತಿಯೊಬ್ಬಳು ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾದರೆ ಮಂಗಳೂರು ಉಡುಪಿಯಲ್ಲಿ ತುಳು ಮಾತೃ ಭಾಷೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ತುಳು ಬಗ್ಗೆ ಪಾಠ ಕೇಳಲು ಬಂದ ಯುವತಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇಲ್ಲೊಬ್ಬ ವ್ಯಕ್ತಿ ಕನ್ನಡ ಮಾತನಾಡುವವರಿಗೆ ಮರೆಯಾದೆ ಇಲ್ಲವೆಂಬಂತೆ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಕೂಡ ಮಾಡಿದ್ದಾನೆ. ಆತ ಮಾಡಿದ ಸಂದೇಶ ಕನ್ನಡಿಗರನ್ನು ಕೆಣಕಿಸಿದೆ. ಅನುರಾಗ್ ಜೈಸಿಂಗ್ ಎಂಬ ವ್ಯಕ್ತಿ ಖಾತೆಯಲ್ಲಿ ”ನನ್ನ ತಂಡದಲ್ಲಿರುವ ಯಾವುದೇ ಕನ್ನಡದವನು ಹಿಂದಿಯಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಅವನಿಗೆ/ಆಕೆಗೆ ಹೊರಹೋಗಲು ಬಾಗಿಲು ತೋರಿಸಲಾಗುತ್ತದೆ” ಎಂದು ಬರೆಯಲಾಗಿದೆ. ಇದಕ್ಕೂ ಮುನ್ನ ಗಣೇಶ ಚೇತನ್ ಎಂಬ ವ್ಯಕ್ತಿ ”ನಿಮಗೆ ನಿಜವಾಗಿಯೂ…
ತಿಪಟೂರು: ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಗರದ ಶಾರದಾನಗರ ರೈಲ್ವೆ ಗೇಟ್ ಬಳಿ ನಡೆದಿದೆ. ಯುವಕನೋರ್ವ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕಲ್ಕೆರೆ ಗ್ರಾಮದ ವಿದ್ಯಾರ್ಥಿ ಸಾವನ್ನಪ್ಪಿದ ಯುವಕ ಅಂತ ತಿಳಿದು ಬಂದಿದೆ. ನಗರದಲ್ಲಿ ಸಂಚರಿಸಿದ ಸಂಪರ್ಕ ಕ್ರಾಂತಿ ತಲೆ ಕೊಟ್ಟು ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಯುವಕನ ರುಂಡ ಮುಂಡದಿಂದ ಬೇರ್ಪಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಸರಗೂರು: ತಾಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯ ಬಿ ಹಾಗೂ ಸಿಬ್ಬಂದಿಗಳು ಪಂಚಾಯಿತಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆಂದು ಗ್ರಾ.ಪಂ. ಅಧ್ಯಕ್ಷ ಮತ್ತು ಸದಸ್ಯರು ಆರೋಪಿಸಿದರು. ಗ್ರಾ.ಪಂ. ಅಧ್ಯಕ್ಷ ನಾಗೇಂದ್ರ ಮತ್ತು ಉಪಾಧ್ಯಕ್ಷೆ ಭಾರತಿ ಮತ್ತು ಸದಸ್ಯರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಅ. 13/08/2024 ರಂದು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅದರ ದೂರಿನ ಮೇರೆಗೆ ಬುಧವಾರದಂದು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ತನಿಖಾ ತಂಡ ಪಂಚಾಯಿತಿ ಗೆ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ತನಿಖೆ ತಂಡ ಅಧಿಕಾರಿ, ಸರಿಯಾದ ರೀತಿಯಲ್ಲಿ ಕಡತಗಳನ್ನು ಪರಿಶೀಲನೆ ಮಾಡಲು ನೀಡಿಲ್ಲ. ಆದರೆ ಒಂದು ಕಡತ ಕೇಳಿದರೆ, ಇನ್ನೂ ಯಾವ್ಯಾವುದೋ ದಾಖಲು ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುವುದು ಎಂದರು. ನಂತರ ಮಾಜಿ ಉಪಾಧ್ಯಕ್ಷ ದೇವದಾಸ್ ಮಾತನಾಡಿ, ಗ್ರಾ.ಪಂ. ಪಿಡಿಒ ಭಾಗ್ಯ ಅವರು ಸಿಬ್ಬಂದಿಗಳ ಹೆಸರಿಗೆ ಹಣವನ್ನು ಜಮಾ ಮಾಡಿಕೊಂಡು ಸರಕಾರದ ಹಣವನ್ನು…
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುನಿಸಿಪಲ್ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ರಾಂತ ಕರ್ನಲ್ ಆಗಿರುವ ಅಶೋಕ್ ಅವರನ್ನು ರಾಜ್ಯ ಸರ್ಕಾರವು ಕೆ.ಆರ್.ಪೇಟೆ ತಹಶೀಲ್ದಾರ್ ಆಗಿ ನೇಮಿಸಿ ಸ್ಥಳನಿಯುಕ್ತಿಗೊಳಿಸಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಸರ್ಗಪ್ರಿಯಾ ಅವರು ಪಿರಿಯಾಪಟ್ಟಣ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡು ಖಾಲಿಯಾಗಿಯೇ ಉಳಿದಿದ್ದ ತಹಶೀಲ್ದಾರ್ ಹುದ್ದೆಗೆ ಪ್ರಭಾರ ತಹಶೀಲ್ದಾರ್ ಆಗಿ ಶ್ರೀರಂಗಪಟ್ಟಣ ತಹಶೀಲ್ದಾರ್ ಆದರ್ಶ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ನಂತರ ಸರ್ಕಾರವು ಕೆ. ಆರ್.ಪೇಟೆ ತಹಶೀಲ್ದಾರ್ ಆಗಿ ಡಾ.ಅಶೋಕ್ ಅವರನ್ನು ಅಧಿಕೃತವಾಗಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ಅಶೋಕ್ ಅಧಿಕಾರ ಸ್ವೀಕರಿಸಿದರು. ನಾನು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದೇನೆ. ಮುಕ್ತ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಲು ಪಣ ತೊಟ್ಟಿರುವ ನಾನು ಭ್ರಷ್ಟಾಚಾರ ಮುಕ್ತವಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ಬಡ ಜನರು ಹಾಗೂ ರೈತ ಬಾಂಧವರ ಜೊತೆಗೆ ಬೆರೆತು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ದೊರಕಿಸಿಕೊಡಲು ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಡಾ.ಅಶೋಕ್…
ತುರುವೇಕೆರೆ: ತುರುವೇಕೆರೆ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಜಾರಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪಟ್ಟ ಬಿಜೆಪಿ ಪಾಲಾಗಿದೆ. ಹಾಲಿ ಹಾಗೂ ಮಾಜಿ ಶಾಸಕರ ಹಗ್ಗ ಜಗ್ಗಾಟದಲ್ಲಿ ಮಾಜಿ ಶಾಸಕ ಮಸಾಲ ಜಯರಾಮ್ ರವರ ಕೈ ಮೇಲಾಗಿದೆ. ಒಟ್ಟು 14 ಜನ ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದು, 12 ಜನ ಹಾಜರಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗೆ 10:45 ರಿಂದ 12 ಗಂಟೆಯವರೆಗೂ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಆಶಾ ರಾಜಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮಕ್ಕೆ ನಾಮಪತ್ರ ಸಲ್ಲಿಸಿದ್ದರು. 12 ಗಂಟೆವರೆಗೂ ಯಾವೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ, ಆಶಾ ರಾಜಶೇಖರ್ ಅಧ್ಯಕ್ಷರನ್ನಾಗಿ ಮತ್ತು ಭಾಗ್ಯಮ್ಮ ಕೆ. ರವರನ್ನು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ತಹಶೀಲ್ದಾರ್ ಕುಂಞ ಎಂ.ಎನ್. ಅಹಮದ್ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ಕೂಡ ಬಾಹ್ಯ ಬೆಂಬಲ ನೀಡಿದ್ದಾರೆ. ಬೆಂಬಲಿಗರು ಹಾಗೂ …
ಹಿಂದೂ ಧರ್ಮದಲ್ಲಿ ಅನೇಕ ವಿಧದ ಯತಿಗಳಿದ್ದಾರೆ. ಅವರಲ್ಲಿ ನಾಗಾ ಸಾಧುಗಳೂ ಒಬ್ಬರು. ನಾಗಾ ಸಾಧುಗಳು ಭಗವಾನ್ ಶಿವನಿಗೆ ಬಹಳ ಶ್ರದ್ಧೆಯನ್ನು ಹೊಂದಿರುತ್ತಾರೆ. ಅವರು ಕಠಿಣ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೆಸರುವಾಸಿಯಾಗಿದ್ದಾರೆ. ಹೆಚ್ಚಿನ ಜನರು ಪುರುಷ ನಾಗಾ ಸಾಧುಗಳ ಬಗ್ಗೆ ಗೊತ್ತಿದ್ದರೂ ಸ್ತ್ರೀ ನಾಗಾ ಸಾಧುಗಳ ಬಗ್ಗೆ ತಿಳಿದಿರುವುದು ಕಡಿಮೆ. ಮಹಿಳಾ ನಾಗಾ ಸಾಧುಗಳು ಪುರುಷ ನಾಗಾ ಸಾಧುಗಳಿಗಿಂತ ಹೆಚ್ಚು ಸವಾಲು ಮತ್ತು ತೊಂದರೆಗಳನ್ನು ಎದುರಿಸುತ್ತಾರೆ. ಅವರು ತಮ್ಮ ಸಂಪೂರ್ಣ ಜೀವನವನ್ನು ದೇವರಿಗೆ ಅರ್ಪಿಸುತ್ತಾರೆ ಮತ್ತು ಕಠಿಣ ತಪಸ್ಸನ್ನು ಮಾಡುತ್ತಾರೆ. ನಾಗಾ ಸಾಧುಗಳೆಂದರೆ ತಕ್ಷಣ ನೆನಪಾಗುವುದು ಕುಂಭ ಮೇಳ. ನಾಗಾ ಸಾಧುಗಳ ಜೀವನ, ಸಂಸ್ಕೃತಿ ಎಲ್ಲವೂ ವಿಭಿನ್ನ ಮತ್ತು ಎಲ್ಲರನ್ನು ಸೆಳೆಯುತ್ತದೆ. ತಪಸ್ವಿಯಂತೆ ಬದುಕುವ ಅವರು ಅತ್ಯಂತ ಗೌರವವನ್ನೂ ಪಡೆಯುತ್ತಾರೆ. ಅವರ ಅತೀಂದ್ರಿಯ ಶಕ್ತಿಯನ್ನು ವ್ಯಾಪಕವಾಗಿ ಗುರುತಿಸಲಾಗಿದೆ. ಇವರಲ್ಲಿ ಸ್ತ್ರೀ ನಾಗಾ ಸಾಧುಗಳು ಇರುತ್ತಾರೆ. ನಾಗಾ ಸಾಧುಗಳು ತಮ್ಮ ಪುರುಷ ಸಹವರ್ತಿಗಳಂತೆ ತಮ್ಮ ಜೀವನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕತೆಗೆ ಮೀಸಲಿಡುತ್ತಾರೆ. ನಾಗಾ ಸಾಧು ಆಗಲು ಮಹಿಳೆಯು…
2024ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ಭಾರತಕ್ಕಾಗಿ ಮೀರಳದ ಸಾಧನೆಗೈದ ಕ್ಷಣಗಳ ಸರಣಿ. ಈ ಕ್ರೀಡಾಕೂಟದಲ್ಲಿ ಭಾರತ 7 ಚಿನ್ನ, 9 ಬೆಳ್ಳಿ, ಮತ್ತು 13 ಕಂಚಿನ ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿತು. ಒಟ್ಟು 29 ಪದಕಗಳೊಂದಿಗೆ ಭಾರತದ ದಿವ್ಯಾಂಗ ಕ್ರೀಡಾಪಟುಗಳು ವಿಶ್ವದ ಕ್ರೀಡಾಲೋಕದಲ್ಲಿ ತಮ್ಮ ಮುದ್ರೆ ಬಿಟ್ಟಿದ್ದಾರೆ. ಪದಕಗಳ ಸಂದೇಶ: ಈ ಸಾಧನೆ ದಿವ್ಯಾಂಗತೆಯನ್ನು ಮೀರಿ ಸಾಗುವ ಪ್ರಚಂಡ ಶಕ್ತಿಯ ಉದಾಹರಣೆಯಾಗಿದೆ. ದೈಹಿಕ ಸವಾಲುಗಳನ್ನು ಒಗ್ಗೋಲಿಸುವ ಬದಲು, ಭಾರತೀಯ ಪ್ಯಾರಾ ಕ್ರೀಡಾಪಟುಗಳು ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಸತತ ಸಾಧನೆ ತೋರಿಸಿದ್ದಾರೆ. ಅವರ ಈ ಯಶಸ್ಸು ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ದೇಶದ ದಿವ್ಯಾಂಗ ಜನತೆಯ ಜೀವನಶೈಲಿಗೆ ಹೊಸ ಉತ್ತೇಜನ ನೀಡುವಂತಿದೆ. ಸಮರ್ಥತೆಯ ಹಿಂದೆ: ಈ ಸಾಧನೆಯ ಹಿನ್ನಲೆಯಲ್ಲಿ ಸಮರ್ಪಿತ ತರಬೇತಿ ಕೇಂದ್ರಗಳು, ಸುಧಾರಿತ ಮೂಲಸೌಕರ್ಯಗಳು ಮತ್ತು ಕೋಚ್‌ಗಳ ಮಾರ್ಗದರ್ಶನದ ಪಾತ್ರ ಪ್ರಮುಖವಾಗಿದೆ. ಸರ್ಕಾರದ ಬೆಂಬಲ, ತರಬೇತಿ ಉಲ್ಲೇಖನಿಯವಾಗಿದ್ದು, ದಿವ್ಯಾಂಗ ಕ್ರೀಡಾಪಟುಗಳ ಸಫಲತೆಗೆ ಪೂರಕವಾಗಿದೆ. ವಿಶೇಷವಾಗಿ, ದಿವ್ಯಾಂಗ ಕ್ರೀಡೆಗಳ…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ವಿರುದ್ದ ಪೊಲೀಸ್ ಇಲಾಖೆ ಸಲ್ಲಿಸಿರುವ ಆರೋಪ ಪಟ್ಟಿಯ ವಿವರಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ಆದೇಶ ನೀಡಿದೆ. ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, ಈ ಆದೇಶವನ್ನು ಉಲ್ಲಂಘಿಸಿದ ಮಾಧ್ಯಮಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಸೂಚನೆ ನೀಡಿದೆ. ಆದೇಶದ ಪ್ರತಿಯನ್ನು ಎಲ್ಲಾ ಪ್ರಮುಖ ಮಾಧ್ಯಮಗಳಿಗೂ ಸಹ ರವಾನಿಸುವಂತೆ ಕೋರ್ಟ್ ಸೂಚಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಆರೋಪ ಪಟ್ಟಿಯಲ್ಲಿ ಇಂಚಿಂಚೂ ಮಾಹಿತಿಯನ್ನು ನೀಡಲಾಗಿತ್ತು. ಆರೋಪಿಗಳ ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪೋಸ್ಟ್ ಮಾರ್ಟಮ್ ವರದಿಗಳು ಗ್ಯಾಂಗ್ ನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಪೊಲೀಸರು ತನಿಖೆಯಿಂದ ಬಹಿರಂಗಪಡಿಸಿದ್ದ ಈ ಆರೋಪಪಟ್ಟಿಯನ್ನು ಎಲ್ಲಾ ಮಾಧ್ಯಮಗಳೂ ಸಹ ಯಥಾವತ್ತಾಗಿ ಪ್ರಕಟಿಸಿದ್ದವು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧಿತ ಆರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಯನ್ನು ಪ್ರಸಾರ/ಪ್ರಕಟ/ಹಂಚಿಕೆ…