ತುಮಕೂರು: ದಲಿತ ಸಿಎಂ ಪ್ರಸ್ತಾವನೆ ಸದ್ಯಕ್ಕಿಲ್ಲ. ಇದ್ದಾಗ ನಾವೇ ಕರೆದು ಹೇಳ್ತಿವಿ, ನಮ್ಮ ಬೇಡಿಕೆ ಇದೆ ಅಂತಾ ಸದ್ಯಕ್ಕಂತೂ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.
ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸ್ಥಾನ ಖಾಲಿಯೇ ಇಲ್ಲ, ಯಾರಿಗೆ ಮಾಡ್ತೀರಿ ನೀವು, ಇರೋದು ಒಂದೇ ಸ್ಥಾನ. ಆ ತರಹದ ಸನ್ನಿವೇಶ ಇಲ್ಲ ಎಂದು ಅವರು ಮರು ಪ್ರಶ್ನೆ ಹಾಕಿದರು.
ಭೇಟಿ ಆಗಿದ್ದೀವಿ, ಊಟ ಮಾಡಿಸಿದ್ರು ಅಷ್ಟೇ, ನಂದು ಬೇರೆ ಕಾರ್ಯಕ್ರಮ ಇತ್ತು, ಅಲ್ಲಿ ಬಂದಿದ್ದೆ. ಸಾಹೇಬ್ರ ನೋಡ್ಕೊಂಡ್ ಹೋಗೋಕೆ ಬಂದಿದ್ದೆ ಅಷ್ಟೇ ಎಂದರು.
ಏನೇನು ಚರ್ಚೆ ನಡೆಸಿದ್ರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ಏನು ಚರ್ಚೆ ಆಗುತ್ತೆ. ನಾವು ರಾಜೀನಾಮೆ ಕೊಡ್ಬೇಡ ಅಂತಾ ಹೇಳಿದ್ದೀವಲ್ಲ ಎಂದರು. ಅವ್ರು ಕೂಗು ಶುರು ಮಾಡಿದ್ರೆ ಮಾಡಲಿ, ನಾವು ಬೇಡ ಅಂತಾ ಹೇಳಿದ್ದೀವಲ್ಲ. ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿರುವ ವಿಚಾರದಲ್ಲಿ ಅದು ಕೂಡ ಅಷ್ಟೇ, ಸಾಹೇಬ್ರನ್ನ ಭೇಟಿ ಮಾಡಿದ ಹಾಗೆ ಸೇಮ್. ಒಬ್ಬ ಅಧ್ಯಕ್ಷರು, ಹೋಗಿದ್ದಿವಿ ಅದಕ್ಕೆ ಭೇಟಿಯಾಗಿದ್ದೀವಿ ಎಂದರು.
ಭೇಟಿಯಾಗ್ತಾನೆ ಇರ್ತೀವಿ, ಎಲ್ಲಾ ಒಂದೇ ಸಚಿವರು, ಶಾಸಕರು ಅಂದ್ಮೇಲೆ ಭೇಟಿಯಾಗ್ತಲೇ ಇರ್ತೀವಿ. ನೀವೆಲ್ಲಾ ಹೇಗೆ ಸೇರ್ತಾ ಇರ್ತೀರೋ, ಹಾಗೆ ನಾವು ಕೂಡ ಸೇರ್ತಾ ಇರ್ತೀವಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296