ಕೊಪ್ಪಳ: ಶಾಸಕ ಜನಾರ್ಧನ ರೆಡ್ಡಿ ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಕಾರು ಚಲಾಯಿಸಿ ದರ್ಪ ಪ್ರದರ್ಶಿಸಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾಯಚೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಏರ್‌ಪೋರ್ಟ್‌ನತ್ತ ಪ್ರಯಾಣಿಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಹನ ಹಾಗೂ ಬೆಂಗಾವಲು ಪಡೆಗಾಗಿ ಗಂಗಾವತಿಯಲ್ಲಿ ಪೊಲೀಸರು ಇತರ ವಾಹನಗಳನ್ನು ತಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಇದೇ ವೇಳೆ ತಮ್ಮ ವಾಹನವನ್ನು ತಡೆದಿದ್ದರಿಂದ ಕೋಪಗೊಂಡ ಶಾಸಕ ಜನಾರ್ಧನ ರೆಡ್ಡಿಯವರು ತಾವೇ ರೇಂಜ್‌ರೋವರ್ ಕಾರನ್ನು ಚಲಾಯಿಸಿಕೊಂಡು ಡಿವೈಡರ್ ಅನ್ನು ಹತ್ತಿಸಿ ಏಕಮುಖ ಸಂಚಾರ ಮಾರ್ಗದಲ್ಲಿ ಮುಖ್ಯಮಂತ್ರಿಯವರ ಕಾನ್ವೆಗೆ ಎದುರಾಗಿ ಹೋಗಿದ್ದಾರೆ. ಇದರಿಂದಾಗಿ ಬೆಂಗಾವಲು ಪಡೆ ಕ್ಷಣ ಕಾಲ ತಬ್ಬಿಬ್ಬಾಗಿದೆ.
ಜನಾರ್ಧನ ರೆಡ್ಡಿಯವರ ಕಾರು ಮುಂದಕ್ಕೆ ಹೋದ ಬಳಿಕ ಮುಖ್ಯಮಂತ್ರಿಯವರು ಪ್ರಯಾಣ ಮುಂದುವರೆಸಿದ್ದಾರೆ. ಶಾಸಕರೇ ಏಕಮುಖ ಸಂಚಾರ ಮಾರ್ಗದ ನಿಯಮಗಳನ್ನು ಉಲ್ಲಂಘಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q