ಚಿಕ್ಕನಾಯಕನಹಳ್ಳಿ: ಹೇಮಾವತಿಯ ತುಮಕೂರು ನಾಲೆಯಲ್ಲಿ ನೀರು ಹರಿಸುವ ವೇಳೆಗೆ ನವಿಲೇ ಭಾಗದ ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರನ್ನು ಹರಿಸಲಾಗುವುದು ಈ ಬಗ್ಗೆ ರೈತರು ಹಾಗೂ ಹೇಮಾವತಿ ಹೋರಾಟಗಾರರು ಆತಂಕಪಡುವ ಅಗತ್ಯವಿಲ್ಲವೆಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ತಾಲ್ಲೂಕಿನ ಹೇಮಾವತಿ ನಾಲಾ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಕಾಮಗಾರಿಯನ್ನು ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ನಾಲಾ ಕಾಮಗಾರಿಯು ನಡೆಯುತ್ತಿದ್ದು, ಇನ್ನು 70 ಮೀಟರ್ ಉದ್ದ ಎರಡು ಸೇತುವೆಗಳ ನಿರ್ಮಾಣವಾಗಬೇಕಿದೆ, ಈ ತಿಂಗಳ ಅಂತ್ಯಕ್ಕೆ ಅವುಗಳು ಪೂರ್ಣಗೊಳ್ಳಲಿದ್ದು, ನಂತರ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಾಗುವುದು ಇನ್ನು ಈ ನೀರು ಹರಿಯುವ ವೇಳೆಗೆ ಕಂದಿಕೆರೆ ಭಾಗಕ್ಕೂ ಅಗತ್ಯವಿರುವಂತಹ ಕೆಲಸವನ್ನು ಮಾಡುವ ಮೂಲಕ ಚಿಕ್ಕನಾಯಕನಹಳ್ಳಿ, ನಾಗತಿಕೆರೆ, ಕಂದಿಕೆರೆ ಮೂಲಕ ಬೋರನಕಣಿವೆಗೆ ಹರಿಸಲು ಕ್ರಮಕೈಗೊಳ್ಳಲಾಗುವುದು ಈ ಕಾಮಗಾರಿಯನ್ನು ಪ್ರತಿ ವಾರ ಅಧಿಕಾರಿಗಳೊಂದಿಗೆ ಸಭೆನಡೆಸುವುದು ಸೇರಿದಂತೆ ಸ್ಥಳಕ್ಕೆ ಬೇಟಿ ನೀಡಿ ಯಾವುದಾದರು ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವ ಮೂಲಕ ಈ ಕಾಮಗಾರಿಯನ್ನು ಪರೀಶಿಲಿಸಲಾಗುತ್ತಿದೆ ಆದ್ದರಿಂದ ರೈತರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ನಾಲಾ ವಲಯದ ಇಂಜಿನಿಯರ್ ಪ್ರಭಾಕರ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಹೇಮಾವತಿ ಬ್ರಾಂಚ್ ಕೆನಾಲ್ ಕಾಮಗಾರಿಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್‌ನಿಂದ ಅವಾರ್ಡ್ ಎಲ್ಲಾ ಮಾಡಿ ರೈತರಿಗೆ ಪರಿಹಾರದ ಹಣವನ್ನು ನೀಡುವ ಮೂಲಕ ಕಾಮಗಾರಿಯನ್ನು ಮಾಡಲಾಗುತ್ತಿದೆ ದಬ್ಬೇಘಟ್ಟ ಸೇರಿದಂತೆ ಇತರೆ ಭಾಗದಲ್ಲಿದ್ದಂತಹ ಭೂಸ್ವಾಧೀನ ಪ್ರಕ್ರಿಯೇಯನ್ನು ಬಗೆಹರಿಸಿ ಶಾಸಕರು ಮುಂದಾಳತ್ವದಲ್ಲಿ ರೈತರಿಗೆ ಪರಿಹಾರದ ಹಣವನ್ನು ನೀಡಲಾಗುತ್ತಿದೆ, ಇನ್ನು ಸೇತುವೆಗಳನ್ನು ನಿರ್ಮಿಸುವ ಜಾಗದಲ್ಲಿ ಸ್ವಲ್ಪ ಮಟ್ಟಿಗೆ ಬಿಗಿಯಾದ ಬಂಡೆ ರೀತಿಯ ಮಣ್ಣು ಸಿಕ್ಕಿದ್ದರಿಂದ ಕಾಮಗಾರಿ ತಡವಾಗುತ್ತಿದೆ ಅದನ್ನು ಹೊರತು ಪಡಿಸಿದರೆ ಇನ್ನು ಎರಡು ಸೇತುವೆಗಳ ನಿರ್ಮಾಣ ನಡೆಯುತ್ತಿದ್ದು ಇನ್ನು ಈ ತಿಂಗಳಲ್ಲಿ ಅದನ್ನು ಮುಗಿಸುತ್ತೇವೆ ಇನ್ನು ೯.೬ ಕಿ.ಮೀ. ಯಿಂದ ಇದನ್ನು ಭಾಗ ಮಾಡುವ ಮೂಲಕ ದಬ್ಬೇಘಟ್ಟ ದಿಂದ ನೈಸರ್ಗಿಕವಾಗಿ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಹರಿಸಲಾಗುವುದು ಇದರ ಜೊತೆಯಲ್ಲಿ ಮುಖ್ಯ ನಾಲೆಯಲ್ಲಿರುವ ಸೇತುವೆಗಳಲ್ಲಿರುವ ಹೂಳನ್ನು ತೆಗೆಯಲು ಟೆಂಡರ್ ಕರೆಯಲಾಗಿದ್ದು ಅದನ್ನು ನೀರುಹರಿಸುವ ವೇಳೆಗೆ ತೆಗೆಯಲಾಗುವುದು ಎಂದ ಅವರು ಜುಲೈ ಆಗಸ್ಟ್ ನ ಹೇಮಾವತಿ ನೀರು ಹರಿಸುವ ವೇಳೆಗೆ ಎಲ್ಲಾ ಕೆಲಸಗಳನ್ನು ಮುಗಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಇಂಜಿನಿಯರ್ ಸೌಜನ್ಯ ಸೇರಿದಂತೆ ಗುತ್ತಿದಾರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


