Author: admin

ದಿವ್ಯ ಸ್ಪಂದನಾ ಅಲಿಯಾಸ್​ ರಮ್ಯಾ, ಕನ್ನಡ ಮಾತ್ರವಲ್ಲದೇ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಂತರ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯೂ ಆದರು. ಆದರೆ ರಾಜಕೀಯದಲ್ಲಿ ವಿಫಲರಾಗಿ ಸಂಸದೆ ಪಟ್ಟವೂ ಹೋಗಿ ಕೊನೆಗೆ ಸಿನಿಮಾ, ರಾಜಕೀಯ ಎಲ್ಲದ್ದರಿಂದಲೂ ದೂರ ಆಗಿದ್ದಾರೆ. ಇನ್ನು ರಮ್ಯಾ ಹೆಸರು ಹೇಳಿದಾಗಲೆಲ್ಲ ಅವರ ಮದುವೆ ವಿಚಾರ ಪ್ರಸ್ತಾಪ ಆಗೇ ಆಗುತ್ತದೆ. ಏಕೆಂದರೆ, ವಯಸ್ಸು 41 ಆದರೂ ಇನ್ನು ಮದುವೆ ಆಗದೇ ಉಳಿದಿರುವುದರಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇದೆ. ತಾಜಾ ಸಂಗತಿ ಏನೆಂದರೆ, ರಮ್ಯಾ ಅವರು ಸದ್ದಿಲ್ಲದೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ​ವುಡ್ ​ನಲ್ಲಿ ಸದ್ಯಕ್ಕೆ ಭಾರಿ ಸಂಚಲನ ಮೂಡಿಸಿದೆ. ರಮ್ಯಾ ಅವರು ಖ್ಯಾತ ಉದ್ಯಮಿಯನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ನವೆಂಬರ್​ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ಕೂಡ ನೆರವೇರಲಿದೆಯಂತೆ. ರಮ್ಯಾ ವರಿಸಲಿರುವ ಆ ಉದ್ಯಮಿ ಯಾರೆಂಬುದು ಇನ್ನು ಅಧಿಕೃತವಾಗಿ…

Read More

ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಇವತ್ತಿಗೆ ನ್ಯಾಯಾಂಗ ಬಂಧನ ಮುಗಿಯಲಿದ್ದು ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವ ಪ್ರಯತ್ನ ನಡೀತಿದೆ. ಪೆರೋಲ್ ಮೇಲೆ ಒಂದೆರಡು ಗಂಟೆ ಅವರನ್ನು ಜೈಲಿನಿಂದ ಹೊರಗೆ ಕರೆತರುವ ಬಗ್ಗೆ ಚರ್ಚೆ ನಡೀತಿದೆ. ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ವ್ಯವಸ್ಥೆ ಮಾಡುವ ಕಸರತ್ತು ಶುರುವಾಗಿದೆ. ಈ ಬಗ್ಗೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ವಾಹಿನಿಗೆ ಮಾಹಿತಿ ನೀಡಿದ್ದಾರೆ. ರಿಯಲ್ ಸ್ಟಾರ್ ‘ಉಪೇಂದ್ರ’ ಚಿತ್ರದ 25 ವರ್ಷದ ಸಂಭ್ರಮಾಚರಣೆಗೆ ದರ್ಶನ್ ಕರೆತರುವ ಬಗ್ಗೆ ಚರ್ಚೆ ಶುರುವಾಗಿದೆ. ಸ್ವತಃ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರವನ್ನು ಶೀಘ್ರದಲ್ಲೇ ರೀ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೇ ಅಕ್ಟೋಬರ್ 22ಕ್ಕೆ ಸಿನಿಮಾ 25 ವರ್ಷ ಪೂರೈಸಲಿದೆ. ‘ಉಪೇಂದ್ರ’ ಚಿತ್ರವನ್ನು ಶಿಲ್ಪಾ…

Read More

ಮುಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ, ಸಿಎಂ ಪಟ್ಟದ ಬಗ್ಗೆ ವಿವಿಧ ಸಚಿವರ ಹೇಳಿಕೆಗಳು ಹೊರಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ರಾತ್ರಿ ವಿಮಾನ ಏರುವ ಮೊದಲು ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಕುಟುಂಬದ ಜೊತೆ ಒಂದು ವಾರದ ಪ್ರವಾಸಕ್ಕಾಗಿ ಡಿ. ಕೆ. ಶಿವಕುಮಾರ್ ಭಾನುವಾರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ. ಇದು ವೈಯಕ್ತಿಕ ಪ್ರವಾಸವಾಗಿದೆ. ಆದರೆ ಇದರ ಹಿಂದೆ ರಾಜಕೀಯ ನಡೆ ಇದೆ ಎಂದು ಬಿಂಬಿಸಲಾಗುತ್ತಿತ್ತು. ಆದ್ದರಿಂದ ಡಿ. ಕೆ. ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದಿಂದ 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಹ ಅಮೆರಿಕದಲ್ಲಿದ್ದಾರೆ. ನಟ, ರಾಜಕೀಯ ನಾಯಕ ಕಮಲ್ ಹಾಸನ್ ಸಹ ಅಮೆರಿಕ ಪ್ರವಾಸದಲ್ಲಿದ್ದಾರೆ. ಆದ್ದರಿಂದ ಡಿ. ಕೆ. ಶಿವಕುಮಾರ್ ಅಮೆರಿಕ ಪ್ರವಾಸ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಉಪ ಮುಖ್ಯಮಂತ್ರಿ ಡಿ. ಕೆ.…

Read More

ಡೋಲೋ 650 ಒಂದು ಜನಪ್ರಿಯ ಪ್ರತ್ಯಕ್ಷವಾದ ಔಷಧವಾಗಿದ್ದು, ನೋವು ನಿವಾರಣೆ ಮತ್ತು ಜ್ವರವನ್ನು ನಿಯಂತ್ರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ, ಅದರ ಕೈಗೆಟುಕುವ ಬೆಲೆ ಮತ್ತು ಲಭ್ಯತೆಯಿಂದಾಗಿ, ದೈನಂದಿನ ಕಾಯಿಲೆಗಳನ್ನು ಎದುರಿಸಲು ಅನೇಕ ಜನರು ಡೋಲೋ 650 ಅನ್ನು ಬಳಸುತ್ತಾರೆ. ಆದರೆ ಯಾರು ನಿಖರವಾಗಿ Dolo 650 ಅನ್ನು ತೆಗೆದುಕೊಳ್ಳಬಹುದು ಮತ್ತು ಅದನ್ನು ಬಳಸುವ ಮೊದಲು ನೀವು ಏನು ತಿಳಿದುಕೊಳ್ಳಬೇಕು? ಈ ಬ್ಲಾಗ್ ಈ ಪ್ರಶ್ನೆಗಳನ್ನು ಅನ್ವೇಷಿಸುತ್ತದೆ ಮತ್ತು Dolo 650 ಬೆಲೆ ವಿವರಗಳೊಂದಿಗೆ ನಿಮಗೆ ಸಹಾಯ ಮಾಡುತ್ತದೆ. ಜ್ವರವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ವಯಸ್ಕರು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ವಯಸ್ಕರಿಗೆ ಸಾಮಾನ್ಯ ಡೋಸ್ ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಒಂದು ಟ್ಯಾಬ್ಲೆಟ್ (650 ಮಿಗ್ರಾಂ), ಆದರೆ 24 ಗಂಟೆಗಳಲ್ಲಿ 4,000 ಮಿಗ್ರಾಂ (6 ಮಾತ್ರೆಗಳು) ಮೀರಬಾರದು. ವಯಸ್ಸಾದವರು ಇದನ್ನು ತೆಗೆದುಕೊಳ್ಳಬಹುದು ಆದರೆ ಎಚ್ಚರಿಕೆಯಿಂದ. ಜನರು ವಯಸ್ಸಾದಂತೆ, ಅವರ ಚಯಾಪಚಯ ಮತ್ತು ಮೂತ್ರಪಿಂಡದ ಕಾರ್ಯವು ನಿಧಾನಗೊಳ್ಳುತ್ತದೆ, ಇದು ದೇಹವು ಔಷಧಿಗಳನ್ನು ಹೇಗೆ…

Read More

ವಾಷಿಂಗ್ಟನ್: ಭಾರತದ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ  ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಟೆಕ್ಸಾಸ್‌ನಲ್ಲಿ ಇಂಡೊ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು,  ಆರ್‌ಎಸ್‌ಎಸ್‌ ಭಾರತದ ಬಗ್ಗೆ ಏಕ ಪರಿಕಲ್ಪನೆ ಹೊಂದಿದೆ. ನಾವು ಬಹುವಿಧದ ವಿಚಾರಗಳ ಬಗ್ಗೆ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು. ಬಹುತೇಕ ಅಮೆರಿಕದಂತೆಯೇ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಅವಕಾಶ ಸಿಗಬೇಕೆಂದು ನಾವು ನಂಬಿದ್ದೇವೆ. ಪ್ರತಿಯೊಬ್ಬರಿಗೂ ಕನಸು ಕಾಣಲು ಅವಕಾಶ ಕೊಡಬೇಕು. ಜಾತಿ, ಭಾಷೆ, ಧರ್ಮ, ಸಂಪ್ರದಾಯ ಮತ್ತು ಇತಿಹಾಸಗಳನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎನ್ನುವುದರ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಅವರು ಹೇಳಿದರು. ಭಾರತದ ಪ್ರಧಾನಿ, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದ್ದು, ಚುನಾವಣೆಯಲ್ಲಿ ಅದು ಬಹಿರಂಗವಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬೆಂಗಳೂರು: ಹಿರಿಯ ಪತ್ರಕರ್ತ, ವಸಂತ ನಾಡಿಗೇರ ಅವರು ಸೋಮವಾರ ಮುಂಜಾನೆ 3.15ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶವಾಗಿದ್ದಾರೆ. ಸುಮಾರು ಮೂರು ದಶಕಕ್ಕೂ ಹೆಚ್ಚಿನ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ವಸಂತ ನಾಡಿಗೇರ ಅವರು, ಹಾವೇರಿ ಜಿಲ್ಲೆ ರಾಣೆಬೆನ್ನೂರಿನವರಾಗಿದ್ದಾರೆ. ವಸಂತ ನಾಡಿಗೇರ ಅವರು ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದರಾದರೂ ಪತ್ರಿಕೋದ್ಯಮ ಸೆಳೆದಿತ್ತು. ಸಂಯುಕ್ತ ಕರ್ನಾಟಕದಲ್ಲಿ ವೃತ್ತಿ ಜೀವನ ಆರಂಭಿಸಿದ್ದ, ಅವರು ಪತ್ನಿ, ಪುತ್ರ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವಿಜಯ ಕರ್ನಾಟಕ, ವಿಶ್ವವಾಣಿ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು, ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬಳ್ಳಾರಿ:  ಜೈಲಿನಲ್ಲಿ ನಟ ದರ್ಶನ್ ಟಿವಿ, ಸರ್ಜಿಕಲ್ ಚೇರ್ ಮತ್ತು ವೆಸ್ಟರ್ನ್​ ಟಾಯ್ಲೆಟ್​ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ ಬಳಿಕ ಇದೀಗ ಮತ್ತೊಂದು ಬೇಡಿಕೆಯಿಟ್ಟಿದ್ದಾರಂತೆ. ಜೈಲಿನಲ್ಲಿರುವ ದರ್ಶನ್ ಗೆ ಫಿಟ್ ​ನೆಸ್​ ಕಾಯ್ದುಕೊಳ್ಳುವುದೇ ದೊಡ್ಡ ಚಿಂತೆಯಾಗಿದೆಯಂತೆ. ಹೀಗಾಗಿ ಅನ್ನಕ್ಕೆ ಬ್ರೇಕ್​ ಹಾಕಿರುವ ದರ್ಶನ್​, ಚಪಾತಿ, ಮುದ್ದೆ ಮತ್ತು ವಿಟಮಿನ್ಸ್​ ಮಾತ್ರೆಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ನೀಡುತ್ತಿರುವ ಚಪಾತಿ ದರ್ಶನ್ ಗೆ  ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಚಪಾತಿ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಆದರೆ, ಜೈಲಿನ ಆಹಾರ ಮೆನು ಪ್ರಕಾರ ಪ್ರತಿ ಕೈದಿಗೆ ಇಂತಿಷ್ಟೇ ಆಹಾರ ನೀಡಬೇಕೆಂಬ ನಿಯಮವಿದೆ. ಆದರೆ, ಅದನ್ನು ಮೀರಿ ದರ್ಶನ್​ ಹೆಚ್ಚಿನ ಚಪಾತಿಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ದೇಹದ ಫಿಟ್ ​ನೆಸ್​ ನಿರ್ವಹಣೆ ಮಾಡಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಚಪಾತಿ ನೀಡಿ ಎಂದು ದರ್ಶನ್​ ಮನವಿ ಮಾಡಿದ್ದಾರೆ. ದೇಹದ ತೂಕ ಕಳೆದುಕೊಳ್ಳುವ ಭಯ ದರ್ಶನ್​ ಅವರಲ್ಲಿ ಕಾಡುತ್ತಿದೆ.…

Read More

ಮುಧೋಳ:  ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ‌ ಹಿನ್ನೆಲೆ ನಾಲ್ವರ ವಿರುದ್ದ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುನೀಲ ಜಾನಪ್ಪಗೋಳ(23), ಮಂಜುನಾಥ ಮ್ಯಾಗೇರಿ(32), ಸಚೀನ ಮ್ಯಾಗೇರಿ (24), ರವಿಚಂದ್ರ ತಳಗೇರಿ (23) ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ಗ್ರಾಮವೊಂದರ ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯಾಗಿದ್ದು, ಬಾಲಕಿ ಶೌಚಕ್ಕೆ ತೆರಳಿದ್ದ ವೇಳೆ ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ನೊಂದ ಬಾಲಕಿಯನ್ನು ಪ್ರೀತಿಸು ಅಂತ ಗ್ರಾಮದ ಯುವಕ ಹಿಂದೆ ಬಿದ್ದಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಆತನ ಕಾಟ ತಾಳಲಾರದೇ ಬಾಲಕಿ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಅಲ್ಲಿಗೂ ತೆರಳಿದ್ದ ಯುವಕ ತನ್ನ ಸ್ನೇಹಿತರ ನೆರವಿನೊಂದಿಗೆ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಒಬ್ಬ ಆರೋಪಿಯ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್.ಎಸ್.ಎಲ್.ಸಿ (State Board, CBSC, ICSC), ಮೆಟ್ರಿಕ್ ನಂತರದ ಪ್ರೋತ್ಸಾಹ ಧನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ  ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಿಂದಿನ ಸಾಲಿನ ಪ್ರೋತ್ಸಾಹ ಧನಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವುಂತಿರಲಿಲ್ಲ. ಪ್ರಸಕ್ತ ಸಾಲಿಗೆ ಎಸ್.ಎಸ್.ಎಲ್.ಸಿ (State Board, CBSC, ICSC) ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ https://swdservices.karnataka.gov.in ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್ ಲೈನ್ ಮುಖಾಂತರ ಸಲ್ಲಿಸಿದ ಅರ್ಜಿಯನ್ನು ಹಾಗೂ ಅಗತ್ಯ ದಾಖಲಾತಿಗಳಿಗೆ ಸಂಬಂಧ ಪಟ್ಟ ಶಾಲಾ ಕಾಲೇಜಿನ ಪ್ರಾಂಶುಪಾಲರ ಸಹಿ ಹಾಗೂ ಮೊಹರನ್ನು ಪಡೆದು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್-1)…

Read More

ತಾಂತ್ರಿಕ ದೋಷದಿಂದ ಅಥವಾ ಫ್ಲೈಟ್‌ ನಲ್ಲಿದ್ದ ಪ್ರಯಾಣಿಕರಲ್ಲಿ ಯಾರಿಗಾದರೂ ಹುಷಾರು ತಪ್ಪಿದರೆ ಫ್ಲೈಟ್‌ ಎಮರ್ಜೆನ್ಸಿ ಲ್ಯಾಂಡ್ ಆಗುವುದನ್ನು ನೋಡುತ್ತೇವೆ, ಆದರೆ ತಲೆಯಲ್ಲಿ ಹೇನು ಇದ್ದಿದ್ದಕ್ಕೆ ಫ್ಲೈಟ್‌ ಎಮರ್ಜೆನ್ಸಿ ಲ್ಯಾಂಡ್‌ ಆಗಿದೆ ಗೊತ್ತಾ? ಏನು…! ಹೇನು ಇದ್ದಿದ್ದಕ್ಕೆ ಪ್ಲೈಟ್‌ ಎಮರ್ಜೆನ್ಸಿ ಲ್ಯಾಂಡ್ ಆಯ್ತಾ? ಲಾಸ್ ಏಂಜಲೀಸ್‌ ನಿಂದ ಹೊರಟ ಏರ್‌ ಲೈನ್ಸ್ ಪ್ರಯಾಣಿಕರ ತಲೆಯಲ್ಲಿ ಹೇನು ಇದ್ದಿದ್ದಕ್ಕೆ ಫೀನಿಕ್ಸ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡ್ ಅಗಿದ್ದು, ಇದನ್ನು ಟಿಕ್‌ ಟಾಕ್‌ ಯೂಸರ್ ಈ ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್‌ ವ್ಯೂವ್ಸ್ ಕೂಡ ಪಡೆದಿತ್ತು. ಮಹಿಳೆಯೊಬ್ಬರ ತಲೆಯಲ್ಲಿ ಹೇನು ಇರುವ ಕಾರಣಕ್ಕೆ ಎಮರ್ಜೆನ್ಸಿ ಲ್ಯಾಂಟ್‌ ಆದ ಪ್ಲೈಟ್‌ 12 ಗಂಟೆ ಗಂಟೆ ಅಲ್ಲಿಯೇ ಇತ್ತು, ಇದರಿಂದಾಗಿ ಪ್ರಯಾಣಿಕರು ಪರಿದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದು ಆ ಟಿಕ್‌ ಟಾಕ್ ಬಳಕೆದಾರ ಹೇಳಿದ್ದಾರೆ. ವೈದ್ಯಕೀಯ ಕಾರಣಕ್ಕೆ ಫ್ಲೈಟ್ ಅನ್ನು ತುರ್ತಾಗಿ ಇಳಿಸಲಾಯ್ತು ಎಂದು ಕಾರಣ ನೀಡಿದರು. ಅಲ್ಲಾ ತಲೆಯಲ್ಲಿ ಹೇನು ಕಂಡು ಈ ರೀತಿ ಎಮರ್ಜೆನ್ಸಿ…

Read More