Author: admin

ತುಮಕೂರು:  ಎರಡು ಕಾರುಗಳ ನಡುವೆ ಭೀಕರ ಅಪಘಾತದಲ್ಲಿ ಒಟ್ಟು ಐವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ನಡೆದಿದೆ. ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮೃತಪಟ್ಟಿದ್ದು ಸಿಂಧೂ ಎಂಬ ಮಹಿಳೆಯೊಬ್ಬರನ್ನು ಗುರುತಿಸಲಾಗಿದೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ. ಮಹಿಳೆ ಮತ್ತು  ಬಾಲಕನ ಸ್ಥಿತಿ ಗಂಭೀರವಾಗಿದೆ. ಒಂದು ಕಾರಿನಲ್ಲಿದ್ದ ಮೂವರು ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.  ಮಾರುತಿ ಕಾರು ತುಮಕೂರು ಕಡೆಯಿಂದ ಬರುತ್ತಿತ್ತು,  ಟಾಟಾ ಟಿಯಾಗೋ ಮಧುಗಿರಿ ಕಡೆಯಿಂದ ತುಮಕೂರು ಕಡೆ ಹೋಗುತ್ತಿದ್ದ ವೇಳೆ ಈ ಭೀಕರ ಅಪಘಾತ ನಡೆದಿದೆ. ಸ್ಥಳಕ್ಕೆ ಮಧುಗಿರಿ ಪಿಎಸ್ ಐ ವಿಜಯ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಯೋಗೇಶ್ ಪುತ್ರ ಸಿಂಧೂ (12), ಸೇರಿ ಒಂದೇ ಕುಟುಂಬದ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಸಿಯಾಜ್ ಕಾರಿನಲ್ಲಿ ತೆರಳುತ್ತಿದ್ದ ಮೃತ ಯೋಗೇಶ್ ಕುಟುಂಬ, ಊರಿನಲ್ಲಿ ಹಬ್ಬ ಮುಗಿಸಿಕೊಂಡು ವೈ‌.ಎನ್. ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊಗುತ್ತಿತ್ತು. ಯೋಗೇಶ್ ಕುಟುಂಬ ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದರು.…

Read More

ಬಿಹಾರ: ಯೂಟ್ಯೂಬ್ ನೋಡಿ ಬಾಲಕನಿಗೆ ನಕಲಿ ವೈದ್ಯನೊಬ್ಬ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಪರಿಣಾಮವಾಗಿ 15 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದ  ಸರನ್ ಜಿಲ್ಲೆಯಲ್ಲಿ ನಡೆದಿದೆ. ಅಜಿತ್ ಕುಮಾರ್ ಪುರಿ ಎಂಬ ನಕಲಿ ವೈದ್ಯ ಈ ಕೃತ್ಯ ಎಸಗಿದ್ದು, ಬಾಲಕ ಸಾವನ್ನಪ್ಪಿದ ಬೆನ್ನಲ್ಲೇ ಈತ ತಲೆಮರೆಸಿಕೊಂಡಿದ್ದಾನೆ. ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಮಧುರಾದಲ್ಲಿರುವ ಅಜಿತ್ ಕುಮಾರ್ ಪುರಿಯ ಕ್ಲಿನಿಕ್‌ ಗೆ ದಾಖಲಿಸಲಾಗಿತ್ತು. ಬಾಲಕನನ್ನು ಕುಟುಂಬದವರ ಒಪ್ಪಿಗೆ ಇಲ್ಲದೆಯೇ  ಅಜಿತ್ ಕುಮಾರ್ ಪುರಿ ಶಸ್ತ್ರ ಚಿಕಿತ್ಸೆ ನಡೆಸಲು ಆರಂಭಿಸಿದ್ದಾನೆ. ಯೂಟ್ಯೂಬ್ ನಲ್ಲಿ ನೋಡುತ್ತಾ, ಶಸ್ತ್ರ ಚಿಕಿತ್ಸೆ ನಡೆಸುತ್ತಿರುವುದನ್ನು ನೋಡಿ ಕುಟುಂಬಸ್ಥರು ಪ್ರಶ್ನಿಸಿದಾಗ, ಡಾಕ್ಟರ್ ನಾನಾ ನೀವಾ ಎಂದು ಗದರಿದ್ದ. ಆದರೆ ಸ್ವಲ್ಪ ಹೊತ್ತಲ್ಲೇ ಬಾಲಕನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಆತನನ್ನು ತಕ್ಷಣವೇ ಕುಟುಂಬಸ್ಥರು ಪಾಟ್ನಾದ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕನ ಸಾವಿನ ನಂತರ ಪುರಿ ಸ್ಥಳದಿಂದ ಪರಾರಿಯಾಗಿದ್ದಾನೆ,  ಕುಟುಂಬದವರು ಪೊಲೀಸ್ ದೂರು ದಾಖಲಿಸಿದ್ದಾರೆ.…

Read More

ಕಾರವಾರ: ಗಣೇಶನ ಹಬ್ಬ ಒಂದು ಗೂಡಿಸುವ ಪರಂಪರೆಯನ್ನ ಹೊಂದಿದೆ. ಆದರೆ, ಗಣೇಶನ ಹಬ್ಬದ ವಿಚಾರವಾಗಿ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ವರದಿಯಾಗಿದೆ. ಗಣೇಶ ಚತುರ್ಥಿ ಆಚರಣೆಯ ಹಳೆಯ ಖರ್ಚಿನ ವಿಚಾರಕ್ಕೆ ಇಲ್ಲಿನ ಸಾಯಿಕಟ್ಟಾದಲ್ಲಿ ಶನಿವಾರ ಕುಟುಂಬವೊಂದರ ನಡುವೆ ಕಲಹ ನಡೆದು, ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಶಿರಸಿ ಅಯ್ಯಪ್ಪ ನಗರದ, ಹಾನಗಲ್‍ನಲ್ಲಿ ಸರ್ವೇಯರ್ ಆಗಿದ್ದ ಸಂದೇಶ ಪ್ರಭಾಕರ ಬೋರಕರ್ (31) ಹತ್ಯೆಯಾದವರು. ಅವರ ಸಹೋದರನ ಪುತ್ರ ಮನೀಷ್ ಬೋರಕರ್ ಹತ್ಯೆಗೈದ ಆರೋಪಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೀಷ್ ಸೇರಿ ಅವರದೇ ಕುಟುಂಬದ ಐವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಮೂಲದ ಒಂದೇ ಕುಟುಂಬಕ್ಕೆ ಸೇರಿದ್ದ ಹಲವರು ಗಣೇಶ ಚತುರ್ಥಿ ಆಚರಣೆಗೆ ಸೇರಿದ್ದ ವೇಳೆ ಹಳೆಯ ಖರ್ಚಿನ ರೂಪಾಯಿ 8 ಸಾವಿರ ಹಣದ ವಿಚಾರವಾಗಿ ಕಲಹ ನಡೆದಿತ್ತು.  ಈ ವೇಳೆ ಸಂದೇಶ ಎಂಬುವವರ ಹತ್ಯೆ ನಡೆದಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ಪುಣೆ: ಪತ್ನಿಯ ಕಿರಿ ಕಿರಿ ಕೇಳಲಾಗದೇ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಬಳಿಕ ಭಾರೀ ನೀರಿನ ಹರಿವು ಇದ್ದ ನದಿಯಲ್ಲಿ ವ್ಯಕ್ತಿ ಕೊನೆಗೂ ಪವಾಡದಂತೆ ಬದುಕಿ ಬಂದಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಪಿಂಪಿರಿ-ಚಿಂಚ್​ವಾಡ ಮೂಲದ ಅಬಾಸಾಹೇಬ ಕೇಶವ ಪವಾರ್ ಎಂಬಾತನಿಗೆ ಪತ್ನಿ ಬೈದಿದ್ದು, ಪತ್ನಿಯ ಬೈಗಳಿಂದ ಬೇಸತ್ತು  ವಾಲ್ಹೇಕರವಾಡಿ ಪ್ರದೇಶದ ಜಾದವ್ ಘಾಟ್‌ನಲ್ಲಿ ಪಾವನಾ ನದಿಗೆ ಹಾರಿದ್ದರು. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಚಿಂಚ್​ವಾಡದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ.  ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದರೂ ಕೇಶವ್  ಪತ್ತೆಯಾಗಲಿಲ್ಲ, ನದಿ ದಡದಲ್ಲಿ ಗಿಡವೊಂದಕ್ಕೆ ಬಟ್ಟೆ ಸಿಕ್ಕಿಹಾಕಿ ಕೊಂಡಿರುವುದು ಪತ್ತೆಯಾಗಿತ್ತು. ಮರ ಪೊದೆ ಎಲ್ಲ ಕಡೆಯೂ ಹುಡುಕಾಟ ನಡೆಸಲಾಯಿತು. ಅಣೆಕಟ್ಟಿನಿಂದ 4000 ಕ್ಯೂಸೆಕ್ ನೀರನ್ನು ಬಿಟ್ಟಿದ್ದರಿಂದ ನದಿಯಲ್ಲಿ ಹೆಚ್ಚಿನ ಹರಿವು ಇತ್ತು. ನದಿಗೆ ಹಾರಿದ ಪವಾರ್, ಉತ್ತಮ ಈಜುಪಟು ಆಗಿದ್ನಂತೆ. ಹೀಗಾಗಿ ಆತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾದರೂ…

Read More

ಮೈಸೂರು:  ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಒಂದೇ ದಿನದಲ್ಲಿ ಬರೋಬ್ಬರಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಒಂದೇ ದಿನದಲ್ಲಿ ಸುಮಾರು 800ಕ್ಕೂ ಹೆಚ್ಚು ಸೈಟುಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದು ಲೋಕಾಯುಕ್ತ ಪೊಲೀಸರಿಗೆ ಇನ್ನು ಕಿವಿಗೆ ಕೇಳಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಕಾಂಗ್ರೆಸ್ ಸರ್ಕಾರದ ಕಾವಲು ಪಡೆಯಂತೆ ವರ್ತಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಲೋಕಾಯುಕ್ತ ಪೊಲೀಸರು ಇಂತಹ ಗಂಭೀರ ವಿಷಯಗಳ ತನಿಖೆಯನ್ನು ನಡೆಸಲಾಗದಾಗ, ಲೋಕಾಯುಕ್ತವನ್ನು ವಿಸರ್ಜಿಸುವುದು ಒಳ್ಳೆಯದುʼ ಎಂದು ಯತ್ನಾಳ್‌ ಕೆಂಡಾಮಂಡಲವಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬೆಂಗಳೂರು: ಶಿವಾಜಿ ನಗರದ ಚರ್ಚ್ ನಲ್ಲಿ ಸಂತ ಮೇರಿ ಜಯಂತೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾತನಾಡುತ್ತಿದ್ದ ವೇಳೆ ಅಜಾನ್ ಕೇಳಿ ಬಂದಿದ್ದು, ಈ ವೇಳೆ ಸಿಎಂ 3 ನಿಮಿಷಗಳ ಕಾಲ ಭಾಷಣ ನಿಲ್ಲಿಸಿದರು. ನಂತರ ಮಾತನಾಡುವಂತೆ ಶಾಸಕರು ಸನ್ನೆ ಮಾಡಿದ ಬಳಿಕ ಭಾಷಣ ಮುಂದುವರೆಸಿದ್ದಾರೆ. ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು. ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಇದೇ ವೇಳೆ ಸಿಎಂ ಕರೆ ನೀಡಿದರು. ಶಿವಾಜಿನಗರದ ಬೆಸಿಲಿಕಾ ಮಂದಿರ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಈ ಮಂದಿರದ ಸೌಹಾರ್ದ ಪರಂಪರೆಗೆ ಸಾಕ್ಷಿ  ಎಂದು ಅವರು  ಇದೇ ವೇಳೆ ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕ್ ಮೇಲ್ಬಾಗದಲ್ಲಿ ಹರ್ಷಿಲ್ ಸೂಪರ್ ಮಾರ್ಕೆಟನ್ನು ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಮತ್ತು ಶಾಸಕ ಹೆಚ್.ವಿ.ವೆಂಕಟೇಶ್ ರವರು ಭಾನುವಾರ ಉದ್ಘಾಟಿಸಿದರು. ಗ್ರಾಮಕ್ಕೆ ಇಂತಹ ಮಾರುಕಟ್ಟೆಗಳು ಅಗತ್ಯವಾಗಿದ್ದು, ವ್ಯವಸ್ಥಿತವಾಗಿ ಸೂಪರ್ ಮಾರ್ಕೆಟ್ ರಚನೆಯಾಗಿದೆ ಎಂದು ಮಾಜಿ ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು. ಗೃಹಪಯೋಗಿಯ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲಕವಾಗಿದೆ. ವಿದ್ಯಾರ್ಥಿಗಳು, ಗೃಹಿಣಿಯರು, ಪುರುಷರಿಗೆ ಮತ್ತು ವ್ಯಾಪಾರಿಗಳಿಗೆ ಅಗತ್ಯವಾದ ಎಲ್ಲಾ ವಸ್ತುಗಳ ಮಾರಾಟವಿದೆ. ಅಗತ್ಯ ಇರುವವರಿಗೆ ಮನೆ ಬಾಗಿಲಿಗೇ ಸರಕುಗಳನ್ನು ಪೂರೈಕೆ ಮಾಡಲಾಗುವುದು ಎಂದು ಮಾಲೀಕರಾದ ಟಿ.ಉಮೇಶ್ ತಿಳಿಸಿದ್ದಾರೆ. ನ್ಯಾಯಾಧೀಶರಾದ ಜಿ.ಮಂಜುನಾಥ, ಡಾ.ಹರೀಶ್, ಪಿಎಸ್ ಐ ಮಾಳಪ್ಪ ನಾಯ್ಕೋಡ್, ಎಸ್.ಟಿ.ನಾಗರಾಜು, ಪಿ.ಸಿ.ಗೋಪಿ, ಎಲ್.ಕೆ.ರಾಘವೇಂದ್ರ, ಭಾನುಪ್ರಕಾಶ್, ಎನ್.ಆರ್.ಅಶ್ವಥ್, ಜಿ.ಬಿ.ಸತ್ಯನಾರಾಯಣ, ಕೋಡಿಪಲ್ಲಿ ರಾಮಚಂದ್ರಪ್ಪ, ಎಂ.ಸಿ.ಜಯರಾಂ, ಷಂಶುದ್ದೀನ್ ಮುಂತಾದವರು ಬೇಟಿ ನೀಡಿ ಶುಭ ಹಾರೈಸಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಪೋಷಕರಾಗಿದ್ದಾರೆ. ದೀಪಿಕಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆಯಷ್ಟೇ ದೀಪಿಕಾ ಪಡುಕೋಣೆ ಮುಂಬೈನ ಅಂಬಾನಿ ಮಾಲೀಕತ್ವದ ಹೆಚ್‌ಎನ್‌ ರಿಲಯನ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ನಿಗದಿಗಿಂತ 20 ದಿನ ಮೊದಲೇ ದೀಪಿಕಾ ರಣ್ವೀರ್ ಮನೆಗೆ ಗೌರಿಯ ಆಗಮನವಾಗಿದೆ. ಒಂದು ದಿನದ ಹಿಂದಷ್ಟೇ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್ವೀರ್ ಸಿಂಗ್ ಹಾಗೂ ಕುಟುಂಬದವರ ಜೊತೆಗೆ ಬರಿಗಾಲಿನಲ್ಲಿ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಆದರೆ ಈ ಖುಷಿಯ ವಿಚಾರವನ್ನು ಇವರಿಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಪೋಸ್ಟ್ ಮಾಡಿಲ್ಲ, ಕೆಲ ದಿನಗಳ ಹಿಂದಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಜೊತೆಯಾಗಿ ಪ್ರಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಫೆಬ್ರವರಿಯಲ್ಲಿ ಪ್ರಗ್ನೆನ್ಸಿ ವಿಚಾರವನ್ನು ಘೋಷಣೆ ಮಾಡಿದ್ದರು. 2018ರಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್…

Read More

48ರ ಹರೆಯದಲ್ಲೇ ಖ್ಯಾತ ಕಿರುತೆರೆ ನಟ ಇಹಲೋಕ ತ್ಯಜಿಸಿದ್ದು,ಕಿರುತೆರೆ ಲೋಕ ಶಾಕ್‌ ಆಗಿದೆ.ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ (Vikas Sethi) ಅವರು ಭಾನುವಾರ(ಸೆ.8ರಂದು) ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 2000 ಇಸವಿಯ ಆರಂಭದಲ್ಲಿ ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ ನಟ ವಿಕಾಸ್ ಸೇಥಿ. ʼಕ್ಯುಂಕಿ ಸಾಸ್ ಭೀ ಕಭಿ ಬಹು ಥಿʼ (Kyunki Saas Bhi Kabhi Bahu Thi), ʼಕಹಿಂ ತೊ ಹೋಗಾʼ (Kahiin To Hoga) ಧಾರಾವಾಹಿಗಳಲ್ಲಿನ ಅವರ ಅಭಿನಯ ಮನೆ -ಮನದ ಪ್ರೇಕ್ಷಕರನ್ನು ರಂಜಿಸಿತ್ತು. 2021ರಲ್ಲಿ, ನಟ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಾಗ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಿಟ್‌ನೆಸ್ ಮತ್ತು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ವಿಕಾಸ್‌ ಕೆಲ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಅವರು ನಿರ್ಮಾಪಕರಾಗಿ ಸಿಕೆ ಪಿಕ್ಚರ್ಸ್‌ ಎನ್ನುವ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದರು…

Read More

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಸೇರ್ಪಡೆಯಾದ ಬಳಿಕ ಪಿಪಿಸಿ ಅಕೌಂಟ್ ನಲ್ಲಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ. ಕಳೆದ 9 ದಿನಗಳಲ್ಲಿ ದರ್ಶನ್ 735 ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ. ಈ ಪೈಕಿ ಬಹುತೇಕ ಹಣವನ್ನು ಕಾಫಿ, ಟೀಗಾಗಿ ಖರ್ಚು ಮಾಡಿದ್ದಾರೆ ಎಂದು ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ರೌಂಡ್ ಟೇಬಲ್ ಪಾರ್ಟಿ ಮಾಡಿದ್ದರು. ಕೈಯಲ್ಲಿ ಸಿಗರೇಟ್, ಇನ್ನೊಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು ಬಿಂದಾಸ್ ಆಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು. ವಿಐಪಿ ಸೆಲ್ ನಿಂದ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಹೀಗಾಗಿ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More