ತುಮಕೂರು: ಕ್ಯಾಬಿನೇಟ್ ಮಿನಿಸ್ಟರ್ ನ ಹಂದಿಗೆ ಹೋಲಿಸಿ ಮಾತನಾಡಿರೋದು ಹೇಯ ಕೃತ್ಯ ಇದನ್ನ ಖಂಡಿಸ್ತೇನೆ ಎಂದು ಕುಮಾರಸ್ವಾಮಿಯನ್ನ ಹಂದಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಚಂದ್ರಶೇಖರ್ ವಿರುದ್ದ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಹರಿಹಾಯ್ದಿದ್ದಾರೆ.
ಒಬ್ಬ ಪಂಚಾಯಿತಿ ಸದಸ್ಯನೂ ಆಗೇ ಮಾತನಾಡೋಲ್ಲ, ಹಾಗೆ ಮಾತನಾಡಿದ್ದಾನೆ. ನಾವು ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಇವನೇ ಭ್ರಷ್ಟ. ರಾಜಕಾಲುವೆ ಒತ್ತಿ 33 ಅಂತಸ್ಥಿನ ಅಪಾರ್ಟ್ ಮೆಂಟ್ ಕಟ್ಟುತ್ತಿದ್ದಾನೆ. ಇಂತಹ ಭ್ರಷ್ಟರನ್ನ ಎಡಿಜಿಪಿ ಲೋಕಾಯುಕ್ತ ಮಾಡಿದ್ರೆ ಏನಾಗುತ್ತೆ? ಬೇಲಿನೇ ಎದ್ದು ಹೊಲ ಮೇಯುವಂತಾಗುತ್ತದೆ ಎಂದು ಅವರು ಕಿಡಿಕಾರಿದರು.
ಈತ ಒಂದು ಎಕರೆ ವಿಲ್ಲಾದಲ್ಲಿ ವಾಸವಿದ್ದಾನೆ ಅತ್ಯಂತ ಭ್ರಷ್ಟ ಅಧಿಕಾರಿ. ಈ ಬಗ್ಗೆ ಸಿದ್ದರಾಮಯ್ಯ ಎಡಿಜಿಪಿಗೆ ಸಪೋರ್ಟ್ ಮಾಡೋದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ಎಂ.ಟಿ.ಕೃಷ್ಣಪ್ಪ ವಾಗ್ದಾಳಿ ನಡೆಸಿದರು.
ಕಾನೂನು ತಿಳಿದುಕೊಂಡವನೇ ಸಿದ್ದರಾಮಯ್ಯ ಅವನಿಗೆ ಬುದ್ದಿ ಇಲ್ಲ ಅನ್ನೋದಕ್ಕೆ ಎಡಿಜಿಪಿ ಸಪೋರ್ಟ್ ಮಾಡೋದೆ ಇದೆ ಸಾಕ್ಷಿ. ಅವನ ಅನುಕೂಲಕ್ಕಾಗಿ ಹಿಂಬದಿಯಿಂದ ಭ್ರಷ್ಟ ಅಧಿಕಾರಿಗಳಿಗೆ ಸಪೋರ್ಟ್ ಮಾಡ್ತಾವನೆ. ಕಳೆದ ಭಾರೀ ಲೋಕಾಯುಕ್ತ ಮುಚ್ಚಿ ಅವನ ಸ್ವಾರ್ಥಕ್ಕೆ ಎಸಿಬಿ ಸ್ಥಾಪನೆ ಮಾಡಿದ್ದ. 1650 ಎಕರೆ ಇನ್ ಡೈರೆಕ್ಟ್ ಲೀ ಡಿ ನೋಟಿಪೀಕೇಷನ್ ಮಾಡಿದ್ದ. ಅದ್ರಲ್ಲಿ ಎಷ್ಟು ಸಾವಿರ ಕೋಟಿ ಹೊಡೆದಿರಬಹುದು. ಅದು ತನಿಖೆ ಬರುತ್ತೆ ಅಂತಾ ಎಸಿಬಿ ಮಾಡಿದ್ದ ಅತ್ಯಂತ ಭ್ರಷ್ಟ ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296