Subscribe to Updates
Get the latest creative news from FooBar about art, design and business.
- ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
- ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ಮಿಸ್: ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ಅಭಿಮಾನಿಗಳಿಂದ ಪ್ರತಿಭಟನೆ
- ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಶಾಸಕರಿಗೆ ಕೈ ಹೈಕಮಾಂಡ್ ಶಾಕ್!
- ಬೀದರ್ ನಲ್ಲಿ ಸುಸೂತ್ರವಾಗಿ ನಡೆದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿ ಪರೀಕ್ಷೆ: 663 ಅಭ್ಯರ್ಥಿಗಳು ಗೈರು
- ಕೂಡ್ಲಿಗಿ: ಸಭೆ–ಉತ್ಸವ ಕಾಟಾಚಾರಕ್ಕಾಗದಿರಲಿ, ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಂಘಟನೆಗಳ ಆಗ್ರಹ
- ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: 20 ಹೊಸ ಸಚಿವರ ಸೇರ್ಪಡೆ, ಪ್ರಮುಖ ಹುದ್ದೆಗಳಿಗೆ ಎಐಸಿಸಿ ಅಂತಿಮ ಅನುಮೋದನೆ
- ಕಾವೇರಿ ಕಿಚ್ಚು: ‘ಭೂಮಿ, ನೀರು, ಭಾಷೆ ವಿಚಾರ ಬಂದಾಗ ಕರ್ನಾಟಕ ಒಂದಾಗಬೇಕು’ : ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಕರೆ
- ತಿಪಟೂರಿನಲ್ಲಿ ಜ್ಞಾನ ವಿಕಾಸ ಮಹಿಳಾ ವಿಚಾರಗೋಷ್ಠಿ: ಆರೋಗ್ಯ ಜಾಗೃತಿ ಹಾಗೂ ಸಾಂಸ್ಕೃತಿಕ ವೈಭವ
Author: admin
ತುಮಕೂರು: ಇಂದು ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಅದ್ದೂರಿ ದಸರಾಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಸಿದ್ದಗಂಗಾ ಮಠದ ಶ್ರಿ ಸಿದ್ದಲಿಂಗ ಸ್ವಾಮೀಜಿ ಕನ್ನಡ ಬಾವುಟವನ್ನು ಹಾರಿಸಿದರು. ಭವ್ಯ ಮಂಟಪದಲ್ಲಿ ನಾಡ ದೇವತೆ ಚಾಮುಂಡಿಯ ಪ್ರತಿಸ್ಠಾಪನೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪತ್ನಿ ಕನ್ನಿಕಾ ಜೊತೆ ಡಾ.ಜಿ.ಪರಮೇಶ್ವರ್ ಪೂಜೆಯಲ್ಲಿ ಭಾಗಿಯಾದರು. ಈ ವೇಳೆ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಿದ್ದರು. ಮೈಸೂರು ಅರಮನೆ ಹಾಗೂ ಚಾಮುಂಡಿ ದೇವಾಲಯ ಮಾದರಿಯಲ್ಲಿ ಶಿವಕುಮಾರ ಸ್ವಾಮೀಜಿ ಮಂಟಪ ನಿರ್ಮಾಣ ಮಾಡಲಾಗಿದೆ. ಇಂದಿನಿಂದ 9 ದಿನಗಳ ಕಾಲ ದಸರಾ ಕಾರ್ಯಕ್ರಮ ನಡೆಯಲಿದೆ. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜ್ಯೋತಿಗಣೇಶ್, ಕೆ.ಷಡಕ್ಷರಿ ಸೇರಿ ಹಲವರು ಭಾಗಿಯಾಗಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಇಸ್ರೇಲ್: ಇರಾನ್ ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ. ಇದರಿಂದಾಗಿ ಇಸ್ರೇಲ್ ನಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರಾನ್ ನ ಕ್ಷಿಪಣಿ ದಾಳಿ ಹಿನ್ನೆಲೆ ಕೆಲವು ವಿಮಾನಗಳನ್ನು ತುರ್ತು ಲ್ಯಾಂಡ್ ಮಾಡಲಾಗಿದೆ. ಸ್ವಿಜರ್ ಲ್ಯಾಂಡ್ ನಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದ ಕನ್ನಡಿಗರು ಈಗ ತುರ್ತು ಲ್ಯಾಂಡಿಂಗ್ ನಿಂದಾಗಿ ಅತಂತ್ರರಾಗಿದ್ದಾರೆ. ಕನ್ನಡಿಗರು ಸೇರಿದಂತೆ ಭಾರತಕ್ಕೆ ಬರುತ್ತಿದ್ದ 300 ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಯುದ್ಧದ ವಾತಾವರಣದಿಂದಾಗಿ ಇರಾನ್, ಇರಾಕ್ ವಾಯುಸೀಮಾ ಪ್ರದೇಶ ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಭಾರತೀಯ ಪ್ರಯಾಣಿಕರು ವಿಮಾನದಲ್ಲೇ ಕಾಲ ಕಳೆಯುವಂತಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳನ್ನು ಬಿಜೆಪಿ ಹೈಕಮಾಂಡ್, ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ವೇದಿಕೆಯಲ್ಲೇ ಎಲ್ಲವನ್ನೂ ಚರ್ಚಿಸಬೇಕು. ಯಾರೂ ಬಹಿರಂಗ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಯತ್ನಾಳ್ ನಡೆಯ ಬಗ್ಗೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ನಾನು ಡಿನೋಟಿಫೈ ಮಾಡಿದ್ದೇನಾ? ನಾನು ತಪ್ಪೇನು ಮಾಡಿದ್ದೇನೆ? ನಾನು ಸೈನ್ ಮಾಡಿದ್ದೇನಾ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರೇ, ನೀವು ದಯವಿಟ್ಟು ಒಂದು ಸಂಗತಿ ಅರ್ಥ ಮಾಡಿಕೊಳ್ರಿ. ನಿಮ್ಮ ಬಗ್ಗೆ ಕೋರ್ಟ್ ಏನು ಹೇಳಿದೆ ಎಂಬುದನ್ನು ನೋಡಿ ಎಂದು ತಿಳಿಸಿದರು. 2004ರಿಂದ ಈಚೆಗೆ ನೀವು ಸತತವಾಗಿ ಒಂದಲ್ಲ ಒಂದು ಸ್ಥಾನದಲ್ಲಿ ಇರಲಿಲ್ಲ ಎಂದಾದರೆ, ಇದು ಇನ್ಯಾರಿಗೂ ಸಾಮಾನ್ಯ ಮನುಷ್ಯನಿಗೆ ಮುಟ್ಟಲು ಸಾಧ್ಯವೇ ಇಲ್ಲ. ಮತ್ತು ಇದು ಮುಖ್ಯಮಂತ್ರಿಯ ಪತ್ನಿಗೆ ಮುಖ್ಯಮಂತ್ರಿಗೆ ಗೊತ್ತಾಗದೇ ಆಗಲು ಸಾಧ್ಯ ಇಲ್ಲ. ಈ ರೀತಿ ಕೋರ್ಟ್ ತೀವ್ರವಾಗಿ ಹೇಳಿದೆ…
ಬಿಹಾರ: ದಲಿತ ಮಹಿಳೆ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಘಟನೆ ಪಾಟ್ನಾದಲ್ಲಿ ನಡೆದಿದ್ದು, ನಡ ರಸ್ತೆಯಲ್ಲೇ ಮಹಿಳೆಗೆ ಪೊಲೀಸರು ಅಮಾನವೀಯವಾಗಿ ಥಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ರಾಜ್ ಕಿಶೋರ್ ಸಿಂಗ್ ಎಂಬಾತ ಮಹಿಳೆಗೆ ಹಲ್ಲೆ ನಡೆಸಿದ್ದು, ಈ ಹಲ್ಲೆಯ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಕಿಡ್ನ್ಯಾಪ್ ಪ್ರಕರಣ ಸಂಬಂಧ 2 ಕುಟುಂಬಗಳ ನಡುವೆ ಗಲಾಟೆಯಾಗಿದೆ.. ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಲಾಠಿಯಿಂದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ರಾಜ್ ಕಿಶೋರ್ ಸಿಂಗ್ ನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಶೋ ಬಿಗ್ಬಾಸ್ ಸೀಸನ್– 11 ಆರಂಭವಾಗಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಈ ನಡುವೆ ಬಿಗ್ ಬಾಸ್ಗೆ ನೇರ ಸವಾಲು ಹಾಕುವ ಮೂಲಕ ಜಗದೀಶ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕ್ವಿಟ್ ಮಾಡುತ್ತೇನೆ. ನಾನು ಈ ಕ್ಷಣ ಮನಸ್ಸು ಮಾಡಿದರು ಇಲ್ಲಿಗೆ ಹೆಲಿಕಾಪ್ಟರ್ಅನ್ನು ತರಿಸುತ್ತೇನೆ ನನಗೆ ಆ ಕೆಪಾಸಿಟಿ ಇದೆ. ನಾನೇನಾದ್ರು ಆಚೆ ಹೋದ್ರೆ ಎಲ್ಲಾ ಎಕ್ಸ್ ಪೋಸ್ ಆಗುತ್ತೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರಿ ಕೇಳಿ. ಬಿಗ್ಬಾಸ್ ನಾನು ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರುಹಾಕಿಕೊಂಡು ಶೋ ನಡೆಸೋಕೆ ಆಗುತ್ತದೆ ಎಂದುಕೊಂಡಿದ್ದೀರಾ ಎಂದು ಚಾಲೆಂಜ್ ಮಾಡಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಈ ಪ್ರೋಮೋಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ನೆಟ್ಟಿಗರು ಜಗದೀಶ್ ಅವರನ್ನು ಟೀಕಿಸಿ ಕಮೆಂಟ್ ಹಾಕಿದ್ದಾರೆ. ಇಂದಿನ ಸಂಚಿಕೆಯಲ್ಲಿ…
ಟಾಸ್ಕ್ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಧನರಾಜ್ ಆಚಾರ್ ನಡುವೆ ಜಗಳ ನಡೆದಿದ್ದು, ಜಗಳದ ಬಳಿಕ ಧನರಾಜ್ ಕಣ್ಣೀರು ಹಾಕಿರುವ ಘಟನೆ ಬಿಗ್ ಬಾಸ್ ನಲ್ಲಿ ನಡೆಯಿತು. ತನ್ನ ಕಾಮಿಡಿ ವಿಡಿಯೋ ಮೂಲಕ ಎಲ್ಲರನ್ನು ನಗಿಸುತ್ತಿದ್ದ ಧನರಾಜ್ ಅವರು ಇದೀಗ ದೊಡ್ಮನೆಯಲ್ಲಿ ಆಗುತ್ತಿರುವ ಜಗಳದಿಂದ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಬಳಿ ಮಾತನಾಡುವಾಗ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಗಲಾಟೆಯಿಂದ ಮಂಕಾಗಿದ್ದೇನೆ. ಹೇಗೆ ಇರಬೇಕೆಂದು ಗೊತ್ತಾಗ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಧನರಾಜ್ ಕಣ್ಣೀರು ಹಾಕುತ್ತಿರುವುದನ್ನು ನೋಡಿದವರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲನೇ ವಾರನೇ ಹೀಗೆ ಅಳ್ಕೊಂಡು ಕೂತ್ಕೊಂಡ್ರೆ ಹೇಗೆ, ವೀಕ್ ಮೈಂಡ್ ಇರುವವವರು ಬಿಗ್ ಬಾಸ್ ಗೆ ಹೋಗಬಾರದು ಎಂದು ಹಲವರು ಹೇಳಿದ್ದಾರೆ. ಕಾಮಿಡಿ ವಿಡಿಯೋ ಮಾಡಿದಷ್ಟು ಬಿಗ್ ಬಾಸ್ ಆಟ ಸುಲಭವಲ್ಲ, ಮುಂದೆ ಹೋಗ್ತಾ ಹೋಗ್ತಾ ನಿಮಗೆ ಗೊತ್ತಾಗುತ್ತೆ ಬಿಡಿ ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಬರೇಲಿ: ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಸಿರೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ಕಾರ್ಖಾನೆಯ ಮಾಲೀಕ ನಾಸಿರ್ ಎಂದು ತಿಳಿದು ಬಂದಿದೆ. ಆದ್ರೆ ಅವರು ಬೇರೆ ಸ್ಥಳಕ್ಕೆ ಪರವಾನಗಿ ಹೊಂದಿದ್ದರು. ಆದರೆ ಘಟನೆ ನಡೆದ ಸ್ಥಳ ನಾಸಿರ್ ಅವರ ಅತ್ತೆಗೆ ಸೇರಿದ್ದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರು ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ, ಸ್ಥಳೀಯ ಸ್ಟೇಷನ್ ಠಾಣೆಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಯುವಕನೊಬ್ಬ ತನ್ನ ಸ್ನೇಹಿತೆಯ ಮನೆಯಲ್ಲೇ ಸಾವಿಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ನಿವಾಸಿ ಮದನ್ (24) ಸಾವಿಗೆ ಶರಣಾದ ಯುವಕನಾಗಿದ್ದಾನೆ. ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇ ಔಟ್‌ನಲ್ಲಿ ಸಾಗರ ಮೂಲದ ಕಿರುತೆರೆ ಸಹನಟಿ ವೀಣಾ ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದಾರೆ. ವೀಣಾಗೆ ಪುನೀತ್ ಹಾಗೂ ಮಾಧವ್ ಸ್ನೇಹಿತರು. ಮೊದಲು ಪುನೀತ್ ಜೊತೆ ವೀಣಾ ಆತೀಯರಾಗಿದ್ದರು. ನಂತರದ ದಿನಗಳಲ್ಲಿ ಪುನೀತ್ ಆಕೆಯಿಂದ ಅಂತರ ಕಾಯ್ದುಕೊಂಡು ದೂರವಾಗಿದ್ದಾನೆ. ವೀಣಾ ಮನೆಗೆ ಮದನ್ ಆಗಾಗ್ಗೆ ಬಂದು ಹೋಗುತ್ತಿದ್ದ. ತದನಂತರದಲ್ಲಿ ಇವರಿಬ್ಬರ ಮಧ್ಯೆ ಸಲುಗೆ ಬೆಳೆದು ಲಿವಿಂಗ್ ಟುಗೆದರ್ ನಲ್ಲಿದ್ದರು. ಈ ನಡುವೆ ಆಕೆ ಮದುವೆಯಾಗುವಂತೆ ಮದನ್ ನನ್ನು ಒತ್ತಾಯಿಸುತ್ತಿದ್ದರಿಂದ ಇವರಿಬ್ಬರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ದಿನ ವೀಣಾ ಮನೆಗೆ ಮದನ್ ಬಂದಿದ್ದಾನೆ. ಆ ವೇಳೆ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಮಾತಿನ ವಾಗ್ವಾದವಾಗಿದೆ. ನಂತರ ಇವರಿಬ್ಬರೂ ಸೇರಿ ರಾತ್ರಿ 7…
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಮುಡಾದಿಂದ ನೀಡಿದ್ದ ನಿವೇಶನಗಳನ್ನು ಹಿಂಪಡೆಯುವ ಮೂಲಕ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿನ ಮಾತನಾಡಿದ ಅವರು ಸಾಕ್ಷ್ಯನಾಶದ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಲೋಕಾಯುಕ್ತ ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪತ್ರ ಬರೆದಾಕ್ಷಣ ಅದನ್ನು ಒಪ್ಪಿಕೊಂಡು ತರಾತುರಿಯಲ್ಲಿ ನಿವೇಶನ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಅವರು ಪ್ರಶ್ನಿಸಿದರು. ಕೆಸರೆ ಗ್ರಾಮದ ಜಮೀನು ತಮದು. ಇದಕ್ಕೆ ಬದಲಿಯಾಗಿ ವಿಜಯನಗರದಲ್ಲಿ ನೀಡಿರುವ 14 ನಿವೇಶನಗಳ ಮೌಲ್ಯ 62 ಕೋಟಿ ರೂ.ಗಳಷ್ಟಾಗುತ್ತದೆ. ಅಷ್ಟು ಹಣ ಕೊಟ್ಟು ನಿವೇಶನ ವಾಪಸ್ ಪಡೆಯಲಿ, ನಾವು ಕಾನೂನುಬದ್ಧವಾದ ಜಮೀನಿನ ಮಾಲೀಕರು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಾದಿಸಿದ್ದರು. ಈಗ ಅದು ಹೇಗೆ ಏಕಾಏಕಿ ನಿವೇಶನಗಳನ್ನು ವಾಪಸ್ ಮುಡಾಗೆ ದಾನ ಮಾಡಿಬಿಟ್ಟರು? ಎಂದು ಕಿಡಿ ಕಾರಿದರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡಿದ್ದು, ಹಗರಣವನ್ನು ಲೋಕಾಯುಕ್ತದ…
ಬೈರೂತ್: ಲೆಬನಾನ್ ನ ಬೈರೂತ್ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು 6 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗಿನ ಜಾವ ಈ ದಾಳಿ ನಡೆದಿದೆ. ಬೈರೂತ್ನ ಬಚೌರ ಪ್ರದೇಶದಲ್ಲಿರುವ ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಲೆಬನಾನ್ ಭದ್ರತಾ ಪಡೆ ತಿಳಿಸಿದೆ. ಗುರುವಾರ ಬೆಳಗ್ಗಿನ ಜಾವ ಭಾರೀ ಶಬ್ದ ಕೇಳಿ ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ಲೆಬನಾನ್ ನ ದಕ್ಷಿಣದಲ್ಲಿರುವ ಉಪನಗರ ದಹಿಯೆಹ್ ಮೇಲೂ ಮೂರು ಕ್ಷಿಪಣಿಗಳು ದಾಳಿ ನಡೆಸಿವೆ. ಈ ಜಾಗದಲ್ಲಿ ಕಳೆದ ವಾರ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬುಧವಾರ ಇಸ್ರೇಲ್ ನತ್ತ ಹಾರಿಸಿತ್ತು. ಪರಿಣಾಮ ಇಸ್ರೇಲ್ ನ 8 ಸೈನಿಕರು ಮೃತಪಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…